Friday, July 15, 2011

ನಮನವಿದೋ ಕಾರ್ಪ್ ಬ್ಯಾಂಕ್

ನಮನವಿದೋ  ಕಾರ್ಪ್  ಬ್ಯಾಂಕ್
ನಮನವಿದೋ ನಲ್ಮೆಯ ಕಾರ್ಪ್ ಬ್ಯಾಂಕ್
ಸೇರಿದೆನು ನಿನ್ನ ದಶಕ ಎಂಬತ್ತರಲಿ
ಕಳೆದೆನು ಮೂರು ದಶಕ ನಿನ್ನ ಸೇವೆಯಲಿ
ಕಲಿತೆನದೆಷ್ಟೋ ಮೂವತ್ತು ವರುಷದಲಿ

ಬಾಳ ಪಯಣವ ಸವಿದೆನು ಸೇವೆಯಲಿ
ಹುಬ್ಬಳ್ಳಿ,ಹಾಸನ,ಮಂಗಳೂರುಗಳಲಿ
ಭೇಟಿಯಾದೆನು ಬಗೆಬಗೆಯ ಜನರನು
ನಮನವಿದೋ ನಲ್ಮೆಯ ಕಾರ್ಪ್ ಬ್ಯಾಂಕ್

ಕಂಡೆನು ಬಹುವಿಧದ ಸಂಸ್ಕೃತಿಯ ಜನರ
ಕಲಿತೆನು ಬಾಳೆಂದರೇನು ಎಂದು  ಸೇವೆಯಲಿ
ನೋಡಿದೆನು ನೂರಾರು ಬಗೆಯ ಕೈಗಾರಿಕೆಗಳ
ನೆರವಾದೆನು ಅವುಗಳ ದೀರ್ಘ ಅಭಿವೃದ್ದಿಯತ್ತ

ವಿವಾಹವಾದೆನು ಸೋದರ ಅತ್ತೆಯ ಸುತೆಯ
ಪಡೆದೆನೆರಡು ನಲ್ಮೆಯ ಜಾಣ್ಮೆಯ ಮಕ್ಕಳ
ಕಟ್ಟಿದೆನು ಶ್ರಮದಲಿ ಕನಸಿನ ವಾಸ್ತು ಸೌಧವ
ನಮನವಿದೋ ನಲ್ಮೆಯ ಕಾರ್ಪ್ ಬ್ಯಾಂಕ್

ಅರಸಲಿಲ್ಲ ಎಂದೂ ಅಧಿಕಾರವ, ವೈಭವವ
ಕಳೆದಿಹೆನು ಸಾತ್ವಿಕ ಜೀವನವ- ಕೃಷ್ಣ ನುಡಿದಂತೆ
ಕರ್ಮವನ್ನಷ್ಟೇ ಮಾಡಿಹೆನು, ಫಲವ ಬಯಸದೆ
ಗಮಿಸುತಿಹೆನು ಇಂದು  ಸಾರ್ಥಕದ ಸಮಾಧಾನದಿ

-ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ನಿವೃತ್ತ ತಾಂತ್ರಿಕ ಅಧಿಕಾರಿ

ದಿನಾಂಕ:೧೩-೦೭-೨೦೧೧

ಲಕ್ಷ್ಮೀಹಯಗ್ರೀವ ಸ್ತುತಿ


ಲಕ್ಷ್ಮೀಹಯಗ್ರೀವ  ಸ್ತುತಿ
ಜ್ಞಾನದಾದಿಯು ಚತುರ್ವೇದ ವಿದ್ಯೆಗಳು
ಅಪಹರಿಸೆ ದಾನವರು ,ಮಧು ಕೈಟಭರು
ತಳೆದೆ ಹಯಾಸ್ಯ ರೂಪ, ಮರ್ಧಿಸಿ, ಮರಳಿ ತರಲು
ನಮನವಿದೋ ವಿದ್ಯಾಧೀಶ ಲಕ್ಷ್ಮಿ ಹಯಗ್ರೀವ

ಸಮನಿಲ್ಲ ಜ್ಞಾನಕೆ, ಅಪೌರುಷೇಯವದು
ಭಗವಂತನರಿವುದೇ ನಿಜವಾದ ಜ್ಞಾನ
ಸಾರುವುದದನು ಸಕಲ ವೇದ ಉಪನಿಷತ್ತು
ವೇದಗಳ ರಕ್ಷಿಸಿದ ಮಧುಕೈಟಭಾರಿಯೇ, ನಮನ

ಜ್ಞಾನದರಿವು ನೀಡುವುದು ಚಿರಂತನ ಆನಂದ
ಕರುಣಿಸು ಎಮಗೆ ಆನಂದಮಯ ದಿವ್ಯ ಜ್ಞಾನ
ಕರಗಳಲಿ ಶಂಖ ಚಕ್ರ ವೇದ ಗ್ರಂಥವ ಹಿಡಿದು
ವ್ಯಾಖ್ಯಾಮುದ್ರೆ ತೋರುತಿರುವ ಹಯಾಸ್ಯ, ನಮನ

ನಮಿಪೆ ಭಕ್ತಿಯಲಿ ,ಸ್ತುತಿಸೆ ನಿನ್ನ ,ತನ್ಮಯದಿ
ಆರಾಧಿಸೆ ಶ್ರದ್ದೆಯಲಿ, ಭಜಿಸೆ ಪೂಜ್ಯ ಭಾವದಿ
ಕರುಣಿಸುವೆ ಸಕಲ ವಿದ್ಯೆಗಳ, ದಯಾ ಕಟಾಕ್ಷದಿ
ವಂದಿಪೆವು ಹಯವದನ ನೀಡೆಮಗೆ ವಿದ್ಯೆಯ

ಲಭಿಸಿತಂದು ಶಾರದಾ ಪೂಜಿತ ಮಂಗಳ ಮೂರ್ತಿ
ಭಗವದ್ರಾಮಾನುಜರಿಗೆ ಭಾರತಾಗ್ರದ ಕಾಶ್ಮೀರದಿ
ಮೂರ್ತಿಯದು ಬಂದಿತು ಕವಿಸಿಂಹ ವೆಂಕಟರಿಗೆ
ಪರಕಾಲರಾಶ್ರಯದಿ ಇರುವ ಲಕ್ಷ್ಮೀ ಹಯಗ್ರೀವ, ನಮನ


ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨೭೬೨೧೬

Wednesday, July 6, 2011

temple & its art

ಸೃಷ್ಟಿ ಹೇಗೆ ವಿಚಿತ್ರವೋ ಹಾಗೆಯೇ ಸುಂದರ ಕೂಡ. ನೀಲಿಯ ಬಾನಂಗಳದಲಿ   ಕೆಂಪಾದ ಕಿರಣಗಳನ್ನು ಚೆಲ್ಲುತ್ತ ಮೇಲೇಳುವ ದಿನಕರ. ಬಗೆ ಬಗೆಯ ವರ್ಣ ವೈವಿಧ್ಯವುಳ್ಳ ಹಕ್ಕಿಗಳ ಚಿಲಿಪಿಲಿ ಗಾನ.ಭೋರ್ಗರೆಯುವ ವಿಶಾಲ ಸಾಗರ . ಹಸಿರಿನ ವನರಾಶಿಯ ನಡುವೆ ಜಿಗಿದು ಕುಣಿದು ಕುಪ್ಪಳಿಸುವ ಪ್ರಾಣಿ ಸಂಕುಲ. ವನಸಿರಿಯಲಿ ಅರಳುವ ಬಗೆ ಬಗೆಯ ರೋಚಕವಾದ ಫಲ ಪುಷ್ಪಗಳು . ಆಳವಾದ ಶಾಂತಿಯಲ್ಲಿಯೂ ಭಯವನ್ನು ಹುಟ್ಟಿಸುವ ವ್ಯಾಘ್ರವೇ ಮೊದಲಾದ ಮೃಗಗಳು , ಮರಗಿಡಗಳು, ವಿಶಾಲವಾದ ಮರಳುಗಾಡು, ಒಂದೆಡೆ .ರಕ್ತವನ್ನು ಹೆಪ್ಪುಗಟ್ಟಿಸುವ ಶೀತ ಪ್ರದೇಶಗಳು ಮತ್ತೊಂದೆಡೆ. ಪ್ರಕೃತಿ ವರ್ಣಿಸಿದಷ್ಟು ಸುಂದರ. ವರ್ಣಿಸಲಾಗದಷ್ಟು   ಅಪಾರ. ಸೃಷ್ಟಿ ಯಲ್ಲಿ   ಪ್ರಕೃತಿ ಒಂದೆಡೆಯಾದರೆ, ಜೀವಕೋಟಿ ಮತ್ತೊಂದೆಡೆ. ಜೀವ ಕೋಟಿಯಲ್ಲಿ  ವೈವಿಧ್ಯತೆ ಅಪಾರ. ಕಪ್ಪು- ಬಿಳುಪು, ಸುಂದರ -ಕುರೂಪ, ಎತ್ತರ-ಕುಳ್ಳು, ಸಣ್ಣ-ದಪ್ಪ, ಹೀಗೆ ಅನೇಕ. ಪ್ರಾಣಿಗಳಲ್ಲಿ ಗಂಡು ಸುಂದರವಾದರೆ ,ಮನುಷ್ಯರಲ್ಲಿ ಹೆಣ್ಣು ಅತಿ ಸುಂದರ.ಹೆಣ್ಣಿನ ಸೌಂದರ್ಯ ವರ್ಣಿಸದ ಕವಿಯಿಲ್ಲ. ಹೆಣ್ಣಿಗೆ ಸೋಲದ ಮುನಿಯಿಲ್ಲ. ಅದ್ಭುತ ಸೃಷ್ಟಿಯ ಅಧ್ಯಯನ ಆಳವಾದಂತೆಲ್ಲ ಅಗೋಚರವಾದ ದಿವ್ಯ ಶಕ್ತಿಯ ಪ್ರಭಾವದ ಅರಿವು ಅಧಿಕವಾಗುತ್ತಲೇ ಹೋಗುತ್ತದೆ.

ಅಗೋಚರ ಶಕ್ತಿಯನ್ನು ನಿರಾಕಾರನೆಂದು ವಿಶ್ವದ ಅನೇಕ ಧರ್ಮಗಳು ಅಂಗೀಕರಿಸಿದ್ದರೂ, ಸಾಕಾರವಾಗಿ ಆರಾಧಿಸುವ ಕ್ರಮ ಅನಾದಿಕಾಲದಿಂದ ಪ್ರಚಲಿತವಾಗಿದೆ. ಆರಾಧಿಸುವ ವಿಧಾನದಲ್ಲಿ ದೇವಾಲಯಗಳು ವಿಶೇಷವಾದ ಮಹತ್ವವನ್ನು ಪಡೆಯಲು ಬಂದಿದೆ. ಭಕ್ತಿ ಮಾರ್ಗಕ್ಕೆ ಬುನಾದಿಯಾಗಿ ಸಂಸ್ಕೃತಿಯ ಪ್ರತೀಕಗಳಾಗಿ   ರೂಪಗೊಂಡಿವೆ. ಮನಸ್ಸಿನ ಶಾಂತಿಯನ್ನು   ಅರಸಿಬರುವ ಕೋಟಿಗಟ್ಟಲೆ ಭಕ್ತರಿಗೆ  ಪ್ರಾರ್ಥನಾಮಂದಿರವಾಗಿ  , ಕಲೆಗಳನ್ನು ಅರಳಿಸಿ ಬೆಳೆಸುವ ದಿವ್ಯ ಚೇತನಾಲಯಗಳು ಆಗಿವೆ . ಇಲ್ಲಿ ಸಂಗೀತ, ನೃತ್ಯ, ಶಿಲ್ಪಕಲೆಗಳು, ಉಗಮವಾಗಿ, ಬೆಳೆದು ಬಂದಿರುವುದು ಚರಿತ್ರೆಯಿಂದ ತಿಳಿಯುತ್ತದೆ, ರಾಜಮಹಾರಾಜರು ದೇವಾಲಯಗಳನ್ನು ಕಟ್ಟುವುದು ಪ್ರತಿಷ್ಠೆಯ  ಸಂಕೆತವೆಂದೇ  ಭಾವಿಸಿದ್ದರು. ಶಾಂತಿ ಪಾಲನೆಗೆ ಪೋಷಕವೆಂದು ನಂಬಿದ್ದರು.

ಆಸೇತು ಹಿಮಾಚಲ ದೇವಮಂದಿರಗಳಿಗೆ ಕೊರತೆಯಿಲ್ಲ. ಅವು ಕೇವಲ ಸಂಸ್ಕೃತಿಯ ಸಂಕೇತಗಳಾಗಿ ಉಳಿಯದೆ ಅದ್ಭುತ ಶಿಲ್ಪಿ ಕಲಾ ಪ್ರತಿಭೆಯ ವಾಹಕಗಲಾಗಿವೆ. ಬೇಳೂರು, ಹಳೆಬೀಡಿನ ದೇವಾಲಯಗಳನ್ನು ಕಂಡ ಕನ್ನಡದ ಕವಿಯೋರ್ವರು 'ಶಿಲೆಯಲ್ಲವೀ ಗುಡಿಯು, ಕಳೆಯ ಬಲೆಯು' ಎಂದು ವರ್ಣಿಸಿದರು. ಕಲಾ ಕುಸುಮಗಳಾದ ದೇವಮಂದಿರಗಳ ನಿರ್ಮಾಣ ಸುಲಭ ಸಾಧ್ಯವಲ್ಲ. ಸಾವಿರ ಸಾವಿರ ಮಂದಿಯ ಅವಿರತ ಪರಿಶ್ರಮದ ಫಲಗಲವು. ಅವುಗಳನ್ನು ಸಂದರ್ಶಿಸುವದಷ್ಟೇ ಅಲ್ಲದೆ ಪೋಷಿಸುವ ಶ್ರಮವಾದರು ನಮ್ಮದಾಗಬೇಕು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಪೂರ್ವೀಕರ ಸಂಸ್ಕೃತಿ, ಆಚಾರ, ವೇಷ ಭೂಷಣಗಳ ಪರಿಚಯವಾಗಬೇಕಾದರೆ ಅದು ದೇವಾಲಯಗಳಿಂದ ಮತ್ತು ಅಲ್ಲಿ ಕಂಡು ಬರುವ ಶಿಲ್ಪಿ ಕಲೆಯಿಂದ ಮಾತ್ರ ಸಾಧ್ಯ.


ಒಂದಾನೊಂದು ಕಾಲದಲ್ಲಿ ಸೃಷ್ಟಿ ಯಲ್ಲಿ   ಬೆರೆತಿದ್ದ ಗಂಡಬೇರುಂಡ , ಶರಭ ಮುಂತಾದ ಪ್ರಾಣಿಗಳ ಸ್ವರೂಪ ಇಂದು ದೇವಾಲಯಗಳಲ್ಲಿರುವ ಶಿಲ್ಪ ಕಲೆಯ ಮೂಲಕವೇ ಸಾಧ್ಯವಾಗಿದೆ. ಆಧುನಿಕ ಒತ್ತಡದ ಪ್ರಪಂಚದಲ್ಲಿ ಸೌಂದರ್ಯದ ಅರಿವಿಲ್ಲದಯೇ ಅರಳುತ್ತಿರುವ ಹೆಣ್ಣಿನ ನಿಜ ಸೌಂದರ್ಯದ ಅರಿವಾಗಬೇಕಾದರೆ ಹಳೇಬೀಡು ಅಥವಾ ಬೇಲೂರಿನ ದೇವಾಲಯಗಳಿಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು. ಅಥವಾ ಕೊನಾರ್ಕಿನ ಸೂರ್ಯ ದೇವಾಲಯ, ಕಜುರಾಹೋ, ಬಾದಾಮಿ,ಐಹೊಳೆಗಳನ್ನು   ವೀಕ್ಷಿಸಲೇಬೇಕು.
ದಕ್ಷಿಣ ಭಾರತದ ಶಿಲ್ಪಕಲೆಯಲ್ಲಿ ಅಗ್ರಮಾನ್ಯ ಪಡೆದವನು ಅಮರ ಶಿಲ್ಪಿ ಎಂದೇ ವಿಖ್ಯಾತನಾಗಿದ್ದ ಜಕಣಾಚಾರಿ. ಶಿಲ್ಪಕಲೆ ಪರಿಪೂರ್ಣತೆಯನ್ನು ಪಡೆದದ್ದು ಈತನಿಂದಲೇ   ಎಂದರೆ ತಪ್ಪಾಗಲಾರದು. ಜಕಣನ ಶಿಲ್ಪಕಲೆಗೆ ನೀರೆರದು   ಪೋಷಿಸಿದವರು ಹೊಯ್ಸಳರು. ಅವರ ಆಶ್ರಯದಲ್ಲಿ ಅರಳಿದ ದೇವಾಲಯಗಳೆಲ್ಲವು ವಿಶೇಷ ಶೈಲಿಯನ್ನು ಹೊಂದಿ , ಹೊಯ್ಸಳ ಶೈಲಿ ಎಂದೇ ಪ್ರಖ್ಯಾತಿಯಾದವು.ಹೊಯ್ಸಳ ಶೈಲಿಯ ಕಲಾ ಕುಸುಮಗಳನ್ನು ಬೇಲೂರು, ಹಳೇಬೀಡು, ಸೋಮನಾಥಪುರ, ಹೊಸಹೊಳಲು ಮುಂತಾದೆಡೆ ಕಾಣಬಹುದು. ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಂಡ ದೇವಾಲಯಗಳು ಸಾಮಾನ್ಯವಾಗಿ ನಕ್ಷತ್ರಾದಾಕಾರದ ಜಗುಲಿಯ ಮೇಲೆ ನಿರ್ಮಾಣ ಗೊಂಡಿವೆ. ತ್ರಿಕೂಟಾಚಲ ಮಾದರಿಯಲ್ಲಿ ಇರುತ್ತವೆ.
ಮೂರು  ಪ್ರತ್ಯೇಕ ವಿಮಾನಗಳು ಕಾಣುತ್ತವೆ.ದೇವಾಲಯದ ಹೊರಗೋಡೆಯ ಸುತ್ತಲೂ ಆರು ಜಗತಿಗಳು, ವಿಂಗಡಿಸಲ್ಪಟ್ಟಿರುತ್ತವೆ   . ಕೆಳಗಿನಿಂದ ಆನೆಗಳು , ಕುದುರೆಗಳು,ಬಳ್ಳಿಗಳು, ಪುರಾಣದ ದೃಶ್ಯಗಳು, ಸಣ್ಣ ವಿಗ್ರಹಗಳು,ಮತ್ತು ದೊಡ್ಡದಾದ ಪುರಾಣ ಪುರುಷರ ವಿಗ್ರಹಗಳು ಕೆತ್ತಲ್ಪತ್ತಿವೆ . ಒಳಗಿನ ಮೇಲ್ಛಾವಣಿಯಲ್ಲಿ ವಿವಿಧ ಬಗೆಯ ಪುಷ್ಪಗಳು , ವಿವಿಧ ಭಂಗಿಯಲ್ಲಿ ಶಿಲಾಬಾಲಿಕೆಯರು, ದಶಾವತಾರದ ಚಿತ್ರಗಳು ಸುಂದರವಾಗಿ ಕೆತ್ತಲ್ಪಟ್ಟಿರುತ್ತವೆ ಶಿಲ್ಪಗಳು ಶಿಲ್ಪಶಾಸ್ತ್ರಗಳಿಗೆ ಆನುವಾಗಿ   ಕೆತ್ತಲ್ಪತ್ತಿದ್ದು ಶರೀರ ರಚನೆ ಹೇಗಿರಬೇಕೆಂದು ಸೂಚಿಸುತ್ತವೆ. ವಿಶೇಷವಾಗಿ ಶಿಲಾ ಬಾಲಿಕೆಯರ ವಿಗ್ರಹಗಳು ಇಂದಿನ ಹೆಣ್ಣನ್ನು ನಾಚಿಸುವಂತಿವೆ.
 
ಗರ್ಭಗೃಹ   ಚೌಕಾಕಾರವಾಗಿದ್ದು, ಮಧ್ಯದಲ್ಲಿ ಮೂಲವಿಗ್ರಹವಿರುತ್ತದೆ. ಗರ್ಭ ಗೃಹದ ಮೇಲಿನ ಗೋಪುರಕ್ಕೆ ವಿಮಾನ ಎಂದು ಕರೆಯುತ್ತಾರೆ.ವಿಮಾನದ ತುದಿಯಲ್ಲಿ ರಂಧ್ರವಿರುತ್ತದೆ. ಇಲ್ಲಿ ಕಲಶಗಳು ಇರಿಸಲ್ಪಡುತ್ತವೆ.ಸೂರ್ಯನ ಪ್ರಖರತೆಯಲ್ಲಿ ಶಾಖಗೊಳ್ಳುವ ಕಲಶಗಳಿಂದ ಹೊಮ್ಮುವ ತರಂಗಗಳು, ಮೂಲ ವಿಗ್ರಹವನ್ನು ಚೇತನಗೊಳಿಸುತ್ತವೆ.ಶಿಲ್ಪ ಶಾಸ್ತ್ರದ ರೀತ್ಯ ರಚಿತವಾಗುವ ಮೂಲ ವಿಗ್ರಹಗಳಿಂದ ಉತ್ಪನ್ನವಾಗುವ ತರಂಗಗಳು ಪ್ರಾರ್ಥಿಸುವ ಭಕ್ತರ ದೇಹದ ತರಂಗದೊಂದಿಗೆ ಬೆರೆತಾಗ ಸ್ಪಂದನ ಉಂಟಾಗುತ್ತದೆ. ಈ ತರಂಗ ಸ್ಪಂದನ ಗುಣಕಾರಕ.

ದೇವಾಲಯದ ನಿರ್ಮಾಣ ಅತಿ ಸೂಕ್ಷ್ಮ. ಗರ್ಭ ಗೃಹದ ಮುಂಬಾಗದಲ್ಲಿ ನವರಂಗ ಮಂಟಪವಿರುತ್ತದೆ.ಹಿಂದಿನ ದಿನಗಳಲ್ಲಿ ನವರಂಗ ಮಂಟಪದಲ್ಲಿ   ನೃತ್ಯ ಪ್ರದರ್ಶನಗಳು , ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದುದು ತಿಳಿದು ಬರುತ್ತದೆ.ದೇವಾಲಯದಲ್ಲಿ ಗರ್ಭ ಗ್ರಿಹವೇ ಮುಖ್ಯ ಕೇಂದ್ರ.ಉಳಿದುದೆಲ್ಲವೂ ರಚನಕಾರರ ಇಚ್ಹಾನುಸಾರ ವಿಸ್ತರಗೊಳ್ಳುತ್ತವೆ

ಮುಂದೆ ದೇವಾಲಯ ಸಂದರ್ಶಿಸುವಾಗ ಮೂಕ ಪ್ರೇಕ್ಷಕರಂತೆ ವೀಕ್ಷಿಸದೆ ,ಅದರ ಉಗಮ, ರಚನೆಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ಸಂದರ್ಶಿಸಿದರೆ ಎಷ್ಟು ಉತ್ತಮ.ಮನದ ಶಾಂತಿಯ ನಡುವೆ, ಅದ್ಭುತವಾದ ಕಲಾಮಂದಿರವೊಂದನ್ನು ನೋಡಿದ ಅದಮ್ಯ ತೃಪ್ತಿ . ಪ್ರಯತ್ನಿಸಿ.ಅದ್ಭುತ ಕಲಾ ಕೃತಿಗಳನ್ನು ಪೋಷಿಸಿ.ಮುಂದಿನ ಪೀಳಿಗೆಗೆ ಪರಿಚಯಿಸಿ..

sreenivasa prasad.k.v. Mob; 98442 76216

Thursday, April 14, 2011

ಶ್ರೀ ಕೃಷ್ಣ ಸಂದೇಶ- ಅಧ್ಯಾಯ ೧೮ -ವೈರಾಗ್ಯದ ಪರಿಪೂರ್ಣತೆ

ಶ್ರೀ ಕೃಷ್ಣ ಸಂದೇಶ- ಅಧ್ಯಾಯ ೧೮  -ವೈರಾಗ್ಯದ ಪರಿಪೂರ್ಣತೆ
 
ಯಜ್ಞ ದಾನ ತಪಸ್ಸುಗಳು ಅತ್ಯಾಜ್ಯವು
ಕರ್ತವ್ಯಗಳು ಮಾಡಲೇ ಬೇಕಾದವು 
ಭಯ, ಆಯಾಸ,ಕ್ಲೇಶಕರಗಳೆಂದು 
ವರ್ಜಿಸಲಾಗದವು, ಅನುಸರಿಸಲೇಬೇಕಾದವು

ಕರ್ತವ್ಯಗಳು ಸಾತ್ವಿಕವಾಗಿ ನಿಸ್ಸಂಗ
ನಿರಪೇಕ್ಷ, ಕರ್ಮಫಲ ತ್ಯಾಗದಿಂದಿರಬೇಕು
ಪರಿಶುದ್ದ ಭಕ್ತಿ ಇಂದ  ನನ್ನನರಿಯಲು ಸಾಧ್ಯ
ಪಾರ್ಥ,ಕರ್ಮಗಳನು ನನಗರ್ಪಿಸಿ ಧ್ಯಾನದಲ್ಲಿರು

ನನ್ನ ಪ್ರಜ್ಞೆ ಬಂದಾಗ ಆತಂಕಗಳು ನಿವ್ರಿತ್ತಿಯಾಗಿ
ದಿವ್ಯ ಶಾಂತಿಯಿಂದ ಪರಮ ಪದವ ಪಡೆಯುವೆ
ಕೃಷ್ಣ ನುಡಿದ, ನನ್ನನು ಕುರಿತು ಸದಾ ಚಿಂತಿಸು
ಭಕ್ತನಾಗು, ಪೂಜಿಸು ಅಂತ್ಯದೆ ನನ್ನನು ಹೊಂದುವೆ

ಪರಿತ್ಯಜಿಸು ಎಲ್ಲ ಧರ್ಮವನ್ನು, ಶರಣಾಗು ನನಗೆ
ನಾನು ಮುಕ್ತನಾಗಿಸುವೆ ಸಕಲ ಪಾಪಗಳಿಂದ
ನನ್ನ ಸಂದೇಶವನು ಪಾಲಿಸುವ ಜೀವಿಗಳು
ಪಾಪವರ್ಜಿತರಾಗಿ ಪುಣ್ಯಲೋಕ ಪಡೆಯುವರು

ಎಲ್ಲಿ ಯೋಗೇಶ್ವರ ಕೃಷ್ಣನಿರುವನೋ, ಗಾಂಡೀವಿ
ಪಾರ್ಥನಿರುವನೋ ಅಲ್ಲಿರುವುದು ನಿಶ್ಚಯವು
ಸಿರಿ,ವಿಜಯ,ಶಕ್ತಿ,ನೀತಿ,ಅಭಯ, ಧರ್ಮ
ರಕ್ಷಿಸುವೆ ಅನವರತ, ಯೋಗಕ್ಷೇಮ ವಹಿಸುತ


ರಚನೆ; ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨೭೬೨೧೬


 

ಶ್ರೀ ಕೃಷ್ಣ ಸಂದೇಶ- ಅಧ್ಯಾಯ ೧೭-ಶ್ರದ್ಹೆಯ ಪ್ರಬೇಧಗಳು

ಶ್ರೀ ಕೃಷ್ಣ ಸಂದೇಶ- ಅಧ್ಯಾಯ ೧೭-ಶ್ರದ್ಹೆಯ ಪ್ರಬೇಧಗಳು

ಪಾರ್ಥ ಕೇಳಿದ ಶಾಸ್ತ್ರ, ಪ್ರಮಾಣಗಳು
ಸತ್ತ್ವ  , ರಾಜ ,ತಾಮಸಿ ಗಳಿಗೆ- ಯಜ್ಞ ತಪ
ದಾನ ,ಆಹಾರಗಳು ವಿಭಿನ್ನವೇ ಕೃಷ್ಣ?
ಅವುಗಳ ಪ್ರಭೇದಗಳನ್ನು ಬೋಧಿಸು

ಸಾತ್ವಿಕ ಆಹಾರವು ರಸಮಯವಾಗಿಯೂ
ಜಿಡ್ಡಿನಿಂದ ಕೂಡಿದ್ದು, ಹೃದಯಕ್ಕೆ ತಂಪಾಗಿಯು
ಆರೋಗ್ಯಕ್ಕೆ ಹಿತವಾಗಿಯೂ ಆಯುರ್ವರ್ಧಕವು
ಕೂಡಿದ್ದಾಗಿದ್ದು , ಪರಿಶುದ್ಧವಾಗಿರುತ್ತವೆ

ರಾಜಸ ಆಹಾರ ಕಹಿ, ಹುಳಿ,ಉಪ್ಪಿನಿಂದಿದ್ದು
ದುಃಖ,ಶೋಕ,ರೋಗಗಳಕಾರಕವು
ತಾಮಸ ಆಹಾರ ಹಳಸಿದ್ದಾಗಿದ್ದು   ಅನ್ಯರು
ಉಳಿಸಿದ್ದಾಗಿದ್ದು ದುರ್ವಾಸನೆಯಿಂದ ಇರುತ್ತದೆ

ಫಲಾಪೇಕ್ಷೆಯಿಲ್ಲದ ಯಜ್ನವು ಸಾತ್ವಿಕವು
ಐಹಿಕ  ಲಾಭ,ದರ್ಪದ ಯಜ್ಞ ರಾಜಸವು
ಅಶ್ರದ್ದಯಾ, ಪ್ರಸಾದ ವಿತರಣೆಯಿಲ್ಲದ್ದು ತಾಮಸ 
ನಿರಪೇಕ್ಷ, ನಿರ್ಮೋಹ ಯಜ್ನವೇ  ಶ್ರೇಷ್ಠ

ತಂದೆ, ತಾಯಿ, ಗುರು,ಹಿರಿಯರ ಉಪೇಕ್ಷಿಸುವ
ತಪಸ್ಸು ತಾಮಸವು, ಪರಮಾತ್ಮನಿಗಾಗಿಯೇ
ಮಾಡುವ ತಪಸ್ಸು ಸಾತ್ವಿಕವು, ಅಪಾತ್ರರಿಗೆ ದಾನ
ರಾಜಸ, ಸತ್ಪಾತ್ರರಿಗೆ ಫಲ ನಿರೀಕ್ಷಿಸದ ದಾನ, ಸಾತ್ವಿಕ


ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨೭೬೨೧೬

Tuesday, April 12, 2011

ರಾಮ ರಾಘವನಿಗೆ ಮಂಗಳವು

ರಾಮ ರಾಘವನಿಗೆ ಮಂಗಳವು
ಭುವಿಯಲಿ ವಿಘ್ನವಾಗಲು ಯಾಗ ತಪಗಳು
ಆಸುರೀಶಕ್ತಿ ವರ್ಧಿಸಿ ಪೀಡಿಸಲು ತಾಪಸಿಗಳ
ದೇವತೆಗಳ ಮುನಿಗಳ ಪ್ರಾರ್ಥನೆಗೊಲಿದ 
ಕೌಸಲ್ಯಾತನಯ ದಶರಥ ರಾಮನಿಗೆ ಮಂಗಳವು

ಜನಿಸಿದೆ ಅನುಜ ಲಕ್ಷ್ಮಣ ಭರತ ಶತ್ರುಘ್ನರೊಡನೆ
ಬೆಳೆದೆ ಮಾತೆ ಕೌಸಲ್ಯ, ಕೈಕೆಯೀ, ಸುಮಿತ್ರೆ
ಇವರ ಅಪ್ರತಿತಮ ಅಸಮಾನ ಪ್ರೇಮದಲಿ
ಕೌಸಲ್ಯಾ ತನಯ ದಶರಥ ರಾಮನಿಗೆ ಮಂಗಳವು

ಬಾಲ್ಯದಲೇ ಅಸಮಾನ ಶಕ್ತಿ ಗಳಿಸಿ ವಿಶ್ವಾಮಿತ್ರರ
ಯಾಗ ಸಂರಕ್ಷಣೆಮಾಡಿ, ರಕ್ಕಸರ ವಧಿಸಿ
ಜನಕಪುರಿಯಲಿ ಸ್ವಯಮ್ವರದಿ ಸೀತೆಯ ವರಿಸಿದ
ಕೌಸಲ್ಯಾ ತನಯ ದಶರಥ ರಾಮನಿಗೆ ಮಂಗಳವು

ಪಿತ್ರ್ ವಾಕ್ಯ ಪಾಲನೆಗೆ ರಾಜ್ಯ ತ್ಯಜಿಸಿ ವನಕೆ ತೆರಳಿ
ಚತುರ್ದಶ  ಸಂವತ್ಸರ ಗೆಡ್ಡೆ ಗೆಣಸು ತಿನುತಾ,
ಮೋಸದಿಂದ ಸೀತೆಯ ಅಪಹರಿಸಿದ ರಾವಣನ
ವನಚಾರಿ ವಾನರರ ಸಖ್ಯದಲಿ ಸಂಶೋದಿಸಿದೆ

ವಾನರ ಸೈನ್ಯ ಸಮೇತ ಲಂಕೆಗೆ ತೆರಳಿ ಘೋರ
ಸಮರದಿ ರಾವಣ ಕುಂಭಕರ್ಣರ  ಸಂಹರಿಸಿ
ಮಡದಿ ಸೀತೆಯ ಸಮೇತ ಮರಳಿ ಅಯೋಧ್ಯೆಗೆ
ರಾಮರಾಜ್ಯವ ನೀಡಿದ ಹನುಮ ರಾಮನಿಗೆ ಮಂಗಳವು

ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨೭೬೨೧೬
 

Sunday, April 10, 2011

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೬ - ದೈವಿ ಆಸುರಿ ಸ್ವಭಾವಗಳು

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೬ - ದೈವಿ ಆಸುರಿ ಸ್ವಭಾವಗಳು
 
ಮನಸಿನ ಸ್ವಭಾವಗಳು ಎರಡು - ದೈವೀ, ಆಸುರೀ,
ದೈವೀಗುಣಗಳಿರುವುವು   ಪುಣ್ಯವಂತರಲಿ, ಸದಾ
ಪ್ರಾಣಿ ದಯೆ,ತ್ಯಾಗ,ಶಾಂತಿ,ಸರಳತೆ,ಅಹಿಂಸೆ
ಅಕ್ರೋಧ, ಸಂಯಮ,ನಮ್ರತೆ,ಕ್ಷಮೆ, ಸ್ಥೈರ್ಯ

ಗೌರವ ಕೀರ್ತಿಗಳಿಗೆ ಆಸೆಪಡದಿರುವುದು,
ದುರಾಶೆ ಇಲ್ಲದಿರುವುದು, ತೃಪ್ತಿ,ಧ್ರಿಡ ಸಂಕಲ್ಪ
ಅಭಯ, ದಿವ್ಯಜ್ಞಾನ ಪಡೆವುದು,ಸತ್ಪಾತ್ರರಿಗೆ
ದಾನ, ವೇದಾಧ್ಯಯನ, ತಪಸ್ಸು, ದೈವೀ ಗುಣಗಳು

ಕ್ರೋಧ,ಕ್ರೌರ್ಯ, ದರ್ಪ,ಅಭಿಮಾನ, ಜಂಭ
ಅಜ್ಞಾನ, ಕಾಮ, ಇಂದ್ರಿಯ ಭೋಗ, ಪ್ರತಿಷ್ಠೆ
ಅನ್ಯಾಯದಲಿ ಧನಾರ್ಜನೆ, ದುರಾಶೆ,ಅಹಂಕಾರ
ಬಲವತ್ತೆ,ಶ್ರೀಮಂತಿಕೆಗಳು,ಅಪಾತ್ರರಿಗೆ ದಾನ

ಮೋಜಿಗಾಗಿ ಯಾಗಾಚರಣೆ, ಅಸೂಯೆಗಳು
ಆಸುರೀಗುಣಗಳು. ಇಂತಹವರಿಗಿಲ್ಲ  ಮುಕ್ತಿ
ಹುಟ್ಟುವರು ಪುನಃ ಪುನಃ ಆಸುರೀ ವರ್ಗಗಳಲಿ
ಅವರೆಂದೂ ಪಡೆಯರು ನನ್ನ ಸಾಕ್ಷಾತ್ಕಾರವನು

ಆದ್ದರಿಂದ ಮಾಡಬೇಕು ಕರ್ಮ, ಶಾಸ್ತ್ರ ಪ್ರಮಾಣದಂತೆ
ದೈವಿಗುಣಗಳನು ಸಂಪಾದಿಸಿ, ಭಕ್ತಿರಸ ಪಡೆದು
ಭಗವನ್ನಾಮ ಸಂಕೀರ್ತನೆ ಮಾಡುತ ,ಅಮರ
ಮುಕ್ತಿಯ ಗುರಿಯಾಗಿಸಿ, ವರ್ಜಿಸುತ ಆಸುರೀಗುಣವ


ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ: ೯೮೪೪೨ ೭೬೨೧೬ 


 

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೫- ಪುರುಷೋತ್ತಮ ಯೋಗ

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೫- ಪುರುಷೋತ್ತಮ ಯೋಗ
ಆತ್ಮ ಅವಿನಾಶಿ, ಪಡೆಯುತ್ತದೆ ಹೊಸ ದೇಹ
ಕಳೆದ ಜನ್ಮದ ಕರ್ಮದ ಗುಣಾನುಸಾರವಾಗಿ
ಪಡೆಯೇ ಪರಮ ಪದ, ಶರಣಾಗಬೇಕು,
ಮುಕ್ತನಾಗಬೇಕು, ಮೋಹ ಕಾಮ ಗರ್ವದಿ

ಪಡೆವನು ಜೀವಿ ದೇಹವನು, ಮನಸ್ಸಿನಂತೆ
ಐಹಿಕ  ಮನೋಧರ್ಮದಂತೆ, ಪ್ರಾಣಿಯಾಗಿ
ಕಾಮಿಯಾಗಿ,ಮೂರ್ಖನಾಗಿ,ವಿಕಲಾಂಗನಾಗಿ
ಸುಖಿಯಾಗಿ, ಶ್ರೀಮಂತನಾಗಿ, ತೇಜಸ್ವಿಯಾಗಿ

ಅರಿಯಬೇಕು ನನ್ನಿಂದಲೇ ರವಿಯ ತೇಜಸ್ಸು
ಚಂದ್ರನ ತಂಪು, ಅಗ್ನಿಯ ಶಾಖ, ಇರುವುದು
ಭೂಮಿ ಕಕ್ಷೆಯಲಿ ನನ್ನ ಶಕ್ತಿಯಿಂದ, ಎಲ್ಲ
ಜೀವಿಗಳ ಜಠರಾಗ್ನಿ ನಾನೇ, ಮರೆವು ನನ್ನಿಂದಲೇ

ಎಲ್ಲ ಜೀವಿಗಳು ಕ್ಷರರು, ಅಳಿಯಲೇಬೇಕು, 
ಅಕ್ಷರನಾಗಲು ಅರಿಯಬೇಕು ಪರಮಾತ್ಮನನು
ಕರೆಯುವರು ಎನ್ನನು ಪುರುಶೋತ್ತಮನೆಂದು
ಸಂದೇಹ ಬಿಟ್ಟು ನಿರತನಾಗು ಭಕ್ತಿ ಸೇವೆಯಲಿ

ವೇದಗಳ ಸಾರಾರ್ಥವು ಇದೇ, ಅಪೌರುಷ
ಗ್ರಂಥಗಳ ರಹಸ್ಯ, ಜ್ಞಾನಗಳ ಸಾರಾಂಶ ಇದೇ
ನನ್ನನರಿಯಲು ಮುಕ್ತನಾಗಬೇಕು ಪಾಪಕರ್ಮದಿ
ಪಾರ್ಥ ಇದನರಿತು ಜ್ಞಾನಿಯಾಗು, ಪೂರ್ಣನಾಗು

ರಚನೆ:ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ: ೯೮೪೪೨೭೬೨೧೬
 

Saturday, April 9, 2011

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೪ -ತ್ರಿಗುಣಗಳು

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೪   -ತ್ರಿಗುಣಗಳು
ಕೃಷ್ಣ ನುಡಿದ ,ನಾನು ಜನನದ ಮೂಲ ಬ್ರಹ್ಮ
ಎಲ್ಲ ಜೀವಿಗಳ ತಂದೆ ನಾನೇ, ಬೀಜ ನಾನೇ
ಸತ್ವ, ರಜಸ್ಸು, ತಮಸ್ಸು, ಮೂರು ಐಹಿಕ ಗುಣಗಳು,
ಎಲ್ಲ ಜೀವಿಗಳು ಬಂಧಿತರು ಮೂರುಗುಣಗಳಿಗೆ

ಸಾತ್ವಿಕ ಗುಣವು ನಿರ್ಮಲವು, ತೇಜೋಮಯವು
ಸತ್ವ ಗುಣದಿಂದ ಉಂಟಾಗುವುದು ಪರಮಾತ್ಮ ಜ್ಞಾನ
ಇರುವನು ಸದಾ  ಸುಖ ಶಾಂತಿಯಿಂದ ಸತ್ವಗುಣನು
ಪಡೆವನು ದಿವ್ಯ  ಪರಮಪದವನು ಅಂತ್ಯದಲಿ

ರಾಜಸ ಗುಣವು ಅಮಿತವಾದ ಆಸೆ ಬಯಕೆ ಜನಿತವು
ರಾಜಸಗುಣದಿಂದ ಉಂಟಾಗುವುದು ಕಾಮ್ಯ ಕರ್ಮ
ಅತಿ ಮೋಹ, ಫಲಾಪೇಕ್ಷೆ, ಬಯಕೆ, ಹಂಬಲಗಳು
ಇರಿಸುವುದದು ಮರ್ತ್ಯ ಲೋಕದಲಿ ನಿರಂತರದಿ

ತಾಮಸಗುಣವು ಭ್ರಮೆ, ಹುಚ್ಚು,ನಿದ್ರೆಯಿಂದ ಜನಿತ
ತಾಮಸಗುಣದಿಂದ ಉಂಟಾಗುವುದು ಅಜ್ಞಾನ
ಭ್ರಮಣೆ, ಕತ್ತಲು,ಜಡತ್ವ ,ಬುದ್ದಿನಾಶ, ಭ್ರಾಂತಿಗಳು
ತಳ್ಳುವುದದು ಅಧೋಗತಿಗೆ, ನಿರಂತರ ನರಕಕ್ಕೆ

ಮೂರುಗುಣಗಳ ಗೆದ್ದವನು ಪಡೆಯುವನು ಮುಕ್ತಿಯನು
ನಿರತನಾಗುವನು ಸದಾ ಪೂರ್ಣ ಭಕ್ತಿಸೇವೆಯಲಿ
ಕಾಣುವನು ಸಕಲವನು ಸಮಚಿತ್ತದಲಿ, ನಡೆಯುತ
ಚಿರಂತನ ಅವಿನಾಶಿ ಬ್ರಹ್ಮನ ಪ್ರಶಾಂತ  ನೆಲೆಯತ್ತ

ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ: ೯೮೪೪೨೭೬೨೧೬


 

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೩ -ಪ್ರಕೃತಿ ಪುರುಷ ಹಾಗೂ ಪ್ರಜ್ಞೆ

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೩  -ಪ್ರಕೃತಿ ಪುರುಷ ಹಾಗೂ ಪ್ರಜ್ಞೆ
ದೇಹವು ಕ್ಷೇತ್ರ, ಅದನರಿತವನೇ ಕ್ಷೇತ್ರಜ್ಞ
ಕ್ಷೇತ್ರದಲ್ಲಿರುವುದು ಪಂಚ ಮಹಾ ಭೂತಗಳು
ಪಂಚ ಇಂದ್ರಿಯಗಳು, ಪಂಚೇಂದ್ರಿಯ ವಿಷಯಗಳು
ಬಯಕೆ, ರಾಗ, ದ್ವೇಷ ,ಸುಖ, ದುಃಖ ಇತ್ಯಾದಿಗಳು

ಕ್ಷೇತ್ರಜ್ಞನಿಗಿರಬೇಕು ನಮ್ರತೆ, ಅಹಿಂಸೆ,ತಾಳ್ಮೆ
ಸಂಯಮ,ಸ್ಥೈರ್ಯ, ವೈರಾಗ್ಯ , ಸಮಚಿತ್ತತೆ
ಪರಿಶುದ್ಧ ಭಕ್ತಿ,ವಿಷಯದಲಿ ಅನಾಸಕ್ತಿ,ನಂಬಿಕೆ
ಪರಮಾತ್ಮನೇ ಸರ್ವಸ್ವ, ಸರ್ವ ವ್ಯಾಪಿ, ಸರ್ವಜ್ಞನೆಂದು

ಐಹಿಕ ಕಾರ್ಯಗಳ ಪರಿಣಾಮ, ಪ್ರಕೃತಿ ಸುಖ ದುಃಖ
ಅರಿಯಬೇಕು ದೇಹದೊಳಗಿರುವನು ಪರಮಾತ್ಮ
ಅವನು ಪ್ರಭು, ಪರಮಸ್ವಾಮಿ, ಅವನ ಆಣತಿಯೇ 
ನಿತ್ಯ ಜೀವನ, ಕರ್ಮವೆಲ್ಲವೂ ಅವನ ಪ್ರೀತ್ಯರ್ಥ

ಕಾಣಬೇಕು ಎಲ್ಲರಲ್ಲಿಯೂ ಎಲ್ಲದರಲ್ಲಿಯೂ
ನಿತ್ಯ ಚೇತನ ಪರಮಾತ್ಮನನು ಸಮಾನವಾಗಿ
ದೇಹವಷ್ಟೇ ಭಿನ್ನ, ಆತ್ಮ ಒಂದೇ , ಅವಿನಾಶಿ, ನಿತ್ಯ,
 ಅಮರ ,ಗುಣಾತೀತ, ಅದೊಂದು ದಿವ್ಯ ಜ್ಯೋತಿ

ಆತ್ಮವನರಿತು ದೇಹದ ಕ್ರಿಯೆಗಳೆಲ್ಲವನು
ಆತ್ಮದ ಉನ್ನತಿಗಾಗಿ ನಡೆಸಿ, ಪರಿಶುದ್ಧ 
ಕ್ರಿಯೆಗಳಿಂದ ಐಹಿಕ ಬಂಧನಗಳನ್ನು ತ್ಯಜಿಸಿ
ಪರಮಾತ್ಮನ ಸಾಕ್ಷಾತ್ಕಾರ ಪಡೆವುದೇ ಮುಕ್ತಿ, ಮೋಕ್ಷ.

ರಚನೆ:ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨೭೬೨೧೬
 



 

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೨ -ಭಕ್ತಿ ಸೇವೆ

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೨ -ಭಕ್ತಿ ಸೇವೆ 
ಪಾರ್ಥ ಕೇಳಿದ , ಭಕ್ತಿಗೆ ಸಾಕಾರ ರೂಪವೋ,
ನಿರಾಕಾರ ಪರಬ್ರಹ್ಮ ಧ್ಯಾನವೋ, ಬಗೆ ಹೇಗೆಂದು
ನುಡಿದ ಕೃಷ್ಣ, ಯಾರು ಮನವ ಸ್ಥಿರಗೊಳಿಸಿ, ಶ್ರದ್ದಯಾ
ಪರಯಾ ಉಪಾಸಿಸುವರೋ, ಅವರೇ ಪೂರ್ಣರು

ನಾನು ಸರ್ವವ್ಯಾಪಿ, ವ್ಯಕ್ತವಲ್ಲದವನು, ನಿಶ್ಚಲನು
ಇಂದ್ರಿಯಾತೀತನು, ಗ್ರಹಿಸಲಾಗದವನೆಂಬುದು ಸತ್ಯ.
ನಿರಾಕಾರವೀ ರೂಪವನು ಮನದಲಿ ಆಳವಾಗಿ ನಿಲಿಸಿ
ಇಂದ್ರಿಯ ನಿಗ್ರಹದಿಂದ, ಪರಹಿತ ಬಯಸಿ, ಪೂಜಿಸಬೇಕು

ಮನದ ನಿಯಂತ್ರಣ ಕ್ಲೇಷಕರ ದೇಹಧಾರಿಗಳಿಗೆ,
ಅದಕಾಗಿ ಮಾಡಬೇಕು ದೇಹ ದಂಡನೆ,ಅಚಲ ಬಯಕೆ
ಉದಯಪೂರ್ವ ಏಳುವುದು,ತುಳಸಿ ಪುಷ್ಪ ಸಂಗ್ರಹಣೆ
ಸಾಕಾರರೂಪದ ಆರಾಧನೆ ,ಭಕ್ತಿಯಲಿ ಪ್ರಸಾದ ಸ್ವೀಕಾರ

ನನಗೆ ಅತ್ಯಂತ ಪ್ರಿಯನಾಗುವನು ಶತ್ರು ಮಿತ್ರರನು
ಸಮಾನ ಕಾಣುವವನು , ಮಾನಾಪಮಾನಗಳಲಿ,
ಶೀತೊಷ್ಣದಲಿ,ಕೀರ್ತಿ ಅಪಕೀರ್ತಿಗಳಲಿ ಅವಿಚಲಿತನು 
ಸದಾ ಮೌನಿಯೂ,ಅಲ್ಪತ್ರಿಪ್ತನೂ, ಸ್ಥಿರಮತಿಯೂ,ನಿರಾಸಕ್ತನು

ಯಾರು ಸಂತೋಷಿಸುವುದಿಲ್ಲವೋ, ದುಃಖರಹಿತನೋ 
ನಿಶ್ಶೋಕಿಯೋ,ಶುಭಾಶುಭ ಪರಿತ್ಯಾಗಿಯೋ
ಭಕ್ತರಂತಹವರು ನನಗೆ ಅತ್ಯಂತ ಪ್ರಿಯರು, ಅವರು
ಆಗಿಸುವರು ನನ್ನನ್ನೇ ಪರಮಗುರಿಯೆಂದು, ಆಜೀವ

ರಚನೆ:ಕೆ ವಿ ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨೭೬೨೧೬
 


 

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೧-ವಿಶ್ವರೂಪ ದರ್ಶನ

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧೧-ವಿಶ್ವರೂಪ ದರ್ಶನ
 
ಪಾರ್ಥ ನುಡಿದ, ನಿನ್ನ ಅನಂತತೆಯ ಕೇಳಿ ನಿರ್ಮೋಹನಾದೆ
ನಿನ್ನ ಅನಂತ ರೂಪವನ್ನು ನೋಡ ಬಯಸುವೆನೆಂದ
ಕೃಷ್ಣ ನೀಡಿದ ದಿವ್ಯ ದೃಷ್ಟಿಯ ವಿರಾಟ ರೂಪ ಕಾಣಲು
ದಿಗ್ಭ್ರಮೆಗೊಂಡ ಪಾರ್ಥ ಸಹಸ್ರ ಶೀರ್ಷಾ ಪುರುಷನ ಕಂಡು

ಅಸಂಖ್ಯ ಬಾಯಿಗಳು,ಚಕ್ಷುಗಳು,ಕರಗಳು,ಮುಖಗಳು
ಕಮಲಾಸನ ಬ್ರಹ್ಮ, ಶೂಲಪಾಣಿ ಶಿವ, ಎಲ್ಲ ಋಷಿಗಳು
ಬೆಂಕಿಯಂತೆ ಪ್ರಜ್ವಲಿಸುತ್ತಿರುವ ಕಣ್ಣುಗಳು,ಸಹಸ್ರ
ಆದಿತ್ಯ ಸಂಕಾಶ ,ಶಂಖ ಚಕ್ರ ಗಧಾಯುಧ ವಿಷ್ಣು ವನು 

ಭೀಷ್ಮ ದ್ರೋಣ ಆದಿ ಯೋಧರು ವಿರಾಟ ರೂಪದಲಿ
ಅಂತ್ಯಗೊಳ್ಳುವುದ ಕಂಡ ಪಾರ್ಥ ಭಯಭೀತನಾದ
ಪ್ರಭು, ನೀನೇ ವಾಯು, ಯಮ, ಅಗ್ನಿ,ಜಲ,ಚಂದ್ರ
ಪಿತಾಮಹನೂ, ಆದಿ ಅಂತ್ಯನು ನೀನೇ, ಪ್ರಣಾಮಗಳೆಂದ 

ಹೇ ವಿರಾಟ್ರೂಪಿಯೇ, ನೋಡಲಾರೆ ಭೀಕರ ರೂಪವ
ಮರಳಿ ಅನುಗ್ರಹಿಸು ನಿನ್ನ ಮೊದಲಿನ ರೂಪವ
ನುಡಿದ ಕೃಷ್ಣ, ಈ ವಿರಾಟ್ ರೂಪ ಲಭಿಸದು ಎಲ್ಲರಿಗೂ
ಯಜ್ಞ, ಅಧ್ಯಯನ, ದಾನ, ತಪಗಳಾವುದರಿಂದ ಅಲಭ್ಯ

ನನ್ನ ವಿರಾಟ್ರೂಪವನರಿಯಲು ಭಕ್ತಿ ಬೇಕು
ನನಗಾಗಿ ಕರ್ಮ ಮಾಡಬೇಕು, ಬದುಕಿನ ಪರಮ
ಗುರಿಯಾಗಿಸಬೇಕು, ಬಿಡಬೇಕು ಕಾಮ ಕ್ರೋಧ ಅಹಂ
ಜಪಿಸಬೇಕು, ಸದಾ ಅನನ್ಯ ಚಿಂತನೆಯಿಂದೆಂದ ಕೃಷ್ಣ

ರಚನೆ; ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨ ೭೬೨೧೬



 

Friday, April 8, 2011

ಶ್ರೀ ಕೃಷ್ಣ ಸಂದೇಶ - ಅಧ್ಯಾಯ ೧೦-ವಿಭೂತಿ ಯೋಗ

ಶ್ರೀ  ಕೃಷ್ಣ  ಸಂದೇಶ - ಅಧ್ಯಾಯ ೧೦-ವಿಭೂತಿ ಯೋಗ

ಪಾರ್ಥ ನಾನು ಅನಾದಿ, ಸೃಷ್ಟಿ ಎಲ್ಲವೂ  ನನ್ನದೇ
ಜೀವಿಗಳ ಸೃಷ್ಟಿ ಸುವವ ನಾನು, ಅವರೆಲ್ಲ ಗುಣಗಳನು
ಮೂಡಿಸುವವ  ನಾನು, ಬುದ್ಧಿ , ಜ್ಞಾನ, ಕ್ಷಮೆ,ಮೋಹ
ದಾನ, ಕೀರ್ತಿ, ತುಷ್ಟಿ ಆದಿ ಗುಣಗಳ ಕಾರಕ ನಾನು

ಆದಿಯಲಿ ಬ್ರಹ್ಮ, ಸನಕ ಸನಂದಾದಿ ಮುನಿಗಳ
ಸಪ್ತರ್ಷಿಗಳ, ಇಂದ್ರಾದಿ ದೇವತೆಗಳ ಸೃಷ್ಟಿಸಿದೆ
ಜೀವಿಗಳಿಗಾಗಿ ಮರ್ತ್ಯ ಲೋಕ, ತೇಜಸ್ವಿ ಸೂರ್ಯ
ಚಂದ್ರ ,ನಕ್ಷತ್ರಗಳು, ಪ್ರಜಾಪತಿ, ರುದ್ರರ ಸೃಷ್ಟಿಸಿದೆ

ನಾನು ಎಲ್ಲ ಜೀವಿಗಳ ಹ್ರಿದಯದಲ್ಲಿರುವ ಪರಮಾತ್ಮ
ವೇದಗಳಲ್ಲಿ ಸಾಮವೇದ, ನಾನು ಸ್ವರ್ಗಾದಿಪತಿ ಇಂದ್ರ
ರುದ್ರರಲಿ ಪರ ಶಿವ, ಯಕ್ಷರಾಕ್ಷಸರಲಿ  ಕುಬೇರ
ಶಿಖರಗಳಲಿ ಮೇರು ,ವೃಕ್ಷ ಗಳಲಿ ಅಶ್ವತ್ಥ ನಾನು

ಸರ್ಪಗಳಲಿ ವಾಸುಕಿ, ಆಯುಧಗಳಲಿ ವಜ್ರಾಯುಧ
ಪಿತೃ ಗಳಲಿ ಅರ್ಯಮಾ, ಶಾಸನ ಪಾಲಕನಾಗಿ ಯಮ
ಪ್ರಾಣಿಗಳಲಿ ಸಿಂಹ, ಪಕ್ಷಿಗಳಲಿ ಗರುಡ, ಮೀನುಗಳಲಿ
ಮಕರ, ಪಾರ್ಥ, ನಾನೇ ಆದಿ ಮಧ್ಯ ಅಂತನು

ವಿಶ್ವದ ಎಲ್ಲ ಅಸ್ಥಿತ್ವಗಳ ಉತ್ಪಾದಕ ಬೀಜ ನಾನೇ
ಸುಂದರ, ಶ್ರೀಮಂತ ಭವ್ಯ ಸೃಷ್ಟಿ ಗಳು ನನ್ನ ತೆಜೋಂಶ 
ಅಡಗಿವೆ ಎಲ್ಲವು ನನ್ನ ವಿರಾಟ್ ಸ್ವರೂಪದಲಿ
ಪಾರ್ಥ ಅದನರಿತು ಪೂಜಿಸೆ ಭಕ್ತಿಯಲಿ ಪಡೆವೆ ಮುಕ್ತಿಯ

ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨೭೬೨೧೬
  

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೯-ರಹಸ್ಯ ಜ್ಞಾನ

ಕೃಷ್ಣ ನುಡಿದ ಪಾರ್ಥ ನಿನಗರುಹುವೆ ರಹಸ್ಯಜ್ಞಾನ
ನನ್ನ ಪಡೆಯುವ ದಿವ್ಯಜ್ಞಾನ ಪರಮಜ್ಞಾನ
ನಾನು ಅವ್ಯಕ್ತ ವಿಶ್ವರೂಪಿ ಜೀವರೆಲ್ಲರು
ಇರುವರು ನನ್ನಲ್ಲಿ ನಾನವರಲಿ ಇಲ್ಲ

ವಿಶ್ವದ ತಂದೆ ನಾನು, ಓಂಕಾರ ನಾನು
ಚತುರ್ವೆದಗಳು ನಾನು, ಎಲ್ಲ ಯಜ್ಞಗಳು
ನಾನು, ಆಹುತಿಯು ನಾನೇ, ಆಜ್ಯ ಅಗ್ನಿ
ಹುತ ಔಷದ ನಾನೇ ,ಸೃಷ್ಟಿ ಪ್ರಳಯಗಳು ನಾನೇ

ರವಿಯ ತೇಜ ನಾನು, ವ್ರಿಷ್ಟಿಕಾರಕ ನಾನು
ಅಮೃತ ಮ್ರಿತ್ಯುಗಳು ನಾನೇ,ಸಕಲ  ಚೇತನ
ಅಚೇತನ ನನ್ನ ಸೃಷ್ಟಿ, ಕಲ್ಪಾಂತದಲಿ ಎಲ್ಲವು
ಲೀನವಾಗುವುವು ನನ್ನಲ್ಲಿ, ಸೃಷ್ಟಿ ಸುವೆ  ಪುನರಾದಿಯಲಿ

ಎಲ್ಲ ಯಜ್ಞಗಳ ಭೋಕ್ತಾರನು, ಸ್ವಾಮಿಯೂ ನಾನೇ,
ನನ್ನನು ಅನ್ಯ ಚಿಂತನೆಗಳಿಲ್ಲದೆ   ಆರಾಧಿಸೆ ಸದಾ
ಕೊಡುವೆನೆಲ್ಲವನು ಅವರಿಗೆ, ರಕ್ಷಿಸುತ ನೀಡಿದುದ,
ಆರಾಧಿಸಲು ಸಾಕೆನಗೆ ಒಂದೆಲೆ ಹೂವು ಹಣ್ಣು ನೀರು

ನನ್ನ ಭಕ್ತನಿಗೆ ನಾಶವೆಂಬುದಿಲ್ಲ, ಪಡೆಯೇ
ನನ್ನ, ವರ್ಣ ಭೇದವೂ ಇಲ್ಲ, ಬೇಕಷ್ಟೇ ಶುದ್ದ ಪ್ರೀತಿ
ಪಾರ್ಥ, ಭಜಿಸು ಎನ್ನನು ಸದಾ , ಪೂಜಿಸು
ಅನನ್ಯ ಚಿಂತನೆಯಿಂದ ,ಪಡೆಯುವೆ ಪರಮಪದ


ರಚನೆ: ಕೆ ವಿ ಶ್ರೀನಿವಾಸ ಪ್ರಸಾದ್
ಮೊಬ: ೯೮೪೪೨ ೭೬೨೧೬
ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೯-ರಹಸ್ಯ ಜ್ಞಾನ
ಕೃಷ್ಣ ಸಂದೇಶ-ಅಧ್ಯಾಯ ೯-ರಹಸ್ಯ ಜ್ಞಾನ

email;sreenvasaprasad.kv@gmail.com

ಶ್ರೀ ಕೃಷ್ಣ ಸಂದೇಶ- ಅಧ್ಯಾಯ ೮- ಭಗವತ್ ಪ್ರಾಪ್ತಿ

ಶ್ರೀ ಕೃಷ್ಣ ಸಂದೇಶ- ಅಧ್ಯಾಯ ೮- ಭಗವತ್ ಪ್ರಾಪ್ತಿ
ಅಂತ್ಯ ಕಾಲದಿ   ಭಗವಂತನ ಸ್ಮರಿಸಿದರೆ
ದೊರಕುವುದು ಮುಕ್ತಿ, ಚಿರಂತನ ಸಾನಿಧ್ಯ
ದೇಹತ್ಯಾಗದಲಿ ಯಾವ ಭಾವ ತಳೆದರೆ
ಪಡೆವನು ಅದೇ ಭಾವ, ಪುನರ್ಜನ್ಮದಲಿ

ಪಾರ್ಥ ಸದಾ ಸ್ಮರಿಸು ಕೃಷ್ಣ ರೂಪವನು
ಅರ್ಪಿಸೆನಗೆ ನಿನ್ನೆಲ್ಲ ಕರ್ಮವನ್ನು ನಿರತದಲಿ
ಓಂ ಇತ್ಯಕ್ಷರ  ಜಪಿಸುತಲಿ ದೇಹ
ತ್ಯಜಿಸಿದರೆ ಪಡೆವರೆನ್ನಯ ಪರಮ ಪದವನು

ಪರಮಪದದಲಿಹುದು ನಿರಂತರ ಶಾಂತಿ
ಅಗಣಿತ ಆನಂದ, ಮರಳಿ ಜನ್ಮವಿಲ್ಲದ ಸುಖ
ಲಭ್ಯ ಪರಮ ಪದ, ಮರಣಿಸಿದರೆ ಉತ್ತರ ಅಯನದಿ 
ಶುಭ ಶುಕ್ಲ ಪಕ್ಷದಲಿ ಹಗಲಿನ ಬೆಳಕಿನಲಿ

ಅಲಭ್ಯ ಪರಮಪದ ಮರಣಿಸೆ ದಕ್ಷಿಣ ಅಯನದಿ   
ಅಶುಭ ಕೃಷ್ಣಪಕ್ಷದಲಿ ಗಾಢ  ಇರುಳಿನ ಕತ್ತಲಲಿ
ಭಕ್ತರಿಗಿದು ಅನ್ವಯವಿಲ್ಲ ಎನ್ನ ಸದಾ ಸ್ಮರಿಸೆ
ಪಾರ್ಥ, ನೀನಾಗು ಯೋಗಿ ಎಲ್ಲರಲಿ ಎನ್ನ ಕಾಣುತ

ಭಗವಂತ ಸರ್ವಜ್ಞ, ಪುರಾತನ, ನಿಯಂತ್ರಕ
ಪಾಲಿಸುವನೆಲ್ಲರನು ಸೂಕ್ಷ್ಮಾತಿ ಸೂಕ್ಷ್ಮನು
ಅಚಿಂತ್ಯ ರೂಪನು, ಆದಿತ್ಯ ವರ್ಣನು, ರವಿತೇಜನು
ಸ್ಮರಿಸು ಆತನ ನಿರಂತರ, ಪಡೆಯೇ ಪರಮಪದ

ರಚನೆ: ಕೆ.ವಿ.ಶ್ರೀನಿವಾಸ [ಪ್ರಸಾದ್
ಮೊಬ: ೯೮೪೪೨ ೭೬೨೧೬
 

ಶ್ರೀ ಕೃಷ್ಣ ಸಂದೇಶ -ಅಧ್ಯಾಯ ೭-ಪರಾತ್ಪರ ಜ್ಞಾನ

ಶ್ರೀ  ಕೃಷ್ಣ  ಸಂದೇಶ -ಅಧ್ಯಾಯ ೭-ಪರಾತ್ಪರ ಜ್ಞಾನ
ಯೋಗಿಯಾಗಲು ಮೊದಲರಿಯಬೇಕು ನನ್ನನು
ನುಡಿದ ಕೃಷ್ಣ ,ಆದಿ ನಾನೇ ,ಅಂತ್ಯ ನಾನೇ
ಸೂರ್ಯ ಚಂದ್ರರಲಿ ಬೆಳಕು ನಾನೇ, ವೇದದ
ಮಂತ್ರಗಳಲಿ ಓಂಕಾರ, ಪುರುಷರಲಿ ಪೌರುಷ ನಾನೇ

ಆಕಾಶದಲಿ ಶಬ್ದ, ಭೂಮಿಯ  ಪರಿಮಳ ನಾನೇ
ಅಗ್ನಿಯ ತೇಜಸ್ಸು, ತಪಸ್ವಿಗಳ ತಪಸ್ಸು ನಾನೇ
ಮೂಲ ಬೀಜ ನಾನೇ, ಶಕ್ತಿವಂತರ ಶಕ್ತಿ ನಾನೇ
ಅವ್ಯಯನು ನಾನು, ತ್ರಿಗುನಾತೀತನು ನಾನು

ನನ್ನನು ಪೂಜಿಸುವವರು ಆರ್ತಿಗಳು, ದ್ರವ್ಯ
ಆರ್ತಿಗಳು ,ಜಿಜ್ಞಾಸುಗಳು ಅಥವಾ ಜ್ಞಾನ ಅನ್ವೇಷನಿಗಳು
ಆದರೆ ನನಗೆ ಪ್ರಿಯವಾಗುವವರು ನಿಜವಾದ ಭಕ್ತರು,
ಭಕ್ತರು ಸೇರುವರು ನನ್ನನು ನಿಸ್ವಾರ್ಥದಲಿ  ಪೂಜಿಸುತ

ಬಯಕೆಗಳ ಸಿದ್ದಿಗಾಗಿ ಪೂಜಿಸುವರು ಬಗೆಬಗೆಯ
ದೇವರನು, ಅರಿಯದೆ ಎಲ್ಲ ರೂಪದಲಿ ನಾನಿರುವೆನೆಂದು
ಅನುಗ್ರಹಿಸುವೆ ಬಯಕೆಗಳ, ಆಯಾರೂಪದಲಿ,
ನಾನಿರುವೆ ಭೂತ, ವರ್ತಮಾನ, ಭವಿಷ್ಯದಲಿ ಅಮರನಾಗಿ

ನಾ ಕಾಣಿಸೆನು ಮತಿಹೀನರಿಗೆ, ಮೂಡರಿಗೆ
ಕಾಮ ಕ್ರೋಧಗಳಿಂದ ತುಂಬಿದವನಿಗೆ, ಅಜ್ಞಾನಿಗೆ
ನನ್ನನರಿತವರು ಮಾಡುವರು ಪುಣ್ಯ ಕರ್ಮವನು
ಅರಿಯುವರು ಅಂತ್ಯಕಾಲದಲ್ಲಿಯು ಪ್ರಭುವು ನಾನೆಂದು

ರಚನೆ: ಕೆ ವಿ ಶ್ರೀನಿವಾಸ ಪ್ರಸಾದ್
ಮೊಬ : ೯೮೪೪೨ ೭೬೨೧೬
 email;sreenivasaprasad.kv@gmail.com


 

ಶ್ರೀ ಕೃಷ್ಣ ಸಂದೇಶ -ಅಧ್ಯಾಯ ೬-ಧ್ಯಾನ ಯೋಗ

ಶ್ರೀ ಕೃಷ್ಣ ಸಂದೇಶ -ಅಧ್ಯಾಯ ೬-ಧ್ಯಾನ ಯೋಗ 
ಆತ್ಮಜ್ಞಾನಕೆ ಅವಶ್ಯ ಮನಸಿನ ನಿಗ್ರಹ
ಮನಸೆಂಬುದು ಹಿಡಿತದಲ್ಲಿರೆ ಆತ್ಮೀಯ ಬಂಧು
ಇಲ್ಲವಾದರೆ ಅದು ದುರ್ಗಮ ಶತ್ರು, ಪಾರ್ಥ
ಮನಸನ್ನು ಗೆದ್ದವನೇ ಪರಮಾತ್ಮ ಪಡೆದಂತೆ

ಯೋಗಿಯಾಗಬೇಕು ನಿಯಂತ್ರಿಸಿ ಮನವನು
ಬಯಕೆ ಗಳಿಕೆಯಿಂದ ದೂರವಿರಿಸಬೇಕು
ನೆಡಬೇಕು ಮನವ ಪರಮಾತ್ಮನಲ್ಲಿ ಅನವರತ
ಪಡೆವನಾಗ ಸಮಾಧಿ, ಚಿರಂತನ ಶಾಂತಿ, ಪರಮಾನಂದ

ಯಾರು ಪರಮಾತ್ಮನನು ಎಲ್ಲೆಲ್ಲಿಯೂ ಕಾಣುವನೋ
ಅವನಾಗುವನು ನನಗೆ ಅತ್ಯಂತ ಪ್ರಿಯನು
ಅವನಿರುವನು ಸದಾ ನನ್ನಲಿ ನಾನಿರುವೆನು ಅವನಲಿ
ಪಾರ್ಥ ಅರುಹಿದ ,ಮನಸ್ಸು ಚಂಚಲ, ನಿಗ್ರಹ ಕಠಿಣ

ನುಡಿದನಾ ಕೃಷ್ಣ, ಹೇ ಮಹಾಬಾಹೋ ಮನೋನಿಗ್ರಹ
ಕಠಿಣ , ಗೆಲಬಹುದು ಯೋಗದಿಂದ, ವ್ಯರಾಗ್ಯದಿಂದ 
ಮನದ ನಿಗ್ರಹವಲ್ಲದೆ ದುಃಸಾಧ್ಯ ಆತ್ಮ ಸಾಕ್ಷಾತ್ಕಾರ
ಅದಕ್ಕೆಂದೇ ಯೋಗಿಯು ಶ್ರೇಷ್ಠ, ತಪಸ್ವಿ ಜ್ನಾನಿಗಳಿಗಿಂತ

ಮನವಗೆಲ್ಲಲು ಶ್ರದ್ದೆಯಿರಬೇಕು, ಆಗುವನು
ನನಗೆ ಅತಿ ಪ್ರಿಯನು, ಶ್ರೇಷ್ಠ ಎನಿಸುವನು     
ಪಾರ್ಥ ನೀನಾಗು ಯೋಗಿ ಎಲ್ಲ ಸನ್ನಿವೆಶದಲಿ 
ಲಭಿಸುವುದಾಗ ಯಶವು ಆತ್ಮಸಾಕ್ಷಾತ್ಕಾರವು

ರಚನೆ; ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ: 9844276216 

e mail: sreenivasaprasad.kv@gmail.com
 

Thursday, April 7, 2011

ಶ್ರೀ ಕೃಷ್ಣ ಸಂದೇಶ -ಅಧ್ಯಾಯ ೫-ಕರ್ಮ ಯೋಗ

ಶ್ರೀ ಕೃಷ್ಣ ಸಂದೇಶ -ಅಧ್ಯಾಯ ೫-ಕರ್ಮ ಯೋಗ
ಬೇಕು ಭಗವಂತನ ಸಾಕ್ಷಾತ್ಕಾರಕೆ ಅಗತ್ಯ
ವಿರಕ್ತ ಕರ್ಮ ಆತ್ಮಜ್ಞಾನದ ಜೊತೆಯಲಿ ನಿಜವಾದ
ಗಾಢವಾದ ಭಕ್ತಿ ಮತ್ತು ಅಪ್ರತಿತಮ ಪ್ರೇಮ
ದೊರೆವುದಾಗ ಮಾತ್ರ ಚಿರಂತನ ಮುಕ್ತಿ

ಭಕ್ತಿ ಇಲ್ಲದ ವಿರಕ್ತ ಕರ್ಮ ನೀಡದು
ವಿಮುಕ್ತಿ,ಜನ್ಮ ಸಂಸಾರದ ಬಂಧನದಿ
ಬೇಕು ಕಾರನ್ನು ಕರ್ತ್ರಿವು ಭಗವಂತನೇ
ನಡೆವೆವು ಆತನ ನಿರ್ದೇಶನದಿ ಎಂಬ ಅರಿವು

ಮಾಡಬೇಕು ವಿರಕ್ತಿ ಕರ್ಮ ನೀರ ಮೇಲಿನ
ಗುಳ್ಳೆಯಂತೆ ತಾವರೆಯ ಮೇಲಣ ಹನಿಯಂತೆ
ಪ್ರಿಯವಾದುದನ್ನು ಪಡೆದಾಗ ಹರ್ಷವು ಅಪ್ರಿಯ
ದಿಂದ ದುಃಖವು ,ಇರದಾಗುವನು ಸ್ಥಿತಪ್ರಜ್ಞ

ಪ್ರಜ್ನಾವಾನ್ಗೆ ಇರದು ಇಂದ್ರಿಯ ಆಕರ್ಷಣೆ
ಸುಖ್ದಾಡಿ ಅಂತ್ಯದಲಿ ಸಂತೋಷ ದುಃಖ
ಪದೆವರವರು ಬ್ರಹ್ಮ ನಿರ್ವಾಣ ನಿರಂತರ ಆನಂದ
ಆತ್ಮ ಸಾಕ್ಷಾತ್ಕಾರ ಕೊನೆಯಲಿ ದೈವದರ್ಶನ

ಹೇ ಪಾರ್ಥ, ಸಕಲ ಯಜ್ಞಗಳ ತಪಸ್ಸುಗಳ
ಭೋಕ್ತ ನಾನೇ, ಸಕಲ ಲೋಕಗಳ,
ದೇವತೆಗಳ ಪರಮ ಪ್ರಭು ನಾನೇ, ಎಲ್ಲ
ಜೀವಿಗಳ ಹಿತ್ಯಷಿಯು ನಾನೇ ಎಂದರಿತು ನಡೆ.

ರಚನೆ: ಕೆ.ವಿ ಶ್ರೀನಿವಾಸ ಪ್ರಸಾದ್
ಮೊಬ: 9844276216
 e-mail:sreenivasaprasad.kv@gmail.com



  

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೪- ಜ್ಞಾನ ಯೋಗ

ಶ್ರೀ ಕೃಷ್ಣ  ಸಂದೇಶ-ಅಧ್ಯಾಯ ೪- ಜ್ಞಾನ ಯೋಗ 
ಆತ್ಮದಾದಿಯ ಜ್ಞಾನ,ವಿರಕ್ತ ಕರ್ಮದ ಮೂಲ
ಆತ್ಮಜ್ಞಾನಕೆ ಸಮನಿಲ್ಲ ಜಗದಲಿ ತಿಳಿ
ಆತ್ಮವರಿಯಲು ಬೇಕು ಕಾಮ ಕ್ರೋಧ ಅಹಂಗಳ
ನಿಗ್ರಹ ,ಸಮರ್ಪಿಸಬೇಕು ಭಕ್ತಿಯಲಿ ಎಲ್ಲ ಕರ್ಮ

ಆತ್ಮವರಿಯಲು ಬೇಕು ಸದ್ಗುರು ಅನುಗ್ರಹ
ದ್ರವ್ಯಮಯ ಯಜ್ಞ ಅಪ್ರಯೋಜಕ, ಶ್ರೇಷ್ಠ
ಜ್ಞಾನ ಯಜ್ಞ, ನಡೆಸುವುದದು ಆತ್ಮಜ್ಞಾನದತ್ತ
ಅರಿವಾಗುವುದು ಪರಮಾತ್ಮ ಆತ್ಮಜ್ಞಾನದಿಂದ

ಜನಿಪುದು ಆತ್ಮಜ್ಞಾನ, ತ್ಯಾಗಬಲದಿಂದ, ಕಠಿಣ 
ತಪದಿಂದ, ಶಿಸ್ತಿನ ವ್ರತಾಚರನೆಗಳಿಂದ
ವೇದಾಧ್ಯಯನದಿಂದ, ಯೋಗಾಭ್ಯಾಸದಿಂದ
ಬಗೆಬಗೆಯ ಹೋಮ ಹವನ ಯಜ್ಞಾದಿಗಳಿಂದ

ಆತ್ಮವರಿಯಲು ಮಾಡಬೇಕು ನಿಷ್ಕಾಮ ಕರ್ಮ
ನಿರಪೇಕ್ಷ ,ನಿರ್ಮೋಹ,ಸಮರ್ಪಿತ ಕರ್ಮ
ಅರಿಯಬೇಕು ಸತ್ಕರ್ಮ, ವಿಕರ್ಮ, ಅಕರ್ಮ
ತ್ಯಜಿಸಿ ವಿಕರ್ಮ, ಅಕರ್ಮ, ಮಾಡಬೇಕು ಸತ್ಕರ್ಮ

ಫಲಾಪೇಕ್ಷೆಯ ಯಜ್ಞ ನೀಡುವುದು ಫಲ ಮಾತ್ರ
ಅಕರ್ಮ ವಿಕರ್ಮದಿಂದಾಗುವುದು ಧರ್ಮನಾಶ
ಧರ್ಮದ ಪುನರುತ್ಥಾನಕ್ಕಾಗಿ ಸಜ್ಜನರ ಪಾಲನೆಗಾಗಿ
ಅವತರಿಸುವೆ ಪ್ರತಿ ಯುಗದಲಿ ಎಂದನಾ ಕೃಷ್ಣ


ರಚನೆ:ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ: ೯೮೪೪೨ ೭೬೨೧೬
 E-Mail:sreenivasaprasad.kv@gmail.com



 

ಶ್ರೀ ಕ್ರಷ್ಣ ಸಂದೇಶ-ಅಧ್ಯಾಯ ೩-ಕರ್ಮಯೋಗ

ಭಗವದ್ಗೀತೆ ಒಂದು   ಮಹಾನ್   ಮತ್ತು  ಪವಿತ್ರ ಕೃತಿ.೧೮ ಅಧ್ಯಾಯ ಉಳ್ಳ ಈ ಕೃತಿಯನ್ನು ಓದಲು ಇಂದಿನ ಯುವಕರಿಗೆ ಸಮಯ ಮತ್ತು ಶ್ರದ್ದೆ ಕಡಿಮೆ. ಭಗವದ್ಗೀತೆಯ ಸಾರಾಂಶವನ್ನು  ಇಂದಿನ ಯುವಕರಿಗೆ ತಿಳಿಸಲು ಒಂದು ಸಣ್ಣ ಪ್ರಯತ್ನವೆಂಬಂತೆ, ಪ್ರತಿ ಅಧ್ಯಾಯದ ಶ್ಲೋಕಗಳ ಸಾರಾಂಶವನ್ನು ಕೇವಲ್ ೫ ಪದ್ಯಗಳಲ್ಲಿ   ತಿಳಿಸುವ ಪ್ರಯತ್ನ ಮಾಡಿದ್ದೇನೆ. ಇದು ಭಗವದ್ಗೀತೆಯ ಮಹತ್ವವನ್ನು ಇಂದಿನ ಯುವಕರಿಗೆ ತಿಳಿಸುವಲ್ಲಿ ಯಶಸ್ವಿಯಾದರೆ ಅದು ನನ್ನ ಪ್ರಯತ್ನಕ್ಕೆ ದೊರೆತ ಯಶಸ್ಸು ಎಂದು ತಿಳಿಯುತ್ತೇನೆ. ಈ ಪ್ರಯತ್ನ ಭಗವತ್ ಪ್ರೇರಣ ಮತ್ತು ಅವನಿಗೆ ಸಮರ್ಪಿತ.ಈಗಾಗಲೇ ಎರಡು ಅಧ್ಯಾಯಗಳನು ಪ್ರಕಟಿಸಿದ್ದೇನೆ. ಮುಂದಿನ ೧೬ ಅಧ್ಯಾಯಗಳನು ದಿನಕ್ಕೆರಡು ಅಧ್ಯಾಯದಂತೆ ಪ್ರಕಟಿಸುವೆ. ಕೃಷ್ನಾರ್ಪನಮಸ್ತು.
ಶ್ರೀ ಕ್ರಷ್ಣ ಸಂದೇಶ-ಅಧ್ಯಾಯ ೩-ಕರ್ಮಯೋಗ
ಕರ್ಮ ಅನಿವಾರ್ಯ, ಬೇಡ ಮೋಹವದರಲಿ
ಮಾಡು ಕರ್ಮ, ಬಯಸದೆ ಫಲ ಅದರಿಂದ
ಭಗವಂತನ ತ್ರಿಪ್ತಿಯೇ ಕರ್ಮದ ಗುರಿಯಿರಲಿ
ದೊರೆವುದಾಗ ಮುಕ್ತಿ ಕರ್ಮಾಚರಣೆಯಿಂದ

ಕರ್ಮದಲಿ ಯಗ್ನಕರ್ಮ ಅವಶ್ಯ, ತದರಿಂದ
ಬರುವುದು ಪರ್ಜನ್ಯ ಬದುಕಿಗದು ಅವಶ್ಯ
ಕಾಲ ಕಾಲಕೆ ಮಳೆ ಬೆಳೆಯ ಮೂಲ, ಬೆಳೆಯೇ 
ಬೇಕು, ಉಸಿರಿಗದು ಆಧಾರ, ಇಲ್ಲದೆ ಜೀವವಿಲ್ಲ

ಕರ್ಮ ಧರ್ಮಾನುಸಾರವಿರಬೇಕು, ರಾಗ ದ್ವೇಷ
ವ್ವರ್ಜಿತವಿರಬೇಕು ದೇವನಿಗೆ ಅರ್ಪಿಸಬೇಕು
ತನ್ನ ಧರ್ಮದಲ್ಲಿಯೇ ಇರಬೇಕು, ಫಲದಾಸೆಗೆ
ಪರಧರ್ಮ ಪಡೆಯಬಾರದು, ಭಯಂಕರವದು

ಕರ್ಮಕೆ ಕಡು ವೈರಿ  ಕಾಮ ಕ್ರೋಧ ಅಹಂಕಾರ
ಪಡೆವುವು ನೆಲೆ ಬುದ್ದಿ, ಮನಸ್ಸು, ಇಂದ್ರಿಯದಲಿ 
ಪಾರ್ಥ ನಿಗ್ರಹಿಸು ಇಂದ್ರಿಯ ಮನಸ್ಸು ಬುದ್ದಿಯನು
ನಿರತನಾಗು ಕರ್ಮದಲಿ ನಿಸ್ವಾರ್ಥದಲಿ ಅರ್ಪಿಸುತ

ಸಮರವಾಗಬೇಕು ಅಂತರಂಗದಲಿ ಎದುರಾಗುವ
ಬಾಳ ಶತ್ರುಗಳಾದ ಕಾಮ, ಕ್ರೋಧ, ಅಹಂಕಾರಗಳಿಗಾಗಿ
ಅರಿವಾಗುವುದು ಆತ್ಮದ ಸಾಕ್ಷಾತ್ಕಾರವಾಗ
ಆತ್ಮದ ಅರಿವು ಆಗುವುದು ಬಾಳ ದೀವಟಿಗೆ


ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ: ೯೮೪೪೨ ೭೬೨೧೬
E-Mail:sreenivasaprasad.kv@gmail.com
 


 

Friday, April 1, 2011

ಕೃಷ್ಣ ಸಂದೇಶ- ಅಧ್ಯಾಯ ೨-ಗೀತಾ ಸಾರ
 
ಕೃಷ್ಣ ನುಡಿದ ಆತ್ಮ ಅವಿನಾಶಿ ,ದೇಹ ಅಮರ
ದೇಹ ಪಡೆವುದು ಜನ್ಮ, ಯೌವನ, ಮುಪ್ಪು ,ಮರಣ
ಆತ್ಮಕಿಲ್ಲ ಸಾವು, ಸಾಗುವುದದು ದೇಹದಿಂದ ದೇಹಕೆ
ಪಾರ್ಥ ಮಾಡು ಯುದ್ಧ ವೀರನಂತೆ, ದೇಹಕಾಗಿ ತಪಿಸದೆ

ಆತ್ಮ ಅಮರ, ಅದು ಪಡೆವುದು ಹೊಸ ದೇಹವನು
ಹೇಗೆ ಹಳೆಯ ಉಡುಪನು ಬದಲಿಸಿ, ಹೊಸ
ಉಡುಪು ತೊಡುವಂತೆ, ಬೇಡ ವ್ಯಸನ ತನುಗಾಗಿ
ಮಾಡು ಕರ್ಮವ ವೀರನಂತೆ, ಫಲದಾಸೆಯಿಲ್ಲದೆ

ಜನಿಸಿದವ ಅಳಿಯಲೇಬೇಕು, ಮತ್ತೆ ಜನ್ಮ ಪಡೆಯೇ
ಧರ್ಮ ತ್ಯಾಗ ಬೇಡ ,ಕರ್ಮವನ್ನಷ್ಟೇ ಮಾಡು
ನಿರಪೇಕ್ಷ ಕರ್ಮ ಮಾಡುವುದು ಪಾಪಮುಕ್ತ
ಅರ್ಪಿಸೆನಗೆ, ಎಂದ ಕೃಷ್ಣ, ಪಾಪ ಪುಣ್ಯ, ಕರ್ಮ ಬಿಡದೆ

ಆಸೆ ದುಃಖಕೆ  ಮೂಲ, ಕಳಚು ಎಲ್ಲ ಆಸೆಗಳ
ರಾಗ, ಭಯ, ಕ್ರೋಧ ವರ್ಜಿತನು ಮುನಿಯಾಗುವನು
ಮುನಿಗಿರಬೇಕು ಮನೋ ನಿಗ್ರಹ, ಲಭಿಸುವುದಾಗ
ಚಿರಂತನ ಶಾಂತಿ, ಅಲೌಕಿಕ ಆನಂದ, ನಿರಂತರ ಮುಕ್ತಿ

ಬೇಡ ನಾನು ನನ್ನದೆಂದು, ಜಗತ್ತು ಈಶ್ವರನದು
ಇರುವುವೆವು ಆತನ ಆಶ್ರಯದಲಿ, ಪಡೆ ತೃಪ್ತಿ
ಭಗವಂತ ನೀಡಿದುದರಲಿ, ಪರ ಮೋಹ ಬೇಡ
ದೊರೆವುದಾಗ ಚಿರಂತನ ಶಾಂತಿ, ಆನಂದ ,ಮುಕ್ತಿ

ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ: ೯೮೪೪೨೭೬೨೧೬
E-Mail:sreenivasaprasad.kv@gmail.com





 

Thursday, March 31, 2011

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧

ಅರ್ಜುನನಾಶಯದಂತೆ ಸ್ಥಾಪಿಸಿದ
ಕೃಷ್ಣ ರಥವನ್ನು ರಣರಂಗದಮಧ್ಯೆ
ಕಂಗಾಲಾದ ಪಾರ್ಥ ಬಂಧು ಸ್ನೇಹಿತರನು ಕಂಡು
ಸಮರವೇತಕೆ   ಕೃಷ್ಣ ಸಾಧಿಸಲು ಏನನೆಂದ

ಪಿತಾಮಹ ಭೀಷ್ಮ ಗುರು ದ್ರೋಣ ಅನುಜರು
ಕೌರವರು ಒಂದೆಡೆಯಾದರೆ   ಅಗ್ರಜ ಧರ್ಮರಾಯ
ಅನುಜರು ವ್ರಿಕೋದರ ನಕುಲ  ಸಹದೇವರು
ಸಮರದಲಿ ಯಾರಗಲಿದರು   ಸಂತಸವು ಎಲ್ಲಿಂದ

ಬೇಡ ಸಮರ ಬಂಧು ಬಾಂಧವರಿಲ್ಲದ ಧನ
ರಾಜ್ಯ ಸಂಪತ್ತು ಏತಕ್ಕೆಂದು ವಿಷಾದಿಸಿದ
ವೀರ ಪಾರ್ಥ ಸಮರ ರಂಗದ ಮಧ್ಯದಲಿ
ಪಾರ್ಥಸಾರಥಿಯಲಿ ಅಳುವನು ತೋಡುತ

ನಡುಗಿದವು ತೋಲ್ಗಳು ಕಂಪಿಸಿದವು ಕಾಲ್ಗಳು
ಜಾರಿತು ಗಾಂಡೀವ ಪಾರ್ಥನ ಕೈಗಳಿಂದ           
ಕುಸಿದನು ಗಾಂಡೀವಿ ರಥದ ಮಧ್ಯದಲಿ
ಬೇಡ ಸಮರ, ರಾಜ್ಯ, ಸಂಪತ್ತು, ವಿಜಯ

ಆದಿದೇವ ವಾಸುದೇವ ವಿಸ್ಮಯಗೊಂಡ
ಎಲ್ಲಡಿಗಿತು ಪಾರ್ಥನ ಶೌರ್ಯ, ವೀರ್ಯ ಪರಾಕ್ರಮ
ಮಡದಿ ದ್ರೌಪದಿಯ ಸೀರೆಯೆಳೆದಾಗ ಮಾಡಿದ ಪಣ
ಮುರಿದ ಶಾಂತಿ ಸಂಧಾನ ತನಗಾದ ಅಪಮಾನ

-ರಚನೆ: ಕೆ ವಿ ಶ್ರೀನಿವಾಸ ಪ್ರಸಾದ್
ಮೊಬ; ೯೮೪೪೨೭೬೨೧೬
e-Mail: sreenivasaprasad.kv@gmail.com 

   


 

Friday, March 25, 2011

ಮೇಲುಕೋಟೆ ವೈರಮುಡಿ Melukote Vairamudi

ನರಸಿಂಹ ಕಾಪಾಡು ಎನ್ನ ಅನವರತ

ಮಗನೆಂದು ಕುಲದ ಕುಡಿಯೆಮ್ಬುದನ್ನು
ಲೆಕ್ಕಿಸದೆ ಆದೇಶಿಸಲು ಕುಡಿಸೆ ಕಾರ್ಕೊತವನು
ಪರಿತಪಿಸಲು ಮಾತೆ ಕಯಾದು  ಮಮತೆಯಲಿ
ನರಸಿಂಹ ರಕ್ಷಿಸಿದೆ ಪ್ರಹ್ಲಾದನನು ವಿಷದಿಂದ

ಹರಿಯನಾಮವ ನುಡಿದನೆಂದು  ಆಗ್ರಹದಲಿ
ಎಸೆಯಲು ಗಿರಿಶಿಖರದಿಂದ  ಅನುಚರರು
ಹಿಡಿದೇ ಪ್ರಹ್ಲಾದನನು ತೋಳತೆಕ್ಕೆಯಲಿ
ನರಸಿಂಹ ರಕ್ಷಿಸುತ ಭಕ್ತನ ಆಶ್ಚರ್ಯದಲಿ

ವೈರಸಾದಿಸುತ ಸಹೋದರ ಹಿರನ್ಯಾಕ್ಷಣ
ಸಂಹರಿಸಿದ ವರಾಹರೂಪಿ ಹರಿಯನರಿಯದೆ
ಗಜಸಮೂಹದಿಂದ ತುಳಿಸಲು ಭಕ್ತ ಪ್ರಹ್ಲಾದನ
ಕಾಪಾಡಿದೆ ಗಜೇಂದ್ರಮೋಕ್ಷ ನೀಡಿದ ವಿಷ್ನುವಂತೆ

ಆರ್ಭಟಿಸಲು ಹರಿಯೆಲ್ಲಿ  ರುಂಡ ಚೆನ್ದಾಡುವೆನೆಂದು
ಕಂಭ ಕಂಭಗಳ ಕೆಡವುತ ಪ್ರಹ್ಲಾದನ ಕಾಡುತಲಿ
ಜಿಗಿದೆ ಕಂಭದಿಂದ ನರನಲ್ಲದ ಮ್ರಿಗವಲ್ಲದ
ನರಸಿಂಹರೂಪದಲಿ ಇರುಳುಹಗಲಲ್ಲದ ಸಂಜೆಯಲಿ

ಸಂಹರಿಸಿದೆ ದಾನವ ಹಿರನ್ಯಕಶಿಪುವನು
ಒಳಗಲ್ಲದೆ ಹೊರಗಲ್ಲದೆ ಅರಮನೆಯ ದ್ವಾರದಲಿ
ನರಸಿಂಹರೂಪದಲಿ ಪಾಲಿಸುತ ಭಕ್ತಪ್ರಹ್ಲಾದನ
ವಂದಿಪೆನು ನರಸಿಂಹ ಕಾಪಾಡು ಎನ್ನ ಅನವರತ

ರಚನೆ:ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:9844276216

Monday, March 14, 2011

ಮಗಳೇ- ಮದುವೆಯ ಪ್ರಥಮ ವರ್ಷದ ಶುಭಾಶಯ

ಮದುವೆಯ ಪ್ರಥಮ ವರ್ಷದ ಶುಭಾಶಯ

ಶುಭಾಶಯ  ನಲ್ಮೆಯ ಮಗಳಿಗೂ
ಕೈಹಿಡಿದ ನೆಚ್ಚಿನ  ಅಳಿಯರಿಗೂ
ಮದುವೆಯ ಮೊದಲ  ವರ್ಷ ಉತ್ಸವದಲಿ
ಮನಮಿಡಿದ ಎದೆತುಂಬಿದ ಶುಭಾಶಯ

ನಡೆದಿಹಿರಿ ಜೊತೆಯಲಿ ವರ್ಷ ಒಂದನು
ಮಿಲನದಲಿ ಮಿಡಿಯುತ ಮನದಾಳದಲಿ
ಜೀವನದ ಕಹಿಸಿಹಿಯನು ಸವಿಸುತ ಸ್ನೇಹದಲಿ
ನಿಮಗಿದೋ ಮನಮಿಡಿದ ಎದೆತುಂಬಿದ ಶುಭಾಶಯ

ಕಳೆದಿಹಿರಿ ಜೊತೆಯಲಿ ಕಡಲಾಚೆಯ ದ್ವೀಪದಲಿ
ಜನರಹಿತ ವನ್ಯಜೀವಿಗಳ ನಡುವಿನಲಿ ಕಾಡಿನಲಿ
ಸವಿಯುತ ಅರಿಯುತ ಸುಸ್ನೇಹದ ಪರಿಮಳವ
ನಿಮಗಿದೋ ಮನಮಿಡಿದ ಎದೆಯಾಳದ ಅಭಿನಂದನೆ

ಮಗಳೇ ಗಳಿಸಿರುವೆ ಅತ್ತೆಮಾವಂದಿರ ಪ್ರೀತಿ
ಬಂಧು ಬಾಂಧವ ಸ್ನೇಹಿತರ ಮೆಚ್ಚುಗೆ
ತಂದಿರುವೆ ಸತ್ಕೀರ್ತಿ ತಂದೆ ತಾಯಂದರಿಗೆ
ನಿನ್ನ ಸದ್ಗುನದಿ ನಿನಗಿದೋ ಅಭಿನಂದನೆ

ನೂರ್ಕಾಲ ಇರಲಿ ನಿಮ್ಮ ದಾಂಪತ್ಯ ಜೊತೆಯಲಿ
ಅರಳಲಿ ನಗೆ ಚೆಲ್ಲುವ ಮನೆತುಂಬುವ ಕುಡಿಗಳು ಎರಡು
ಹರಸಲಿ ಶ್ರೀನಿವಾಸನು ಜೀವನದಿ ಸುಖಸಂಪತ್ತನು
ಕಾಣುವಿರಿ ಸಹಸ್ರಚಂದ್ರನನು ಇದೋ ನನ್ನ ಶುಭಾಶಯ


-ಶ್ರೀನಿವಾಸ ಪ್ರಸಾದ್.ಕೆ.ವಿ
ಮಾರುತಿನಗರ, ಬೆಂಗಳೂರು-92
 

Wednesday, March 9, 2011

ಕೃಷ್ಣನಿಗೆ ನಮನಗಳು

ಕೃಷ್ಣ ನಮನ

ವಸುದೇವ ಸುತ ದೇವಕಿತನಯ
ರೋಹಿಣಿಪಾಲಿತ ರುಕ್ಮಿನಿವಲ್ಲಭ
ಗೋಪಿಲೋಲ ಬ್ರಿಂದಾವನನಿಲಯ
ಜಗದ್ವಂದ್ಯ ಕೃಷ್ಣನಿಗೆ ನಮನಗಳು

ಪೂತನಿ ಸಂಹಾರಕ ಚಾನೂರಮರ್ಧನ
ಕಾಳಿಂಗಸರ್ಪವ ತುಳಿದು ಗೋವರ್ಧನ
ಪರ್ವತವ ಎತ್ತಿದ ಗೋಸಂರಕ್ಷಕ
ಜಗದ್ವಂದ್ಯ ಕೃಷ್ಣನಿಗೆ ನಮನಗಳು

ತಂದೆತಾಯಿಯರ ಬಂಧಿಸಿ ಅನುಜೆ
ದೇವಕಿಯ ಸೆರೆಯಲಿರಿಸಿ ಜನಿಸಿದ
ಆರುಮಕ್ಕಳನು ಕೊಲಿಸಿದ ಮಾವ
ಕಂಸನ ಮರ್ಧಿಸಿದ ಕೃಷ್ಣನಿಗೆ ನಮನ

ಜಾಮ್ಭವತಿ ಸತ್ಯಭಾಮೆಯರ ವರಿಸಿ ತಂಗಿ
ದ್ರೌಪದಿಗೆ ವಸ್ತ್ರ ನೀಡಿದ ಮಾನ ರಕ್ಷಕ
ದ್ಯೂತದಲಿ ಸೋತು ರಾಜ್ಯಗಳನು ಕಳೆದ
ಅತ್ತೆಕುಂತಿಪುತ್ರರ ಮಿತ್ರ ಕೃಷ್ಣನಿಗೆ ನಮನ

ಕುರುರಂಗದಲಿ ಗೀತೆ ಬೋಧಿಸಿ ಕದನದಲಿ
ಪಾನ್ದುಸುತರಿಗೆ ಜಯವ ತಂದಿತ್ತು
ಧರ್ಮಪಾಲಕನಾಗಿ ಅಧರ್ಮವ ದಹಿಸುತ
ಜಗವ ಕಾಯುವ ತಂದೆ ಕೃಷ್ಣನಿಗೆ ನಮನ


ರಚನೆ; ಕೆ ವಿ ಶ್ರೀನಿವಾಸ ಪ್ರಸಾದ್
೧ಎ  , ಡೀ ಎನ್ಕ್ಲೇವ್    ,ಮಾರುತಿನಗರ
ಕೊಡಿಗೆಹಳ್ಳಿ, ಬೆಂಗಳೂರು-೯೨
 
 

ಮಗಳ ಮದುವೆ

ಈ ಪದ್ಯವನ್ನು ಮಗಳ ಮದುವೆಯಲ್ಲಿ ಬರೆದಿದ್ದೆನು. ಹಾಡಿದರು ನನ್ನ ನೆಂಟರು ಗ್ರಿಹಪ್ರವೇಶದಲಿಮಂಗಳವು ಈ ದಿನವು
ಮಗಳೇ ಜೀವನದ ಸುದಿನವು
ತರಲಿ ಹರುಷ ಅನುದಿನವು
ವೈಭವದ ಮದುವೆಯ ಈ ದಿನವು

ಅರಳಲಿ ಸಂತಸವು ಅನುಕಾಲ
ನೀನಾಗು ಪತಿಗೆ ಸರಿಸತಿಯು
ಸಾಗು ನೀ ಜೊತೆಯಲಿ ನೂರ್ಕಾಲ
ಮಡದಿಯಾಗಿ ಪ್ರತಿದಿನವೂ

ಅರಸಿ ಬಂದಿಹನು ಗೀತಾಸುತನು
ಒಲವಿನಾಸರೆಯ ಸೆಲೆಯಾಗಿ
 ನೀಡೆಂದು ಮುದವ ಕಲಾಸುತೆ
ಮಧುವಾಗಿ ಪರಿಮಳದ ಹೂವಾಗಿ

ನೀನಾಗು ಪತಿಮನೆಗೆ  ಮಗಳು
ಎಲ್ಲರಲಿ ಪ್ರೀತಿಯನು ಪಸರಿಸುತ
ಮರೆಯದಿರು ತಂದೆಯ ಮನೆಯ
ತರುತ ತಾಯ್ಮನೆಗೆ ಸುಕೀರ್ತಿಯ

ನಡೆಯು ಚೆನ್ನಿರಲಿ ಮೂಡಲಿ
ನುಡಿಯು ಮಧುರ ಹಾಡಾಗಿ
ಮಗಳೇ ಮರೆಯದಿರು ಹಿತನುಡಿ
ಆಗುವೆ ನೀ ಆದರ್ಶಸೊಸೆಯಾಗಿ

ನೋವು ನಲಿವುಗಳು ಸಹಜವು
ಜೀವನದ ದೂರ ಪಯಣದಲಿ
ಧ್ರಿತಿಯು ಜಾರದಿರಲಿ ಮರೆಯದೆಲೆ
ನಾವಿಕನು ಶ್ರೀಪತಿಯು  ಬಾಳದಾಳದಲಿ

ರಚನೆ :ಕೆ ವಿ ಶ್ರೀನಿವಾಸ ಪ್ರಸಾದ್
Mob:9844276216

E-Mail:sreenivasaprasad.kv@gmail.com

 

Sunday, March 6, 2011

ನ್ಯಾಸ ಅಷ್ಟಕ

ನ್ಯಾಸ ಅಷ್ಟಕ 




ಕಾಪಾಡು ದೇವದೇವೇಶ
ನನ್ನರಕ್ಷನೆಯು  ನಿನ್ನದೇ
ನನ್ನದೆಂಬುದು ಏನಿಲ್ಲವು
ಅರ್ಪಿಸುವೇ ನಿನಗೆ ಎಲ್ಲವನು


ವರದರಾಜನೆ ಅಭಯಪ್ರದನೆ
ಶರಣಾಗಿರುವೆನು ನಿನ್ನಲಿ
ಈ  ನನ್ನ ದೇಹದ ಅಂತ್ಯದಲಿ
ಕರುನಿಸೆನಗೆ ನಿನ್ನ ಚರಣಪದ್ಮವ


ನನ್ನ ಮನಸ್ಸೆಂದು ಸ್ಥಿರವಾಗಿರಲಿ
ನಿನ್ನ ಪಡೆಯುವ ಏಕೈಕ ಗುರಿಯಲಿ
ಆಸೆ ಆಮಿಷಗಳಿಂದ ಸರಿದಿರಲಿ
ಸ್ವೀಕರಿಸು ಎನ್ನ ನಿತ್ಯ ಕಿಂಕರನೆಂದು


ಮಾಡಿರುವೆ ಎಲ್ಲ ಕರ್ಮವ
ನಿಸ್ಸಂಗದಿ ನಿರ್ಮೋಹಡಿ
ನಿರ್ಮಲಚಿತ್ತದಿ   ನಿನ್ನದೆಂದು
ನೀಡು ವಿಮೋಚನೆಯ ಸರ್ವ ಪಾಪದಿ


ಗಳಿಸಿರುವುದೆಲ್ಲವು ನಿನ್ನ ಅನುಗ್ರಹದಿ
ನಿನ್ನ ಆಜ್ಞೆಯಂತೆ ನಿನ್ನ ಪ್ರೀತಿಗಾಗಿ
ಸ್ವೀಕರಿಸು ಚರಾಚರೆಗಳೆಲ್ಲವ
ನಿನ್ನ ಅನಂತ ಸೇವೆಯಲಿ ತೊಡಗಿಸೆನ್ನ


ಪಾಪಕೃತ್ಯಗಳು ನಡೆಯದಿರಲಿ ಎನ್ನಿಂದ
ರಕ್ಷಿಸು ಸದಾ ಕಣ್ಣ ರೆಪ್ಪೆಯಂತೆ
ನಿನ್ನ ಚರಣಸೇವೆಯೇ ಗುರಿಯಾಗಿರಲಿ
ನಡೆಸೆನ್ನ ಸರಿ ದಾರಿಯಲಿ ಗುರುವಂತೆ


ನೀನೆ ಅಂಬಿಗನು ನಿರ್ದೇಶಕನು
ಬರಿಯ ಪಾತ್ರದಾರನು ನಾನು
ನಿನ್ನ ಶಕ್ತಿಯಲಿ ತೇಜಸ್ಸಿನಲಿ
ನಡೆಯುತಿರುವೆನು ನಿರ್ಜೀವನಾಗಿ


ಬಾಳಗುರಿಯಾಗಿಸಿಹೆನು ನಿನ್ನ  ಹೊಂದಲು
ನಿರಪೇಕ್ಷಿತನಾಗಿ  ನಿನ್ನಾದೇಶದಂತೆ
ಕರುನಿಸೆನಗೆ ನಿನ್ನ ಪಾದಸೇವೆಯ 
ಸಾಕೆನಗೆ ಶ್ರೀಪತಿಯು ನೀನು ಬಳಿಯಿರಲು




-ಶ್ರೀನಿವಾಸ ಪ್ರಸಾದ್.ಕೆ.ವಿ.
ಡೀ ಎನ್ಕ್ಲೇವ್ ,ಮಾರುತಿನಗರ,
ಸಹಕಾರನಗರ ಅಂಚೆ, ಬೆಂಗಳೂರು-೯೨
ಫೋ: ೯೮೪೪೨ ೭೬೪೧೬
 

Friday, March 4, 2011

ಮನಮಿಡಿದ ಅಭಿನಂದನೆ

ಮನಮಿಡಿದ ಅಭಿನಂದನೆ

ನಿಮಗಿದೋ ಮನಮಿಡಿದ ಅಭಿನಂದನೆ
ತುಂಬಿಹಿದು ಆರುದಶಕ ಪರಿಪೂರ್ಣ
ಸಾರ್ಥ ಜೀವನದ ದಾರಿಯಲಿ ಹರುಷದಿ
ನಿಮಗಿದೋ ಶ್ರೀನಿವಾಸನ ಅಭಿನಂದನೆ

ಜನಿಸಿದಿರಿ ಸಂಪತ್ಕುಮಾರಸುತರಾಗಿ
ಅನುಜ ಸುಂದರ ಅಗ್ರಜ ಕೃಷ್ಣರೊಡನೆ
ಪ್ರೀತಿಯ ಐದು ಸಹೋದರಿಯರೊದಗೂಡಿ
ಚುಂಚ ಚುಂಚಿಯರ ರಾಮನನುಗ್ರಹದಲಿ

ದಶಕ ಮೂರರಪೂರ್ವ ಸಪ್ತಪದಿಯ ತುಳಿದಿರಿ
ಪ್ರಣಯ ಹಸ್ತವ ಹಿಡಿದು ಗೀತರೊಂದಿಗೆ
ಪಡೆದಿರಿ ಸಡ್ಗುನಸಂಪನ್ನ ಮೇಧಾವಿ ರಾಘವನ
ನಿಮಗಿದೋ ಮನಮಿಡಿದ ಅಭಿನಂದನೆ

ತಂದಿರಿ   ನಿಮ್ಮ ಶಷ್ಟ್ಯಬ್ಧಿ ಪೂರ್ವದಲಿ
ಸಂತಸದ ಮನೆಗೆ ಕಲಾಸುತೆಹೇಮಳನು
ಸೊಸೆಯಾಗಿ ಸುತನಿಗೆ ಪ್ರಣಯಿಯಾಗಿ
ನಿಮಗಿದೋ ಮನಮಿಡಿದ ಅಭಿನಂದನೆ

ಶತಶತಮಾನ ಬಾಳಿ ಸತಿಪಾಣಿಹಿಡಿದು
ಸುತಸೊಸೆಯರ ಒಡಗೂಡಿ ಸಂಭ್ರಮದಿ
ಅರಳಲಿ ಪೌತ್ರರು ವಾಲ್ಮೀಕಿಸಂತತಿಯಲಿ
ನಿಮಗಿದೋ  ಮನಮಿಡಿದ ಅಭಿನಂದನೆ


ರಚನೆ:  ಕೆ ವಿ ಶ್ರೀನಿವಾಸ ಪ್ರಸಾದ್
ನಂ ೧, ಡೀ ಎನ್ಕ್ಲೇವ್ ಮಾರುತಿನಗರ
ಸಹಕಾರ ನಗರ ಅಂಚೆ
ಬೆಂಗಳೂರು-೫೬೦೦೯೨
ಫೋನ್;೯೮೪೪೨ ೭೬೪೧೬   
  

Tuesday, March 1, 2011

ರಾಘವ ರ (ಅಳಿಯಂದಿರ) ಜನ್ಮದಿನದ ಶುಭ ಅವಸರದಲಿ

ರಾಘವ ರ (ಅಳಿಯಂದಿರ) ಜನ್ಮದಿನದ ಶುಭ ಅವಸರದಲಿ
ಶತಮಾನಂ ಭವತಿ ಶತಾಯುಹ್
ಜನ್ಮದಿನದ ಶುಭ ಹಾರೈಕೆಗಳು
ಕಳೆದಿಹುದು ಮೂರು ದಶಕಗಳು
ಆದರೂ ಹೊಸದಿಂದಿನ ಜನ್ಮದಿನವು

ವಿವಾಹನಂತರದ ಪ್ರಥಮ ಜನ್ಮದಿನವು
ವಿಷೆಶವಿಂದಿನ  ಹುಟ್ಟುಹಬ್ಬವೂ 
ಇರುವಳು ಆಚರಿಸಲು ಸತಿಬಳಿಯು
ಸಿಹಿಯೂಟವನು ಹಂಚಿ ಅನುಭವಿಸಲು

ನೂರ್ಕಾಲ ನೀಡಲು ಸಂತಸವ ರಾಘವಸತಿಯು
ಬಾಳು ಹಸಿರಾಗಲಿ ಅನುಕಾಲ ಹರುಷದಲಿ
ವಸಂತಗಳರಲಿ  ಶತಕಾಲ ವಸಂತಸುತೆಯ
ಸಂಗದಂಗಳದಲಿ ಬದುಕು ಹಸನಾಗಲಿ

ಹರಸುತಿಹನು ವರದಸುತನು ಸತಿಒದಗೂಡಿ     
ಬರಲಿ ಏಳಿಗೆಯೂ   ನಿಮ್ಮ ಕಾಯಕಲ್ಪದಲಿ
ಅರಳಲಿ ನಿಮ್ಮ ಒಲುಮೆಯ ಮಡಿಲಲಿ ಹೂವೊಂದು
ತರಲಿ ಸುಕೀರ್ತಿಯ ವಾಲ್ಮೀಕಿ ಪ್ರಸಾದರಲಿ


-ರಚನೆ:ಶ್ರೀನಿವಾಸ ಪ್ರಸಾದ .ಕೆ.ವಿ  
E-Mail: sreenivasaprasad.kv@gmail.com  

Tuesday, February 22, 2011

ಕರಮುಗಿವೆ ಕರವೀರಪುರವಾಸಿ ಲಕ್ಷ್ಮಿಕಾಂತನೆ

ವ್ಯಾಸ ಭಾರತದ ಜನಮೇಜಯನು ಅಡವಿಯಲಿ
ಸಂಚರಿಸುತಿರಲು ಕಂಡೆ ನೀನು ಬಿದಿರಿನ ಮೇಳೆಯಲಿ
ಮೆಚ್ಚಿ   ನಿನ್ನ ಸೊಬಗನು ಕಟ್ಟಿದನು ಆಲಯವನಂದು
ಕರಮುಗಿವೆ ಕರವೀರಪುರವಾಸಿ ಲಕ್ಷ್ಮಿಕಾಂತನೆ
 
ಕಾಲಕ್ರಮದಲಿ  ವಿಸ್ತರಿಸಿದರು ಆಲಯವ ಒಂದಾಗಿ
ಬ್ರಿಹದಾಕಾರದಲಿ ಆವರಣದಲಿ ಅರವಿಂದನಾಯಕಿ
ದ್ವಾದಶ   ಆಳ್ವಾರರ   ದೇಶಿಕ ಜೀಯರ್ ರರ   ಮೂರ್ತಿಇರಿಸಿ
ಕರಮುಗಿವೆ ಕರವೀರಪುರವಾಸಿ ಲಕ್ಷ್ಮಿಕಾಂತನೆ
ಕರೆದರು  ವೆಣುಪುರಿ ಕಳಲೆ ಕಪಿಲಾಶ್ರಮ ವೆಂದು
ಸಂದರ್ಶಿಸಿದರು ಮೈಸೂರಿನ ಯದುವಂಶದರಸರು
ಮೈಸೂರಿನಹುಲಿ ಟೀಪೂ ನೀಡಿದನು ಸ್ವರ್ಣಪಾತ್ರೆಗಳ
ಕರಮುಗಿವೆ ವೇಣು ಪುರಾಧೀಶ  ಲಕ್ಷ್ಮೀ ವಲ್ಲಭನೆ
ನಿನಗೆ ವರ್ಶೋತ್ಸವವು ಮೀನಮಾಸದಲಿ ಸೇರುವರು
ಜನಜಾತ್ರೆ ಹಳ್ಳಿ ಹಳ್ಳಿಗಳಿಂದ   ನಗರ ನಗರಗಳಿಂದ
ಉದಯದಲಿ ಏರುವೆ ತೇರು ಸಂಜೆ ಪುಷ್ಪ ವ್ಯಾಳಿಯಲಿ
ನಡೆವುದು ತೇರಡಿ ಉತ್ಸವ ರಾತ್ರಿಇಡೀ ನಾದ ತರಂಗದಿ
ತಂದೆ ನೀ ಕರುಣಿಸುತಿರುವೆ ಭಕ್ತಜನರ ಅಭೀಷ್ಟವ
ನಿವಾರಿಸುತ ಮಕ್ಕಳ ನೋವುರುಜಿನಗಳ ಅಭಯದಿ
ನೀಡುತ ಸಿರಿ ವ್ರಿಷ್ಟಿಯ ಮಾತೆ ಅರವಿಂದನಾಯಕಿಯಕೂಡಿ
ನಿನಗಿದೋ ಮನದಾಳದ ನಮನ ವೆಣುಪುರಿ ಲಕ್ಷ್ಮಿಕಾಂತ

ರಚನೆ: ಕೆ.ವಿ ಶ್ರೀನಿವಾಸ ಪ್ರಸಾದ
ಮೊಬ: ೯೮೪೪೨ ೭೬೨೧೬
ಇ -ಮೇಲ್:
sreenivasaprasad.kv@gmail.com

 

Wednesday, February 16, 2011

Mother is the first god ತಾಯಲ್ಲವೆ ಮೊದಲ ದೈವ ಬಾಳ ಪಯಣದಲಿ

goddess Aravindanayaki amma at Kalale
ಬೆಚ್ಚನೆ ಮಲಗಿದ್ದೆ ತಾಯಗರ್ಭದಲಿ ನವಮಾಸ
ಹೊರಬಂದೊಡನೆ ಚೀರಿದೆ ಅಮ್ಮಾ ಎಂದು
ಅರಿಯದೆ ಹಸಿವೆಂದು , ನೀಡಿದಳು ಹಾಲಜೇನು
ತಾಯಲ್ಲವೆ ಮೊದಲ ದೈವ ಬಾಳ ಪಯಣದಲಿ
 
ಅಡಿಯಿಡಲು ಮೊದಲ ಹೆಜ್ಜೆ, ನಡೆಸಿದಳು ಕೈ ಹಿಡಿದು
ಚೀರಿದಳು ನಾ ಜಾರಿ ಕೆಳಗುರುಳಿ ಘಾಸಿಯಾಗಳು
ಸಂತೈಸಿದಳು ಬಳಿಯಿದ್ದು , ಕಲಿಸಿದಳು ನಡೆವ ಹಾದಿಯನು
ತಾಯಲ್ಲವೆ ಮೊದಲ ದೈವ ಬಾಳ ಪಯಣದಲಿ
 
ಕಲಿಸಿದಳು ಅಕ್ಷರವ ಬೋಧಿಸುತ ಸತತ ಸನ್ನಡತೆಯ
ರೂಪಿಸಿದಳು ಜೀವನವ ಎದಿರಿಸುವ ಕಲೆಯಲ್ಲಿ
ಹಿಗ್ಗಿದಳು ನಾ ಪಡೆದ ಮೊದಲ ಪದವಿಯ ಸಂಭ್ರಮದಲಿ
ತಾಯಲ್ಲವೆ ಮೊದಲ ದೈವ ಬಾಳ ಪಯಣದಲಿ
 
ಅರಳಿದೆನು ಕಲಿತ ವಿದ್ಯೆಯ ಕಂಪನು ಪಸರಿಸುತ
ಗಳಿಸಿದೆನು ಸಂಪದವ ನೆನೆಯುತಾ ತಾಯ ಹಿತನುಡಿಯ
ಪಡೆದೆನು ಒಲವಿನ ಸತಿಯ ಮರೆಯದಲೆ  ತಾಯ ಸಿಹಿಮುತ್ತ
ತಾಯಲ್ಲವೆ ಮೊದಲ ದೈವ ಬಾಳ ಪಯಣದಲಿ
 
ಅರಳಿಹವು ಹೂವೆರಡು ಹೇಮದೀಪಗಲೆಂದು   
ನುಡಿಯುತಿರುವೆ ಹಿತನುಡಿಯ ಮರೆಯದಿರಿ ತಾಯಿಯ
ಕೊನೆತನಕ ನಿಮ್ಮೊಲುಮೆಯ ಜೇನಹಾಲನುನಿಸುತ 
ತಾಯಲ್ಲವೆ ಮೊದಲ ದೈವ ಬಾಳ ಪಯಣದಲಿ
 

ರಚನೆ: ಕೆ.ವಿ ಶ್ರೀನಿವಾಸ ಪ್ರಸಾದ್  
Mob:9844276216
Please send your comments to:
E-Mail;sreenivasaprasad.kv@gmail.com
 

Monday, February 14, 2011

ಶುಭಾಶಯ ಪ್ರೀತಿಯ ಕುಮಾರನಿಗೆ


with my loved son in flight to singapore

ಶುಭಾಶಯ ಪ್ರೀತಿಯ ಕುಮಾರನಿಗೆ
ಇಪ್ಪತ್ತೈದು ತುಂಬಿರುವ ಶುಭ ದಿನದಲ್ಲಿ
ಬಾಳು ನೂರ್ಕಾಲ ಸಂತಸದಿ ಸುಖದಲಿ
ಹರಸುತಿಹೆನು ನಿನ್ನೊಲುಮೆಯ ತಂದೆ 


ಜೀವನವು ಒಂದು ದೀರ್ಘಪಯಣ
ಬರುವುದದರಲಿ ಹಲವಾರು ತೊಡರುಗಳು
ಎದುರಿಸು ಧೃತಿಗೆಡದೆ ನೆನೆಯುತ ದೇವರನು
ಹರಸುತಿಹೆನು ನಿನ್ನೊಲುಮೆಯ ತಂದೆ

 ಮರೆಯದಿರೆಂದೆಂದು ತಂದೆತಾಯಿಯರನು
ಪ್ರೀತಿಯೆರೆದ ಹಿರಿಯಕ್ಕ ಹೇಮಳನು
ಸನ್ನಡತೆಯ ಮೈಗೂಡಿಸಿ ಉಪಕರಿಸು ಆರ್ತರನು
ಹರಸುತಿಹೆನು ನಿನ್ನೊಲುಮೆಯ ತಂದೆ 


ಗಳಿಕೆಯನು ವಿನಿಯೋಗಿಸು ಸತ್ಕಾರ್ಯಕೆಬೇಡವದು ಎಂದೆಂದೂ ದುರ್ಮಾರ್ಗಕೆ
ಅನುಭವಿಸು ಅದನು ದೀನರಲಿ ಹಂಚುತಲಿ
ಹರಸುತಿಹೆನು ನಿನ್ನೊಲುಮೆಯ ತಂದೆ 


ಬರಲಿ ಮನವರಿತು ನಡೆಯುವ ಸರಿಸತಿಯು
ಕೀರ್ತಿಯನು ತರುವ ಸುತಸುತೆಯರೆರಡು
ಮೂಡಿರಲಿ ಹರುಷ ಬಾಳಿನುದ್ದಕು, ಮರೆಯದಿರು
ಜಗವು ದೇವನದು ಬರಿಯ  ಬಾಡಿಗೆಗಿರುವೆವು ನಾವು 


ನೀಡುವವನು ಅವನು ಸೇವಿಸು ಅವನದೆಂದು
ತ್ರಿಪ್ತಿಯಿರಲಿ ಗಳಿಕೆಯಲಿ, ಸಂತಸದಲಿ
ಬಯಸದಿರು ಪರರ ವಸ್ತುವನು, ಸಿರಿಯನು
ಹರಸುವೆನು ನೂರ್ಕಾಲ ಬಾಳು ಸಂತಸದೆಂದೆಂದು


ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್ 
Mob:9844276216
E-Mal:sreenivasaprasad.kv@gmal.com


 

Friday, February 11, 2011

ವರಮಹಾಲಕ್ಷ್ಮಿವ್ರತದ ನೆನಪಿಗಾಗಿ

ವರಮಹಾಲಕ್ಷ್ಮಿವ್ರತದ   ನೆನಪಿಗಾಗಿ  

ಜಗದೊಡೆಯ ಶ್ರೀನಿವಾಸನ ಪ್ರೇಯಸಿಯೇ
ಅವನ ವಕ್ಷಸ್ಥಳದಲಿ ನೆಲೆಸಿರುವ ಪದ್ಮಾವತಿಯೇ
ಕರಗಳಲಿ ಕಮಲವ ಹಿಡಿದ ಕಮಲಾಸನೆಯೇ
ಕಮಲೋದ್ಬ್ಹವೇ ಮಹಾಲಕ್ಷ್ಮಿಯೆ ನಿನಗೆ ನಮನ

ಹಾಲ್ಕಡಲ ಕಡೆಯುವಾಗ ಚಂದ್ರನೊಡನೆ ಜನಿಸಿ
ಚಂದ್ರ ಸಹೋದರಿಯೆನಿಸಿದ ಪದ್ಮನಾಭಪ್ರಿಯೇ
ಚಂದ್ರಮುಖಿ ಚತುರ್ಭುಜೆ ಇಂದುಶೀತಲೇ
ಕಮಲೋದ್ಬ್ಹವೇ ಮಹಾಲಕ್ಷ್ಮಿಯೆ ನಿನಗೆ ನಮನ

ಭೂಸಂಜಾತೆಯಾಗಿ ಜನಕಸುತೆಯೆನಿಸಿ
ವರಿಸಿ ದಶರಥತನಯನ ಸ್ವಯಮ್ವರದಿ 
ವನದಲಿ ಪತಿಯನನುಸರಿಸಿ ಪಯಣಿಸಿದ
ಸಾಗರತನಯೇ ಸೀತಾಲಕ್ಷ್ಮಿಯೇ ನಿನಗೆ ನಮನ

ಭಜಿಸೆ ಶ್ರದ್ದೆಯಲಿ ಕರುಣಿಸುವೆ ತಾಯೆ
ಸಕಲಸಂಪದವ ನೀಗಿಸಿ ಕಷ್ಟಗಳೆಲ್ಲವ
ಹರಸುವೆ ಸಂತಾನವ ಧನಧಾನ್ಯವ ಅನವರತ
ಸರಸಿಜೆ ವರಲಕ್ಷ್ಮಿಯೇ ನಿನಗೆ ನಮನ

ದಿವ್ಯನಾಮಸ್ಮರನೆಯಲಿ ನೀಗುವುದು ದರಿದ್ರ
ಆಗಮಿಸುವುದು ಅಖಂಧಸಂಪದವು
ಲಭಿಸುವುದು  ಸರಸಿಜಾಕ್ಷನ  ಕರುಣೆ
ತಾಯೆ ವಸುಪ್ರದೆ ವಾಸವಿಯೇ ನಿನಗೆ ನಮನ

ರಚನೆ   : ಕೆ.ವಿ. ಶ್ರೀನಿವಾಸ ಪ್ರಸಾ
ದ್
೧ಎ,ಡೀ ಎನ್ಕ್ಲೇವ್    ,  ಮಾರುತಿನಗರ,
ಸಹಕಾರನಗರ ಅಂಚೆ, ಬೆಂಗಳೂರು-೯೨
ಫೋ: 9844276216






Thursday, February 10, 2011

ಆಗುವನು ಉತ್ತಮ ಸ್ನೇಹಿತನು
ಸನ್ಮಾರ್ಗವ,ಸನ್ನಡತೆಯ ತಿಳಿಸುವವನು
ಬಯಸುವವನೆಂದಿಗು ಉನ್ನತಿಯ
ಹಂಚಿ ಹರಸುವನು ಸಿರಿ ವೇದನೆಯ

ಜಗತ್ತಿಗೆ ಬೆಳಕು ಆಮ್ಲವ ನೀಡಿ
ದಾಹವನು ಅಡಗಿಸಲು ನೀರ ನೀಡಿ
ಆರೋಗ್ಯ ತುಂಬಿಸಲು ಶಕ್ತಿ ಕಿರಣವ ನೀಡಿ
ಹರಸುವ ಆದಿತ್ಯನೇ ಆದಿಮಿತ್ರನು

ಬಾಲ್ಯದಲಿ ಹಾಲ ಕುಡಿಸಿ ಕಲಿಸಿ ಹೆಜ್ಜೆಯ
ತೋರುತಲಿ ಮಾರ್ಗವ, ಪೋಷಿಸಿ  ಉದರವ
ವೇದನೆಯಲಿ ಮರುಗಿ ಸಂತಸದಿ ನಲಿಯುವ
ತಾಯಿಯೇ ದಿನದಾದಿಯ ಮೊದಲ ಸ್ನೇಹಿತೆಯು

ಕಲಿಸಿ ಉತ್ತಮ ವಿದ್ಯೆಯ, ನೀಡಿ ಸುಜ್ಞಾನವ
ಬಾಳಿನ ಹಾದಿಯಲಿ ಜ್ಯೋತಿಯ ಬೆಳಗಿಸಿ
ನೋವುನಲಿವಿನಲಿ ತನ್ನದೆಲ್ಲವ ನೀಡಿ
ನಡೆಸುವ ತಂದೆಯೇ ಬಾಳಿನ ಸನ್ಮಿತ್ರನು

ಇಟ್ಟು ಸಪ್ತಪದಿಯ ಬಯಸಿ ಗೆಳೆತನವ
ಜೀವದಂತ್ಯದವರೆಗೂ ಒಂದಾಗಿ ಬಾಳುವ
ಸತಿಗೆ ಪತಿ ಗೆಳೆಯ ಪತಿಗೆ ಸತಿ ಸಖಿಯು
ಸ್ನೇಹವದು ಶಾಶ್ವತವು ಕಲೆತು ಬಾಳ್ವೆ ನಡೆಸೆ

ಮರೆಯದಿರಿ ಬಾಳಿನಲಿ ಸನ್ಮಿತ್ರ ಶ್ರೀಪತಿಯು
ಆಗುವನು ಬಾಳ ಬೆಳಕು ಭಜಿಸೆ ಮನದಾಳದಲಿ
ಕಳೆವನು ಕಷ್ಟಗಳೆಲ್ಲವನು ಅರಿತು ಆರಾಧಿಸಲು
ಬಲಿಗೋಡಿಬಂದು ತೊರೆದು ವೈಕುಂಟವನು 


ರಚನೆ: ಶ್ರೀನಿವಾಸ ಪ್ರಸಾದ್.ಕೆ.ವಿ
ನಂ  ೧ಎ : ಡೀ ಎನ್ಕ್ಲೇವ್ ,ಮಾರುತಿನಗರ,
ಸಹಕಾರನಗರ ಅಂಚೆ
ಬೆಂಗಳೂರು-೯೨
ಫೋನ್: 9844276216  
 

Wednesday, February 9, 2011

ಸುಧರ್ಮಾ ಹುಟ್ಟು ಹಬ್ಬಕ್ಕೆ ಶುಭಾಶಯಗಳು

ಸುಧರ್ಮಾ ಹುಟ್ಟು ಹಬ್ಬಕ್ಕೆ ಶುಭಾಶಯಗಳು    ಮೊಳಗಲಿ ಮೊಳಗಲಿ ಮೊಳಗಲಿ
ಸಂಸ್ಕೃತದ ಕಹಳೆಯು ಅನವರತ  ಮೊಳಗಲಿ

ಸಂಸ್ಕೃತವೇ ತಾಯ್ನುಡಿಯು ಭಾಷೆ ಎಲ್ಲರದು
ಮಗುವಿನ ಮೊದಲ ನುಡಿಯು ಮಾ ಎಂಬುದು
ಮರೆಯದಿರಿ ಸಂಸ್ಕೃತಿಯ ತಳಹದಿಯು ಸಂಸ್ಕೃತವು
ಉಳಿದರೆ ಅದು ಶಾಶ್ವತವು ಭವ್ಯ ಪರಂಪರೆಯು

ಮರೆತರು ಕೆಲವರು ಸಂಸ್ಕೃತವೇ ಜೀವನುಡಿಯೆಂದು
ಗುಡುಗಿದರದು ಮೃತ ಭಾಷೆಯೆಂದು ಅಜ್ಞಾನದಲಿ
ಮನನೊಂದರು ತಂದೆಯಂದು ಪಣತೊಟ್ಟರು
ಪಸರಿಸುವೆ ಸಂಸ್ಕೃತದ ಕಂಪನು ಜೀವನಾಡಿಯೆಂದು

ಮೂಡಿತ್ತಂದು ಭಾವನೆ ಸಂಸ್ಕೃತ ಕಟಿನವೆಂದು
ಪಂಡಿತರ ಭಾಷೆಯದು ಪಾಮರರಿಗಲ್ಲವೆಂದು
ವೇದ ಭಾಷೆ ದ್ವಿಜರ ಪಂಡಿತರ ಮಡಿಭಾಷೆಯೆಂದು
ಅಳಿಸಲಪನಂಬಿಕೆ ಮಾಧ್ಯಮ ಪತ್ರಿಕೆಯೆಂದರು

ತಂದೆತಂದರಾದಿಸಂಚಿಕೆ ಎಪ್ಪತ್ತರದಶಕದಲಿ
ತುಂಬಿಹುದು ನಲವತ್ತಿಂದು ಅನುಜನಂಕಿತದಲಿ
ಹರಸುವೆನು ಆನಂದದಿ ಚಿರಕಾಲ ಇರಲೆಂದು
ಪಸರಿಸುತಾ ಕಂಪನು ದೇಶವಿದೆಶಗಳಲಿ

ಬೇಕು ಸಹಕಾರ ಸರಕಾರ ಅಭಿಮಾನಿಗಳೆಲ್ಲರ
ಉಳಿಸಲು ಚಿರಕಾಲ ಸುಧರ್ಮಾ ಪತ್ರಿಕೆಯನು 
ಧನರೂಪ ಅನುರೂಪ ಲೇಖನರೂಪಗಳಲಿ
ಹರಸಿರಿ ಅನುಕಾಲ ಚಿರಕಾಲ ಜಗದಿ ಬೆಳಗಲೆಂದು


-ರಚನೆ:ಕೆ.ವಿ.ಶ್ರೀನಿವಾಸ ಪ್ರಸಾದ್
 



  



 

Monday, February 7, 2011

ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ನಾವಾಗಿದ್ದೆವು ದಾಸರು ಬ್ರಿಟೀಷರಿಗೆ
ದಶಕ ನಲವತ್ತರ ಪೂರ್ವದಲಿ
ಆಳಿದರು ಅನುಕಂಪವಿಲ್ಲದೆ ಮ್ರಿಗದಂತೆ
ಅಳಿಸಿದರು ಸಹಸ್ರರನು ತೋಪಿನಂಕುಶದೆ

ಪಣತೊಟ್ಟರು ಪೂರ್ವಜರು ಪಡೆವೆವೆಂದು
ವಿಮುಕ್ತಿಯ ದಾಸ್ಯದಿಂದ ಒಡ್ಡಿದರೆದೆಯಂದು
ಗುಂಡಿನಕಾಳಗಡಿ   ಶಾಂತಿಮಂತ್ರವ ಪಟಿಸುತಾ
ಸೋತರಂದು ಬ್ರಿಟಿಶರು ಒಪ್ಪಿಸುತ ಭಾರತವ

ಕಳೆದಿಹೆವು ಆರುದಶಕಗಳ ಸ್ವಾತಂತ್ರದಲಿ
ಅತಂತ್ರರಾಗಿಹೆವು ಅರಿಯದೆ ನಾವೆಲ್ಲಾ ಒಂದೇ
ಕಾದಾಡುತ  ಸೆನೆಸಾಡುತ ಭೂಮಿನೀರಿಗಾಗಿ
ಪದವಿ ಕುರ್ಚಿಗಾಗಿ ಮರೆಯುತ ದೇಶ ಹಿತವ

ಆಗಬೇಕಿದೆ ಭಾರತ ವಿಶ್ವದ ಅಗ್ರಮಾನ್ಯ
ಕಲೆತು ಶ್ರಮಿಸೋಣ ವಿಜ್ಞಾನಿಗಳು ಸುಜ್ಞಾನಿಗಳು
ಬೇಡ ಪರದೇಶ ಮೋಹ ಬೆಳೆಸೋಣ  ದೇಶ
ಮುನ್ನಡೆಸೋಣ ವಿಜ್ಞಾನ ವೈದ್ಯ ತಾಂತ್ರಿಕತೆಯಲಿ

ವ್ಯಯಿಸೋಣ ಸಂಪತ್ತನು ದೇಶದೊಳಿತಿಗಾಗಿ
ಬೇಡ ಸ್ವಾರ್ಥಕ್ಕಾಗಿ ಕುಟುಂಬ ಪೋಷಣೆಗಾಗಿ
ಹರಿಸೋಣ ಪರಿಶ್ರಮ ಮನಸುಗಳನು
ಉಳಿಸಿ ಬೆಳೆಸೋಣ ಸುದ್ರಿಢ  ಭಾರತವ

ಹಾರಾಡಲಿ ಭಾರತ ಧ್ವಜ ವಿಶ್ವದೆಲ್ಲೆಡೆ
ಗೌರವಿಸುವಂತಾಗಲಿ ಭಾರತವನ್ನೆಲೆಡೆ
ಭಾರತೀಯರು ಪುರಸ್ಕ್ರಿತರಾಗಲಿ ವಿಶ್ವದಲಿ
ಜಯಹೇ ಜಯಹೇ ಜಯ ಜಯ ಭಾರತಮಾತೆ

ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ನಂ-೧ ಏ ಡೀ ಎನ್ಕ್ಲೇವ್ ,ಮಾರುತಿನಗರ
ಸಹಕಾರನಗರ ಅಂಚೆ, ಬೆಂಗಳೂರು-೯೨
ಫೋನ್ ;9844276216  



 

Sunday, February 6, 2011

ಮುಂಗಾರಿಗಿದೋ ಸುಸ್ವಾಗತ ತರುತ ಹರುಷ

ಮುಂಗಾರಿಗಿದೋ ಸುಸ್ವಾಗತ ತರುತ ಹರುಷ

ಬೇಸಿಗೆಯ ಉರಿಬಿಸಿಲ ಬೇಗೆಯಲಿ
ಕಾದು ಕೆಂಡವಾಗಿಹುದು ಧರೆ ಉರಿದು
ತಾಪದಲಿ ಬೆಂದಿಹರು ಜನತೆ ಮುಗಿಲನೋದುತ
ಮುಂಗಾರಿಗಿದೋ ಸುಸ್ವಾಗತ ತರುತ ಹರುಷ

ಕವಿದಿಹುದು ಕಾರ್ಮೋಡ ಗಗನದಲಿ
ಬೀಸಿಹುದು ಚಂಡಮಾರುತ ದಿಗಂತದಲಿ
ಓಲಾದುತಿಹುದು  ಮರಗಿಡಗಳು ಸಂತಸದಿ
ಮುಂಗಾರಿಗಿದೋ ಸುಸ್ವಾಗತ ತರುತ ಹರುಷ

ತಂಪೀರಲು ಜಿನುಗಿಹುದು  ಮಳೆಹನಿ
ನಲಿದಿರಲು ನೆನೆಯುತ ಮಕ್ಕಳಾದಿಯಾಗಿ
ಕಂಪ ಬೀರುತಿಹುದು ಭುವಿ ತಮ್ಪಪಡೆಯುತ
ಮುಂಗಾರಿಗಿದೋ ಸುಸ್ವಾಗತ ತರುತ ಹರುಷ

ಹಿಡಿದು ನೇಗಿಲ ಭೂಸುತರು   ಧಾವಿಸಿಹರು
ಹದವ ಮಾಡುತ ಮೃತ್ತಿಕೆಯ  ಮಳೆಹನಿಯಲಿ
ವನಿತೆಯರು ನೆಡುತಿಹರು ಹಸಿವ ನೀಗುವ ಸಸಿಯ
ಮುಂಗಾರಿಗಿದೋ ಸುಸ್ವಾಗತ ತರುತ ಹರುಷ

ಓಡಿಹುದು ಕತ್ತಲೆಯ ಕರಿದಿನಗಳು
ತುಂಬಿರಲು ಬಹುತೇಕ ಜಲಾಶಯಗಳು
ಉತ್ಪಾದಿಸುತ ವಿದ್ಯುಚ್ಚಕ್ತಿಯ  ಸಾಮರ್ಥ್ಯಪೂರ್ಣ
ಮುಂಗಾರಿಗಿದೋ ನಲ್ಮೆಯ ಸುಸ್ವಾಗತ

ಬೇಡ ವ್ಯರ್ಥಾಲಾಪ ಚರಂಡಿಗಳು ತುಂಬಿಹವೆಂದು
ಶಪಿಸುತಾ ಮಳೆಹನಿಯ ಬಾರದಿರಲೆಂದು
ಬಹುಜನಹಿತಾಯ ಮುಂಗಾರುಮಳೆಯು ತಿಳಿದು
ಸ್ವಾಗತಿಸೋಣ ಮುದದಿ ಮುಂಗಾರು ಮಳೆ ಹನಿಯ


--ರಚನೆ: ಕೆ ವಿ ಶ್ರೀನಿವಾಸ ಪ್ರಸಾದ
 Mob:9844276216
E-Mail:sreenivasaprasad.kv@gmail.com      

Wednesday, January 19, 2011

ನನ್ನ ಸಿಂಗಪುರ pravasa




ಸಿಂಗಪುರ  ಮಲಯ ತೈಲಂಡ್ ಪ್ರವಾಸ     ಪ್ರಥಮ ದಿವಸದ ನೋಟ -೧೮ ರ ರಾತ್ರಿ 

ಬಹುದಿನದ ಅಪೇಕ್ಷೆಯ ದಿನ ಸಮೀಪಿಸಿತು .ಕೊನೆಗೂ ವಿದೇಶ ಪ್ರವಾಸ ಮಾಡುವ ಯೋಗ ದೊರಕಿತ್ತು. ಸಂಭ್ರಮವೇ   ಸಂಭ್ರಮ   ಸಡಗರ. ಬಟ್ಟೆಗಳ  ಖರೀದಿ , ಚಪ್ಪಲಿ ಸ್ವೆಟರ್ ಆಯ್ಕೆ. ಹೀಗೆ ಅಂತರ ರಾಷ್ಟ್ರ ವಿಮಾನ ಪ್ರಯಾಣ ನಿಯಮಗಳ ಅನ್ವಯ ಪ್ರತಿ ಪೆಟ್ಟಿಗೆಯು ೨೦ kg ಮೀರುವಂತಿರಲಿಲ್ಲ.ಹೀಗಾಗಿ ಕೊಂಡೊಯ್ಯುವ  ಬಟ್ಟೆಗಳು ಮಿತವಾಗಿಯೇ ಇರಬೇಕಿತ್ತು. ಆಯ್ಕೆ ಕಟಿನವಾಗಿತ್ತು  . ಅಂತು ಕೊನೆಯ ನಿಮಿಷದವರೆಗೂ ಅಳೆದು ಸುರಿಯುವ ಕೆಲಸ ನಡೆದಿತ್ತು.ನಮ್ಮ ಪ್ರಯಾಣದ ಆಯೋಜಕರಾದ ಕೇಸರಿ ಟ್ರಾವೆಲ್ಸ್   ಕೂಡ ಬಹಳ ನಿರ್ದೇಶನಗಳನು   ಸಲಹೆಗಳನು   ಕೊಟ್ಟಿತ್ತು. ಹೀಗಾಗಿ ಎಲ್ಲವನ್ನು ಅಚ್ಹುಕಟ್ಟಾಗಿ ಮುಗಿಸಿದೆವು.ಕ್ಯಾಬಿನ್ ಬಾಗಿನಲ್ಲಿ ಅತ್ಯಂತ ಆವಶ್ಯಕ ವಸ್ತುಗಳನು ,  ಕೈ ಚೀಲದಲ್ಲಿ ಪಾಸ್   ಪೋರ್ಟ್ ವಿಮಾನ ಟಿಕೆಟ್ ಇತ್ಯಾದಿಗಳನು ಸೇರಿಸಿದೆವು.ವಿಮಾನ ಮದ್ಯರಾತ್ರಿ ಒಂದು ಗಂಟೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಾಂಗ್ಕೊಕ್ ಗೆ  ಹೊರಡುವುದರಲ್ಲಿತ್ತು. ನಿಯಮಾನುಸಾರ ಮೂರು ಗಂಟೆ ಮೊದಲು ನಿಲ್ದಾಣ ತಲುಪಬೇಕಿತ್ತು. ೮-೩೦ ಗಂಟೆಗೆ  ಕ್ಯಾಬ್ ಬಂತು. ಊಟಮಾಡಿ ಸಿದ್ದವಾಗಿದ್ದೆವು. ಸುಮಾರು ೪೦ ನಿಮಿಷದಲ್ಲಿ ನಿಲ್ದಾಣ ತಲಪಿದೆವು.ಜೊತೆಯಲ್ಲಿ ವಿಮಾನ ನಿಲ್ದಾಣದವರೆಗೂ ಮಗಳು, ಅಳಿಯ ಬಂದರು.
ನಿಲ್ದಾಣದಲ್ಲಿ  ಪ್ರಯಾಣದ ಮಾನೆಜೆರ್     ಮೊಹುಲ್ ಎಲ್ಲರನು ಉದ್ದೇಶಿಷಿ ನಿರ್ದೇಶನಗಳನು ನೀಡಿದರು.ಕೆಲವು ತಿಂಡಿಗಳನು, ಕಾಪ್ ಮತ್ತು ರಯನ್  ಕೊಟುಗಳನು   ನೀಡಿದರು.ಅವುಗಳನ್ನು  ಕ್ಯಾರೀಜೆ  ಬ್ಯಾಗಿನಲ್ಲಿ ಇರಿಸಿ ಬೀಗ ಹಾಕಿದೆವು. ನಿಲ್ದಾಣದೊಳಗೆ ಪ್ರಥಮವಾಗಿ ಪಾಸ್ ಪೋರ್ಟ್ ತಪಾಸಣೆ, ಸೀಟ್ ನಂಬರ್ ನೀಡುವಿಕೆ. ಆದನಂತರ ನಮ್ಮ ಕ್ಯಾರೆಜೆ ಬ್ಯಾಗಿಗೆ ಟ್ಯಾಗ್ ಮಾಡಿ ಒಳಗೆ ಕಳುಹಿಸಲಾಯಿತು.ನಂತರದಲ್ಲಿ immigration ಪರಶೀಲನೆ, ರಕ್ಷಣಾ ಪರಿಶೋದನೆ, ಕ್ಯಾಬಿನ್ ಬ್ಯಾಗ್ ಮತ್ತಿತರ ಚೀಲಗಳ ಕ್ಷ-ರೆ  ತಪಾಸಣೆ . ನಂತರ ವಿಶ್ರಮಿಸುವ ಸ್ಥಳದಲ್ಲಿ ವಿಮಾನಕ್ಕಾಗಿ ನಿರೀಕ್ಷಣೆ. ಕೊನೆಗೂ ಬಂತು ನಮ್ಮ ವಿಮಾನ. ಏನೋ ಒಂದು ಕುತೂಹಲ, ಕಾತುರ, ತವಕ.ನನ್ನ ಶ್ರೀಮತಿಗೆ ಮೊದಲ ವಿಮಾನ ಪ್ರಯಾಣ. ಗಗನ ಸಖಿಯರಿಂದ ನಲ್ಮೆಯ ಸ್ವಾಗತ.ನಮ್ಮ ಆಸನದಲ್ಲಿ ಕುಳಿತೆವು. ಪ್ರಯಾಣದ ನಿಯಮಾನುಸಾರ ಬೆಲ್ಟ್ ಕಟ್ಟಿಕೊಂಡೆವು.ಸರಿಯಾಗಿ ೧ ಗಂಟೆಗೆ ವಿಮಾನ ಗಗನಕ್ಕೆ ಚಿಮ್ಮಿತು.ಕಿಟಕಿಯಾಚೆಯಿಂದ ಬೆಂಗಳೂರಿನ ರಾತ್ರಿಯ ವಿಹಂಗಮ ನೋಟ ರೋಮಾಂಚನವೆನಿಸಿತು . ಕೆಲವೇ ಕ್ಷಣದಲಿ ಬಹು ಎತ್ತರದಲ್ಲಿ ಗಗನದಲ್ಲಿ ಹಾರುತಿದ್ದೆವು.ಸ್ವಾಗತ ಪಾನೀಯ , ರಾತ್ರಿ ಊಟ,ಬಿಸಿ ಕಾಫಿ,ಇತ್ಯಾದಿಗಳನಂತರ ಮಲಗಿದೆವು.ಸುಮಾರು ೩ ವರೆ ಗಂಟೆಯನಂತರ ಬೆಳಗಿನ ಜಾವ ೬-೧೫ ಗಂಟೆಗೆ (ಬ್ಯಾನ್ಗ್ಕೊಕ್ ಸಮಯ)(ಅದು ೨-೩೦ ಗಂಟೆ ಭಾರತದ ಸಮಯಕ್ಕಿಂತ ಮುಂದಿರುತ್ತದೆ) ಬ್ಯಾನ್ಗ್ಕೊಕ್ ತಲಪಿದೆವು.ಅದೊಂದು ಬ್ರಿಹತ್ ವಿಮಾನ ನಿಲ್ದಾಣ. ಇಲ್ಲಿಂದ ಪ್ರಪಂಚದ ಎಲ್ಲ ಕಡೆಗೆ ವಿಮಾನ ಸಂಪರ್ಕವಿದೆ.ಇಲ್ಲಿ ಸುಮಾರು ೩೬ ವಿಮಾನ ನಿಲ್ದಾಣಗಳಿವೆ.ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಹೋಗಲು  ನಡೆಯುವ ಕಾನ್ವೇಯೋರ್ ಸೌಲಭ್ಯವಿದೆ.ಈ ಸುಂದರ ವಿಮಾನ ನಿಲ್ದಾಣದ ಹೆಸರು ಸುವರ್ಣ ಭೂಮಿ ವಿಮಾನ ನಿಲ್ದಾಣ. ವಿಮಾನ ನಿಲ್ದಾಣದ ಆವರಣದಲ್ಲಿ ಬಹಳ ದೊಡ್ಡದಾದ ಸಮುದ್ರ ಮಥನದ ಬೊಮ್ಬೆಗಳನು ಇರಿಸಲಾಗಿತ್ತು.ಸರ್ಪ ಸುತ್ತಿದ ಬೆಟ್ಟದ ಎಡಗಡೆ ದೇವತೆಗಳು,ಬಲಗಡೆ ರಾಕ್ಷಸರ ಗೊಂಬೆಗಳು ಆಕರ್ಷಕವಾಗಿದ್ದವು.ನಿಲ್ದಾಣದ ಸುತ್ತಲು ಕಾಲಾಡಿಸಿದೆವು.ಏಕೆಂದರೆ ನಮ್ಮ ಮುಂದಿನ ವಿಮಾನ ಸಿಂಗಪುರಕೆ ೮-೧೫ ಗಂಟೆಗೆ ಇತ್ತು.ನಾವು ಅಂದು ಸಿಂಗಪುರ ತಲಪಬೇಕಿತ್ತು .ನಿರೀಕ್ಷೆಯಂತೆ ವಿಮಾನ ಸಮಯಕ್ಕೆ ಬಂತು.ಸಿಂಗಪುರ ತಲಪಿದಾಗ ೧೧-೧೫ ಗಂಟೆ.

19.12.2010-ನಾ  ಕಂಡ ವೈಭವದ ನಗರ ಸಿಂಗಪುರ
immigration  ಮತ್ತು   ರಕ್ಷಣಾ ತಪಾಸಣೆ ನಂತರ ನೇರವಾಗಿ ಊಟ ಮಾಡಲು ಚಿಕ್ಕ ಇಂಡಿಯಾ ಎಂದೇ ಖ್ಯಾತಿಯಾದ ಸಿಂಗಪುರದ ಒಂದು ಭಾಗಕ್ಕೆ ಹೋದೆವು.ಅಲ್ಲಿ ಭಾರತದ ಮೂಲದ ಒಂದು ಹೋಟೇಲ್ನಲ್ಲಿ ಊಟಮಾಡಿದೆವು  .ನಂತರ ರೈಡೆರ್ಸ್   ವಸತಿಗ್ರಿಹ ತಲಪಿದೆವು . ನಂತರ ಸಂಜೆಯವರೆಗೆ ವಿಶ್ರಾಂತಿ ಪಡೆದೆವು.
ಸಿಂಗಪುರ ೭೪೬ ಚದರ ಕಿ ಮೀ ವಿಸ್ತೀರ್ಣದ ಒಂದು ಸಣ್ಣ ಸ್ವತಂತ್ರ ರಾಷ್ಟ್ರ. ಎರಡನೆಯ ಮಹಾಯುದ್ದದ ನಂತರ ಸ್ವಾತಂತ್ರ್ಯ ಪಡೆದ ಈ ರಾಷ್ಟ್ರ ಸುಮಾರು ೫ ದಶಕದಲ್ಲಿ ಮಹತ್ತರವಾದ ಪ್ರಗತಿ ಹೊಂದಿದೆ.ಸಣ್ಣ ಮೀನುಗಾರರ ಹಳ್ಳಿಯಾಗಿದ್ದ ಈ ಪ್ರದೇಶ ಇಂದು ಪ್ರಪಂಚದ ಅಗ್ರಮಾನ್ಯ ರಾಷ್ಟ್ರಗಳಲ್ಲೊಂದಾಗಿದೆ. ಪ್ರಪಂಚದ ೩ ನೇ ಅತಿ ಸುಂದರ ದೇಶವೆನಿಸಿದೆ.ಎಲ್ಲಿ ನೋಡಿದರು ಬ್ರಿಹತ್ತಾದ ಕಟ್ಟಡಗಳು, ಗಗನಚುಂಬಿ ಕಟ್ಟಡಗಳು.ಎಲ್ಲಕಿಂತ ಮಿಗಿಲಾಗಿ ಬಹಳ ಶುಬ್ರವಾದ ನಗರ. ಅಚ್ಚುಕಟ್ಟಾದ ರಸ್ತೆಗಳು,ವಾಹನಸಂಚಾರ,ಜನಜೀವನ.ಬಹಳ ಮೆಚ್ಚುವಂತಾಗಿದ್ದವು.
ಸಂಜೆ ನಗರ ವೀಕ್ಷಣೆ ಮತ್ತು ಶಾಪಿಂಗ್ ಗಾಗಿ ಚಿಕ್ಕ ಇಂಡಿಯಾ ಗೆ ನಡೆದೆವು.ಸಹ ಪ್ರಯಾಣಿಕರು ಶಾಪಿಂಗ್ ಗೆ ತೆರಳಿದರೆ ನಾವು ಅಲ್ಲಿಯೇ ಇದ್ದ ವೆಂಕಟೇಶ್ವರ ದೇವಾಲಯ ನೋಡಿದೆವು.ಅಂದು ಚಿನ್ನದ ರಥೋತ್ಸವ.ಬಹಳ ಮಂದಿ ಭಾರತೀಯರು ಸೇರಿದ್ದರು.ರಾತ್ರಿ ಊಟಮಾಡಿ ವಸತಿಗ್ರಿಹಕ್ಕೆ ಮರಳಿದೆವು.

 
 
೨೦-೧೨-೨೦೧೦-ಸೋಮವಾರ

ನಮ್ಮ ಪ್ರಯಾಣದ ಎರಡನೆಯ ದಿನ.ಬೆಳಿಗ್ಗೆ ಉಪಹಾರ ಮುಗಿಸಿ ನಗರಮದ್ಯದಲ್ಲಿದ್ದ ಬೋತಾನಿಕಾಲ್ ಗಾರ್ಡನ್ ಗೆ ಭೇಟಿ ನೀಡಿದೆವು.ಅಲ್ಲಿದ್ದ ನೂರಾರು ಬಗೆಯ ಪುಷ್ಪಗಳು, ಸಸಿಗಳು, ಗಿಡಗಳು ಆಕರ್ಷಕವಾಗಿದ್ದವು. ನಮ್ಮ ಜೊತೆಯಲ್ಲಿ  ನಿಯೋಜಿಸಲ್ಪತ್ತಿದ್ದ ಗೈಡೆ ಮಿ. ಕೋ ತುಂಬಾ ಹ್ರಿದಯಂಗಮವಾಗಿ ವಿವರಣೆ ನೀಡಿದರು.ಅಲ್ಲಿ ಕೂಲ್ ಹೌಸ್ ಎಂಬ ಮಂಜು ಸುರಿಯುವ ಪುಷ್ಪ ಗೃಹ ನೋಡಿದೆವು.ಮನಮೋಹಕವಾಗಿತ್ತು.

ನಂತರ ಪ್ರಪಂಚದ ಅದ್ಬುತಗಳೊಂದಾದ ಮೇರಿ ಗೋ ರೌಂಡ್ ನಲ್ಲಿ ಒಂದು ಸುತ್ತು ಹಾಕಿದೆವು. ಇದು ೧೬೮ ಅಡಿ ಎತ್ತರದ ಚಕ್ರ.ಇದರ ಮೇಲ್ತುದಿಯಿಂದ ಇಡೀ ಸಿಂಗಪುರ ಮತ್ತು ಮಲೇಶಿಯಾ ದೇಶಗಳ ವಿಹಂಗಮ ನೋಟ ವಲ್ಲದೆ ದೂರದ ಇಂದೊನೆಸಿಯಾ ಕೂಡ ಕಾಣಸಿಗುತ್ತಿತ್ತು .ಸಮೀಪದ ಸಾಗರದಂಚಿನಲ್ಲಿ ನೂರಾರು ನೌಕೆಗಳು ಕಾಣುತಿದ್ದವು.ಸಿಂಗಪುರದ ಲಾಂಚನವೆಂದೇ ಪ್ರಖ್ಯಾತಿಯಾದ ಮರ್ಲಯನ್  ಅಂದರೆ ಅರ್ದ ಸಿಂಹ ಮತ್ತರ್ದ ಮೀನಿನ ಆಕಾರದ ದೇಹವುಳ್ಳ ವಿಚಿತ್ರ ಪ್ರಾಣಿಯ ಬೊಂಬೆಯನ್ನು ನೋಡಿದೆವು.ಹಿಂಬದಿಯಲ್ಲಿ ದೇಶದ ಪ್ರಮುಖ ವಾಣಿಜ್ಯ ಬ್ಯಾಂಕಗಳ ಬಹು ಮಹಡಿ ಕಟ್ಟಡಗಳನ್ನು ನೋಡಿದೆವು.ನಂತರ ಮದ್ಯಾನ್ಹದ ಊಟಮಾಡಿ ಮೌಂಟ್ ಫ್ಹೆಬೆರ್ ಗಿರಿಯತ್ತ ಚಲಿಸಿದೆವು.ಅಲ್ಲಿಂದ ಕೀಬಲ್ ಕಾರ್ ನಲ್ಲಿ ಸೇನತೋಸ ದ್ವೀಪಕ್ಕೆ ಹೋದೆವು.ಪ್ರಯಾಣ ರೋಮಾಂಚನವಾಗಿತ್ತು.ಗಾಳಿಯಲ್ಲಿ ತೆಲುವಂತಿತ್ತು.ಅಲ್ಲಿಂದ ಮೇಣದ ಸಂಗ್ರಹಾಲಯಕ್ಕೆ ಬೆಟಿನೀಡಿದೆವು. ಅಲ್ಲಿ ಆಳೆತ್ತರದ ಮೇಣದ ಬೊಂಬೆಗಳನ್ನು, ಸಿಂಗಪುರದ ಚರಿತ್ರೆಯನ್ನು ಬಿಂಬಿಸುವಂತೆ ಅಳವಡಿಸಲಾಗಿತ್ತು.ಒಂದು ಸಣ್ಣ ಮೀನುಗಾರರ ಹಳ್ಳಿಯಿಂದ, ಚೀನಾದೇಶದವರ  ಬರುವಿಕೆಯಿಂದ ರಫ್ತು ಕೇಂದ್ರವಾಗಿ ಪರಿವರ್ತನೆ, ೧೯೪೫ ರಲ್ಲಿ ಸ್ವಾತಂತ್ರ, ಬ್ರಿಟೀಷರ ಸಹಕಾರದಿಂದ ಒಂದು ಬ್ರಿಹತ್ತಾದ ಕೈಗಾರಿಕಾನಗರವಾಗಿ ಪರಿವರ್ತನೆ, ವಾಣಿಜ್ಯ ಉದ್ಯಮಗಳ ಸ್ಥಾಪನೆ,ಇತ್ಯಾದಿಗಳನ್ನು ಸುಂದರವಾಗಿ ಬಿಂಬಿಸಲಾಗಿತ್ತು.ಸಾಂಸ್ಕೃತಿಕ ಚಟುವಟಿಕೆಗಳು, ಚೀನಾ, ಭಾರತ, ಪಾರ್ಸಿ ಮತ್ತು ಮುಸಲ್ಮಾನರ ಮದುವೆಯ ವೈಭವದ ದೃಶ್ಯಗಳು ಮನಮೋಹಕವಾಗಿದ್ದವು.ಅಲ್ಲಿಂದ  ೪ ಡೀ ಚಿತ್ರ ಪ್ರದರ್ಶನ ನೋಡಿದೆವು  .ಹೊಸ ಅನುಭವ ಮೂಡಿಸುವಂತಿದ್ದವ್ವು ಅಲ್ಲಿಂದ ನೆಲಮಾಳಿಗೆಯಲ್ಲಿ ಮೀನಿನ ಲೋಕ ನೋಡಿದೆವು  .ಬಗಬಗೆಯ ಮೀನುಗಳು, ತಿಮಿಂಗಲಗಳು,ಜೆಲ್ ಮೀನುಗಳು,ಇತ್ಯಾದಿಗಳನ್ನು ಬಹಳ ಸಮೀಪದಿಂದ ನೋಡಿದೆವು.
ಅಲ್ಲಿಂದ ಕೇಬಲ್  ಕಾರ್ ನಲ್ಲಿ ವಾಪಸ್ಸಾದೆವು.ಸಂಜೆ ಸಮುದ್ರ ತೀರದಲ್ಲಿ ಒಂದು ಸಾಂಸ್ಕೃತಿಕ ನೃತ್ಯ ಪ್ರದರ್ಶನ "ಸಮುದ್ರ ಗೀತೆಗಳು"ಎಂಬ ಕಾರ್ಯಕ್ರಮಕ್ಕೆ ತೆರಳಿದೆವು.ಅದೊಂದು ಪ್ರಾಚೀನ ದ್ರಿಶ್ಯಾವಳಿಗಳು ಆಧುನಿಕ ತಂತ್ರಜ್ಞಾನ ಅಂದರೆ ಲೇಸರ್ ಪ್ರಯೋಗ, ನೀರಿನಚಿಲುಮೆಗಳು ಇತ್ಯಾದಿಗಳ ಸಂಗಮವಾಗಿತ್ತು.ಸಮುದ್ರದ ತೀರದಲ್ಲಿ ಜರುಗಿದ ಈ ಕಾರ್ಯಕ್ರಮ ಮಂತ್ರಮುಗ್ದರನ್ನಾಗಿಸಿತ್ತು .ಪ್ರದರ್ಶನದ ನಂತರ ರಾತ್ರಿ ಊಟ ಮಾಡಿ ವಸತಿಗ್ರಿಹಕ್ಕೆ ಮರಳಿದೆವು.

21-12-2010-ಮಂಗಳವಾರ : ಮಲೇಷ್ಯಾ  ಪ್ರವಾಸ


 

ನಮ್ಮ ಪ್ರಯಾಣದ ಮೂರನೆಯ ದಿನ.ಸಿಂಗಪುರದಿಂದ ಮಲೇಷ್ಯಾ  ದೇಶದತ್ತ ಪಯಣ. ಬೆಳಿಗ್ಗೆ ೮ ಗಂಟೆಗೆ ಉಪಹಾರ ಮುಗಿಸಿ ಅಂತರ ರಾಷ್ಟ್ರೀಯ ಬಸ್ನಲ್ಲಿ ಮಲೇಷ್ಯಾ ದೇಶದ ಕೌಳಲಂಪುರ್ನತ್ತ ಪ್ರಯಾಣ.ಗಾಡಿಯಲ್ಲಿ ಪಾಸ್ ಪೋರ್ಟ್ ತಪಾಸಣೆ, immigration ಪರಿಶೀಲನೆ, ರಕ್ಷಣಾ ಶೋದನೆ ನಂತರ ಬಸ್ ಪ್ರಯಾಣ ಮುಂದುವರಿಯಿತು.ಎರಡೂ ದೇಶಗಳ ನಡುವೆ ಸಮುದ್ರ. ನಡುವೆ ೧೦ ಕಿ ಮೀ ಉದ್ದದ ಸೇತುವೆ. ನಂತರ ರಸ್ತೆಯ ಇಕ್ಕೆಲೆಗಳಲ್ಲಿ   ಪಾಂ ಮರಗಳ ಸಾಲು ಸಾಲು.ಮಲೇಶಿಯಾ ವಿಶ್ವದ ಅಗ್ರಮಾನ್ಯ ಪಾಂ ರಪ್ತು   ಮಾಡುವ ದೇಶ. ಸುಮಾರು ೫ ಗಂಟೆ ಪ್ರಯಾಣದ ಮದ್ಯದಲ್ಲಿ ೧೧ ಗಂಟೆಗೆ ಸಣ್ಣ ಉಪಹಾರ.ಮಲೇಶಿಯಾ ಮುಸ್ಲಿಂ ರಾಷ್ಟ್ರ. ಕೌಲಾಲಂಪುರ್ ತಲಪಿದಾಗ ೧ ಗಂಟೆ.ಅಲ್ಲಿದ್ದ ಇಂಡಿಯನ್ ಹೋಟೇಲ್ನಲ್ಲಿ ಊಟಮಾಡಿದೆವು. ದಾರಿಯಲ್ಲಿ ಬಾತ ಗುಹೆಯಲ್ಲಿ ಅದ್ಭುತವಾದ ೬೫ ಅಡಿಯೆತ್ತರದ ಮುರುಗನ ಚಿನ್ನದ ಬಣ್ಣದ ವಿಗ್ರಹ ಆಕರ್ಷಣೀಯವಾಗಿ ಕಾಣುತಿತ್ತು.ಊಟದನಂತರ ಜೆಂತಿಂಗ್ ಉನ್ನತ ಭೂಮಿಯತ್ತ ಪಯಣ.ಬೆಟ್ಟದ ತಳದಲ್ಲಿ ಬಸ್ಸಿನಲ್ಲಿಯೇ ನಮ್ಮ ಲಗ್ಗೆಜಗಳನು  ಬಿಟ್ಟು ಒಂದುದಿನದ ಮಟ್ಟಿನ ಬಟ್ಟೆ ಬರೆಗಳನು ಬೇರೊಂದು ಸಣ್ಣ ಕೈಚೀಲದಲ್ಲಿ ತೆಗೆದುಕೊಂಡು ಮುಂದಿನ ರೋಮಾಂಚನಕಾರಿ ಪ್ರಯಾಣಕ್ಕೆ ಸಿದ್ದವಾದೆವು.ಸುಮಾರು ೧೨ ಕಿ ಮೀ ಪಯಣ. ನೆಲಮಟ್ಟದಿಂದ ೩೬೦೦ ಅಡಿ ಎತ್ತರದ ಬೆಟ್ಟದ ತುದಿಗೆ ಕೇಬಲ್ ಕಾರ್ನಲ್ಲಿ ಪಯಣ. ಕೆಳಗೆ ದಟ್ಟ ಕಾಡು.ಸುತ್ತಲೂ ಮೋಡಗಳು. ನಡುವೆ ಕೇಬಲ್ ಕಾರ್. ಅತ್ಯಂತ ಕಡಿದಾದ ಮಾರ್ಗದಲ್ಲಿ ಹೋಗಬೇಕಿತ್ತು.೧೨ ಕಿ ಮೀ ದೂರವನ್ನು ಸುಮಾರು ೧ ಗಂಟೆಯಲ್ಲಿ ಕ್ರಮಿಸಬೇಕು.ಇದು ವಿಶ್ವದ ಅತ್ತ್ಯಂತ   ವೇಗದ ಕೇಬಲ್ ಕಾರ್.ರೋಮಾಂಚನಕಾರಿಯಾಗಿತ್ತು.ಒಂದೆಡೆ ಕೇಬಲ್ ಕಾರ್ ಸುಮಾರು ೨೫೦೦ ಅಡಿಯಲ್ಲಿ ಕೆಲ ಕ್ಷಣ ನಿಂತಾಗ ಆತಂಕ.ಜೋರಾಗಿ ಆಕ್ರಂದನ.ದೇವರ ಸ್ಮರಣೆ. ಕೂಗು ಕೇಳಲು ಯಾರಿಲ್ಲ.ಕೆಲಕ್ಷಣದ ನಂತರ ಕೇಬಲ್ ಕಾರ್ ಚಲಿಸಲಾರಂಬಿಸಿದಾಗ ನಿಟ್ಟುಸಿರು.ಅದ್ಬುತವಾಗಿತ್ತು ಪ್ರಯಾಣ. ಬೆಟ್ಟದತುಡಿ ತಲಪಿದಾಗ ಸಂಜೆ ೫ ಗಂಟೆ.ವಿಶ್ವದ ಅತಿ ದೊಡ್ಡ ವಸತಿಗ್ರಿಹವೆನಿಸಿದ " ಫಸ್ಟ್ ವರ್ಲ್ಡ್ ಹೋಟೆಲ್"ನಲ್ಲಿ ಕೋಣೆ ಪಡೆಯಲು ಸುಮಾರು ೧ವರೆ ಗಂಟೆ ಕಾಯಬೇಕಾಯಿತು.ವಸತಿ ಗ್ರಿಹದಲ್ಲಿ ೬೧೧೮ ಕೋಣೆಗಳು ೨೪ ಮಹಡಿಗಳು.ಎರಡು ಗೋಪುರಗಳು. ಕೆಳಮಹಡಿಯಲ್ಲಿ ಸುಮಾರು ೨೦೦೦ ಅಂಗಡಿಗಳು/ಆಟಗ್ರಿಹಗಳು/ಪ್ರದರ್ಶನ ಆಗರಗಳು ಇತ್ಯಾದಿ. ಪ್ರಪಂಚದ ವಿಖ್ಯಾತ ಕ್ಯಾಸಿನೋ- ಜೂಜು ಗೃಹ ಕೂಡ ಇರುವುದು ಇಲ್ಲೇ. ಅಸ್ಟೆ ಅಲ್ಲ. ೪ನೇ ಮಹಡಿಯಲ್ಲಿ ಅತಿ ದೊಡ್ಡ ಉಪಹಾರ ಗೃಹ. ಇಲ್ಲಿ ವಿಶ್ವದ ಎಲ್ಲ ದೇಶಗಳ ವಿಶಿಷ್ಟ     ಪೂರ್ಣ ತಿನಿಸುಗಳು ಲಭ್ಯ.ಒಂದೇ ಮಾತಿನಲ್ಲಿ ಹೇಳುವುದಾದರೆ ಅದೊಂದು ಅದ್ಭುತ ವಿಶ್ವ.ನಮಗೆ ಕೊನೆಯಲ್ಲಿ ದೊರೆತದ್ದು ೧೯ನೇ ಮಹಡಿಯಲ್ಲಿ ೧೦ ನೇ ಸಂಖ್ಯೆಯ ಕೊಠಡಿ.ಎಲ್ಲವನ್ನು ಒಳಗೊಂಡಿರುವ ಸುಸಜ್ಜಿತ ಕೊಠಡಿ.ಸ್ವಲ್ಪ ಸಮಯ ವಿರಮಿಸಿ ೮-೩೦ ಗಂಟೆಗೆ ಸರಿಯಾಗಿ ಭೋಜನಕ್ಕೆ ಹಾಜರಿರಬೇಕಿತ್ತು.ಊಟ ಬಹಳ ರುಚಿಯಾಗಿತ್ತು .ಮುಸ್ಲಿಂ ರಾಷ್ಟ್ರದಲ್ಲಿ ಬೆಟ್ಟದ ಮೇಲೆ ಭಾರತೀಯ ಸಸ್ಯಾಹಾರಿ ಭೋಜನ.ಊಹಿಸಲು ಅಸಾಧ್ಯವಾಗಿತ್ತು .ರುಚಿಯಾದ ಊಟದನಂತರ ಅಂಗಡಿಗಳನ್ನು , ಪ್ರದರ್ಶನಗಳನ್ನು ವೀಕ್ಷಿಸಿದೆವು ಇಡೀ ರಾತ್ರಿ ಮಳಿಗೆಗಳು ತೆರೆದಿರುವುದೆಂಬುದು ತಿಳಿದುಬಂತು.ಅದೊಂದು ವಿಸ್ಮಯ ಜಗತ್ತು. ಚಿಕ್ಕ ಚಡ್ಡಿಯ ಲಲನೆಯರು. ಘಮಘಮಿಸುವ ಪರಿಮಳ ದ್ರವ್ಯಗಳು. ಎಲ್ಲೆಲ್ಲೂ ಉತ್ಸಾಹ. ಉಲ್ಲಾಸ. ರಾತ್ರಿಯೆಂದು ಅನಿಸುತ್ತಿರಲಿಲ್ಲ. ರಾತ್ರಿ ೧೨ ಗಂಟೆಗೆ ಕೋಣೆಗೆ ಬಂದು ಮಲಗಿದೆವು.


೨೨-೧೨-೨೦೧೦ ಬುಧವಾರ


೮ ಗಂಟೆಗೆ ಸರಿಯಾಗಿ ಬೆಳಗಿನ  ಉಪಹಾರ . ನಂತರ ಅಂದಿನ ವೈಶಿಷ್ಟ್ಯ -ಬೆಟ್ಟದ ಮೇಲಿದ್ದ ಹೊರಾಂಗಣದ ವಿವಿಧ ಆಟಗಳು. ಮಕ್ಕಳಿಗೆ ಯುವಕರಿಗೆ ಅದೊಂದು ರೋಮಾಂಚಕ ಜಗತ್ತು.ವಯಸ್ಸಾದವರಿಗೆ ಯೌವನದ ನೆನಪುಗಳು.ರೋಲ್ಲರ್ ಕೋಸ್ಟರ್, ಸರ್ಪ ಸುತ್ತಿನ ವಿಹಾರ ಇತ್ಯಾದಿ ಆಟಗಳು . ನನ್ನ ಮಗನಿಗೆ ಖುಷಿಯೋ ಖುಷಿ.ಅವನಾಡಿದ ೫ ಆಟಗಳು. ನಾನು ಮತ್ತು ಮಡದಿ ಮಿನಿ ಟ್ರೈನ್ ಇತ್ಯಾದಿಗಳಲ್ಲಿ ರಮಿಸಿದೆವು.೧೨-೩೦ ಗಂಟೆಗೆ ಸರಿಯಾಗಿ ಊಟಕ್ಕೆ ಹಾಜರಿರಬೇಕಿತ್ತು.ಮತ್ತದೇ ಭವ್ಯ ಭೋಜನದ ನಂತರ ಕೇಬಲ್ ಕಾರ್ನಲ್ಲಿ ಕೌಲಾಲಂಪುರ್ ತಲಪಿದೆವು.ಸಂಜೆ ೪ ಆಗಿತ್ತು.ಅಂದಿನ ಮುಂದಿನ ಕಾರ್ಯಕ್ರಮ ನಗರ ವೀಕ್ಷಣೆ ಆಗಿತ್ತು. ಮೊಟ್ಟಮೊದಲು ಪೆಟ್ರೋನಾಸ್ ಎಂಬ ಖ್ಯಾತಿಯ ಜೋಡಿಗೊಪುರದ ಕಟ್ಟದದತ್ತ ನಡೆದೆವು. ೮೪ ಅಂತಸ್ತಿನ ಜೋಡಿ ಗೋಪುರ ೪೨ ಅಂತಸ್ತಿನಲ್ಲಿ ಎರಡು ಗೋಪುರಗಳನ್ನು ಸಂಪರ್ಕಿಸುವ ಸಂಪರ್ಕ ಸೇತುವೆ . ಇದರ ಒಡೆಯ ಒಬ್ಬ ಭಾರತೀಯ ಎಂಬುದು ಹೆಮ್ಮೆ. ಈ ಕಟ್ಟಡದಲ್ಲಿ ಒಂದು ತೈಲ ಕಂಪನಿ ಇದೆ. ಕೆಲವು  ವಾಣಿಜ್ಯ  ಉದ್ಯಮಿಗಳ ಕಛೇರಿ ಇದೆ ಅನತಿ ದೂರದಲ್ಲಿ ಒಂದು ಗುಂಪು ಚಿತ್ರ ಕೇಸರಿ ಸಂಸ್ಥೆ ಇಂದ ತೆಗೆಯಲಾಯಿತು.ಪ್ರತ್ಯೇಕವಾಗಿ ಎಲ್ಲರೂ ಚಿತ್ರಗಳನ್ನು ತೆಗೆಸಿಕೊಂಡರು. ನಂತರ ಕಟ್ಟಡದ ಸಮೀಪ ಹೋದೆವು.ಕಟ್ಟಡದ ತುದಿ ನೋಡಲು ಪೂರ್ಣವಾಗಿ ತಲೆ ಎತ್ತಬೇಕು.ಅಷ್ಟು ದೊಡ್ಡ ಕಟ್ಟಡ. ರಚನೆ ಬಹಳ ಸುಂದರವಾಗಿತ್ತು.ನಂತರ ಕೆ ಎಲ್ ಟೋವೆರ್ ಎಂದೇ ಪ್ರಸಿದ್ದಿಯಾದ ೮೬ ಅಂತಸ್ತಿನ ಬಹು ಎತ್ತರದ ಗೋಪುರದತ್ತ   ಚಲಿಸಿದೆವು. ಇದರ ತುದಿಯಲ್ಲಿ ತಿರುಗುವ ಮಂಚವಿದೆ.ಇದರ ಮೇಲೆ ನಿಂತರೆ ನಗರದ ಎಲ್ಲ ದಿಕ್ಕುಗಳ ವೀಕ್ಷಣೆ  ಸಾದ್ಯ.ಅದೊಂದು ಸುಂದರ ದೃಶ್ಯ.ಬಹು ಮಹಡಿ ಕಟ್ಟಡಗಳೇ ಎಲ್ಲೆಲ್ಲೂ.ಒಂದಂಗುಲವು ಬಿಡದಂತೆ ಕಟ್ಟಡಗಳ ನಿರ್ಮಾಣ.ಅಲ್ಲಿಯೇ ತಂಪು ಪಾನೀಯ ಕುಡಿದು ಕೆಳಗೆ ಬಂದೆವು.ನಂತರ ಬಸ್ಸಿನಲ್ಲಿ ಸ್ವಾತಂತ್ರ ಚೌಕಕ್ಕೆ ಬಂದೆವು.ಅಲ್ಲಿ ಸ್ವಾತಂತ್ರ ನೆನಪಿನ ಸ್ಮಾರಕ , ಕ್ರೀಡಾ ಮೈದಾನ , ಮುಖ್ಯ ನ್ಯಾಯಾಲಯ ಕಟ್ಟಡ, ರಾಷ್ಟ್ರೀಯ ಮುಸ್ಲಿಂ ಪ್ರಾರ್ಥನಾ ಮಂದಿರ ಇತ್ಯಾದಿಗಳನ್ನು ನೋಡಿದೆವು.ದಾರಿಯಲ್ಲಿ  ಮಲೇಷಿಯಾದ ರಾಜ ಸೌಧವನ್ನು ವೀಕ್ಷಿಸಿದೆವು ರಾತ್ರಿ ೮ ಗಂಟೆಗೆ ಹೋಟೆಲ್ ಪರ್ಲ್ ಇಂಟರ್ನಾಷನಲ್ ಎಂಬ ವಸತಿ ಗೃಹ ತಲಪಿದೆವು. ಎರಡನೆಯ ಮಹಡಿಯಲ್ಲಿ ನಮಗೆ ಕೊಟಡಿ ದೊರಕಿತು.ಲಗ್ಗೆಜೆ    ಇರಿಸಿ ಊಟಕ್ಕಾಗಿ  ೮ ನೇ   ಮಹಡಿಯಲ್ಲಿದ್ದ ಉಪಹಾರ ಗೃಹಕ್ಕೆ ಬಂದು ಊಟ ಮಾಡಿ ಮರಳಿ ಮಲಗಿದೆವು.

೨೩-೧೨ -೨೦೧೦  ಗುರುವಾರ  ೫ ನೆಯ ದಿನ

 

ಮುಂದಿನ ಪ್ರಯಾಣ ಬುದ್ದರ ದ್ವೀಪ ರಾಷ್ಟ್ರ ತಯ್ಲಂಡ್ ಬೆಳಿಗ್ಗೆ ಉಪಹಾರ ಮುಗಿಸಿ ನೇರವಾಗಿ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳಸಿದೆವು. ವಿಮಾನ ನಿಲ್ದಾಣ ೫೦ ಕಿ ಮೀ ಆಚೆ ಇತ್ತು. ೧೦-೩೦ ಗಂಟೆಗೆ ನಿಲ್ದಾಣದಲ್ಲಿ ಹಾಜರಿರಬೇಕಿತ್ತು. ವಿಮಾನ ಮಧ್ಯಾನ್ಹ ೧-೦೫ ಕ್ಕೆ ಇತ್ತು.immigration  , ಪಾಸ್ ಪೋರ್ಟ್ ಪರಿಶೀಲನೆ,ರಕ್ಷಣಾ ಶೋದನೆ ನಂತರ ನಿಲ್ದಾಣ k-೨ ನಲ್ಲಿ ಕುಳಿತೆವು.ವಿಮಾನ ೧-೦೫ ಕ್ಕೆ ಹೊರಟಿತು.ಬಂಗ್ಕೊಕ್ ತಲಪಿದಾಗ ೨-೩೦ ಗಂಟೆ.ನಿಲ್ದಾಣದಿಂದ  ಹೊರಬಂದಾಗ ೪-೩೦ಗಂಟೆ ನಮ್ಮ ಸ್ಥಳೀಯ ಕೋಚ್ ಸಿದ್ದವಾಗಿತ್ತು.ಬಸ್ನಲ್ಲಿ ಪಟ್ಟಾಯ ಎಂಬ ಸಮುದ್ರತೀರದ ನಗರದೆಡೆಗೆ ಪ್ರಯಾಣ ಬೆಳೆಸಿದೆವು.ತಲಪಿದಾಗ ೭-೩೦ ಗಂಟೆ.ನೇರವಾಗಿ ವಸತಿಗ್ರಿಹ ಹೋಟೆಲ್ ಎರವಾನ ಪಟ್ಟಯಕ್ಕೆ ಹೋಗಿ ಕೊಠಡಿ  ಪಡೆದೆವು.ನಮಗೆ ರೂಂ ನಂ ೧೧೪ ದೊರಕಿತು.ಸ್ವಲ್ಪ ವಿರಮಿಸಿಕೊಂಡ ನಂತರ ೯-೩೦ ಗಂಟೆಗೆ ಊಟ   ಮಾಡಿದೆವು.ನಂತರ ರಾತ್ರಿ ೧೧-೩೦ ಆಟಕ್ಕೆ ಸ್ಥಳೀಯ ಕ್ಯಾಬರೆ ಷೋ "ಅಲ ಕಜರ್ "ನೋಡಿದೆವು.ಇದನ್ನು ಶಿಖಂಡಿಗಳು  ಅಂದರೆ ಪುರುಷನೂ ಅಲ್ಲ ಸ್ತ್ರೀ ಅಲ್ಲ ಅಂತಹವರು ನಡೆಸಿಕೊಡುವರು.ಇವರನ್ನು ಶೆನ್ಸ್ ಗಳೆಂದು ಕರೆಯುತ್ತಾರೆ.ನೃತ್ಯ ಪ್ರದರ್ಶನ ಮನಮೋಹಕವಾಗಿತ್ತು.ಥೈಲಾಂಡ್ನ ವಿವಿಧ ಬಗೆಯ   ಜಾನಪದ ನೃತ್ಯಗಳು, ಇತಿಹಾಸ ಬಿಂಬಿಸುವ ನೃತ್ಯಗಳು ಆಕರ್ಷಕವಾಗಿದ್ದವು.ಈ ನಗರದಲ್ಲಿ ಜನಜೀವನ ಆರಂಭವಾಗುವುದೇ ರಾತ್ರಿ ೮ ರ ನಂತರ. ಬೆಳಗಿನ ಜಾವ ೫ ರ ವರೆಗೂ ಇಡೀ ರಾತ್ರಿ ನಗರ ಲವಲವಿಕೆಯಿಂದ ಇರುತ್ತದೆ. ನಗರ, ರಾತ್ರಿ ಜೀವನಕ್ಕೆ ಪ್ರಸಿದ್ದಿ.ಅದೂ ಕ್ರಿಸ್ಮಸ್ ರಾತ್ರಿಯ ಹಿಂದಿನ ದಿನವಾಗಿದ್ದರಿಂದ ಸಂಭ್ರಮವೋ ಸಂಭ್ರಮ. ನೃತ್ಯ ಪ್ರದರ್ಶನ ವೀಕ್ಷಿಸಿ ರಾತ್ರಿ ೧ ಗಂಟೆಗೆ ಮರಳಿ ಮಲಗಿದೆವು.

೨೪-೧೨-೧೦      ಶುಕ್ರವಾರ     ಆರನೆಯ ದಿನ


                              



ಬೆಳಿಗ್ಗೆ ೮ ಗಂಟೆಗೆ ಉಪಹಾರ ಮುಗಿಸಿ, ಕೊರಲ್ ದ್ವೀಪ ಸಮೂಹಕ್ಕೆ ವೇಗ ದೋಣಿಯಲ್ಲಿ ಪ್ರಯಾಣ ಬೆಳೆಸಿದೆವು.ಮೊದಲು ಪ್ಯಾರ ಸೇಲಿಂಗ್  ಡೆಕ್ ಬಳಿಗೆ ಹೋದೆವು.ಅಲ್ಲಿ ನಮ್ಮ ಸರದಿ ಬರುವ ವೇಳೆಗೆ ೧೦ ಗಂಟೆ ಆಗಿತ್ತು.ನಮಗೆ ಜಲ ರಕ್ಷಣಾ ಕವಚ ತೊಡಿಸಲಾಯಿತು.ಒಬ್ಬೊಬ್ಬರಾಗಿ ಪರಸೇಲಿಂಗ್  ಮಾಡಿದೆವು.ಒಂದು ವೇಗದದೋನಿಗೆ    ಪರಚೂತ್  ಕಟ್ಟಲಾಯಿತು.ದೋಣಿ ಚಲಿಸಿದಂತೆ ಪರಚುತ್  ಮೇಲೆ ಹೋಯಿತು.ಜೊತೆಯಲ್ಲಿ  ನಾವೂ ಕೂಡ. ಸುಮಾರು ೧೫೦ ಅಡಿ ಎತ್ತರದಲ್ಲಿ ಹಾರಾಡಿದೆವು.ನಂತರ ವೇಗ ಕಡಿಮೆಮಾದಿದಂತೆ ಕೆಳಗೆ ಇಳಿಯತೊಡಗಿದೆವು.ಅದೊಂದು ರೋಮಾಂಚಕಾರಿ ಅನುಭವವಾಗಿತ್ತು. ಹಕ್ಕಿಗಳಂತೆ   ಕೆಲ ಕ್ಷಣ ಗಗನದಲ್ಲಿ ಇದ್ದೆವು. ನಂತರ ಅಲ್ಲಿಂದ ನೂಂಗ್ ನಾಚ್ ದ್ವೀಪಕ್ಕೆ ಹೋದೆವು.ಅಲ್ಲಿ ಸಮುದ್ರ ತಳದಲ್ಲಿ ನಡೆಯುವ ಅವಕಾಶ ಮಾಡಲಾಗಿತ್ತು.ನಮ್ಮ ಪ್ಯಕಿ  ಪ್ರದೀಪನೊಬ್ಬನೇ ಭಾಗವಹಿಸಿದ.ತಲೆಗೆ ಭಾರವಾದ ಶಿರಸ್ತ್ರಾಣ.ಅದರೊಳಗೆ ಆಮ್ಲಜನಕ. ಸಮುದ್ರದಡಿಯಲ್ಲಿ ೩೦ ಅಡಿ ಕೆಳಗೆ ನಡೆ. ಬಗೆಬಗೆಯ ಮೀನುಗಳು.ಅವುಗಳಿಗೆ ತಿಂಡಿ ಹಾಕಬೇಕು.ಗುಂಪು ಗುಂಪಾಗಿ ಬರುವ ಮೀನುಗಳು ದೇಹವನ್ನೆಲ್ಲ ಮುತ್ತಿಡುತ್ತವೆ.ಸುಮಾರು ೨೦ ನಿಮಿಷದ ನಂತರ ಮೇಲ್ದಂಡೆಗೆ ಬರಬೇಕು.ಅನುಭವ ರುಚಿಯಾಗಿತ್ಟೆಂದು ತಿಳಿಸಿದ .ಅಲ್ಲಿಂದ ಕೊರಲ್ ದ್ವೀಪಕ್ಕೆ ಹೋದೆವು. ಅಲ್ಲಿ ಬಗೆಬಗೆಯ ದೋಣಿವಿಹಾರಗಲಿದ್ದವು  .ಆದರೆ ನಾವು ಯಾವುದರಲ್ಲಿಯೂ ಭಾಗವಹಿಸಲಿಲ್ಲ  . ಹಾಗೇ ಸಮುದ್ರಸ್ನಾನಮಾಡಿ ತೀರದಲ್ಲಿದ್ದ ಆರಾಮ ಕುರ್ಚಿಯಲ್ಲಿ ವಿರಮಿಸಿದೆವು. ಸಿಹಿಯಾದ ಎಳನೀರನ್ನು ಕುಡಿದೆವು.ಅಲ್ಲಿ ಮದ್ಯಾನ್ಹ ೧ ಗಂಟೆಯವರೆಗೂ ಇದ್ದು ನಂತರ ಪತ್ತಯದ ವಸತಿಗ್ರಿಹಕ್ಕೆ ವಾಪಸ್ಸಾದೆವು.ಕೊಠಡಿಯಲ್ಲಿ ಬಟ್ಟೆ ಬದಲಾಯಿಸಿ ಊಟಕ್ಕೆ ಬಂದು ಅಲ್ಲಿಂದ ತಾಯ್ ಸಾಂಸ್ಕೃತಿಕ ಪ್ರದರ್ಶನಕ್ಕೆ ಹೋದೆವು.ಪ್ರದರ್ಶನ ತುಂಬಾ ಚೆನ್ನಾಗಿತ್ತು.ಅಲ್ಲಿಂದ ಆನೆಗಳ ಸರ್ಕಸ್  ನೋಡಿ   ಟ್ರೋಪಿಕಾಲ್ ತೋಟದಲ್ಲಿ ಬಗೆಬಗೆಯ ತೈಲೆಂಡಿನ   ವಿಶಿಷ್ಟವಾದ   ಪುಷ್ಪರಾಶಿಯನ್ನು ಕಂಡು ಬೆರಗಾದೆವು.ಅಲ್ಲಿಂದ ಮಡಕೆಯ ಪ್ರದರ್ಶನ ನೋಡಿದೆವು.ಇಲ್ಲಿ ಹೂ ಪಾಟಿಕೆಗಳನ್ನು ವಿದವಿದವಾಗಿ ಜೋಡಿಸಲಾಗಿತ್ತು  . ಪ್ರದರ್ಶನ ತುಂಬಾ ಮನಮೋಹಕವಾಗಿತ್ತು.ರಾತ್ರಿ ಪತ್ತಯದಲ್ಲಿ ೯ ರ ವರೆಗೂ ಸುತ್ತಾಡಿದೆವು. ತೈ ಮಸಾಜ್ ಮಾಡಿಸಿಕೊಂದೆವು. ಊಟಮಾಡಿ ಮಲಗಿದೆವು.ರಾತ್ರಿ ಇಡೀ  ಕ್ರಿಸ್ಮಸ್ ನಗರದಲ್ಲಿ ಜೋರಾಗಿತ್ತು.  

೨೫-೧೨-೨೦೧೦  ಶನಿವಾರ ಕ್ರಿಸ್ಮಸ್

ಬೆಳಿಗ್ಗೆ ೮ ಗಂಟೆಗೆ ಕೊಠಡಿಯನ್ನು ಖಾಲಿ ಮಾಡಿ ಉಪಹಾರ ಮುಗಿಸಿ ಬಂಗಕೊಕನತ್ತ   ಪ್ರಯಾಣ ಬೆಳೆಸಿದೆವು.ದಾರಿಯಲ್ಲಿ ಪ್ರಪಂಚದಲ್ಲೇ  ಅದ್ವಿತೀಯವೆನಿಸಿದ ಅತಿ ಬ್ರಿಹತ್ತಾದ ಜೆಮ್ ಗ್ಯಾಲರಿಯನ್ನು ವೀಕ್ಷಿಸಿದೆವು ಇಲ್ಲಿ ಹರಳುಗಳನ್ನು ಭೂಮಿಯಿಂದ ಅಗೆಯುವುದರಿಂದ ಹಿಡಿದು ಅದನ್ನು ಸುಂದರವಾಗಿ ಕಡೆಯುವ ಕ್ರಮದವರೆಗೂ  ಪ್ರದರ್ಶನ ಏರ್ಪಡಿಸಿದ್ದರು.ಬಹಳ ಆಕರ್ಷಣೀಯವಾಗಿತ್ತು.ಮಳಿಗೆಯಲ್ಲಿ   ವಿವಿಧ ಬಗೆಯ  ಹರಳುಗಳನ್ನು ಖರೀದಿಗೆ ಇರಿಸಲಾಗಿತ್ತು .ಪುಷ್ಯ ರಾಗ, ಪಚ್ಚೆ, ಮುತ್ತು ಎಂಬಂತೆ ಬಗೆಬಗೆಯ ಹರಳುಗಳ ಆಭರಣಗಳು ಮೆಚ್ಚುವಂತಹುದಾಗಿದ್ದವು  . ನಾವು ಎರಡು ಮುತ್ತಿನ ಹಾರ ಖರೀದಿಸಿದೆವು.ಪತ್ತಯದಲ್ಲಿಯೇ ಮಧ್ಯಾನ್ಹದ ಊಟ ಮುಗಿಸಿ ಬಂಗಕೊಕಗೆ   ಪ್ರಯಾಣ ಬೆಳೆಸಿದೆವು. ತಯ್ಲಂದ್ ತಲಪಿದಾಗ ಸುಮಾರು ೪ ಗಂಟೆ. ನೇರವಾಗಿ ತಯ್ಲಂಡ್ನ ಅತ್ಯಂತ ಎತ್ತರದ ಹೋಟೆಲ್ ಆದ ಸ್ಕಯ್ ಬಾಲಿಯೋಕ್ಗೆ ಹೋದೆವು.ತುದಿಯಲ್ಲಿ ಸುತ್ತುವ ವೀಕ್ಷನಾಲಯದಿಂದ  ನಗರದ ಸೊಬಗನ್ನು ಸವಿದೆವು.ಅಲ್ಲಿಂದ ಮಲಗಿರುವ ಬುದ್ದನ ದೇವಾಲಯಕ್ಕೆ ಹೋದೆವು.ಸುಮಾರು ೪೦ ಅಡಿ ಎತ್ತರದ ಮಲಗಿರುವ ಬುದ್ದ ಅದ್ಬುತವಾಗಿತ್ತು.ದೇವಾಲಯದ ನಿರ್ಮಾಣ ಸೊಗಸಾಗಿತ್ತು.ತಯ್ಲಂದಿನ ವಿಶಿಷ್ಟವಾದ  ಶ್ಯಲಿಯಲ್ಲಿ   ನಿರ್ಮಿಸಲಾಗಿತ್ತು.ಸಂಜೆ ಬಂಗ್ಕೊಕ್ನ   ವ್ಯಾಪಾರ ಕೇಂದ್ರದಲ್ಲಿ ವ್ಯಾಪಾರ ಮುಗಿಸಿ ರಾತ್ರಿ ಊಟಮಾಡಿ ಹೂವರ್ದ್ ಸ್ಕ್ವಾರೆ ಎಂಬ ಹೋಟೇಲ್ನಲ್ಲಿ ತಂಗಿದೆವು.

೨೬-೧೨-೨೦೧೦ ಭಾನುವಾರ
 


ಪ್ರಯಾಣದ ಕೊನೆಯ ದಿನ. ಬೆಳಿಗ್ಗೆ ೮ ಗಂಟೆಗೆ  ಉಪಹಾರ ಮುಗಿಸಿ ಕೊಠಡಿ ಖಾಲಿ ಮಾಡಿದೆವು. ನಂತರ ಚಿನ್ನದ ಬುದ್ದ ದೇವಾಲಯಕ್ಕೆ ಹೋದೆವು. ಸುಮಾರು ೪೫೦೦ ಕೆ ಜಿ ಅಪ್ಪಟ ಚಿನ್ನದ ಮೂರ್ತಿ ಬೌದ್ದ ಸನ್ಯಾಸಿಯೊಬ್ಬರು ಬೆಳಗಿನ ವಿಶೇಷ   ಪೂಜೆ ಮಾಡಿದರು. ಪ್ರಸಾದ ನೀಡಿದರು.ಅಲ್ಲಿ ಪ್ರಾರ್ಥನೆ ಮುಗಿಸಿ ೧೦ ಗಂಟೆಯ ವೇಳೆಗೆ ಸಫಾರಿ ಪ್ರಪಂಚ ತಲಪಿದೆವು.ಅಲ್ಲಿ ಬಗೆಬಗೆಯ ಪ್ರದರ್ಶನಗಳಿದ್ದವು   . ಸುಮಾರು ೯ ಪ್ರದರ್ಶನಗಳ ಪ್ಯಕಿ  ೪ ಕ್ಕೆ ಮಾತ್ರ ಪ್ರವೇಶ ಪಡೆದಿದ್ದೆವು.ಊಟಕ್ಕೆ ಪೂರ್ವ ೩ ಪ್ರದರ್ಶನಗಳು ಊಟದನಂತರ ಮತ್ತೊಂದು ಪ್ರದರ್ಶನ. ಊಟಕ್ಕೆ ಪೂರ್ವ ಚಿಮ್ಪಾಂಜಿಗಳ ಬಾಕ್ಷಿನ್ಗ  , ಸಮುದ್ರ ಸಿಂಹದ ಪ್ರದರ್ಶನ. ನಂತರ ಕೌಬಾಯ್ ಸ್ಟಂಟ್  ಎಂಬ ೩ ಪ್ರದರ್ಶನಗಳಿದ್ದವು.ಸಮುದ್ರ ಸಿಂಹದ ಪ್ರದರ್ಶನ ಅತ್ತ್ಯಂತ   ಕುತೂಹಲವಾಗಿತ್ತು . ಕೌಬಾಯ್ ಸ್ಟಂಟ್  ಕಳಪೆಯಾಗಿತ್ತು.ಅಲ್ಲಿಯೇ ಇದ್ದ ಭೋಜನಾಲಯದಲ್ಲಿ ಊಟಮಾಡಿದೆವು. ನಂತರ ೧-೩೦ ಗಂಟೆಗೆ ಡಾಲ್ಫಿನ್ ಪ್ರದರ್ಶನ ನೋಡಿದೆವು.ಪ್ರದರ್ಶನ ಚೆನ್ನಾಗಿತ್ತು. ಅದರಲ್ಲಿ  ಒಂದು ಮರಿ ಶಾರ್ಕ್ ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು .ನಂತರ ಸಫಾರಿ ಪಾರ್ಕಗೆ ತೆರಳಿದೆವು.ಅದೊಂದು ಓಪನ್ ಜೂ  ಇಲ್ಲಿ ನಮ್ಮ ಬಸ್ಸಿನಲ್ಲಿಯೇ  ಪ್ರಯಾಣಿಸಿದೆವು.ಜಿರಾಫೆಗಳು ,ಜೀಬ್ರಾಗಳು ,ಕರಡಿಗಳು,ಗುಳ್ಳೆನರಿಗಳು,ಬೈಸನ್ ಗಳು  ,ಬಗೆಬಗೆಯ ಪಕ್ಷಿಗಳು , ಹುಲಿಗಳು, ಚಿರತೆಗಳು,ಸಿಂಹಗಳು ಇತ್ಯಾದಿಗಳು ಕಂಡವು.ಸಂಜೆ ೬ ಗಂಟೆಯ ವೇಳೆಗೆ  ವಿಮಾನ ನಿಲ್ದಾಣದತ್ತ ಹೊರಟೆವು.ವಿಮಾನ ರಾತ್ರಿ ೯-೩೦ಕ್ಕೆ ಇತ್ತು.ಕಿಟಕಿಯಾಚೆಯಿಂದ ತಾಯ್ಲಂಡ್ನ ರಾತ್ರಿಯ ದೃಶ್ಯ ಮನಮೋಹಕವಾಗಿತ್ತು.ಬೆಂಗಳೂರು ತಲಪಿದಾಗ ರಾತ್ರಿ ೧೧-೫೦ ಗಂಟೆ.ಎಲ್ಲರಿಗೂ ವಿದಾಯ ತಿಳಿಸಿ ಮನೆ ತಲಪಿದಾಗ ರಾತ್ರಿ ೧ ಗಂಟೆ. ಮುಗಿದಿತ್ತು ನಮ್ಮ ವಿದೇಶ ಪ್ರವಾಸ.

ಇತಿ ಶಂ.

ಕೆ.ವಿ.ಶ್ರೀನಿವಾಸ ಪ್ರಸಾದ್