Monday, February 14, 2011

ಶುಭಾಶಯ ಪ್ರೀತಿಯ ಕುಮಾರನಿಗೆ


with my loved son in flight to singapore

ಶುಭಾಶಯ ಪ್ರೀತಿಯ ಕುಮಾರನಿಗೆ
ಇಪ್ಪತ್ತೈದು ತುಂಬಿರುವ ಶುಭ ದಿನದಲ್ಲಿ
ಬಾಳು ನೂರ್ಕಾಲ ಸಂತಸದಿ ಸುಖದಲಿ
ಹರಸುತಿಹೆನು ನಿನ್ನೊಲುಮೆಯ ತಂದೆ 


ಜೀವನವು ಒಂದು ದೀರ್ಘಪಯಣ
ಬರುವುದದರಲಿ ಹಲವಾರು ತೊಡರುಗಳು
ಎದುರಿಸು ಧೃತಿಗೆಡದೆ ನೆನೆಯುತ ದೇವರನು
ಹರಸುತಿಹೆನು ನಿನ್ನೊಲುಮೆಯ ತಂದೆ

 ಮರೆಯದಿರೆಂದೆಂದು ತಂದೆತಾಯಿಯರನು
ಪ್ರೀತಿಯೆರೆದ ಹಿರಿಯಕ್ಕ ಹೇಮಳನು
ಸನ್ನಡತೆಯ ಮೈಗೂಡಿಸಿ ಉಪಕರಿಸು ಆರ್ತರನು
ಹರಸುತಿಹೆನು ನಿನ್ನೊಲುಮೆಯ ತಂದೆ 


ಗಳಿಕೆಯನು ವಿನಿಯೋಗಿಸು ಸತ್ಕಾರ್ಯಕೆಬೇಡವದು ಎಂದೆಂದೂ ದುರ್ಮಾರ್ಗಕೆ
ಅನುಭವಿಸು ಅದನು ದೀನರಲಿ ಹಂಚುತಲಿ
ಹರಸುತಿಹೆನು ನಿನ್ನೊಲುಮೆಯ ತಂದೆ 


ಬರಲಿ ಮನವರಿತು ನಡೆಯುವ ಸರಿಸತಿಯು
ಕೀರ್ತಿಯನು ತರುವ ಸುತಸುತೆಯರೆರಡು
ಮೂಡಿರಲಿ ಹರುಷ ಬಾಳಿನುದ್ದಕು, ಮರೆಯದಿರು
ಜಗವು ದೇವನದು ಬರಿಯ  ಬಾಡಿಗೆಗಿರುವೆವು ನಾವು 


ನೀಡುವವನು ಅವನು ಸೇವಿಸು ಅವನದೆಂದು
ತ್ರಿಪ್ತಿಯಿರಲಿ ಗಳಿಕೆಯಲಿ, ಸಂತಸದಲಿ
ಬಯಸದಿರು ಪರರ ವಸ್ತುವನು, ಸಿರಿಯನು
ಹರಸುವೆನು ನೂರ್ಕಾಲ ಬಾಳು ಸಂತಸದೆಂದೆಂದು


ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್ 
Mob:9844276216
E-Mal:sreenivasaprasad.kv@gmal.com


 

No comments:

Post a Comment