Wednesday, February 9, 2011

ಸುಧರ್ಮಾ ಹುಟ್ಟು ಹಬ್ಬಕ್ಕೆ ಶುಭಾಶಯಗಳು

ಸುಧರ್ಮಾ ಹುಟ್ಟು ಹಬ್ಬಕ್ಕೆ ಶುಭಾಶಯಗಳು    ಮೊಳಗಲಿ ಮೊಳಗಲಿ ಮೊಳಗಲಿ
ಸಂಸ್ಕೃತದ ಕಹಳೆಯು ಅನವರತ  ಮೊಳಗಲಿ

ಸಂಸ್ಕೃತವೇ ತಾಯ್ನುಡಿಯು ಭಾಷೆ ಎಲ್ಲರದು
ಮಗುವಿನ ಮೊದಲ ನುಡಿಯು ಮಾ ಎಂಬುದು
ಮರೆಯದಿರಿ ಸಂಸ್ಕೃತಿಯ ತಳಹದಿಯು ಸಂಸ್ಕೃತವು
ಉಳಿದರೆ ಅದು ಶಾಶ್ವತವು ಭವ್ಯ ಪರಂಪರೆಯು

ಮರೆತರು ಕೆಲವರು ಸಂಸ್ಕೃತವೇ ಜೀವನುಡಿಯೆಂದು
ಗುಡುಗಿದರದು ಮೃತ ಭಾಷೆಯೆಂದು ಅಜ್ಞಾನದಲಿ
ಮನನೊಂದರು ತಂದೆಯಂದು ಪಣತೊಟ್ಟರು
ಪಸರಿಸುವೆ ಸಂಸ್ಕೃತದ ಕಂಪನು ಜೀವನಾಡಿಯೆಂದು

ಮೂಡಿತ್ತಂದು ಭಾವನೆ ಸಂಸ್ಕೃತ ಕಟಿನವೆಂದು
ಪಂಡಿತರ ಭಾಷೆಯದು ಪಾಮರರಿಗಲ್ಲವೆಂದು
ವೇದ ಭಾಷೆ ದ್ವಿಜರ ಪಂಡಿತರ ಮಡಿಭಾಷೆಯೆಂದು
ಅಳಿಸಲಪನಂಬಿಕೆ ಮಾಧ್ಯಮ ಪತ್ರಿಕೆಯೆಂದರು

ತಂದೆತಂದರಾದಿಸಂಚಿಕೆ ಎಪ್ಪತ್ತರದಶಕದಲಿ
ತುಂಬಿಹುದು ನಲವತ್ತಿಂದು ಅನುಜನಂಕಿತದಲಿ
ಹರಸುವೆನು ಆನಂದದಿ ಚಿರಕಾಲ ಇರಲೆಂದು
ಪಸರಿಸುತಾ ಕಂಪನು ದೇಶವಿದೆಶಗಳಲಿ

ಬೇಕು ಸಹಕಾರ ಸರಕಾರ ಅಭಿಮಾನಿಗಳೆಲ್ಲರ
ಉಳಿಸಲು ಚಿರಕಾಲ ಸುಧರ್ಮಾ ಪತ್ರಿಕೆಯನು 
ಧನರೂಪ ಅನುರೂಪ ಲೇಖನರೂಪಗಳಲಿ
ಹರಸಿರಿ ಅನುಕಾಲ ಚಿರಕಾಲ ಜಗದಿ ಬೆಳಗಲೆಂದು


-ರಚನೆ:ಕೆ.ವಿ.ಶ್ರೀನಿವಾಸ ಪ್ರಸಾದ್
 



  



 

No comments:

Post a Comment