goddess Aravindanayaki amma at Kalale |
ಹೊರಬಂದೊಡನೆ ಚೀರಿದೆ ಅಮ್ಮಾ ಎಂದು
ಅರಿಯದೆ ಹಸಿವೆಂದು , ನೀಡಿದಳು ಹಾಲಜೇನು
ತಾಯಲ್ಲವೆ ಮೊದಲ ದೈವ ಬಾಳ ಪಯಣದಲಿ
ಅಡಿಯಿಡಲು ಮೊದಲ ಹೆಜ್ಜೆ, ನಡೆಸಿದಳು ಕೈ ಹಿಡಿದು
ಚೀರಿದಳು ನಾ ಜಾರಿ ಕೆಳಗುರುಳಿ ಘಾಸಿಯಾಗಳು
ಸಂತೈಸಿದಳು ಬಳಿಯಿದ್ದು , ಕಲಿಸಿದಳು ನಡೆವ ಹಾದಿಯನು
ತಾಯಲ್ಲವೆ ಮೊದಲ ದೈವ ಬಾಳ ಪಯಣದಲಿ
ಕಲಿಸಿದಳು ಅಕ್ಷರವ ಬೋಧಿಸುತ ಸತತ ಸನ್ನಡತೆಯ
ರೂಪಿಸಿದಳು ಜೀವನವ ಎದಿರಿಸುವ ಕಲೆಯಲ್ಲಿ
ಹಿಗ್ಗಿದಳು ನಾ ಪಡೆದ ಮೊದಲ ಪದವಿಯ ಸಂಭ್ರಮದಲಿ
ತಾಯಲ್ಲವೆ ಮೊದಲ ದೈವ ಬಾಳ ಪಯಣದಲಿ
ಅರಳಿದೆನು ಕಲಿತ ವಿದ್ಯೆಯ ಕಂಪನು ಪಸರಿಸುತ
ಗಳಿಸಿದೆನು ಸಂಪದವ ನೆನೆಯುತಾ ತಾಯ ಹಿತನುಡಿಯ
ಪಡೆದೆನು ಒಲವಿನ ಸತಿಯ ಮರೆಯದಲೆ ತಾಯ ಸಿಹಿಮುತ್ತ
ತಾಯಲ್ಲವೆ ಮೊದಲ ದೈವ ಬಾಳ ಪಯಣದಲಿ
ಅರಳಿಹವು ಹೂವೆರಡು ಹೇಮದೀಪಗಲೆಂದು
ನುಡಿಯುತಿರುವೆ ಹಿತನುಡಿಯ ಮರೆಯದಿರಿ ತಾಯಿಯ
ಕೊನೆತನಕ ನಿಮ್ಮೊಲುಮೆಯ ಜೇನಹಾಲನುನಿಸುತ
ತಾಯಲ್ಲವೆ ಮೊದಲ ದೈವ ಬಾಳ ಪಯಣದಲಿ
ರಚನೆ: ಕೆ.ವಿ ಶ್ರೀನಿವಾಸ ಪ್ರಸಾದ್ Mob:9844276216
Please send your comments to:
E-Mail;sreenivasaprasad.kv@gmail.com
No comments:
Post a Comment