Thursday, February 10, 2011

ಆಗುವನು ಉತ್ತಮ ಸ್ನೇಹಿತನು
ಸನ್ಮಾರ್ಗವ,ಸನ್ನಡತೆಯ ತಿಳಿಸುವವನು
ಬಯಸುವವನೆಂದಿಗು ಉನ್ನತಿಯ
ಹಂಚಿ ಹರಸುವನು ಸಿರಿ ವೇದನೆಯ

ಜಗತ್ತಿಗೆ ಬೆಳಕು ಆಮ್ಲವ ನೀಡಿ
ದಾಹವನು ಅಡಗಿಸಲು ನೀರ ನೀಡಿ
ಆರೋಗ್ಯ ತುಂಬಿಸಲು ಶಕ್ತಿ ಕಿರಣವ ನೀಡಿ
ಹರಸುವ ಆದಿತ್ಯನೇ ಆದಿಮಿತ್ರನು

ಬಾಲ್ಯದಲಿ ಹಾಲ ಕುಡಿಸಿ ಕಲಿಸಿ ಹೆಜ್ಜೆಯ
ತೋರುತಲಿ ಮಾರ್ಗವ, ಪೋಷಿಸಿ  ಉದರವ
ವೇದನೆಯಲಿ ಮರುಗಿ ಸಂತಸದಿ ನಲಿಯುವ
ತಾಯಿಯೇ ದಿನದಾದಿಯ ಮೊದಲ ಸ್ನೇಹಿತೆಯು

ಕಲಿಸಿ ಉತ್ತಮ ವಿದ್ಯೆಯ, ನೀಡಿ ಸುಜ್ಞಾನವ
ಬಾಳಿನ ಹಾದಿಯಲಿ ಜ್ಯೋತಿಯ ಬೆಳಗಿಸಿ
ನೋವುನಲಿವಿನಲಿ ತನ್ನದೆಲ್ಲವ ನೀಡಿ
ನಡೆಸುವ ತಂದೆಯೇ ಬಾಳಿನ ಸನ್ಮಿತ್ರನು

ಇಟ್ಟು ಸಪ್ತಪದಿಯ ಬಯಸಿ ಗೆಳೆತನವ
ಜೀವದಂತ್ಯದವರೆಗೂ ಒಂದಾಗಿ ಬಾಳುವ
ಸತಿಗೆ ಪತಿ ಗೆಳೆಯ ಪತಿಗೆ ಸತಿ ಸಖಿಯು
ಸ್ನೇಹವದು ಶಾಶ್ವತವು ಕಲೆತು ಬಾಳ್ವೆ ನಡೆಸೆ

ಮರೆಯದಿರಿ ಬಾಳಿನಲಿ ಸನ್ಮಿತ್ರ ಶ್ರೀಪತಿಯು
ಆಗುವನು ಬಾಳ ಬೆಳಕು ಭಜಿಸೆ ಮನದಾಳದಲಿ
ಕಳೆವನು ಕಷ್ಟಗಳೆಲ್ಲವನು ಅರಿತು ಆರಾಧಿಸಲು
ಬಲಿಗೋಡಿಬಂದು ತೊರೆದು ವೈಕುಂಟವನು 


ರಚನೆ: ಶ್ರೀನಿವಾಸ ಪ್ರಸಾದ್.ಕೆ.ವಿ
ನಂ  ೧ಎ : ಡೀ ಎನ್ಕ್ಲೇವ್ ,ಮಾರುತಿನಗರ,
ಸಹಕಾರನಗರ ಅಂಚೆ
ಬೆಂಗಳೂರು-೯೨
ಫೋನ್: 9844276216  
 

No comments:

Post a Comment