ಮುಂಗಾರಿಗಿದೋ ಸುಸ್ವಾಗತ ತರುತ ಹರುಷ
ಬೇಸಿಗೆಯ ಉರಿಬಿಸಿಲ ಬೇಗೆಯಲಿ
ಕಾದು ಕೆಂಡವಾಗಿಹುದು ಧರೆ ಉರಿದು
ತಾಪದಲಿ ಬೆಂದಿಹರು ಜನತೆ ಮುಗಿಲನೋದುತ
ಮುಂಗಾರಿಗಿದೋ ಸುಸ್ವಾಗತ ತರುತ ಹರುಷ
ಕವಿದಿಹುದು ಕಾರ್ಮೋಡ ಗಗನದಲಿ
ಬೀಸಿಹುದು ಚಂಡಮಾರುತ ದಿಗಂತದಲಿ
ಓಲಾದುತಿಹುದು ಮರಗಿಡಗಳು ಸಂತಸದಿ
ಮುಂಗಾರಿಗಿದೋ ಸುಸ್ವಾಗತ ತರುತ ಹರುಷ
ತಂಪೀರಲು ಜಿನುಗಿಹುದು ಮಳೆಹನಿ
ನಲಿದಿರಲು ನೆನೆಯುತ ಮಕ್ಕಳಾದಿಯಾಗಿ
ಕಂಪ ಬೀರುತಿಹುದು ಭುವಿ ತಮ್ಪಪಡೆಯುತ
ಮುಂಗಾರಿಗಿದೋ ಸುಸ್ವಾಗತ ತರುತ ಹರುಷ
ಹಿಡಿದು ನೇಗಿಲ ಭೂಸುತರು ಧಾವಿಸಿಹರು
ಹದವ ಮಾಡುತ ಮೃತ್ತಿಕೆಯ ಮಳೆಹನಿಯಲಿ
ವನಿತೆಯರು ನೆಡುತಿಹರು ಹಸಿವ ನೀಗುವ ಸಸಿಯ
ಮುಂಗಾರಿಗಿದೋ ಸುಸ್ವಾಗತ ತರುತ ಹರುಷ
ಓಡಿಹುದು ಕತ್ತಲೆಯ ಕರಿದಿನಗಳು
ತುಂಬಿರಲು ಬಹುತೇಕ ಜಲಾಶಯಗಳು
ಉತ್ಪಾದಿಸುತ ವಿದ್ಯುಚ್ಚಕ್ತಿಯ ಸಾಮರ್ಥ್ಯಪೂರ್ಣ
ಮುಂಗಾರಿಗಿದೋ ನಲ್ಮೆಯ ಸುಸ್ವಾಗತ
ಬೇಡ ವ್ಯರ್ಥಾಲಾಪ ಚರಂಡಿಗಳು ತುಂಬಿಹವೆಂದು
ಶಪಿಸುತಾ ಮಳೆಹನಿಯ ಬಾರದಿರಲೆಂದು
ಬಹುಜನಹಿತಾಯ ಮುಂಗಾರುಮಳೆಯು ತಿಳಿದು
ಸ್ವಾಗತಿಸೋಣ ಮುದದಿ ಮುಂಗಾರು ಮಳೆ ಹನಿಯ
--ರಚನೆ: ಕೆ ವಿ ಶ್ರೀನಿವಾಸ ಪ್ರಸಾದ Mob:9844276216
E-Mail:sreenivasaprasad.kv@gmail.com
ಕಾದು ಕೆಂಡವಾಗಿಹುದು ಧರೆ ಉರಿದು
ತಾಪದಲಿ ಬೆಂದಿಹರು ಜನತೆ ಮುಗಿಲನೋದುತ
ಮುಂಗಾರಿಗಿದೋ ಸುಸ್ವಾಗತ ತರುತ ಹರುಷ
ಕವಿದಿಹುದು ಕಾರ್ಮೋಡ ಗಗನದಲಿ
ಬೀಸಿಹುದು ಚಂಡಮಾರುತ ದಿಗಂತದಲಿ
ಓಲಾದುತಿಹುದು ಮರಗಿಡಗಳು ಸಂತಸದಿ
ಮುಂಗಾರಿಗಿದೋ ಸುಸ್ವಾಗತ ತರುತ ಹರುಷ
ತಂಪೀರಲು ಜಿನುಗಿಹುದು ಮಳೆಹನಿ
ನಲಿದಿರಲು ನೆನೆಯುತ ಮಕ್ಕಳಾದಿಯಾಗಿ
ಕಂಪ ಬೀರುತಿಹುದು ಭುವಿ ತಮ್ಪಪಡೆಯುತ
ಮುಂಗಾರಿಗಿದೋ ಸುಸ್ವಾಗತ ತರುತ ಹರುಷ
ಹಿಡಿದು ನೇಗಿಲ ಭೂಸುತರು ಧಾವಿಸಿಹರು
ಹದವ ಮಾಡುತ ಮೃತ್ತಿಕೆಯ ಮಳೆಹನಿಯಲಿ
ವನಿತೆಯರು ನೆಡುತಿಹರು ಹಸಿವ ನೀಗುವ ಸಸಿಯ
ಮುಂಗಾರಿಗಿದೋ ಸುಸ್ವಾಗತ ತರುತ ಹರುಷ
ಓಡಿಹುದು ಕತ್ತಲೆಯ ಕರಿದಿನಗಳು
ತುಂಬಿರಲು ಬಹುತೇಕ ಜಲಾಶಯಗಳು
ಉತ್ಪಾದಿಸುತ ವಿದ್ಯುಚ್ಚಕ್ತಿಯ ಸಾಮರ್ಥ್ಯಪೂರ್ಣ
ಮುಂಗಾರಿಗಿದೋ ನಲ್ಮೆಯ ಸುಸ್ವಾಗತ
ಬೇಡ ವ್ಯರ್ಥಾಲಾಪ ಚರಂಡಿಗಳು ತುಂಬಿಹವೆಂದು
ಶಪಿಸುತಾ ಮಳೆಹನಿಯ ಬಾರದಿರಲೆಂದು
ಬಹುಜನಹಿತಾಯ ಮುಂಗಾರುಮಳೆಯು ತಿಳಿದು
ಸ್ವಾಗತಿಸೋಣ ಮುದದಿ ಮುಂಗಾರು ಮಳೆ ಹನಿಯ
--ರಚನೆ: ಕೆ ವಿ ಶ್ರೀನಿವಾಸ ಪ್ರಸಾದ Mob:9844276216
E-Mail:sreenivasaprasad.kv@gmail.com
No comments:
Post a Comment