ಸಿಂಗಪುರ ಮಲಯ ತೈಲಂಡ್ ಪ್ರವಾಸ ಪ್ರಥಮ ದಿವಸದ ನೋಟ -೧೮ ರ ರಾತ್ರಿ
ಬಹುದಿನದ ಅಪೇಕ್ಷೆಯ ದಿನ ಸಮೀಪಿಸಿತು .ಕೊನೆಗೂ ವಿದೇಶ ಪ್ರವಾಸ ಮಾಡುವ ಯೋಗ ದೊರಕಿತ್ತು. ಸಂಭ್ರಮವೇ ಸಂಭ್ರಮ ಸಡಗರ. ಬಟ್ಟೆಗಳ ಖರೀದಿ , ಚಪ್ಪಲಿ ಸ್ವೆಟರ್ ಆಯ್ಕೆ. ಹೀಗೆ ಅಂತರ ರಾಷ್ಟ್ರ ವಿಮಾನ ಪ್ರಯಾಣ ನಿಯಮಗಳ ಅನ್ವಯ ಪ್ರತಿ ಪೆಟ್ಟಿಗೆಯು ೨೦ kg ಮೀರುವಂತಿರಲಿಲ್ಲ.ಹೀಗಾಗಿ ಕೊಂಡೊಯ್ಯುವ ಬಟ್ಟೆಗಳು ಮಿತವಾಗಿಯೇ ಇರಬೇಕಿತ್ತು. ಆಯ್ಕೆ ಕಟಿನವಾಗಿತ್ತು . ಅಂತು ಕೊನೆಯ ನಿಮಿಷದವರೆಗೂ ಅಳೆದು ಸುರಿಯುವ ಕೆಲಸ ನಡೆದಿತ್ತು.ನಮ್ಮ ಪ್ರಯಾಣದ ಆಯೋಜಕರಾದ ಕೇಸರಿ ಟ್ರಾವೆಲ್ಸ್ ಕೂಡ ಬಹಳ ನಿರ್ದೇಶನಗಳನು ಸಲಹೆಗಳನು ಕೊಟ್ಟಿತ್ತು. ಹೀಗಾಗಿ ಎಲ್ಲವನ್ನು ಅಚ್ಹುಕಟ್ಟಾಗಿ ಮುಗಿಸಿದೆವು.ಕ್ಯಾಬಿನ್ ಬಾಗಿನಲ್ಲಿ ಅತ್ಯಂತ ಆವಶ್ಯಕ ವಸ್ತುಗಳನು , ಕೈ ಚೀಲದಲ್ಲಿ ಪಾಸ್ ಪೋರ್ಟ್ ವಿಮಾನ ಟಿಕೆಟ್ ಇತ್ಯಾದಿಗಳನು ಸೇರಿಸಿದೆವು.ವಿಮಾನ ಮದ್ಯರಾತ್ರಿ ಒಂದು ಗಂಟೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಾಂಗ್ಕೊಕ್ ಗೆ ಹೊರಡುವುದರಲ್ಲಿತ್ತು. ನಿಯಮಾನುಸಾರ ಮೂರು ಗಂಟೆ ಮೊದಲು ನಿಲ್ದಾಣ ತಲುಪಬೇಕಿತ್ತು. ೮-೩೦ ಗಂಟೆಗೆ ಕ್ಯಾಬ್ ಬಂತು. ಊಟಮಾಡಿ ಸಿದ್ದವಾಗಿದ್ದೆವು. ಸುಮಾರು ೪೦ ನಿಮಿಷದಲ್ಲಿ ನಿಲ್ದಾಣ ತಲಪಿದೆವು.ಜೊತೆಯಲ್ಲಿ ವಿಮಾನ ನಿಲ್ದಾಣದವರೆಗೂ ಮಗಳು, ಅಳಿಯ ಬಂದರು.
ನಿಲ್ದಾಣದಲ್ಲಿ ಪ್ರಯಾಣದ ಮಾನೆಜೆರ್ ಮೊಹುಲ್ ಎಲ್ಲರನು ಉದ್ದೇಶಿಷಿ ನಿರ್ದೇಶನಗಳನು ನೀಡಿದರು.ಕೆಲವು ತಿಂಡಿಗಳನು, ಕಾಪ್ ಮತ್ತು ರಯನ್ ಕೊಟುಗಳನು ನೀಡಿದರು.ಅವುಗಳನ್ನು ಕ್ಯಾರೀಜೆ ಬ್ಯಾಗಿನಲ್ಲಿ ಇರಿಸಿ ಬೀಗ ಹಾಕಿದೆವು. ನಿಲ್ದಾಣದೊಳಗೆ ಪ್ರಥಮವಾಗಿ ಪಾಸ್ ಪೋರ್ಟ್ ತಪಾಸಣೆ, ಸೀಟ್ ನಂಬರ್ ನೀಡುವಿಕೆ. ಆದನಂತರ ನಮ್ಮ ಕ್ಯಾರೆಜೆ ಬ್ಯಾಗಿಗೆ ಟ್ಯಾಗ್ ಮಾಡಿ ಒಳಗೆ ಕಳುಹಿಸಲಾಯಿತು.ನಂತರದಲ್ಲಿ immigration ಪರಶೀಲನೆ, ರಕ್ಷಣಾ ಪರಿಶೋದನೆ, ಕ್ಯಾಬಿನ್ ಬ್ಯಾಗ್ ಮತ್ತಿತರ ಚೀಲಗಳ ಕ್ಷ-ರೆ ತಪಾಸಣೆ . ನಂತರ ವಿಶ್ರಮಿಸುವ ಸ್ಥಳದಲ್ಲಿ ವಿಮಾನಕ್ಕಾಗಿ ನಿರೀಕ್ಷಣೆ. ಕೊನೆಗೂ ಬಂತು ನಮ್ಮ ವಿಮಾನ. ಏನೋ ಒಂದು ಕುತೂಹಲ, ಕಾತುರ, ತವಕ.ನನ್ನ ಶ್ರೀಮತಿಗೆ ಮೊದಲ ವಿಮಾನ ಪ್ರಯಾಣ. ಗಗನ ಸಖಿಯರಿಂದ ನಲ್ಮೆಯ ಸ್ವಾಗತ.ನಮ್ಮ ಆಸನದಲ್ಲಿ ಕುಳಿತೆವು. ಪ್ರಯಾಣದ ನಿಯಮಾನುಸಾರ ಬೆಲ್ಟ್ ಕಟ್ಟಿಕೊಂಡೆವು.ಸರಿಯಾಗಿ ೧ ಗಂಟೆಗೆ ವಿಮಾನ ಗಗನಕ್ಕೆ ಚಿಮ್ಮಿತು.ಕಿಟಕಿಯಾಚೆಯಿಂದ ಬೆಂಗಳೂರಿನ ರಾತ್ರಿಯ ವಿಹಂಗಮ ನೋಟ ರೋಮಾಂಚನವೆನಿಸಿತು . ಕೆಲವೇ ಕ್ಷಣದಲಿ ಬಹು ಎತ್ತರದಲ್ಲಿ ಗಗನದಲ್ಲಿ ಹಾರುತಿದ್ದೆವು.ಸ್ವಾಗತ ಪಾನೀಯ , ರಾತ್ರಿ ಊಟ,ಬಿಸಿ ಕಾಫಿ,ಇತ್ಯಾದಿಗಳನಂತರ ಮಲಗಿದೆವು.ಸುಮಾರು ೩ ವರೆ ಗಂಟೆಯನಂತರ ಬೆಳಗಿನ ಜಾವ ೬-೧೫ ಗಂಟೆಗೆ (ಬ್ಯಾನ್ಗ್ಕೊಕ್ ಸಮಯ)(ಅದು ೨-೩೦ ಗಂಟೆ ಭಾರತದ ಸಮಯಕ್ಕಿಂತ ಮುಂದಿರುತ್ತದೆ) ಬ್ಯಾನ್ಗ್ಕೊಕ್ ತಲಪಿದೆವು.ಅದೊಂದು ಬ್ರಿಹತ್ ವಿಮಾನ ನಿಲ್ದಾಣ. ಇಲ್ಲಿಂದ ಪ್ರಪಂಚದ ಎಲ್ಲ ಕಡೆಗೆ ವಿಮಾನ ಸಂಪರ್ಕವಿದೆ.ಇಲ್ಲಿ ಸುಮಾರು ೩೬ ವಿಮಾನ ನಿಲ್ದಾಣಗಳಿವೆ.ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಹೋಗಲು ನಡೆಯುವ ಕಾನ್ವೇಯೋರ್ ಸೌಲಭ್ಯವಿದೆ.ಈ ಸುಂದರ ವಿಮಾನ ನಿಲ್ದಾಣದ ಹೆಸರು ಸುವರ್ಣ ಭೂಮಿ ವಿಮಾನ ನಿಲ್ದಾಣ. ವಿಮಾನ ನಿಲ್ದಾಣದ ಆವರಣದಲ್ಲಿ ಬಹಳ ದೊಡ್ಡದಾದ ಸಮುದ್ರ ಮಥನದ ಬೊಮ್ಬೆಗಳನು ಇರಿಸಲಾಗಿತ್ತು.ಸರ್ಪ ಸುತ್ತಿದ ಬೆಟ್ಟದ ಎಡಗಡೆ ದೇವತೆಗಳು,ಬಲಗಡೆ ರಾಕ್ಷಸರ ಗೊಂಬೆಗಳು ಆಕರ್ಷಕವಾಗಿದ್ದವು.ನಿಲ್ದಾಣದ ಸುತ್ತಲು ಕಾಲಾಡಿಸಿದೆವು.ಏಕೆಂದರೆ ನಮ್ಮ ಮುಂದಿನ ವಿಮಾನ ಸಿಂಗಪುರಕೆ ೮-೧೫ ಗಂಟೆಗೆ ಇತ್ತು.ನಾವು ಅಂದು ಸಿಂಗಪುರ ತಲಪಬೇಕಿತ್ತು .ನಿರೀಕ್ಷೆಯಂತೆ ವಿಮಾನ ಸಮಯಕ್ಕೆ ಬಂತು.ಸಿಂಗಪುರ ತಲಪಿದಾಗ ೧೧-೧೫ ಗಂಟೆ.
19.12.2010-ನಾ ಕಂಡ ವೈಭವದ ನಗರ ಸಿಂಗಪುರ
immigration ಮತ್ತು ರಕ್ಷಣಾ ತಪಾಸಣೆ ನಂತರ ನೇರವಾಗಿ ಊಟ ಮಾಡಲು ಚಿಕ್ಕ ಇಂಡಿಯಾ ಎಂದೇ ಖ್ಯಾತಿಯಾದ ಸಿಂಗಪುರದ ಒಂದು ಭಾಗಕ್ಕೆ ಹೋದೆವು.ಅಲ್ಲಿ ಭಾರತದ ಮೂಲದ ಒಂದು ಹೋಟೇಲ್ನಲ್ಲಿ ಊಟಮಾಡಿದೆವು .ನಂತರ ರೈಡೆರ್ಸ್ ವಸತಿಗ್ರಿಹ ತಲಪಿದೆವು . ನಂತರ ಸಂಜೆಯವರೆಗೆ ವಿಶ್ರಾಂತಿ ಪಡೆದೆವು.
ಸಿಂಗಪುರ ೭೪೬ ಚದರ ಕಿ ಮೀ ವಿಸ್ತೀರ್ಣದ ಒಂದು ಸಣ್ಣ ಸ್ವತಂತ್ರ ರಾಷ್ಟ್ರ. ಎರಡನೆಯ ಮಹಾಯುದ್ದದ ನಂತರ ಸ್ವಾತಂತ್ರ್ಯ ಪಡೆದ ಈ ರಾಷ್ಟ್ರ ಸುಮಾರು ೫ ದಶಕದಲ್ಲಿ ಮಹತ್ತರವಾದ ಪ್ರಗತಿ ಹೊಂದಿದೆ.ಸಣ್ಣ ಮೀನುಗಾರರ ಹಳ್ಳಿಯಾಗಿದ್ದ ಈ ಪ್ರದೇಶ ಇಂದು ಪ್ರಪಂಚದ ಅಗ್ರಮಾನ್ಯ ರಾಷ್ಟ್ರಗಳಲ್ಲೊಂದಾಗಿದೆ. ಪ್ರಪಂಚದ ೩ ನೇ ಅತಿ ಸುಂದರ ದೇಶವೆನಿಸಿದೆ.ಎಲ್ಲಿ ನೋಡಿದರು ಬ್ರಿಹತ್ತಾದ ಕಟ್ಟಡಗಳು, ಗಗನಚುಂಬಿ ಕಟ್ಟಡಗಳು.ಎಲ್ಲಕಿಂತ ಮಿಗಿಲಾಗಿ ಬಹಳ ಶುಬ್ರವಾದ ನಗರ. ಅಚ್ಚುಕಟ್ಟಾದ ರಸ್ತೆಗಳು,ವಾಹನಸಂಚಾರ,ಜನಜೀವನ.ಬಹಳ ಮೆಚ್ಚುವಂತಾಗಿದ್ದವು.
ಸಂಜೆ ನಗರ ವೀಕ್ಷಣೆ ಮತ್ತು ಶಾಪಿಂಗ್ ಗಾಗಿ ಚಿಕ್ಕ ಇಂಡಿಯಾ ಗೆ ನಡೆದೆವು.ಸಹ ಪ್ರಯಾಣಿಕರು ಶಾಪಿಂಗ್ ಗೆ ತೆರಳಿದರೆ ನಾವು ಅಲ್ಲಿಯೇ ಇದ್ದ ವೆಂಕಟೇಶ್ವರ ದೇವಾಲಯ ನೋಡಿದೆವು.ಅಂದು ಚಿನ್ನದ ರಥೋತ್ಸವ.ಬಹಳ ಮಂದಿ ಭಾರತೀಯರು ಸೇರಿದ್ದರು.ರಾತ್ರಿ ಊಟಮಾಡಿ ವಸತಿಗ್ರಿಹಕ್ಕೆ ಮರಳಿದೆವು.
೨೦-೧೨-೨೦೧೦-ಸೋಮವಾರ
ನಮ್ಮ ಪ್ರಯಾಣದ ಎರಡನೆಯ ದಿನ.ಬೆಳಿಗ್ಗೆ ಉಪಹಾರ ಮುಗಿಸಿ ನಗರಮದ್ಯದಲ್ಲಿದ್ದ ಬೋತಾನಿಕಾಲ್ ಗಾರ್ಡನ್ ಗೆ ಭೇಟಿ ನೀಡಿದೆವು.ಅಲ್ಲಿದ್ದ ನೂರಾರು ಬಗೆಯ ಪುಷ್ಪಗಳು, ಸಸಿಗಳು, ಗಿಡಗಳು ಆಕರ್ಷಕವಾಗಿದ್ದವು. ನಮ್ಮ ಜೊತೆಯಲ್ಲಿ ನಿಯೋಜಿಸಲ್ಪತ್ತಿದ್ದ ಗೈಡೆ ಮಿ. ಕೋ ತುಂಬಾ ಹ್ರಿದಯಂಗಮವಾಗಿ ವಿವರಣೆ ನೀಡಿದರು.ಅಲ್ಲಿ ಕೂಲ್ ಹೌಸ್ ಎಂಬ ಮಂಜು ಸುರಿಯುವ ಪುಷ್ಪ ಗೃಹ ನೋಡಿದೆವು.ಮನಮೋಹಕವಾಗಿತ್ತು.
ನಂತರ ಪ್ರಪಂಚದ ಅದ್ಬುತಗಳೊಂದಾದ ಮೇರಿ ಗೋ ರೌಂಡ್ ನಲ್ಲಿ ಒಂದು ಸುತ್ತು ಹಾಕಿದೆವು. ಇದು ೧೬೮ ಅಡಿ ಎತ್ತರದ ಚಕ್ರ.ಇದರ ಮೇಲ್ತುದಿಯಿಂದ ಇಡೀ ಸಿಂಗಪುರ ಮತ್ತು ಮಲೇಶಿಯಾ ದೇಶಗಳ ವಿಹಂಗಮ ನೋಟ ವಲ್ಲದೆ ದೂರದ ಇಂದೊನೆಸಿಯಾ ಕೂಡ ಕಾಣಸಿಗುತ್ತಿತ್ತು .ಸಮೀಪದ ಸಾಗರದಂಚಿನಲ್ಲಿ ನೂರಾರು ನೌಕೆಗಳು ಕಾಣುತಿದ್ದವು.ಸಿಂಗಪುರದ ಲಾಂಚನವೆಂದೇ ಪ್ರಖ್ಯಾತಿಯಾದ ಮರ್ಲಯನ್ ಅಂದರೆ ಅರ್ದ ಸಿಂಹ ಮತ್ತರ್ದ ಮೀನಿನ ಆಕಾರದ ದೇಹವುಳ್ಳ ವಿಚಿತ್ರ ಪ್ರಾಣಿಯ ಬೊಂಬೆಯನ್ನು ನೋಡಿದೆವು.ಹಿಂಬದಿಯಲ್ಲಿ ದೇಶದ ಪ್ರಮುಖ ವಾಣಿಜ್ಯ ಬ್ಯಾಂಕಗಳ ಬಹು ಮಹಡಿ ಕಟ್ಟಡಗಳನ್ನು ನೋಡಿದೆವು.ನಂತರ ಮದ್ಯಾನ್ಹದ ಊಟಮಾಡಿ ಮೌಂಟ್ ಫ್ಹೆಬೆರ್ ಗಿರಿಯತ್ತ ಚಲಿಸಿದೆವು.ಅಲ್ಲಿಂದ ಕೀಬಲ್ ಕಾರ್ ನಲ್ಲಿ ಸೇನತೋಸ ದ್ವೀಪಕ್ಕೆ ಹೋದೆವು.ಪ್ರಯಾಣ ರೋಮಾಂಚನವಾಗಿತ್ತು.ಗಾಳಿಯಲ್ಲಿ ತೆಲುವಂತಿತ್ತು.ಅಲ್ಲಿಂದ ಮೇಣದ ಸಂಗ್ರಹಾಲಯಕ್ಕೆ ಬೆಟಿನೀಡಿದೆವು. ಅಲ್ಲಿ ಆಳೆತ್ತರದ ಮೇಣದ ಬೊಂಬೆಗಳನ್ನು, ಸಿಂಗಪುರದ ಚರಿತ್ರೆಯನ್ನು ಬಿಂಬಿಸುವಂತೆ ಅಳವಡಿಸಲಾಗಿತ್ತು.ಒಂದು ಸಣ್ಣ ಮೀನುಗಾರರ ಹಳ್ಳಿಯಿಂದ, ಚೀನಾದೇಶದವರ ಬರುವಿಕೆಯಿಂದ ರಫ್ತು ಕೇಂದ್ರವಾಗಿ ಪರಿವರ್ತನೆ, ೧೯೪೫ ರಲ್ಲಿ ಸ್ವಾತಂತ್ರ, ಬ್ರಿಟೀಷರ ಸಹಕಾರದಿಂದ ಒಂದು ಬ್ರಿಹತ್ತಾದ ಕೈಗಾರಿಕಾನಗರವಾಗಿ ಪರಿವರ್ತನೆ, ವಾಣಿಜ್ಯ ಉದ್ಯಮಗಳ ಸ್ಥಾಪನೆ,ಇತ್ಯಾದಿಗಳನ್ನು ಸುಂದರವಾಗಿ ಬಿಂಬಿಸಲಾಗಿತ್ತು.ಸಾಂಸ್ಕೃತಿಕ ಚಟುವಟಿಕೆಗಳು, ಚೀನಾ, ಭಾರತ, ಪಾರ್ಸಿ ಮತ್ತು ಮುಸಲ್ಮಾನರ ಮದುವೆಯ ವೈಭವದ ದೃಶ್ಯಗಳು ಮನಮೋಹಕವಾಗಿದ್ದವು.ಅಲ್ಲಿಂದ ೪ ಡೀ ಚಿತ್ರ ಪ್ರದರ್ಶನ ನೋಡಿದೆವು .ಹೊಸ ಅನುಭವ ಮೂಡಿಸುವಂತಿದ್ದವ್ವು ಅಲ್ಲಿಂದ ನೆಲಮಾಳಿಗೆಯಲ್ಲಿ ಮೀನಿನ ಲೋಕ ನೋಡಿದೆವು .ಬಗಬಗೆಯ ಮೀನುಗಳು, ತಿಮಿಂಗಲಗಳು,ಜೆಲ್ ಮೀನುಗಳು,ಇತ್ಯಾದಿಗಳನ್ನು ಬಹಳ ಸಮೀಪದಿಂದ ನೋಡಿದೆವು.
ಅಲ್ಲಿಂದ ಕೇಬಲ್ ಕಾರ್ ನಲ್ಲಿ ವಾಪಸ್ಸಾದೆವು.ಸಂಜೆ ಸಮುದ್ರ ತೀರದಲ್ಲಿ ಒಂದು ಸಾಂಸ್ಕೃತಿಕ ನೃತ್ಯ ಪ್ರದರ್ಶನ "ಸಮುದ್ರ ಗೀತೆಗಳು"ಎಂಬ ಕಾರ್ಯಕ್ರಮಕ್ಕೆ ತೆರಳಿದೆವು.ಅದೊಂದು ಪ್ರಾಚೀನ ದ್ರಿಶ್ಯಾವಳಿಗಳು ಆಧುನಿಕ ತಂತ್ರಜ್ಞಾನ ಅಂದರೆ ಲೇಸರ್ ಪ್ರಯೋಗ, ನೀರಿನಚಿಲುಮೆಗಳು ಇತ್ಯಾದಿಗಳ ಸಂಗಮವಾಗಿತ್ತು.ಸಮುದ್ರದ ತೀರದಲ್ಲಿ ಜರುಗಿದ ಈ ಕಾರ್ಯಕ್ರಮ ಮಂತ್ರಮುಗ್ದರನ್ನಾಗಿಸಿತ್ತು .ಪ್ರದರ್ಶನದ ನಂತರ ರಾತ್ರಿ ಊಟ ಮಾಡಿ ವಸತಿಗ್ರಿಹಕ್ಕೆ ಮರಳಿದೆವು.
21-12-2010-ಮಂಗಳವಾರ : ಮಲೇಷ್ಯಾ ಪ್ರವಾಸ
ನಮ್ಮ ಪ್ರಯಾಣದ ಮೂರನೆಯ ದಿನ.ಸಿಂಗಪುರದಿಂದ ಮಲೇಷ್ಯಾ ದೇಶದತ್ತ ಪಯಣ. ಬೆಳಿಗ್ಗೆ ೮ ಗಂಟೆಗೆ ಉಪಹಾರ ಮುಗಿಸಿ ಅಂತರ ರಾಷ್ಟ್ರೀಯ ಬಸ್ನಲ್ಲಿ ಮಲೇಷ್ಯಾ ದೇಶದ ಕೌಳಲಂಪುರ್ನತ್ತ ಪ್ರಯಾಣ.ಗಾಡಿಯಲ್ಲಿ ಪಾಸ್ ಪೋರ್ಟ್ ತಪಾಸಣೆ, immigration ಪರಿಶೀಲನೆ, ರಕ್ಷಣಾ ಶೋದನೆ ನಂತರ ಬಸ್ ಪ್ರಯಾಣ ಮುಂದುವರಿಯಿತು.ಎರಡೂ ದೇಶಗಳ ನಡುವೆ ಸಮುದ್ರ. ನಡುವೆ ೧೦ ಕಿ ಮೀ ಉದ್ದದ ಸೇತುವೆ. ನಂತರ ರಸ್ತೆಯ ಇಕ್ಕೆಲೆಗಳಲ್ಲಿ ಪಾಂ ಮರಗಳ ಸಾಲು ಸಾಲು.ಮಲೇಶಿಯಾ ವಿಶ್ವದ ಅಗ್ರಮಾನ್ಯ ಪಾಂ ರಪ್ತು ಮಾಡುವ ದೇಶ. ಸುಮಾರು ೫ ಗಂಟೆ ಪ್ರಯಾಣದ ಮದ್ಯದಲ್ಲಿ ೧೧ ಗಂಟೆಗೆ ಸಣ್ಣ ಉಪಹಾರ.ಮಲೇಶಿಯಾ ಮುಸ್ಲಿಂ ರಾಷ್ಟ್ರ. ಕೌಲಾಲಂಪುರ್ ತಲಪಿದಾಗ ೧ ಗಂಟೆ.ಅಲ್ಲಿದ್ದ ಇಂಡಿಯನ್ ಹೋಟೇಲ್ನಲ್ಲಿ ಊಟಮಾಡಿದೆವು. ದಾರಿಯಲ್ಲಿ ಬಾತ ಗುಹೆಯಲ್ಲಿ ಅದ್ಭುತವಾದ ೬೫ ಅಡಿಯೆತ್ತರದ ಮುರುಗನ ಚಿನ್ನದ ಬಣ್ಣದ ವಿಗ್ರಹ ಆಕರ್ಷಣೀಯವಾಗಿ ಕಾಣುತಿತ್ತು.ಊಟದನಂತರ ಜೆಂತಿಂಗ್ ಉನ್ನತ ಭೂಮಿಯತ್ತ ಪಯಣ.ಬೆಟ್ಟದ ತಳದಲ್ಲಿ ಬಸ್ಸಿನಲ್ಲಿಯೇ ನಮ್ಮ ಲಗ್ಗೆಜಗಳನು ಬಿಟ್ಟು ಒಂದುದಿನದ ಮಟ್ಟಿನ ಬಟ್ಟೆ ಬರೆಗಳನು ಬೇರೊಂದು ಸಣ್ಣ ಕೈಚೀಲದಲ್ಲಿ ತೆಗೆದುಕೊಂಡು ಮುಂದಿನ ರೋಮಾಂಚನಕಾರಿ ಪ್ರಯಾಣಕ್ಕೆ ಸಿದ್ದವಾದೆವು.ಸುಮಾರು ೧೨ ಕಿ ಮೀ ಪಯಣ. ನೆಲಮಟ್ಟದಿಂದ ೩೬೦೦ ಅಡಿ ಎತ್ತರದ ಬೆಟ್ಟದ ತುದಿಗೆ ಕೇಬಲ್ ಕಾರ್ನಲ್ಲಿ ಪಯಣ. ಕೆಳಗೆ ದಟ್ಟ ಕಾಡು.ಸುತ್ತಲೂ ಮೋಡಗಳು. ನಡುವೆ ಕೇಬಲ್ ಕಾರ್. ಅತ್ಯಂತ ಕಡಿದಾದ ಮಾರ್ಗದಲ್ಲಿ ಹೋಗಬೇಕಿತ್ತು.೧೨ ಕಿ ಮೀ ದೂರವನ್ನು ಸುಮಾರು ೧ ಗಂಟೆಯಲ್ಲಿ ಕ್ರಮಿಸಬೇಕು.ಇದು ವಿಶ್ವದ ಅತ್ತ್ಯಂತ ವೇಗದ ಕೇಬಲ್ ಕಾರ್.ರೋಮಾಂಚನಕಾರಿಯಾಗಿತ್ತು.ಒಂದೆಡೆ ಕೇಬಲ್ ಕಾರ್ ಸುಮಾರು ೨೫೦೦ ಅಡಿಯಲ್ಲಿ ಕೆಲ ಕ್ಷಣ ನಿಂತಾಗ ಆತಂಕ.ಜೋರಾಗಿ ಆಕ್ರಂದನ.ದೇವರ ಸ್ಮರಣೆ. ಕೂಗು ಕೇಳಲು ಯಾರಿಲ್ಲ.ಕೆಲಕ್ಷಣದ ನಂತರ ಕೇಬಲ್ ಕಾರ್ ಚಲಿಸಲಾರಂಬಿಸಿದಾಗ ನಿಟ್ಟುಸಿರು.ಅದ್ಬುತವಾಗಿತ್ತು ಪ್ರಯಾಣ. ಬೆಟ್ಟದತುಡಿ ತಲಪಿದಾಗ ಸಂಜೆ ೫ ಗಂಟೆ.ವಿಶ್ವದ ಅತಿ ದೊಡ್ಡ ವಸತಿಗ್ರಿಹವೆನಿಸಿದ " ಫಸ್ಟ್ ವರ್ಲ್ಡ್ ಹೋಟೆಲ್"ನಲ್ಲಿ ಕೋಣೆ ಪಡೆಯಲು ಸುಮಾರು ೧ವರೆ ಗಂಟೆ ಕಾಯಬೇಕಾಯಿತು.ವಸತಿ ಗ್ರಿಹದಲ್ಲಿ ೬೧೧೮ ಕೋಣೆಗಳು ೨೪ ಮಹಡಿಗಳು.ಎರಡು ಗೋಪುರಗಳು. ಕೆಳಮಹಡಿಯಲ್ಲಿ ಸುಮಾರು ೨೦೦೦ ಅಂಗಡಿಗಳು/ಆಟಗ್ರಿಹಗಳು/ಪ್ರದರ್ಶನ ಆಗರಗಳು ಇತ್ಯಾದಿ. ಪ್ರಪಂಚದ ವಿಖ್ಯಾತ ಕ್ಯಾಸಿನೋ- ಜೂಜು ಗೃಹ ಕೂಡ ಇರುವುದು ಇಲ್ಲೇ. ಅಸ್ಟೆ ಅಲ್ಲ. ೪ನೇ ಮಹಡಿಯಲ್ಲಿ ಅತಿ ದೊಡ್ಡ ಉಪಹಾರ ಗೃಹ. ಇಲ್ಲಿ ವಿಶ್ವದ ಎಲ್ಲ ದೇಶಗಳ ವಿಶಿಷ್ಟ ಪೂರ್ಣ ತಿನಿಸುಗಳು ಲಭ್ಯ.ಒಂದೇ ಮಾತಿನಲ್ಲಿ ಹೇಳುವುದಾದರೆ ಅದೊಂದು ಅದ್ಭುತ ವಿಶ್ವ.ನಮಗೆ ಕೊನೆಯಲ್ಲಿ ದೊರೆತದ್ದು ೧೯ನೇ ಮಹಡಿಯಲ್ಲಿ ೧೦ ನೇ ಸಂಖ್ಯೆಯ ಕೊಠಡಿ.ಎಲ್ಲವನ್ನು ಒಳಗೊಂಡಿರುವ ಸುಸಜ್ಜಿತ ಕೊಠಡಿ.ಸ್ವಲ್ಪ ಸಮಯ ವಿರಮಿಸಿ ೮-೩೦ ಗಂಟೆಗೆ ಸರಿಯಾಗಿ ಭೋಜನಕ್ಕೆ ಹಾಜರಿರಬೇಕಿತ್ತು.ಊಟ ಬಹಳ ರುಚಿಯಾಗಿತ್ತು .ಮುಸ್ಲಿಂ ರಾಷ್ಟ್ರದಲ್ಲಿ ಬೆಟ್ಟದ ಮೇಲೆ ಭಾರತೀಯ ಸಸ್ಯಾಹಾರಿ ಭೋಜನ.ಊಹಿಸಲು ಅಸಾಧ್ಯವಾಗಿತ್ತು .ರುಚಿಯಾದ ಊಟದನಂತರ ಅಂಗಡಿಗಳನ್ನು , ಪ್ರದರ್ಶನಗಳನ್ನು ವೀಕ್ಷಿಸಿದೆವು ಇಡೀ ರಾತ್ರಿ ಮಳಿಗೆಗಳು ತೆರೆದಿರುವುದೆಂಬುದು ತಿಳಿದುಬಂತು.ಅದೊಂದು ವಿಸ್ಮಯ ಜಗತ್ತು. ಚಿಕ್ಕ ಚಡ್ಡಿಯ ಲಲನೆಯರು. ಘಮಘಮಿಸುವ ಪರಿಮಳ ದ್ರವ್ಯಗಳು. ಎಲ್ಲೆಲ್ಲೂ ಉತ್ಸಾಹ. ಉಲ್ಲಾಸ. ರಾತ್ರಿಯೆಂದು ಅನಿಸುತ್ತಿರಲಿಲ್ಲ. ರಾತ್ರಿ ೧೨ ಗಂಟೆಗೆ ಕೋಣೆಗೆ ಬಂದು ಮಲಗಿದೆವು.
೮ ಗಂಟೆಗೆ ಸರಿಯಾಗಿ ಬೆಳಗಿನ ಉಪಹಾರ . ನಂತರ ಅಂದಿನ ವೈಶಿಷ್ಟ್ಯ -ಬೆಟ್ಟದ ಮೇಲಿದ್ದ ಹೊರಾಂಗಣದ ವಿವಿಧ ಆಟಗಳು. ಮಕ್ಕಳಿಗೆ ಯುವಕರಿಗೆ ಅದೊಂದು ರೋಮಾಂಚಕ ಜಗತ್ತು.ವಯಸ್ಸಾದವರಿಗೆ ಯೌವನದ ನೆನಪುಗಳು.ರೋಲ್ಲರ್ ಕೋಸ್ಟರ್, ಸರ್ಪ ಸುತ್ತಿನ ವಿಹಾರ ಇತ್ಯಾದಿ ಆಟಗಳು . ನನ್ನ ಮಗನಿಗೆ ಖುಷಿಯೋ ಖುಷಿ.ಅವನಾಡಿದ ೫ ಆಟಗಳು. ನಾನು ಮತ್ತು ಮಡದಿ ಮಿನಿ ಟ್ರೈನ್ ಇತ್ಯಾದಿಗಳಲ್ಲಿ ರಮಿಸಿದೆವು.೧೨-೩೦ ಗಂಟೆಗೆ ಸರಿಯಾಗಿ ಊಟಕ್ಕೆ ಹಾಜರಿರಬೇಕಿತ್ತು.ಮತ್ತದೇ ಭವ್ಯ ಭೋಜನದ ನಂತರ ಕೇಬಲ್ ಕಾರ್ನಲ್ಲಿ ಕೌಲಾಲಂಪುರ್ ತಲಪಿದೆವು.ಸಂಜೆ ೪ ಆಗಿತ್ತು.ಅಂದಿನ ಮುಂದಿನ ಕಾರ್ಯಕ್ರಮ ನಗರ ವೀಕ್ಷಣೆ ಆಗಿತ್ತು. ಮೊಟ್ಟಮೊದಲು ಪೆಟ್ರೋನಾಸ್ ಎಂಬ ಖ್ಯಾತಿಯ ಜೋಡಿಗೊಪುರದ ಕಟ್ಟದದತ್ತ ನಡೆದೆವು. ೮೪ ಅಂತಸ್ತಿನ ಜೋಡಿ ಗೋಪುರ ೪೨ ಅಂತಸ್ತಿನಲ್ಲಿ ಎರಡು ಗೋಪುರಗಳನ್ನು ಸಂಪರ್ಕಿಸುವ ಸಂಪರ್ಕ ಸೇತುವೆ . ಇದರ ಒಡೆಯ ಒಬ್ಬ ಭಾರತೀಯ ಎಂಬುದು ಹೆಮ್ಮೆ. ಈ ಕಟ್ಟಡದಲ್ಲಿ ಒಂದು ತೈಲ ಕಂಪನಿ ಇದೆ. ಕೆಲವು ವಾಣಿಜ್ಯ ಉದ್ಯಮಿಗಳ ಕಛೇರಿ ಇದೆ ಅನತಿ ದೂರದಲ್ಲಿ ಒಂದು ಗುಂಪು ಚಿತ್ರ ಕೇಸರಿ ಸಂಸ್ಥೆ ಇಂದ ತೆಗೆಯಲಾಯಿತು.ಪ್ರತ್ಯೇಕವಾಗಿ ಎಲ್ಲರೂ ಚಿತ್ರಗಳನ್ನು ತೆಗೆಸಿಕೊಂಡರು. ನಂತರ ಕಟ್ಟಡದ ಸಮೀಪ ಹೋದೆವು.ಕಟ್ಟಡದ ತುದಿ ನೋಡಲು ಪೂರ್ಣವಾಗಿ ತಲೆ ಎತ್ತಬೇಕು.ಅಷ್ಟು ದೊಡ್ಡ ಕಟ್ಟಡ. ರಚನೆ ಬಹಳ ಸುಂದರವಾಗಿತ್ತು.ನಂತರ ಕೆ ಎಲ್ ಟೋವೆರ್ ಎಂದೇ ಪ್ರಸಿದ್ದಿಯಾದ ೮೬ ಅಂತಸ್ತಿನ ಬಹು ಎತ್ತರದ ಗೋಪುರದತ್ತ ಚಲಿಸಿದೆವು. ಇದರ ತುದಿಯಲ್ಲಿ ತಿರುಗುವ ಮಂಚವಿದೆ.ಇದರ ಮೇಲೆ ನಿಂತರೆ ನಗರದ ಎಲ್ಲ ದಿಕ್ಕುಗಳ ವೀಕ್ಷಣೆ ಸಾದ್ಯ.ಅದೊಂದು ಸುಂದರ ದೃಶ್ಯ.ಬಹು ಮಹಡಿ ಕಟ್ಟಡಗಳೇ ಎಲ್ಲೆಲ್ಲೂ.ಒಂದಂಗುಲವು ಬಿಡದಂತೆ ಕಟ್ಟಡಗಳ ನಿರ್ಮಾಣ.ಅಲ್ಲಿಯೇ ತಂಪು ಪಾನೀಯ ಕುಡಿದು ಕೆಳಗೆ ಬಂದೆವು.ನಂತರ ಬಸ್ಸಿನಲ್ಲಿ ಸ್ವಾತಂತ್ರ ಚೌಕಕ್ಕೆ ಬಂದೆವು.ಅಲ್ಲಿ ಸ್ವಾತಂತ್ರ ನೆನಪಿನ ಸ್ಮಾರಕ , ಕ್ರೀಡಾ ಮೈದಾನ , ಮುಖ್ಯ ನ್ಯಾಯಾಲಯ ಕಟ್ಟಡ, ರಾಷ್ಟ್ರೀಯ ಮುಸ್ಲಿಂ ಪ್ರಾರ್ಥನಾ ಮಂದಿರ ಇತ್ಯಾದಿಗಳನ್ನು ನೋಡಿದೆವು.ದಾರಿಯಲ್ಲಿ ಮಲೇಷಿಯಾದ ರಾಜ ಸೌಧವನ್ನು ವೀಕ್ಷಿಸಿದೆವು ರಾತ್ರಿ ೮ ಗಂಟೆಗೆ ಹೋಟೆಲ್ ಪರ್ಲ್ ಇಂಟರ್ನಾಷನಲ್ ಎಂಬ ವಸತಿ ಗೃಹ ತಲಪಿದೆವು. ಎರಡನೆಯ ಮಹಡಿಯಲ್ಲಿ ನಮಗೆ ಕೊಟಡಿ ದೊರಕಿತು.ಲಗ್ಗೆಜೆ ಇರಿಸಿ ಊಟಕ್ಕಾಗಿ ೮ ನೇ ಮಹಡಿಯಲ್ಲಿದ್ದ ಉಪಹಾರ ಗೃಹಕ್ಕೆ ಬಂದು ಊಟ ಮಾಡಿ ಮರಳಿ ಮಲಗಿದೆವು.
೨೩-೧೨ -೨೦೧೦ ಗುರುವಾರ ೫ ನೆಯ ದಿನ
ಮುಂದಿನ ಪ್ರಯಾಣ ಬುದ್ದರ ದ್ವೀಪ ರಾಷ್ಟ್ರ ತಯ್ಲಂಡ್ ಬೆಳಿಗ್ಗೆ ಉಪಹಾರ ಮುಗಿಸಿ ನೇರವಾಗಿ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳಸಿದೆವು. ವಿಮಾನ ನಿಲ್ದಾಣ ೫೦ ಕಿ ಮೀ ಆಚೆ ಇತ್ತು. ೧೦-೩೦ ಗಂಟೆಗೆ ನಿಲ್ದಾಣದಲ್ಲಿ ಹಾಜರಿರಬೇಕಿತ್ತು. ವಿಮಾನ ಮಧ್ಯಾನ್ಹ ೧-೦೫ ಕ್ಕೆ ಇತ್ತು.immigration , ಪಾಸ್ ಪೋರ್ಟ್ ಪರಿಶೀಲನೆ,ರಕ್ಷಣಾ ಶೋದನೆ ನಂತರ ನಿಲ್ದಾಣ k-೨ ನಲ್ಲಿ ಕುಳಿತೆವು.ವಿಮಾನ ೧-೦೫ ಕ್ಕೆ ಹೊರಟಿತು.ಬಂಗ್ಕೊಕ್ ತಲಪಿದಾಗ ೨-೩೦ ಗಂಟೆ.ನಿಲ್ದಾಣದಿಂದ ಹೊರಬಂದಾಗ ೪-೩೦ಗಂಟೆ ನಮ್ಮ ಸ್ಥಳೀಯ ಕೋಚ್ ಸಿದ್ದವಾಗಿತ್ತು.ಬಸ್ನಲ್ಲಿ ಪಟ್ಟಾಯ ಎಂಬ ಸಮುದ್ರತೀರದ ನಗರದೆಡೆಗೆ ಪ್ರಯಾಣ ಬೆಳೆಸಿದೆವು.ತಲಪಿದಾಗ ೭-೩೦ ಗಂಟೆ.ನೇರವಾಗಿ ವಸತಿಗ್ರಿಹ ಹೋಟೆಲ್ ಎರವಾನ ಪಟ್ಟಯಕ್ಕೆ ಹೋಗಿ ಕೊಠಡಿ ಪಡೆದೆವು.ನಮಗೆ ರೂಂ ನಂ ೧೧೪ ದೊರಕಿತು.ಸ್ವಲ್ಪ ವಿರಮಿಸಿಕೊಂಡ ನಂತರ ೯-೩೦ ಗಂಟೆಗೆ ಊಟ ಮಾಡಿದೆವು.ನಂತರ ರಾತ್ರಿ ೧೧-೩೦ ಆಟಕ್ಕೆ ಸ್ಥಳೀಯ ಕ್ಯಾಬರೆ ಷೋ "ಅಲ ಕಜರ್ "ನೋಡಿದೆವು.ಇದನ್ನು ಶಿಖಂಡಿಗಳು ಅಂದರೆ ಪುರುಷನೂ ಅಲ್ಲ ಸ್ತ್ರೀ ಅಲ್ಲ ಅಂತಹವರು ನಡೆಸಿಕೊಡುವರು.ಇವರನ್ನು ಶೆನ್ಸ್ ಗಳೆಂದು ಕರೆಯುತ್ತಾರೆ.ನೃತ್ಯ ಪ್ರದರ್ಶನ ಮನಮೋಹಕವಾಗಿತ್ತು.ಥೈಲಾಂಡ್ನ ವಿವಿಧ ಬಗೆಯ ಜಾನಪದ ನೃತ್ಯಗಳು, ಇತಿಹಾಸ ಬಿಂಬಿಸುವ ನೃತ್ಯಗಳು ಆಕರ್ಷಕವಾಗಿದ್ದವು.ಈ ನಗರದಲ್ಲಿ ಜನಜೀವನ ಆರಂಭವಾಗುವುದೇ ರಾತ್ರಿ ೮ ರ ನಂತರ. ಬೆಳಗಿನ ಜಾವ ೫ ರ ವರೆಗೂ ಇಡೀ ರಾತ್ರಿ ನಗರ ಲವಲವಿಕೆಯಿಂದ ಇರುತ್ತದೆ. ನಗರ, ರಾತ್ರಿ ಜೀವನಕ್ಕೆ ಪ್ರಸಿದ್ದಿ.ಅದೂ ಕ್ರಿಸ್ಮಸ್ ರಾತ್ರಿಯ ಹಿಂದಿನ ದಿನವಾಗಿದ್ದರಿಂದ ಸಂಭ್ರಮವೋ ಸಂಭ್ರಮ. ನೃತ್ಯ ಪ್ರದರ್ಶನ ವೀಕ್ಷಿಸಿ ರಾತ್ರಿ ೧ ಗಂಟೆಗೆ ಮರಳಿ ಮಲಗಿದೆವು.
೨೪-೧೨-೧೦ ಶುಕ್ರವಾರ ಆರನೆಯ ದಿನ
ಬೆಳಿಗ್ಗೆ ೮ ಗಂಟೆಗೆ ಉಪಹಾರ ಮುಗಿಸಿ, ಕೊರಲ್ ದ್ವೀಪ ಸಮೂಹಕ್ಕೆ ವೇಗ ದೋಣಿಯಲ್ಲಿ ಪ್ರಯಾಣ ಬೆಳೆಸಿದೆವು.ಮೊದಲು ಪ್ಯಾರ ಸೇಲಿಂಗ್ ಡೆಕ್ ಬಳಿಗೆ ಹೋದೆವು.ಅಲ್ಲಿ ನಮ್ಮ ಸರದಿ ಬರುವ ವೇಳೆಗೆ ೧೦ ಗಂಟೆ ಆಗಿತ್ತು.ನಮಗೆ ಜಲ ರಕ್ಷಣಾ ಕವಚ ತೊಡಿಸಲಾಯಿತು.ಒಬ್ಬೊಬ್ಬರಾಗಿ ಪರಸೇಲಿಂಗ್ ಮಾಡಿದೆವು.ಒಂದು ವೇಗದದೋನಿಗೆ ಪರಚೂತ್ ಕಟ್ಟಲಾಯಿತು.ದೋಣಿ ಚಲಿಸಿದಂತೆ ಪರಚುತ್ ಮೇಲೆ ಹೋಯಿತು.ಜೊತೆಯಲ್ಲಿ ನಾವೂ ಕೂಡ. ಸುಮಾರು ೧೫೦ ಅಡಿ ಎತ್ತರದಲ್ಲಿ ಹಾರಾಡಿದೆವು.ನಂತರ ವೇಗ ಕಡಿಮೆಮಾದಿದಂತೆ ಕೆಳಗೆ ಇಳಿಯತೊಡಗಿದೆವು.ಅದೊಂದು ರೋಮಾಂಚಕಾರಿ ಅನುಭವವಾಗಿತ್ತು. ಹಕ್ಕಿಗಳಂತೆ ಕೆಲ ಕ್ಷಣ ಗಗನದಲ್ಲಿ ಇದ್ದೆವು. ನಂತರ ಅಲ್ಲಿಂದ ನೂಂಗ್ ನಾಚ್ ದ್ವೀಪಕ್ಕೆ ಹೋದೆವು.ಅಲ್ಲಿ ಸಮುದ್ರ ತಳದಲ್ಲಿ ನಡೆಯುವ ಅವಕಾಶ ಮಾಡಲಾಗಿತ್ತು.ನಮ್ಮ ಪ್ಯಕಿ ಪ್ರದೀಪನೊಬ್ಬನೇ ಭಾಗವಹಿಸಿದ.ತಲೆಗೆ ಭಾರವಾದ ಶಿರಸ್ತ್ರಾಣ.ಅದರೊಳಗೆ ಆಮ್ಲಜನಕ. ಸಮುದ್ರದಡಿಯಲ್ಲಿ ೩೦ ಅಡಿ ಕೆಳಗೆ ನಡೆ. ಬಗೆಬಗೆಯ ಮೀನುಗಳು.ಅವುಗಳಿಗೆ ತಿಂಡಿ ಹಾಕಬೇಕು.ಗುಂಪು ಗುಂಪಾಗಿ ಬರುವ ಮೀನುಗಳು ದೇಹವನ್ನೆಲ್ಲ ಮುತ್ತಿಡುತ್ತವೆ.ಸುಮಾರು ೨೦ ನಿಮಿಷದ ನಂತರ ಮೇಲ್ದಂಡೆಗೆ ಬರಬೇಕು.ಅನುಭವ ರುಚಿಯಾಗಿತ್ಟೆಂದು ತಿಳಿಸಿದ .ಅಲ್ಲಿಂದ ಕೊರಲ್ ದ್ವೀಪಕ್ಕೆ ಹೋದೆವು. ಅಲ್ಲಿ ಬಗೆಬಗೆಯ ದೋಣಿವಿಹಾರಗಲಿದ್ದವು .ಆದರೆ ನಾವು ಯಾವುದರಲ್ಲಿಯೂ ಭಾಗವಹಿಸಲಿಲ್ಲ . ಹಾಗೇ ಸಮುದ್ರಸ್ನಾನಮಾಡಿ ತೀರದಲ್ಲಿದ್ದ ಆರಾಮ ಕುರ್ಚಿಯಲ್ಲಿ ವಿರಮಿಸಿದೆವು. ಸಿಹಿಯಾದ ಎಳನೀರನ್ನು ಕುಡಿದೆವು.ಅಲ್ಲಿ ಮದ್ಯಾನ್ಹ ೧ ಗಂಟೆಯವರೆಗೂ ಇದ್ದು ನಂತರ ಪತ್ತಯದ ವಸತಿಗ್ರಿಹಕ್ಕೆ ವಾಪಸ್ಸಾದೆವು.ಕೊಠಡಿಯಲ್ಲಿ ಬಟ್ಟೆ ಬದಲಾಯಿಸಿ ಊಟಕ್ಕೆ ಬಂದು ಅಲ್ಲಿಂದ ತಾಯ್ ಸಾಂಸ್ಕೃತಿಕ ಪ್ರದರ್ಶನಕ್ಕೆ ಹೋದೆವು.ಪ್ರದರ್ಶನ ತುಂಬಾ ಚೆನ್ನಾಗಿತ್ತು.ಅಲ್ಲಿಂದ ಆನೆಗಳ ಸರ್ಕಸ್ ನೋಡಿ ಟ್ರೋಪಿಕಾಲ್ ತೋಟದಲ್ಲಿ ಬಗೆಬಗೆಯ ತೈಲೆಂಡಿನ ವಿಶಿಷ್ಟವಾದ ಪುಷ್ಪರಾಶಿಯನ್ನು ಕಂಡು ಬೆರಗಾದೆವು.ಅಲ್ಲಿಂದ ಮಡಕೆಯ ಪ್ರದರ್ಶನ ನೋಡಿದೆವು.ಇಲ್ಲಿ ಹೂ ಪಾಟಿಕೆಗಳನ್ನು ವಿದವಿದವಾಗಿ ಜೋಡಿಸಲಾಗಿತ್ತು . ಪ್ರದರ್ಶನ ತುಂಬಾ ಮನಮೋಹಕವಾಗಿತ್ತು.ರಾತ್ರಿ ಪತ್ತಯದಲ್ಲಿ ೯ ರ ವರೆಗೂ ಸುತ್ತಾಡಿದೆವು. ತೈ ಮಸಾಜ್ ಮಾಡಿಸಿಕೊಂದೆವು. ಊಟಮಾಡಿ ಮಲಗಿದೆವು.ರಾತ್ರಿ ಇಡೀ ಕ್ರಿಸ್ಮಸ್ ನಗರದಲ್ಲಿ ಜೋರಾಗಿತ್ತು.
೨೫-೧೨-೨೦೧೦ ಶನಿವಾರ ಕ್ರಿಸ್ಮಸ್
ಬೆಳಿಗ್ಗೆ ೮ ಗಂಟೆಗೆ ಕೊಠಡಿಯನ್ನು ಖಾಲಿ ಮಾಡಿ ಉಪಹಾರ ಮುಗಿಸಿ ಬಂಗಕೊಕನತ್ತ ಪ್ರಯಾಣ ಬೆಳೆಸಿದೆವು.ದಾರಿಯಲ್ಲಿ ಪ್ರಪಂಚದಲ್ಲೇ ಅದ್ವಿತೀಯವೆನಿಸಿದ ಅತಿ ಬ್ರಿಹತ್ತಾದ ಜೆಮ್ ಗ್ಯಾಲರಿಯನ್ನು ವೀಕ್ಷಿಸಿದೆವು ಇಲ್ಲಿ ಹರಳುಗಳನ್ನು ಭೂಮಿಯಿಂದ ಅಗೆಯುವುದರಿಂದ ಹಿಡಿದು ಅದನ್ನು ಸುಂದರವಾಗಿ ಕಡೆಯುವ ಕ್ರಮದವರೆಗೂ ಪ್ರದರ್ಶನ ಏರ್ಪಡಿಸಿದ್ದರು.ಬಹಳ ಆಕರ್ಷಣೀಯವಾಗಿತ್ತು.ಮಳಿಗೆಯಲ್ಲಿ ವಿವಿಧ ಬಗೆಯ ಹರಳುಗಳನ್ನು ಖರೀದಿಗೆ ಇರಿಸಲಾಗಿತ್ತು .ಪುಷ್ಯ ರಾಗ, ಪಚ್ಚೆ, ಮುತ್ತು ಎಂಬಂತೆ ಬಗೆಬಗೆಯ ಹರಳುಗಳ ಆಭರಣಗಳು ಮೆಚ್ಚುವಂತಹುದಾಗಿದ್ದವು . ನಾವು ಎರಡು ಮುತ್ತಿನ ಹಾರ ಖರೀದಿಸಿದೆವು.ಪತ್ತಯದಲ್ಲಿಯೇ ಮಧ್ಯಾನ್ಹದ ಊಟ ಮುಗಿಸಿ ಬಂಗಕೊಕಗೆ ಪ್ರಯಾಣ ಬೆಳೆಸಿದೆವು. ತಯ್ಲಂದ್ ತಲಪಿದಾಗ ಸುಮಾರು ೪ ಗಂಟೆ. ನೇರವಾಗಿ ತಯ್ಲಂಡ್ನ ಅತ್ಯಂತ ಎತ್ತರದ ಹೋಟೆಲ್ ಆದ ಸ್ಕಯ್ ಬಾಲಿಯೋಕ್ಗೆ ಹೋದೆವು.ತುದಿಯಲ್ಲಿ ಸುತ್ತುವ ವೀಕ್ಷನಾಲಯದಿಂದ ನಗರದ ಸೊಬಗನ್ನು ಸವಿದೆವು.ಅಲ್ಲಿಂದ ಮಲಗಿರುವ ಬುದ್ದನ ದೇವಾಲಯಕ್ಕೆ ಹೋದೆವು.ಸುಮಾರು ೪೦ ಅಡಿ ಎತ್ತರದ ಮಲಗಿರುವ ಬುದ್ದ ಅದ್ಬುತವಾಗಿತ್ತು.ದೇವಾಲಯದ ನಿರ್ಮಾಣ ಸೊಗಸಾಗಿತ್ತು.ತಯ್ಲಂದಿನ ವಿಶಿಷ್ಟವಾದ ಶ್ಯಲಿಯಲ್ಲಿ ನಿರ್ಮಿಸಲಾಗಿತ್ತು.ಸಂಜೆ ಬಂಗ್ಕೊಕ್ನ ವ್ಯಾಪಾರ ಕೇಂದ್ರದಲ್ಲಿ ವ್ಯಾಪಾರ ಮುಗಿಸಿ ರಾತ್ರಿ ಊಟಮಾಡಿ ಹೂವರ್ದ್ ಸ್ಕ್ವಾರೆ ಎಂಬ ಹೋಟೇಲ್ನಲ್ಲಿ ತಂಗಿದೆವು.
೨೬-೧೨-೨೦೧೦ ಭಾನುವಾರ
ಪ್ರಯಾಣದ ಕೊನೆಯ ದಿನ. ಬೆಳಿಗ್ಗೆ ೮ ಗಂಟೆಗೆ ಉಪಹಾರ ಮುಗಿಸಿ ಕೊಠಡಿ ಖಾಲಿ ಮಾಡಿದೆವು. ನಂತರ ಚಿನ್ನದ ಬುದ್ದ ದೇವಾಲಯಕ್ಕೆ ಹೋದೆವು. ಸುಮಾರು ೪೫೦೦ ಕೆ ಜಿ ಅಪ್ಪಟ ಚಿನ್ನದ ಮೂರ್ತಿ ಬೌದ್ದ ಸನ್ಯಾಸಿಯೊಬ್ಬರು ಬೆಳಗಿನ ವಿಶೇಷ ಪೂಜೆ ಮಾಡಿದರು. ಪ್ರಸಾದ ನೀಡಿದರು.ಅಲ್ಲಿ ಪ್ರಾರ್ಥನೆ ಮುಗಿಸಿ ೧೦ ಗಂಟೆಯ ವೇಳೆಗೆ ಸಫಾರಿ ಪ್ರಪಂಚ ತಲಪಿದೆವು.ಅಲ್ಲಿ ಬಗೆಬಗೆಯ ಪ್ರದರ್ಶನಗಳಿದ್ದವು . ಸುಮಾರು ೯ ಪ್ರದರ್ಶನಗಳ ಪ್ಯಕಿ ೪ ಕ್ಕೆ ಮಾತ್ರ ಪ್ರವೇಶ ಪಡೆದಿದ್ದೆವು.ಊಟಕ್ಕೆ ಪೂರ್ವ ೩ ಪ್ರದರ್ಶನಗಳು ಊಟದನಂತರ ಮತ್ತೊಂದು ಪ್ರದರ್ಶನ. ಊಟಕ್ಕೆ ಪೂರ್ವ ಚಿಮ್ಪಾಂಜಿಗಳ ಬಾಕ್ಷಿನ್ಗ , ಸಮುದ್ರ ಸಿಂಹದ ಪ್ರದರ್ಶನ. ನಂತರ ಕೌಬಾಯ್ ಸ್ಟಂಟ್ ಎಂಬ ೩ ಪ್ರದರ್ಶನಗಳಿದ್ದವು.ಸಮುದ್ರ ಸಿಂಹದ ಪ್ರದರ್ಶನ ಅತ್ತ್ಯಂತ ಕುತೂಹಲವಾಗಿತ್ತು . ಕೌಬಾಯ್ ಸ್ಟಂಟ್ ಕಳಪೆಯಾಗಿತ್ತು.ಅಲ್ಲಿಯೇ ಇದ್ದ ಭೋಜನಾಲಯದಲ್ಲಿ ಊಟಮಾಡಿದೆವು. ನಂತರ ೧-೩೦ ಗಂಟೆಗೆ ಡಾಲ್ಫಿನ್ ಪ್ರದರ್ಶನ ನೋಡಿದೆವು.ಪ್ರದರ್ಶನ ಚೆನ್ನಾಗಿತ್ತು. ಅದರಲ್ಲಿ ಒಂದು ಮರಿ ಶಾರ್ಕ್ ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು .ನಂತರ ಸಫಾರಿ ಪಾರ್ಕಗೆ ತೆರಳಿದೆವು.ಅದೊಂದು ಓಪನ್ ಜೂ ಇಲ್ಲಿ ನಮ್ಮ ಬಸ್ಸಿನಲ್ಲಿಯೇ ಪ್ರಯಾಣಿಸಿದೆವು.ಜಿರಾಫೆಗಳು ,ಜೀಬ್ರಾಗಳು ,ಕರಡಿಗಳು,ಗುಳ್ಳೆನರಿಗಳು,ಬೈಸನ್ ಗಳು ,ಬಗೆಬಗೆಯ ಪಕ್ಷಿಗಳು , ಹುಲಿಗಳು, ಚಿರತೆಗಳು,ಸಿಂಹಗಳು ಇತ್ಯಾದಿಗಳು ಕಂಡವು.ಸಂಜೆ ೬ ಗಂಟೆಯ ವೇಳೆಗೆ ವಿಮಾನ ನಿಲ್ದಾಣದತ್ತ ಹೊರಟೆವು.ವಿಮಾನ ರಾತ್ರಿ ೯-೩೦ಕ್ಕೆ ಇತ್ತು.ಕಿಟಕಿಯಾಚೆಯಿಂದ ತಾಯ್ಲಂಡ್ನ ರಾತ್ರಿಯ ದೃಶ್ಯ ಮನಮೋಹಕವಾಗಿತ್ತು.ಬೆಂಗಳೂರು ತಲಪಿದಾಗ ರಾತ್ರಿ ೧೧-೫೦ ಗಂಟೆ.ಎಲ್ಲರಿಗೂ ವಿದಾಯ ತಿಳಿಸಿ ಮನೆ ತಲಪಿದಾಗ ರಾತ್ರಿ ೧ ಗಂಟೆ. ಮುಗಿದಿತ್ತು ನಮ್ಮ ವಿದೇಶ ಪ್ರವಾಸ.
ಇತಿ ಶಂ.
ಕೆ.ವಿ.ಶ್ರೀನಿವಾಸ ಪ್ರಸಾದ್
No comments:
Post a Comment