Tuesday, February 22, 2011

ಕರಮುಗಿವೆ ಕರವೀರಪುರವಾಸಿ ಲಕ್ಷ್ಮಿಕಾಂತನೆ

ವ್ಯಾಸ ಭಾರತದ ಜನಮೇಜಯನು ಅಡವಿಯಲಿ
ಸಂಚರಿಸುತಿರಲು ಕಂಡೆ ನೀನು ಬಿದಿರಿನ ಮೇಳೆಯಲಿ
ಮೆಚ್ಚಿ   ನಿನ್ನ ಸೊಬಗನು ಕಟ್ಟಿದನು ಆಲಯವನಂದು
ಕರಮುಗಿವೆ ಕರವೀರಪುರವಾಸಿ ಲಕ್ಷ್ಮಿಕಾಂತನೆ
 
ಕಾಲಕ್ರಮದಲಿ  ವಿಸ್ತರಿಸಿದರು ಆಲಯವ ಒಂದಾಗಿ
ಬ್ರಿಹದಾಕಾರದಲಿ ಆವರಣದಲಿ ಅರವಿಂದನಾಯಕಿ
ದ್ವಾದಶ   ಆಳ್ವಾರರ   ದೇಶಿಕ ಜೀಯರ್ ರರ   ಮೂರ್ತಿಇರಿಸಿ
ಕರಮುಗಿವೆ ಕರವೀರಪುರವಾಸಿ ಲಕ್ಷ್ಮಿಕಾಂತನೆ
ಕರೆದರು  ವೆಣುಪುರಿ ಕಳಲೆ ಕಪಿಲಾಶ್ರಮ ವೆಂದು
ಸಂದರ್ಶಿಸಿದರು ಮೈಸೂರಿನ ಯದುವಂಶದರಸರು
ಮೈಸೂರಿನಹುಲಿ ಟೀಪೂ ನೀಡಿದನು ಸ್ವರ್ಣಪಾತ್ರೆಗಳ
ಕರಮುಗಿವೆ ವೇಣು ಪುರಾಧೀಶ  ಲಕ್ಷ್ಮೀ ವಲ್ಲಭನೆ
ನಿನಗೆ ವರ್ಶೋತ್ಸವವು ಮೀನಮಾಸದಲಿ ಸೇರುವರು
ಜನಜಾತ್ರೆ ಹಳ್ಳಿ ಹಳ್ಳಿಗಳಿಂದ   ನಗರ ನಗರಗಳಿಂದ
ಉದಯದಲಿ ಏರುವೆ ತೇರು ಸಂಜೆ ಪುಷ್ಪ ವ್ಯಾಳಿಯಲಿ
ನಡೆವುದು ತೇರಡಿ ಉತ್ಸವ ರಾತ್ರಿಇಡೀ ನಾದ ತರಂಗದಿ
ತಂದೆ ನೀ ಕರುಣಿಸುತಿರುವೆ ಭಕ್ತಜನರ ಅಭೀಷ್ಟವ
ನಿವಾರಿಸುತ ಮಕ್ಕಳ ನೋವುರುಜಿನಗಳ ಅಭಯದಿ
ನೀಡುತ ಸಿರಿ ವ್ರಿಷ್ಟಿಯ ಮಾತೆ ಅರವಿಂದನಾಯಕಿಯಕೂಡಿ
ನಿನಗಿದೋ ಮನದಾಳದ ನಮನ ವೆಣುಪುರಿ ಲಕ್ಷ್ಮಿಕಾಂತ

ರಚನೆ: ಕೆ.ವಿ ಶ್ರೀನಿವಾಸ ಪ್ರಸಾದ
ಮೊಬ: ೯೮೪೪೨ ೭೬೨೧೬
ಇ -ಮೇಲ್:
sreenivasaprasad.kv@gmail.com

 

No comments:

Post a Comment