Wednesday, March 9, 2011

ಮಗಳ ಮದುವೆ

ಈ ಪದ್ಯವನ್ನು ಮಗಳ ಮದುವೆಯಲ್ಲಿ ಬರೆದಿದ್ದೆನು. ಹಾಡಿದರು ನನ್ನ ನೆಂಟರು ಗ್ರಿಹಪ್ರವೇಶದಲಿಮಂಗಳವು ಈ ದಿನವು
ಮಗಳೇ ಜೀವನದ ಸುದಿನವು
ತರಲಿ ಹರುಷ ಅನುದಿನವು
ವೈಭವದ ಮದುವೆಯ ಈ ದಿನವು

ಅರಳಲಿ ಸಂತಸವು ಅನುಕಾಲ
ನೀನಾಗು ಪತಿಗೆ ಸರಿಸತಿಯು
ಸಾಗು ನೀ ಜೊತೆಯಲಿ ನೂರ್ಕಾಲ
ಮಡದಿಯಾಗಿ ಪ್ರತಿದಿನವೂ

ಅರಸಿ ಬಂದಿಹನು ಗೀತಾಸುತನು
ಒಲವಿನಾಸರೆಯ ಸೆಲೆಯಾಗಿ
 ನೀಡೆಂದು ಮುದವ ಕಲಾಸುತೆ
ಮಧುವಾಗಿ ಪರಿಮಳದ ಹೂವಾಗಿ

ನೀನಾಗು ಪತಿಮನೆಗೆ  ಮಗಳು
ಎಲ್ಲರಲಿ ಪ್ರೀತಿಯನು ಪಸರಿಸುತ
ಮರೆಯದಿರು ತಂದೆಯ ಮನೆಯ
ತರುತ ತಾಯ್ಮನೆಗೆ ಸುಕೀರ್ತಿಯ

ನಡೆಯು ಚೆನ್ನಿರಲಿ ಮೂಡಲಿ
ನುಡಿಯು ಮಧುರ ಹಾಡಾಗಿ
ಮಗಳೇ ಮರೆಯದಿರು ಹಿತನುಡಿ
ಆಗುವೆ ನೀ ಆದರ್ಶಸೊಸೆಯಾಗಿ

ನೋವು ನಲಿವುಗಳು ಸಹಜವು
ಜೀವನದ ದೂರ ಪಯಣದಲಿ
ಧ್ರಿತಿಯು ಜಾರದಿರಲಿ ಮರೆಯದೆಲೆ
ನಾವಿಕನು ಶ್ರೀಪತಿಯು  ಬಾಳದಾಳದಲಿ

ರಚನೆ :ಕೆ ವಿ ಶ್ರೀನಿವಾಸ ಪ್ರಸಾದ್
Mob:9844276216

E-Mail:sreenivasaprasad.kv@gmail.com

 

No comments:

Post a Comment