Thursday, March 31, 2011

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧

ಅರ್ಜುನನಾಶಯದಂತೆ ಸ್ಥಾಪಿಸಿದ
ಕೃಷ್ಣ ರಥವನ್ನು ರಣರಂಗದಮಧ್ಯೆ
ಕಂಗಾಲಾದ ಪಾರ್ಥ ಬಂಧು ಸ್ನೇಹಿತರನು ಕಂಡು
ಸಮರವೇತಕೆ   ಕೃಷ್ಣ ಸಾಧಿಸಲು ಏನನೆಂದ

ಪಿತಾಮಹ ಭೀಷ್ಮ ಗುರು ದ್ರೋಣ ಅನುಜರು
ಕೌರವರು ಒಂದೆಡೆಯಾದರೆ   ಅಗ್ರಜ ಧರ್ಮರಾಯ
ಅನುಜರು ವ್ರಿಕೋದರ ನಕುಲ  ಸಹದೇವರು
ಸಮರದಲಿ ಯಾರಗಲಿದರು   ಸಂತಸವು ಎಲ್ಲಿಂದ

ಬೇಡ ಸಮರ ಬಂಧು ಬಾಂಧವರಿಲ್ಲದ ಧನ
ರಾಜ್ಯ ಸಂಪತ್ತು ಏತಕ್ಕೆಂದು ವಿಷಾದಿಸಿದ
ವೀರ ಪಾರ್ಥ ಸಮರ ರಂಗದ ಮಧ್ಯದಲಿ
ಪಾರ್ಥಸಾರಥಿಯಲಿ ಅಳುವನು ತೋಡುತ

ನಡುಗಿದವು ತೋಲ್ಗಳು ಕಂಪಿಸಿದವು ಕಾಲ್ಗಳು
ಜಾರಿತು ಗಾಂಡೀವ ಪಾರ್ಥನ ಕೈಗಳಿಂದ           
ಕುಸಿದನು ಗಾಂಡೀವಿ ರಥದ ಮಧ್ಯದಲಿ
ಬೇಡ ಸಮರ, ರಾಜ್ಯ, ಸಂಪತ್ತು, ವಿಜಯ

ಆದಿದೇವ ವಾಸುದೇವ ವಿಸ್ಮಯಗೊಂಡ
ಎಲ್ಲಡಿಗಿತು ಪಾರ್ಥನ ಶೌರ್ಯ, ವೀರ್ಯ ಪರಾಕ್ರಮ
ಮಡದಿ ದ್ರೌಪದಿಯ ಸೀರೆಯೆಳೆದಾಗ ಮಾಡಿದ ಪಣ
ಮುರಿದ ಶಾಂತಿ ಸಂಧಾನ ತನಗಾದ ಅಪಮಾನ

-ರಚನೆ: ಕೆ ವಿ ಶ್ರೀನಿವಾಸ ಪ್ರಸಾದ್
ಮೊಬ; ೯೮೪೪೨೭೬೨೧೬
e-Mail: sreenivasaprasad.kv@gmail.com 

   


 

No comments:

Post a Comment