Monday, March 14, 2011

ಮಗಳೇ- ಮದುವೆಯ ಪ್ರಥಮ ವರ್ಷದ ಶುಭಾಶಯ

ಮದುವೆಯ ಪ್ರಥಮ ವರ್ಷದ ಶುಭಾಶಯ

ಶುಭಾಶಯ  ನಲ್ಮೆಯ ಮಗಳಿಗೂ
ಕೈಹಿಡಿದ ನೆಚ್ಚಿನ  ಅಳಿಯರಿಗೂ
ಮದುವೆಯ ಮೊದಲ  ವರ್ಷ ಉತ್ಸವದಲಿ
ಮನಮಿಡಿದ ಎದೆತುಂಬಿದ ಶುಭಾಶಯ

ನಡೆದಿಹಿರಿ ಜೊತೆಯಲಿ ವರ್ಷ ಒಂದನು
ಮಿಲನದಲಿ ಮಿಡಿಯುತ ಮನದಾಳದಲಿ
ಜೀವನದ ಕಹಿಸಿಹಿಯನು ಸವಿಸುತ ಸ್ನೇಹದಲಿ
ನಿಮಗಿದೋ ಮನಮಿಡಿದ ಎದೆತುಂಬಿದ ಶುಭಾಶಯ

ಕಳೆದಿಹಿರಿ ಜೊತೆಯಲಿ ಕಡಲಾಚೆಯ ದ್ವೀಪದಲಿ
ಜನರಹಿತ ವನ್ಯಜೀವಿಗಳ ನಡುವಿನಲಿ ಕಾಡಿನಲಿ
ಸವಿಯುತ ಅರಿಯುತ ಸುಸ್ನೇಹದ ಪರಿಮಳವ
ನಿಮಗಿದೋ ಮನಮಿಡಿದ ಎದೆಯಾಳದ ಅಭಿನಂದನೆ

ಮಗಳೇ ಗಳಿಸಿರುವೆ ಅತ್ತೆಮಾವಂದಿರ ಪ್ರೀತಿ
ಬಂಧು ಬಾಂಧವ ಸ್ನೇಹಿತರ ಮೆಚ್ಚುಗೆ
ತಂದಿರುವೆ ಸತ್ಕೀರ್ತಿ ತಂದೆ ತಾಯಂದರಿಗೆ
ನಿನ್ನ ಸದ್ಗುನದಿ ನಿನಗಿದೋ ಅಭಿನಂದನೆ

ನೂರ್ಕಾಲ ಇರಲಿ ನಿಮ್ಮ ದಾಂಪತ್ಯ ಜೊತೆಯಲಿ
ಅರಳಲಿ ನಗೆ ಚೆಲ್ಲುವ ಮನೆತುಂಬುವ ಕುಡಿಗಳು ಎರಡು
ಹರಸಲಿ ಶ್ರೀನಿವಾಸನು ಜೀವನದಿ ಸುಖಸಂಪತ್ತನು
ಕಾಣುವಿರಿ ಸಹಸ್ರಚಂದ್ರನನು ಇದೋ ನನ್ನ ಶುಭಾಶಯ


-ಶ್ರೀನಿವಾಸ ಪ್ರಸಾದ್.ಕೆ.ವಿ
ಮಾರುತಿನಗರ, ಬೆಂಗಳೂರು-92
 

No comments:

Post a Comment