Sunday, March 6, 2011

ನ್ಯಾಸ ಅಷ್ಟಕ

ನ್ಯಾಸ ಅಷ್ಟಕ 




ಕಾಪಾಡು ದೇವದೇವೇಶ
ನನ್ನರಕ್ಷನೆಯು  ನಿನ್ನದೇ
ನನ್ನದೆಂಬುದು ಏನಿಲ್ಲವು
ಅರ್ಪಿಸುವೇ ನಿನಗೆ ಎಲ್ಲವನು


ವರದರಾಜನೆ ಅಭಯಪ್ರದನೆ
ಶರಣಾಗಿರುವೆನು ನಿನ್ನಲಿ
ಈ  ನನ್ನ ದೇಹದ ಅಂತ್ಯದಲಿ
ಕರುನಿಸೆನಗೆ ನಿನ್ನ ಚರಣಪದ್ಮವ


ನನ್ನ ಮನಸ್ಸೆಂದು ಸ್ಥಿರವಾಗಿರಲಿ
ನಿನ್ನ ಪಡೆಯುವ ಏಕೈಕ ಗುರಿಯಲಿ
ಆಸೆ ಆಮಿಷಗಳಿಂದ ಸರಿದಿರಲಿ
ಸ್ವೀಕರಿಸು ಎನ್ನ ನಿತ್ಯ ಕಿಂಕರನೆಂದು


ಮಾಡಿರುವೆ ಎಲ್ಲ ಕರ್ಮವ
ನಿಸ್ಸಂಗದಿ ನಿರ್ಮೋಹಡಿ
ನಿರ್ಮಲಚಿತ್ತದಿ   ನಿನ್ನದೆಂದು
ನೀಡು ವಿಮೋಚನೆಯ ಸರ್ವ ಪಾಪದಿ


ಗಳಿಸಿರುವುದೆಲ್ಲವು ನಿನ್ನ ಅನುಗ್ರಹದಿ
ನಿನ್ನ ಆಜ್ಞೆಯಂತೆ ನಿನ್ನ ಪ್ರೀತಿಗಾಗಿ
ಸ್ವೀಕರಿಸು ಚರಾಚರೆಗಳೆಲ್ಲವ
ನಿನ್ನ ಅನಂತ ಸೇವೆಯಲಿ ತೊಡಗಿಸೆನ್ನ


ಪಾಪಕೃತ್ಯಗಳು ನಡೆಯದಿರಲಿ ಎನ್ನಿಂದ
ರಕ್ಷಿಸು ಸದಾ ಕಣ್ಣ ರೆಪ್ಪೆಯಂತೆ
ನಿನ್ನ ಚರಣಸೇವೆಯೇ ಗುರಿಯಾಗಿರಲಿ
ನಡೆಸೆನ್ನ ಸರಿ ದಾರಿಯಲಿ ಗುರುವಂತೆ


ನೀನೆ ಅಂಬಿಗನು ನಿರ್ದೇಶಕನು
ಬರಿಯ ಪಾತ್ರದಾರನು ನಾನು
ನಿನ್ನ ಶಕ್ತಿಯಲಿ ತೇಜಸ್ಸಿನಲಿ
ನಡೆಯುತಿರುವೆನು ನಿರ್ಜೀವನಾಗಿ


ಬಾಳಗುರಿಯಾಗಿಸಿಹೆನು ನಿನ್ನ  ಹೊಂದಲು
ನಿರಪೇಕ್ಷಿತನಾಗಿ  ನಿನ್ನಾದೇಶದಂತೆ
ಕರುನಿಸೆನಗೆ ನಿನ್ನ ಪಾದಸೇವೆಯ 
ಸಾಕೆನಗೆ ಶ್ರೀಪತಿಯು ನೀನು ಬಳಿಯಿರಲು




-ಶ್ರೀನಿವಾಸ ಪ್ರಸಾದ್.ಕೆ.ವಿ.
ಡೀ ಎನ್ಕ್ಲೇವ್ ,ಮಾರುತಿನಗರ,
ಸಹಕಾರನಗರ ಅಂಚೆ, ಬೆಂಗಳೂರು-೯೨
ಫೋ: ೯೮೪೪೨ ೭೬೪೧೬
 

No comments:

Post a Comment