Friday, July 15, 2011

ನಮನವಿದೋ ಕಾರ್ಪ್ ಬ್ಯಾಂಕ್

ನಮನವಿದೋ  ಕಾರ್ಪ್  ಬ್ಯಾಂಕ್
ನಮನವಿದೋ ನಲ್ಮೆಯ ಕಾರ್ಪ್ ಬ್ಯಾಂಕ್
ಸೇರಿದೆನು ನಿನ್ನ ದಶಕ ಎಂಬತ್ತರಲಿ
ಕಳೆದೆನು ಮೂರು ದಶಕ ನಿನ್ನ ಸೇವೆಯಲಿ
ಕಲಿತೆನದೆಷ್ಟೋ ಮೂವತ್ತು ವರುಷದಲಿ

ಬಾಳ ಪಯಣವ ಸವಿದೆನು ಸೇವೆಯಲಿ
ಹುಬ್ಬಳ್ಳಿ,ಹಾಸನ,ಮಂಗಳೂರುಗಳಲಿ
ಭೇಟಿಯಾದೆನು ಬಗೆಬಗೆಯ ಜನರನು
ನಮನವಿದೋ ನಲ್ಮೆಯ ಕಾರ್ಪ್ ಬ್ಯಾಂಕ್

ಕಂಡೆನು ಬಹುವಿಧದ ಸಂಸ್ಕೃತಿಯ ಜನರ
ಕಲಿತೆನು ಬಾಳೆಂದರೇನು ಎಂದು  ಸೇವೆಯಲಿ
ನೋಡಿದೆನು ನೂರಾರು ಬಗೆಯ ಕೈಗಾರಿಕೆಗಳ
ನೆರವಾದೆನು ಅವುಗಳ ದೀರ್ಘ ಅಭಿವೃದ್ದಿಯತ್ತ

ವಿವಾಹವಾದೆನು ಸೋದರ ಅತ್ತೆಯ ಸುತೆಯ
ಪಡೆದೆನೆರಡು ನಲ್ಮೆಯ ಜಾಣ್ಮೆಯ ಮಕ್ಕಳ
ಕಟ್ಟಿದೆನು ಶ್ರಮದಲಿ ಕನಸಿನ ವಾಸ್ತು ಸೌಧವ
ನಮನವಿದೋ ನಲ್ಮೆಯ ಕಾರ್ಪ್ ಬ್ಯಾಂಕ್

ಅರಸಲಿಲ್ಲ ಎಂದೂ ಅಧಿಕಾರವ, ವೈಭವವ
ಕಳೆದಿಹೆನು ಸಾತ್ವಿಕ ಜೀವನವ- ಕೃಷ್ಣ ನುಡಿದಂತೆ
ಕರ್ಮವನ್ನಷ್ಟೇ ಮಾಡಿಹೆನು, ಫಲವ ಬಯಸದೆ
ಗಮಿಸುತಿಹೆನು ಇಂದು  ಸಾರ್ಥಕದ ಸಮಾಧಾನದಿ

-ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ನಿವೃತ್ತ ತಾಂತ್ರಿಕ ಅಧಿಕಾರಿ

ದಿನಾಂಕ:೧೩-೦೭-೨೦೧೧

No comments:

Post a Comment