ಸೃಷ್ಟಿ ಹೇಗೆ ವಿಚಿತ್ರವೋ ಹಾಗೆಯೇ ಸುಂದರ ಕೂಡ. ನೀಲಿಯ ಬಾನಂಗಳದಲಿ ಕೆಂಪಾದ ಕಿರಣಗಳನ್ನು ಚೆಲ್ಲುತ್ತ ಮೇಲೇಳುವ ದಿನಕರ. ಬಗೆ ಬಗೆಯ ವರ್ಣ ವೈವಿಧ್ಯವುಳ್ಳ ಹಕ್ಕಿಗಳ ಚಿಲಿಪಿಲಿ ಗಾನ.ಭೋರ್ಗರೆಯುವ ವಿಶಾಲ ಸಾಗರ . ಹಸಿರಿನ ವನರಾಶಿಯ ನಡುವೆ ಜಿಗಿದು ಕುಣಿದು ಕುಪ್ಪಳಿಸುವ ಪ್ರಾಣಿ ಸಂಕುಲ. ವನಸಿರಿಯಲಿ ಅರಳುವ ಬಗೆ ಬಗೆಯ ರೋಚಕವಾದ ಫಲ ಪುಷ್ಪಗಳು . ಆಳವಾದ ಶಾಂತಿಯಲ್ಲಿಯೂ ಭಯವನ್ನು ಹುಟ್ಟಿಸುವ ವ್ಯಾಘ್ರವೇ ಮೊದಲಾದ ಮೃಗಗಳು , ಮರಗಿಡಗಳು, ವಿಶಾಲವಾದ ಮರಳುಗಾಡು, ಒಂದೆಡೆ .ರಕ್ತವನ್ನು ಹೆಪ್ಪುಗಟ್ಟಿಸುವ ಶೀತ ಪ್ರದೇಶಗಳು ಮತ್ತೊಂದೆಡೆ. ಪ್ರಕೃತಿ ವರ್ಣಿಸಿದಷ್ಟು ಸುಂದರ. ವರ್ಣಿಸಲಾಗದಷ್ಟು ಅಪಾರ. ಸೃಷ್ಟಿ ಯಲ್ಲಿ ಪ್ರಕೃತಿ ಒಂದೆಡೆಯಾದರೆ, ಜೀವಕೋಟಿ ಮತ್ತೊಂದೆಡೆ. ಜೀವ ಕೋಟಿಯಲ್ಲಿ ವೈವಿಧ್ಯತೆ ಅಪಾರ. ಕಪ್ಪು- ಬಿಳುಪು, ಸುಂದರ -ಕುರೂಪ, ಎತ್ತರ-ಕುಳ್ಳು, ಸಣ್ಣ-ದಪ್ಪ, ಹೀಗೆ ಅನೇಕ. ಪ್ರಾಣಿಗಳಲ್ಲಿ ಗಂಡು ಸುಂದರವಾದರೆ ,ಮನುಷ್ಯರಲ್ಲಿ ಹೆಣ್ಣು ಅತಿ ಸುಂದರ.ಹೆಣ್ಣಿನ ಸೌಂದರ್ಯ ವರ್ಣಿಸದ ಕವಿಯಿಲ್ಲ. ಹೆಣ್ಣಿಗೆ ಸೋಲದ ಮುನಿಯಿಲ್ಲ. ಅದ್ಭುತ ಸೃಷ್ಟಿಯ ಅಧ್ಯಯನ ಆಳವಾದಂತೆಲ್ಲ ಅಗೋಚರವಾದ ದಿವ್ಯ ಶಕ್ತಿಯ ಪ್ರಭಾವದ ಅರಿವು ಅಧಿಕವಾಗುತ್ತಲೇ ಹೋಗುತ್ತದೆ.
ಅಗೋಚರ ಶಕ್ತಿಯನ್ನು ನಿರಾಕಾರನೆಂದು ವಿಶ್ವದ ಅನೇಕ ಧರ್ಮಗಳು ಅಂಗೀಕರಿಸಿದ್ದರೂ, ಸಾಕಾರವಾಗಿ ಆರಾಧಿಸುವ ಕ್ರಮ ಅನಾದಿಕಾಲದಿಂದ ಪ್ರಚಲಿತವಾಗಿದೆ. ಆರಾಧಿಸುವ ವಿಧಾನದಲ್ಲಿ ದೇವಾಲಯಗಳು ವಿಶೇಷವಾದ ಮಹತ್ವವನ್ನು ಪಡೆಯಲು ಬಂದಿದೆ. ಭಕ್ತಿ ಮಾರ್ಗಕ್ಕೆ ಬುನಾದಿಯಾಗಿ ಸಂಸ್ಕೃತಿಯ ಪ್ರತೀಕಗಳಾಗಿ ರೂಪಗೊಂಡಿವೆ. ಮನಸ್ಸಿನ ಶಾಂತಿಯನ್ನು ಅರಸಿಬರುವ ಕೋಟಿಗಟ್ಟಲೆ ಭಕ್ತರಿಗೆ ಪ್ರಾರ್ಥನಾಮಂದಿರವಾಗಿ , ಕಲೆಗಳನ್ನು ಅರಳಿಸಿ ಬೆಳೆಸುವ ದಿವ್ಯ ಚೇತನಾಲಯಗಳು ಆಗಿವೆ . ಇಲ್ಲಿ ಸಂಗೀತ, ನೃತ್ಯ, ಶಿಲ್ಪಕಲೆಗಳು, ಉಗಮವಾಗಿ, ಬೆಳೆದು ಬಂದಿರುವುದು ಚರಿತ್ರೆಯಿಂದ ತಿಳಿಯುತ್ತದೆ, ರಾಜಮಹಾರಾಜರು ದೇವಾಲಯಗಳನ್ನು ಕಟ್ಟುವುದು ಪ್ರತಿಷ್ಠೆಯ ಸಂಕೆತವೆಂದೇ ಭಾವಿಸಿದ್ದರು. ಶಾಂತಿ ಪಾಲನೆಗೆ ಪೋಷಕವೆಂದು ನಂಬಿದ್ದರು.
ಆಸೇತು ಹಿಮಾಚಲ ದೇವಮಂದಿರಗಳಿಗೆ ಕೊರತೆಯಿಲ್ಲ. ಅವು ಕೇವಲ ಸಂಸ್ಕೃತಿಯ ಸಂಕೇತಗಳಾಗಿ ಉಳಿಯದೆ ಅದ್ಭುತ ಶಿಲ್ಪಿ ಕಲಾ ಪ್ರತಿಭೆಯ ವಾಹಕಗಲಾಗಿವೆ. ಬೇಳೂರು, ಹಳೆಬೀಡಿನ ದೇವಾಲಯಗಳನ್ನು ಕಂಡ ಕನ್ನಡದ ಕವಿಯೋರ್ವರು 'ಶಿಲೆಯಲ್ಲವೀ ಗುಡಿಯು, ಕಳೆಯ ಬಲೆಯು' ಎಂದು ವರ್ಣಿಸಿದರು. ಕಲಾ ಕುಸುಮಗಳಾದ ದೇವಮಂದಿರಗಳ ನಿರ್ಮಾಣ ಸುಲಭ ಸಾಧ್ಯವಲ್ಲ. ಸಾವಿರ ಸಾವಿರ ಮಂದಿಯ ಅವಿರತ ಪರಿಶ್ರಮದ ಫಲಗಲವು. ಅವುಗಳನ್ನು ಸಂದರ್ಶಿಸುವದಷ್ಟೇ ಅಲ್ಲದೆ ಪೋಷಿಸುವ ಶ್ರಮವಾದರು ನಮ್ಮದಾಗಬೇಕು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಪೂರ್ವೀಕರ ಸಂಸ್ಕೃತಿ, ಆಚಾರ, ವೇಷ ಭೂಷಣಗಳ ಪರಿಚಯವಾಗಬೇಕಾದರೆ ಅದು ದೇವಾಲಯಗಳಿಂದ ಮತ್ತು ಅಲ್ಲಿ ಕಂಡು ಬರುವ ಶಿಲ್ಪಿ ಕಲೆಯಿಂದ ಮಾತ್ರ ಸಾಧ್ಯ.
ಒಂದಾನೊಂದು ಕಾಲದಲ್ಲಿ ಸೃಷ್ಟಿ ಯಲ್ಲಿ ಬೆರೆತಿದ್ದ ಗಂಡಬೇರುಂಡ , ಶರಭ ಮುಂತಾದ ಪ್ರಾಣಿಗಳ ಸ್ವರೂಪ ಇಂದು ದೇವಾಲಯಗಳಲ್ಲಿರುವ ಶಿಲ್ಪ ಕಲೆಯ ಮೂಲಕವೇ ಸಾಧ್ಯವಾಗಿದೆ. ಆಧುನಿಕ ಒತ್ತಡದ ಪ್ರಪಂಚದಲ್ಲಿ ಸೌಂದರ್ಯದ ಅರಿವಿಲ್ಲದಯೇ ಅರಳುತ್ತಿರುವ ಹೆಣ್ಣಿನ ನಿಜ ಸೌಂದರ್ಯದ ಅರಿವಾಗಬೇಕಾದರೆ ಹಳೇಬೀಡು ಅಥವಾ ಬೇಲೂರಿನ ದೇವಾಲಯಗಳಿಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು. ಅಥವಾ ಕೊನಾರ್ಕಿನ ಸೂರ್ಯ ದೇವಾಲಯ, ಕಜುರಾಹೋ, ಬಾದಾಮಿ,ಐಹೊಳೆಗಳನ್ನು ವೀಕ್ಷಿಸಲೇಬೇಕು.
ದಕ್ಷಿಣ ಭಾರತದ ಶಿಲ್ಪಕಲೆಯಲ್ಲಿ ಅಗ್ರಮಾನ್ಯ ಪಡೆದವನು ಅಮರ ಶಿಲ್ಪಿ ಎಂದೇ ವಿಖ್ಯಾತನಾಗಿದ್ದ ಜಕಣಾಚಾರಿ. ಶಿಲ್ಪಕಲೆ ಪರಿಪೂರ್ಣತೆಯನ್ನು ಪಡೆದದ್ದು ಈತನಿಂದಲೇ ಎಂದರೆ ತಪ್ಪಾಗಲಾರದು. ಜಕಣನ ಶಿಲ್ಪಕಲೆಗೆ ನೀರೆರದು ಪೋಷಿಸಿದವರು ಹೊಯ್ಸಳರು. ಅವರ ಆಶ್ರಯದಲ್ಲಿ ಅರಳಿದ ದೇವಾಲಯಗಳೆಲ್ಲವು ವಿಶೇಷ ಶೈಲಿಯನ್ನು ಹೊಂದಿ , ಹೊಯ್ಸಳ ಶೈಲಿ ಎಂದೇ ಪ್ರಖ್ಯಾತಿಯಾದವು.ಹೊಯ್ಸಳ ಶೈಲಿಯ ಕಲಾ ಕುಸುಮಗಳನ್ನು ಬೇಲೂರು, ಹಳೇಬೀಡು, ಸೋಮನಾಥಪುರ, ಹೊಸಹೊಳಲು ಮುಂತಾದೆಡೆ ಕಾಣಬಹುದು. ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಂಡ ದೇವಾಲಯಗಳು ಸಾಮಾನ್ಯವಾಗಿ ನಕ್ಷತ್ರಾದಾಕಾರದ ಜಗುಲಿಯ ಮೇಲೆ ನಿರ್ಮಾಣ ಗೊಂಡಿವೆ. ತ್ರಿಕೂಟಾಚಲ ಮಾದರಿಯಲ್ಲಿ ಇರುತ್ತವೆ.
ಮೂರು ಪ್ರತ್ಯೇಕ ವಿಮಾನಗಳು ಕಾಣುತ್ತವೆ.ದೇವಾಲಯದ ಹೊರಗೋಡೆಯ ಸುತ್ತಲೂ ಆರು ಜಗತಿಗಳು, ವಿಂಗಡಿಸಲ್ಪಟ್ಟಿರುತ್ತವೆ . ಕೆಳಗಿನಿಂದ ಆನೆಗಳು , ಕುದುರೆಗಳು,ಬಳ್ಳಿಗಳು, ಪುರಾಣದ ದೃಶ್ಯಗಳು, ಸಣ್ಣ ವಿಗ್ರಹಗಳು,ಮತ್ತು ದೊಡ್ಡದಾದ ಪುರಾಣ ಪುರುಷರ ವಿಗ್ರಹಗಳು ಕೆತ್ತಲ್ಪತ್ತಿವೆ . ಒಳಗಿನ ಮೇಲ್ಛಾವಣಿಯಲ್ಲಿ ವಿವಿಧ ಬಗೆಯ ಪುಷ್ಪಗಳು , ವಿವಿಧ ಭಂಗಿಯಲ್ಲಿ ಶಿಲಾಬಾಲಿಕೆಯರು, ದಶಾವತಾರದ ಚಿತ್ರಗಳು ಸುಂದರವಾಗಿ ಕೆತ್ತಲ್ಪಟ್ಟಿರುತ್ತವೆ ಶಿಲ್ಪಗಳು ಶಿಲ್ಪಶಾಸ್ತ್ರಗಳಿಗೆ ಆನುವಾಗಿ ಕೆತ್ತಲ್ಪತ್ತಿದ್ದು ಶರೀರ ರಚನೆ ಹೇಗಿರಬೇಕೆಂದು ಸೂಚಿಸುತ್ತವೆ. ವಿಶೇಷವಾಗಿ ಶಿಲಾ ಬಾಲಿಕೆಯರ ವಿಗ್ರಹಗಳು ಇಂದಿನ ಹೆಣ್ಣನ್ನು ನಾಚಿಸುವಂತಿವೆ.
ಗರ್ಭಗೃಹ ಚೌಕಾಕಾರವಾಗಿದ್ದು, ಮಧ್ಯದಲ್ಲಿ ಮೂಲವಿಗ್ರಹವಿರುತ್ತದೆ. ಗರ್ಭ ಗೃಹದ ಮೇಲಿನ ಗೋಪುರಕ್ಕೆ ವಿಮಾನ ಎಂದು ಕರೆಯುತ್ತಾರೆ.ವಿಮಾನದ ತುದಿಯಲ್ಲಿ ರಂಧ್ರವಿರುತ್ತದೆ. ಇಲ್ಲಿ ಕಲಶಗಳು ಇರಿಸಲ್ಪಡುತ್ತವೆ.ಸೂರ್ಯನ ಪ್ರಖರತೆಯಲ್ಲಿ ಶಾಖಗೊಳ್ಳುವ ಕಲಶಗಳಿಂದ ಹೊಮ್ಮುವ ತರಂಗಗಳು, ಮೂಲ ವಿಗ್ರಹವನ್ನು ಚೇತನಗೊಳಿಸುತ್ತವೆ.ಶಿಲ್ಪ ಶಾಸ್ತ್ರದ ರೀತ್ಯ ರಚಿತವಾಗುವ ಮೂಲ ವಿಗ್ರಹಗಳಿಂದ ಉತ್ಪನ್ನವಾಗುವ ತರಂಗಗಳು ಪ್ರಾರ್ಥಿಸುವ ಭಕ್ತರ ದೇಹದ ತರಂಗದೊಂದಿಗೆ ಬೆರೆತಾಗ ಸ್ಪಂದನ ಉಂಟಾಗುತ್ತದೆ. ಈ ತರಂಗ ಸ್ಪಂದನ ಗುಣಕಾರಕ.
ದೇವಾಲಯದ ನಿರ್ಮಾಣ ಅತಿ ಸೂಕ್ಷ್ಮ. ಗರ್ಭ ಗೃಹದ ಮುಂಬಾಗದಲ್ಲಿ ನವರಂಗ ಮಂಟಪವಿರುತ್ತದೆ.ಹಿಂದಿನ ದಿನಗಳಲ್ಲಿ ನವರಂಗ ಮಂಟಪದಲ್ಲಿ ನೃತ್ಯ ಪ್ರದರ್ಶನಗಳು , ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದುದು ತಿಳಿದು ಬರುತ್ತದೆ.ದೇವಾಲಯದಲ್ಲಿ ಗರ್ಭ ಗ್ರಿಹವೇ ಮುಖ್ಯ ಕೇಂದ್ರ.ಉಳಿದುದೆಲ್ಲವೂ ರಚನಕಾರರ ಇಚ್ಹಾನುಸಾರ ವಿಸ್ತರಗೊಳ್ಳುತ್ತವೆ
ಮುಂದೆ ದೇವಾಲಯ ಸಂದರ್ಶಿಸುವಾಗ ಮೂಕ ಪ್ರೇಕ್ಷಕರಂತೆ ವೀಕ್ಷಿಸದೆ ,ಅದರ ಉಗಮ, ರಚನೆಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ಸಂದರ್ಶಿಸಿದರೆ ಎಷ್ಟು ಉತ್ತಮ.ಮನದ ಶಾಂತಿಯ ನಡುವೆ, ಅದ್ಭುತವಾದ ಕಲಾಮಂದಿರವೊಂದನ್ನು ನೋಡಿದ ಅದಮ್ಯ ತೃಪ್ತಿ . ಪ್ರಯತ್ನಿಸಿ.ಅದ್ಭುತ ಕಲಾ ಕೃತಿಗಳನ್ನು ಪೋಷಿಸಿ.ಮುಂದಿನ ಪೀಳಿಗೆಗೆ ಪರಿಚಯಿಸಿ..
sreenivasa prasad.k.v. Mob; 98442 76216

No comments:
Post a Comment