Friday, July 15, 2011

ಲಕ್ಷ್ಮೀಹಯಗ್ರೀವ ಸ್ತುತಿ


ಲಕ್ಷ್ಮೀಹಯಗ್ರೀವ  ಸ್ತುತಿ
ಜ್ಞಾನದಾದಿಯು ಚತುರ್ವೇದ ವಿದ್ಯೆಗಳು
ಅಪಹರಿಸೆ ದಾನವರು ,ಮಧು ಕೈಟಭರು
ತಳೆದೆ ಹಯಾಸ್ಯ ರೂಪ, ಮರ್ಧಿಸಿ, ಮರಳಿ ತರಲು
ನಮನವಿದೋ ವಿದ್ಯಾಧೀಶ ಲಕ್ಷ್ಮಿ ಹಯಗ್ರೀವ

ಸಮನಿಲ್ಲ ಜ್ಞಾನಕೆ, ಅಪೌರುಷೇಯವದು
ಭಗವಂತನರಿವುದೇ ನಿಜವಾದ ಜ್ಞಾನ
ಸಾರುವುದದನು ಸಕಲ ವೇದ ಉಪನಿಷತ್ತು
ವೇದಗಳ ರಕ್ಷಿಸಿದ ಮಧುಕೈಟಭಾರಿಯೇ, ನಮನ

ಜ್ಞಾನದರಿವು ನೀಡುವುದು ಚಿರಂತನ ಆನಂದ
ಕರುಣಿಸು ಎಮಗೆ ಆನಂದಮಯ ದಿವ್ಯ ಜ್ಞಾನ
ಕರಗಳಲಿ ಶಂಖ ಚಕ್ರ ವೇದ ಗ್ರಂಥವ ಹಿಡಿದು
ವ್ಯಾಖ್ಯಾಮುದ್ರೆ ತೋರುತಿರುವ ಹಯಾಸ್ಯ, ನಮನ

ನಮಿಪೆ ಭಕ್ತಿಯಲಿ ,ಸ್ತುತಿಸೆ ನಿನ್ನ ,ತನ್ಮಯದಿ
ಆರಾಧಿಸೆ ಶ್ರದ್ದೆಯಲಿ, ಭಜಿಸೆ ಪೂಜ್ಯ ಭಾವದಿ
ಕರುಣಿಸುವೆ ಸಕಲ ವಿದ್ಯೆಗಳ, ದಯಾ ಕಟಾಕ್ಷದಿ
ವಂದಿಪೆವು ಹಯವದನ ನೀಡೆಮಗೆ ವಿದ್ಯೆಯ

ಲಭಿಸಿತಂದು ಶಾರದಾ ಪೂಜಿತ ಮಂಗಳ ಮೂರ್ತಿ
ಭಗವದ್ರಾಮಾನುಜರಿಗೆ ಭಾರತಾಗ್ರದ ಕಾಶ್ಮೀರದಿ
ಮೂರ್ತಿಯದು ಬಂದಿತು ಕವಿಸಿಂಹ ವೆಂಕಟರಿಗೆ
ಪರಕಾಲರಾಶ್ರಯದಿ ಇರುವ ಲಕ್ಷ್ಮೀ ಹಯಗ್ರೀವ, ನಮನ


ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨೭೬೨೧೬

1 comment: