ವರಮಹಾಲಕ್ಷ್ಮಿವ್ರತದ ನೆನಪಿಗಾಗಿ
ಜಗದೊಡೆಯ ಶ್ರೀನಿವಾಸನ ಪ್ರೇಯಸಿಯೇ
ಅವನ ವಕ್ಷಸ್ಥಳದಲಿ ನೆಲೆಸಿರುವ ಪದ್ಮಾವತಿಯೇ
ಕರಗಳಲಿ ಕಮಲವ ಹಿಡಿದ ಕಮಲಾಸನೆಯೇ
ಕಮಲೋದ್ಬ್ಹವೇ ಮಹಾಲಕ್ಷ್ಮಿಯೆ ನಿನಗೆ ನಮನ
ಹಾಲ್ಕಡಲ ಕಡೆಯುವಾಗ ಚಂದ್ರನೊಡನೆ ಜನಿಸಿ
ಚಂದ್ರ ಸಹೋದರಿಯೆನಿಸಿದ ಪದ್ಮನಾಭಪ್ರಿಯೇ
ಚಂದ್ರಮುಖಿ ಚತುರ್ಭುಜೆ ಇಂದುಶೀತಲೇ
ಕಮಲೋದ್ಬ್ಹವೇ ಮಹಾಲಕ್ಷ್ಮಿಯೆ ನಿನಗೆ ನಮನ
ಭೂಸಂಜಾತೆಯಾಗಿ ಜನಕಸುತೆಯೆನಿಸಿ
ವರಿಸಿ ದಶರಥತನಯನ ಸ್ವಯಮ್ವರದಿ
ವನದಲಿ ಪತಿಯನನುಸರಿಸಿ ಪಯಣಿಸಿದ
ಸಾಗರತನಯೇ ಸೀತಾಲಕ್ಷ್ಮಿಯೇ ನಿನಗೆ ನಮನ
ಭಜಿಸೆ ಶ್ರದ್ದೆಯಲಿ ಕರುಣಿಸುವೆ ತಾಯೆ
ಸಕಲಸಂಪದವ ನೀಗಿಸಿ ಕಷ್ಟಗಳೆಲ್ಲವ
ಹರಸುವೆ ಸಂತಾನವ ಧನಧಾನ್ಯವ ಅನವರತ
ಸರಸಿಜೆ ವರಲಕ್ಷ್ಮಿಯೇ ನಿನಗೆ ನಮನ
ದಿವ್ಯನಾಮಸ್ಮರನೆಯಲಿ ನೀಗುವುದು ದರಿದ್ರ
ಆಗಮಿಸುವುದು ಅಖಂಧಸಂಪದವು
ಲಭಿಸುವುದು ಸರಸಿಜಾಕ್ಷನ ಕರುಣೆ
ತಾಯೆ ವಸುಪ್ರದೆ ವಾಸವಿಯೇ ನಿನಗೆ ನಮನ
ರಚನೆ : ಕೆ.ವಿ. ಶ್ರೀನಿವಾಸ ಪ್ರಸಾದ್
೧ಎ,ಡೀ ಎನ್ಕ್ಲೇವ್ , ಮಾರುತಿನಗರ,
ಸಹಕಾರನಗರ ಅಂಚೆ, ಬೆಂಗಳೂರು-೯೨
ಫೋ: 9844276216
No comments:
Post a Comment