Thursday, February 16, 2012

ಗಣಪ ಸ್ತುತಿ


ಗಣಪ ಸ್ತುತಿ
ಉದಯಿಸಿದೆ ನಾರಾಯಣಿಯ   ಸ್ವೇದದಿ
ಮಾತೆಯ ಆಜ್ಞೆಯಂತೆ ತಡೆದೆ ಪ್ರವೇಶವ
ರುದ್ರನ ಮುನಿಸಿಗೆ ಆಯಿತು ಶಿರದ ಛೇದನ
ವಿಘ್ನ ವಿನಾಶಕ ವಿನಾಯಕನೇ ನಮನ

ಪಡೆದೆ ಗಜಶಿರವ ಶಿವನಾಣತಿಯಂತೆ
ನಡೆಯೇ ಸ್ಪರ್ಧೆ ಗಣ ನಾಯಕನಾಗಲು
ಸ್ಕಂದನ ಗೆದ್ದೆ ತಾಯಿ ತಂದೆಯ ಪ್ರಣಮಿಸಿ
ಗಣ ನಾಯಕನೆನಿಸಿದ ಗಣಪನೇ ನಮನ

ದೈತ್ಯ ಮೂಷಕಾಸುರ ದರ್ಪದಿ ಮೆರೆಯೆ
ದಾನವರ ರಕ್ಷಿಸಲು ಕೂಡಿಸಿದೆ ದೇವಗಣ
ಅಡಗಿಸಿದೆ ಮೂಷಕನ ದರ್ಪವ ,ಕರುಣಿಸಿ
ಪ್ರಾಣವ ಆಗಿಸಿದೆ ವಾಹನ, ನಮನ ಗೌರಿ ಸುತ

ಮೂಕಾಸುರ ಸಮರದಲಿ ಎಸೆದೆ ಏಕದಂತ
ಗೌರಿ ಗಂಗೆಯರ ಸುತನಾಗಿ ದ್ವೈಮಾತುರನಾದೆ  
ತ್ರಿಮೂರ್ತಿಗಳ ವರದಲಿ  ವಿಘ್ನ ನಿವಾರಕನಾದೆ
ಅಗ್ರಪೂಜೆಗೆ ಅರ್ಹನಾದೆ ವಿದ್ಯೆಗೆ ಒಡೆಯನಾದೆ 

ಶಪಿಸಿದೆ ಚಂದ್ರನ ಚೌತಿಯಂದು ನೋಡುವವರು 
ಚೋರರೆನಿಸಿ   ಕೃಷ್ಣ ಕಥೆಯಿಂದ ವಿಮುಕ್ತಿಯೆಂದು 
ಕರುಣಿಸು ನಿನ್ನ ಭಕ್ತರಿಗೆ ಸಿದ್ಧಿ ಬುದ್ಧಿಗಳ 
ಅಖಂಡ ಸಂಪದವ ಆಯುರಾರೋಗ್ಯ, ಸುಖವ      

 ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ನಂ-೧ ಏ ಡೀ ಎನ್ಕ್ಲೇವ್ ,ಮಾರುತಿನಗರ
ಸಹಕಾರನಗರ ಅಂಚೆ, ಬೆಂಗಳೂರು-೯೨
ಫೋನ್ ;9844276216

No comments:

Post a Comment