ಪ್ರೇಮಿಗಳ ದಿನ
ಪ್ರೇಮವೇ ಸುಖದ ಜೀವನದ ಆಧಾರ
ಪ್ರೇಮವಿರಬೇಕು ಸಕಲ ಜೀವಿಗಳಲಿ
ಪಶುಪಕ್ಷಿಗಳಲಿ ,ಚೇತನ ಅಚೇತನಗಳಲಿ
ಪ್ರೇಮವಿರಬೇಕು ಬ್ರಹ್ಮ ಚೈತನ್ಯದಲಿ
ಪ್ರೇಮ ತೋರಬೇಕು ತಂದೆತಾಯಿಯರಲಿ
ಇಡಬೇಕು ನಿರ್ಮಲ ಪ್ರೇಮ ಅಕ್ಕ ತಂಗಿಯರಲಿ
ಪ್ರೇಮ ತೋರಿಸಬೇಕು ಅಣ್ಣ ತಮ್ಮಂದಿರಲಿ
ಸಾಕಿ ಸಲಹಿದವರಲ್ಲಿರಬೇಕು ಅತಿಶಯ ಪ್ರೇಮ
ಪ್ರೇಮಿಸಬೇಕು ಪಶುಪಕ್ಷಿಗಳನು
ತರುಲತೆಗಳನು,ಮೂಕಪ್ರಾಣಿಗಳನು
ಮೂಗ ಕಿವುಡರನು,ಅಂಗವಿಕಲರನು
ಅನಾಥರನು,ಕಡು ಬಡವರನು,ಋಷಿಗಳನು
ಪ್ರೇಮ ಪವಿತ್ರ-ದುರುಪಯೋಗ ಸಲ್ಲದು
ಮೆಚ್ಚನಾ ಪರಮಾತ್ಮ -ವಿದ್ರೋಹ ಪ್ರೇಮದಲಿ
ವಂಚನೆ- ಮುಗ್ಧ ತರುಣಿಯರ ಸ್ನೇಹದಲಿ
ಒಮ್ಮೆ ಪ್ರೀತಿಸಿದರೆ,ನೀಡಿ ಹೃದಯ ಪ್ರೇಮಿಗಳಿಗೆ
ಪ್ರೆಮವಿರಲಿ ಸೃಷ್ಟಿಸಿದ ಜಗಜ್ಜನಕರಲಿ
ಸಲಹುವ ಜನನಿ ಉಮೆ-ರಮೆಯರಲಿ
ಕರುಣಿಸುವರು ಸಕಲ ಇಷ್ಟಾರ್ಥವ ದೇವರು
ಇಟ್ಟರೆ ಅವರಲಿ ಅನನ್ಯ ಪ್ರೀತಿಯನು
ರಚನೆ-ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨ ೭೬೨೧೬
No comments:
Post a Comment