Thursday, February 16, 2012

ಮರಳಿ ಬರುತಿದೆ ಸಂಕ್ರಾಂತಿ ಮರಳಿ ಬರುತಿದೆ ಸಂಕ್ರಾಂತಿ


ಮರಳಿ ಬರುತಿದೆ ಸಂಕ್ರಾಂತಿ 

ಬನ್ನೀರೆ ಬನ್ನೀರೆ ಅಕ್ಕ- ತಂಗಿಯರೆಲ್ಲರು
ತಂದೆ ತಾಯಿ ಮನೆಗೆ ಕೂಡಿ ನಲಿಯಲು
ಸಂಕ್ರಾಂತಿಯು ಬರುತಿದೆ ನವ ವರ್ಷದಲ್ಲಿ
ಸವಿಯೋಣ ಎಲ್ಲ ಕೂಡಿ ಬೇವು ಬೆಲ್ಲವ

ಬಯಸಿರಿ ಮಮತೆಯ ಅಣ್ಣ ತಮ್ಮಂದಿರಿಗೆ
ಸುಖ ಆರೋಗ್ಯವ ಬರುವ ವರ್ಷವೆಲ್ಲ 
ತಾಯಿಯ ಮನೆಯ ಸಹಜಾತ  ಕುಡಿಗಳಿಗೆ
ನೆನೆಸುತ ಕಳೆದ ಸಂತಸದ ಬಾಲ್ಯದ ದಿನಗಳ

ಮರೆಯೋಣ ಎಲ್ಲ ಕಹಿ ನೆನಪುಗಳ
ಸವಿಯೋಣ ಬರುವ ಸಿಹಿ ದಿನಗಳ
ಮೂಡಿಸೋಣ ನಮ್ಮ ಮಕ್ಕಳ ಮನದಲಿ
ಪ್ರೇಮ,ಪ್ರೀತಿ,ವಾತ್ಸಲ್ಯವ ಭವಿಷ್ಯದಲ್ಲಿ

ಕೂಡಿ ಹಂಚೋಣ ಬೇವು ಬೆಲ್ಲ ಬಂಧುಗಳಲಿ
ಸಾರೋಣ ನಾವು ತಂದೆ ತಾಯಿಯರ ಕುಡಿಯೆಂದು
ಎಳ್ಳು ತಿಂದು ಹರಸೆಂದು ಮಮತೆಯ ಮಾತಿನಲಿ
ಆಗಲಿ ಜೀವನ ಸಿಹಿಯಾಗಿ ಬೆಲ್ಲದಂತೆ ಎಂದೆಂದೂ

ಜಗದಲಿ ಸಿಗುವುದು ಎಲ್ಲ ವಸ್ತುವು ಹಣದಿಂದ
ಆದರದು ದುರ್ಲಭವು ಒಡಹುಟ್ಟಿದವರು
ತಂದೆ ತಾಯಿಯರಿಗೆ ಜನಿಸಿದ ಒಡನಾಡಿಗಳು
ತರಲಿ ಸಂಕ್ರಾಂತಿ ಹರುಷ ನಿಮ್ಮೆಲ್ಲರಿಗೂ ಸದಾ 

ರಚನೆ-ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨ ೭೬೨೧೬ 

No comments:

Post a Comment