ವಂದೇಹಂ ಪರಮಶಿವಂ
ನಮನ ನಟ ಶೇಖರ ನಟರಾಜ
ಗೌರೀವಲ್ಲಭ ಗಂಗಾಧರ ರುದ್ರೇಶ
ಪಾರ್ವತಿಯ ಪತಿ ಪರಮೇಶ ಶಿವ
ಜಟಾಜೂಟ ಗಜ ಚರ್ಮಾಂಬರಧರ
ಓಂಕಾರರೂಪ ಕೈಲಾಸವಾಸಿ ಗಿರೀಶ ಶಂಭೋ
ನಮಿಸುವೆ ನಾರಾಯಣೀ ವಲ್ಲಭ ಚಂದ್ರಮೌಳೇ
ತಡೆದೆ ಗಂಗಾ ಪ್ರವಾಹವ ಭಗೀರಥನಿಗಾಗಿ
ಮುಡಿದೆ ಜಟೆಯಲಿ ಗಂಗೆಯ, ಸವತಿಯಾಗಿ
ಅಮರರೆಲ್ಲರೂ ಕೂಡಿ ದಾನವರ ಸಹಿತ
ನಡೆಸೆ ಸಾಗರ ಮಂಥನವ ಸರ್ಪ ಪಾಶದಿ
ಜನಿಸಿದರಾಗ ವರಲಕ್ಷ್ಮಿ,ಚಂದ್ರ,ಕಾರ್ಕೋಟ
ಕುಡಿದೆ ವಿಷ ಜನಹಿತಕೆ,ನೀಲಕಂಠನಾದೆ
ತಾರಕನ ನಾಶಕೆ ವರಿಸಿದೆ ಹಿಮಸುತೆಯ
ಮದನ ಪುಷ್ಪ ಬಾಣಕೆ ಮದಿಸಿದೆ ಮನ್ಮಥನ
ಸುತರಾಗಿ ಜನಿಸಿದರು ಆರುಮುಖ ಸ್ಕಂದನು
ಗಜಮುಖ ಗಣೇಶನು,ವಿಘ್ನ ವಿನಾಶಕನು
ರಕ್ಷಿಸೆಮ್ಮನನವರತ ದೈತ್ಯ ದಾನವರಿಂದ
ಒಳಗಿನ ಅರಿಷಡ್ವರ್ಗಗಳಿಂದ ಅಹಂನಿಂದ
ಇರಿಸೆಮ್ಮನು ಸದಾ ಕಮಲೇಶನ ಧ್ಯಾನದಿ
ಪಡೆಯೆ ಮುಕ್ತಿಯ ಭವಬಂಧನದ ಚಕ್ರದಿಂದ
ರಚನೆ:ಕೆ.ವಿ.ಶ್ರೀನಿವಾಸ ಪ್ರಸಾದ್
ಎ-ಮೇಲ್: sreenivasaprasad.kv@gmail.com
No comments:
Post a Comment