ಪಂಡಿತ ಕೆ ಏನ್ ವಿ ಯವರ ೨೧ ನೆಯ ಪುಣ್ಯ ತಿಥಿ ಸ್ಮರಣೆ
ಛಲವಾದಿ ನನ್ನ ತಂದೆ ಪಂಡಿತ ಕೆ ಏನ್ ವಿ
ಕಂಡರು ಕೊರತೆಯ ಹೆಣ್ಣು ಮಕ್ಕಳ ವ್ಯಾಸಂಗದಿ
ಸಂಕಲ್ಪಿಸಿದರು ತೆರೆಯಲು ಬಾಲಿಕಾ ಶಾಲೆಯ
ತೆರೆದರು ಪ್ರಥಮದಿ ಶಾಲೆಯ ಅರವತ್ಮೂರರಲಿ
ಬೆಳೆಯಿತು ಸಣ್ಣ ಬಾಡಿಗೆ ಕೊಠಡಿಯಿಂದ
ಹೆಮ್ಮರವಾಗಿ ಮೂವತ್ತು ಕೊಠಡಿಯ ಸೌ ಧವಾಗಿ
ಶಿಶುವಿಹಾರದಾರಭ್ಯ ಮಹಿಳಾವಿದ್ಯಾಲಯವರೆಗೆ
ಬೋಧಕರಿಗೆ ಜೀವನ ನೀಡುವ ಕಲ್ಪವ್ರಿಕ್ಷವಾಗಿ
ಕಲಿತರದೆಷ್ಟೋ ಬಾಲಿಕೆಯರು ವಿವಿಧಹಂತದಿ
ಪಡೆದರು ಉನ್ನತ ವೃತ್ತಿಯ, ವ್ಯಕ್ತಿತ್ತ್ವವ
ಗಳಿಸಿತು ಸಂಸ್ಥೆ ಜನಾದರಣೆ , ಪ್ರೀತಿಯ
ಕೈಜೋಡಿಸಿದರು ಗಣ್ಯರದರ ಅಭಿವೃದ್ಧಿ ಗೆ
ಗತಿಸಿದರು ತೀರ್ಥರೂಪರು ತೊಂಬತ್ತರಲಿ
ಉಳಿಸಿಹೋದರು ಶ್ರಮದಿ ಬೆಳೆಸಿದ ಸಂಸ್ ಥೆಯ
ಸ್ಥಾಪಿಸಿದೆವು ಅವರ ನೆನಪಿನ ಟ್ರಸ್ ಟ್ ಅನ್ನು
ಉಳಿಸಿ ಬೆಳೆಸಲು ಅವರು ನೆಟ್ಟ ವ್ರಿಕ್ಷವನು
ಮನಃಪೂರ್ಣ ನಮನ ಪಂಡಿತ ಅಯ್ಯಂಗಾರ್ಯರಿಗೆ
ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರಮಿಸಿದವರಿಗೆ
ತೊಡುವೆವು ಪಣವ ಧ್ಯೇಯವದ ವಿಸ್ತರಿಸೆ
ಹರಸಲಿ ಶ್ರೀಕಾಂತ ನಮಗೆ ಶಕ್ತಿ ಬೆಂಬಲ ನೀಡಿ
ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್, ಟ್ರಸ್ಟ್ ಸದಸ್ಯ,
ಪಂಡಿತ ಕೆ.ಎನ್.ವರದರಾಜ ಅಯ್ಯಂಗಾರ್ ಮೆಮೊರಿಅಲ್ ಟ್ರಸ್ಟ್, ಮೈಸೂರ್
ಮೊಬ: ೯೮೪೪೨ ೭೬೨೧೬
No comments:
Post a Comment