Thursday, February 16, 2012

ಶ್ರೀ ಕೃಷ್ಣ ಸ್ತುತಿ


ಶ್ರೀ ಕೃಷ್ಣ ಸ್ತುತಿ
 
ಜನಿಸಿದೆ ದೇವಕಿಗೆ ಅಷ್ಟಮ ಸುತನಾಗಿ
ಕಂಸನ ಕಾರಾಗ್ರಿಹದ ಕತ್ತಲೆ ಕೋಣೆಯಲಿ
ನಡುರಾತ್ರಿ ಸುರಿಯುತಿರುವ ಮಳೆಯ ದಿನದಿ
ವಸುದೇವ ದೇವಕಿ ತನಯ ನಿನಗೆ ನಮನ
 
ಬೆಳೆದೆ ನೀ ಯಶೋದೆಯ ಅಕ್ಕರೆಯ ಮಗನಾಗಿ
ಸಂಹರಿಸಿದೆ ಪೂತನಿ ,ಶಕಟ,ಬಕಾಸುರರ, ಗಳಿಸಿ
ಗೋಪಿಯರ ಮೋಹವ, ಮರ್ಧಿಸಿ ಕಾಳಿಂಗನ ದರ್ಪವ
ದೇವಕಿ ವಸುದೇವ ಸುತನೆ ನಿನಗೆ ನಮನ
 
ಧಮಿಸಿದೆ ಮಲ್ಲವೀರ ಚಾನೂರರ ದರ್ಪವ
ಅಳಿಸಿದೆ ಸೋದರಮಾವ ಕಂಸನ ದುರಾಡಳಿತ
ಮರಳಿಸಿದೆ ರಾಜ್ಯವ ತಾತ ಉಗ್ರಸೇನನಿಗೆ
ವಸುದೇವ ದೇವಕಿ ತನಯ ನಿನಗೆ ನಮನ
 
ವರಿಸಿದೆ ರುಕ್ಮಿಣಿಯ ಅಪಹರಿಸಿ, ಪ್ರೀತಿಸಿ
ಪಡೆದೆ ಸತ್ಯಭಾಮೆ ಮರಳಿಸಿ ಸ್ಯಮಂತಕಮಣಿ
ಅತ್ತೆಯ ಸುತರಾದ ಪಾಂಡವರಿಗೆ ಅಭಯವಿತ್ತೆ
ದೇವಕಿ ವಸುದೇವ ತನಯ ನಿನಗೆ ನಮನ
 
ಧರ್ಮವನ್ನು ರಕ್ಷಿಸಿ,ಪಾಂಡವರಿಗೆ ರಾಜ್ಯ ಕೊಡಿಸೆ  
ಆದೆ ಶಾಂತಿಧೂತ, ಕ್ರೂರ ಕೌರವರ ಬಳಿ ನಡೆದೆ
ವಿಫಲವಾಗೆ ಸಂಧಾನ, ಅಳಿಸಿದೆ ಕುರುಸಂತಾನ
ಗೀತೆ ಅರುಹಿ ಬೆಳಕ ನೀಡಿದ ಗೋಪನಿಗೆ ನಮನ
 
 
 
 ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ನಂ-೧ ಏ ಡೀ ಎನ್ಕ್ಲೇವ್ ,ಮಾರುತಿನಗರ
ಸಹಕಾರನಗರ ಅಂಚೆ, ಬೆಂಗಳೂರು-೯೨ 

No comments:

Post a Comment