Thursday, February 16, 2012

ರಕ್ಷಾ ಬಂಧನದ ಶುಭಾಶಯ


ರಕ್ಷಾ ಬಂಧನದ ಶುಭಾಶಯ
 
ಒಲವಿನ ತಂಗಿಯರೆಲ್ಲರಿಗೆ ಶುಭಾಶಯ
ಶ್ರಾವಣ ಶುಕ್ಲ ಪೌರ್ಣಮಿಯ ದಿನವಿಂದು
ಬಯಸುವೆವು ನಿಮಗೆ ಆಯುರಾರೋಗ್ಯ
ಸಕಲ ಸಂಪದವ, ಸುಖ, ನೆಮ್ಮದಿಯ 
 
ಜನಿಸಿದೆವು ಒಂದೇ ತಾಯಿಯ ಮಡಿಲಲ್ಲಿ
ಬೆಳೆದೆವು ಕೂಡಿ ನಲಿಯುತ ಕುಣಿಯುತ
ಛೇಡಿಸಿದೆವೆಷ್ಟೋ ಸಮಯ ಕೆಣಕುತ ನಲಿಯುತ
ಉಂಡೆವು   ಒಂದೇ ತಟ್ಟೆಯಲಿ  ಎಳೆದಾಡುತ  
 
ಕಳೆದಿಹೆವು ಆ ಸುಂದರ ದಿನಗಳ ನೆನಪಲಿ
ನೀವಾಗಿರುವಿರಿ ಗ್ರಿಹಿಣಿಯರು ಜೀವನದಲೀಗ
ಮರೆಯದಿರಿ ತಂದೆ,ತಾಯಿಯ,ಸಹೋದರರ
ಹರಸಿರಿ, ಪ್ರಾರ್ಥಿಸಿರಿ, ನಮ್ಮಗಳ ಕ್ಷೇಮ ಸದಾ
 
ಕಟ್ಟಿಹಿರಿ ರಕ್ಷಾ ಬಂಧನವ ಶುಭದಿನವಿಂದು
ನಲಿವಿನಲಿ,ಸಂತಸದಿ ಬೆರೆತು ನಮ್ಮೊಡನೆ
ಹಂಚಿಹಿರಿ ಸಿಹಿಯನು ಬಯಸುತ ಕ್ಷೇಮವ
ನೆನೆಯುವೆವು ಸದಾ ನೀವು ಕಟ್ಟಿದ ಬಂಧನವ
 
ಎಂದೆಂದಿಗೂ ಇರಲಿ ಹಸಿರಾಗಿ ಈ ನಿಮ್ಮ ಪ್ರೀತಿ
ನಾವಾಗುವೆವು ನಿಮ್ಮ ಕಷ್ಟ ಸುಖದಿ ಒಂದಾಗಿ
ನೀಡಲಿ ಶ್ರೀ ಹರಿಯು ಸುಖ ಶಾಂತಿ ನೆಮ್ಮದಿಯ
ನಿಮ್ಮ ಜೀವನದಿ ನೂರ್ಕಾಲ ಅನವರತ, ನಿರತ
 
 
 ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ನಂ-೧ ಏ ಡೀ ಎನ್ಕ್ಲೇವ್ ,ಮಾರುತಿನಗರ
ಸಹಕಾರನಗರ ಅಂಚೆ, ಬೆಂಗಳೂರು-೯೨
ಫೋನ್ ;9844276216  

No comments:

Post a Comment