ಭಗವದ್ಗೀತೆ ಒಂದು ಮಹಾನ್ ಮತ್ತು ಪವಿತ್ರ ಕೃತಿ.೧೮ ಅಧ್ಯಾಯ ಉಳ್ಳ ಈ ಕೃತಿಯನ್ನು ಓದಲು ಇಂದಿನ ಯುವಕರಿಗೆ ಸಮಯ ಮತ್ತು ಶ್ರದ್ದೆ ಕಡಿಮೆ. ಭಗವದ್ಗೀತೆಯ ಸಾರಾಂಶವನ್ನು ಇಂದಿನ ಯುವಕರಿಗೆ ತಿಳಿಸಲು ಒಂದು ಸಣ್ಣ ಪ್ರಯತ್ನವೆಂಬಂತೆ, ಪ್ರತಿ ಅಧ್ಯಾಯದ ಶ್ಲೋಕಗಳ ಸಾರಾಂಶವನ್ನು ಕೇವಲ್ ೫ ಪದ್ಯಗಳಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದೇನೆ. ಇದು ಭಗವದ್ಗೀತೆಯ ಮಹತ್ವವನ್ನು ಇಂದಿನ ಯುವಕರಿಗೆ ತಿಳಿಸುವಲ್ಲಿ ಯಶಸ್ವಿಯಾದರೆ ಅದು ನನ್ನ ಪ್ರಯತ್ನಕ್ಕೆ ದೊರೆತ ಯಶಸ್ಸು ಎಂದು ತಿಳಿಯುತ್ತೇನೆ. ಈ ಪ್ರಯತ್ನ ಭಗವತ್ ಪ್ರೇರಣ ಮತ್ತು ಅವನಿಗೆ ಸಮರ್ಪಿತ.ಈಗಾಗಲೇ ಎರಡು ಅಧ್ಯಾಯಗಳನು ಪ್ರಕಟಿಸಿದ್ದೇನೆ. ಮುಂದಿನ ೧೬ ಅಧ್ಯಾಯಗಳನು ದಿನಕ್ಕೆರಡು ಅಧ್ಯಾಯದಂತೆ ಪ್ರಕಟಿಸುವೆ. ಕೃಷ್ನಾರ್ಪನಮಸ್ತು.
ಶ್ರೀ ಕ್ರಷ್ಣ ಸಂದೇಶ-ಅಧ್ಯಾಯ ೩-ಕರ್ಮಯೋಗ
ಕರ್ಮ ಅನಿವಾರ್ಯ, ಬೇಡ ಮೋಹವದರಲಿ
ಮಾಡು ಕರ್ಮ, ಬಯಸದೆ ಫಲ ಅದರಿಂದ
ಭಗವಂತನ ತ್ರಿಪ್ತಿಯೇ ಕರ್ಮದ ಗುರಿಯಿರಲಿ
ದೊರೆವುದಾಗ ಮುಕ್ತಿ ಕರ್ಮಾಚರಣೆಯಿಂದ
ಕರ್ಮದಲಿ ಯಗ್ನಕರ್ಮ ಅವಶ್ಯ, ತದರಿಂದ
ಬರುವುದು ಪರ್ಜನ್ಯ ಬದುಕಿಗದು ಅವಶ್ಯ
ಕಾಲ ಕಾಲಕೆ ಮಳೆ ಬೆಳೆಯ ಮೂಲ, ಬೆಳೆಯೇ
ಬೇಕು, ಉಸಿರಿಗದು ಆಧಾರ, ಇಲ್ಲದೆ ಜೀವವಿಲ್ಲ
ಕರ್ಮ ಧರ್ಮಾನುಸಾರವಿರಬೇಕು, ರಾಗ ದ್ವೇಷ
ವ್ವರ್ಜಿತವಿರಬೇಕು ದೇವನಿಗೆ ಅರ್ಪಿಸಬೇಕು
ತನ್ನ ಧರ್ಮದಲ್ಲಿಯೇ ಇರಬೇಕು, ಫಲದಾಸೆಗೆ
ಪರಧರ್ಮ ಪಡೆಯಬಾರದು, ಭಯಂಕರವದು
ಕರ್ಮಕೆ ಕಡು ವೈರಿ ಕಾಮ ಕ್ರೋಧ ಅಹಂಕಾರ
ಪಡೆವುವು ನೆಲೆ ಬುದ್ದಿ, ಮನಸ್ಸು, ಇಂದ್ರಿಯದಲಿ
ಪಾರ್ಥ ನಿಗ್ರಹಿಸು ಇಂದ್ರಿಯ ಮನಸ್ಸು ಬುದ್ದಿಯನು
ನಿರತನಾಗು ಕರ್ಮದಲಿ ನಿಸ್ವಾರ್ಥದಲಿ ಅರ್ಪಿಸುತ
ಸಮರವಾಗಬೇಕು ಅಂತರಂಗದಲಿ ಎದುರಾಗುವ
ಬಾಳ ಶತ್ರುಗಳಾದ ಕಾಮ, ಕ್ರೋಧ, ಅಹಂಕಾರಗಳಿಗಾಗಿ
ಅರಿವಾಗುವುದು ಆತ್ಮದ ಸಾಕ್ಷಾತ್ಕಾರವಾಗ
ಆತ್ಮದ ಅರಿವು ಆಗುವುದು ಬಾಳ ದೀವಟಿಗೆ
ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ: ೯೮೪೪೨ ೭೬೨೧೬
E-Mail:sreenivasaprasad.kv@gmail.com
ಶ್ರೀ ಕ್ರಷ್ಣ ಸಂದೇಶ-ಅಧ್ಯಾಯ ೩-ಕರ್ಮಯೋಗ
ಕರ್ಮ ಅನಿವಾರ್ಯ, ಬೇಡ ಮೋಹವದರಲಿ
ಮಾಡು ಕರ್ಮ, ಬಯಸದೆ ಫಲ ಅದರಿಂದ
ಭಗವಂತನ ತ್ರಿಪ್ತಿಯೇ ಕರ್ಮದ ಗುರಿಯಿರಲಿ
ದೊರೆವುದಾಗ ಮುಕ್ತಿ ಕರ್ಮಾಚರಣೆಯಿಂದ
ಕರ್ಮದಲಿ ಯಗ್ನಕರ್ಮ ಅವಶ್ಯ, ತದರಿಂದ
ಬರುವುದು ಪರ್ಜನ್ಯ ಬದುಕಿಗದು ಅವಶ್ಯ
ಕಾಲ ಕಾಲಕೆ ಮಳೆ ಬೆಳೆಯ ಮೂಲ, ಬೆಳೆಯೇ
ಬೇಕು, ಉಸಿರಿಗದು ಆಧಾರ, ಇಲ್ಲದೆ ಜೀವವಿಲ್ಲ
ಕರ್ಮ ಧರ್ಮಾನುಸಾರವಿರಬೇಕು, ರಾಗ ದ್ವೇಷ
ವ್ವರ್ಜಿತವಿರಬೇಕು ದೇವನಿಗೆ ಅರ್ಪಿಸಬೇಕು
ತನ್ನ ಧರ್ಮದಲ್ಲಿಯೇ ಇರಬೇಕು, ಫಲದಾಸೆಗೆ
ಪರಧರ್ಮ ಪಡೆಯಬಾರದು, ಭಯಂಕರವದು
ಕರ್ಮಕೆ ಕಡು ವೈರಿ ಕಾಮ ಕ್ರೋಧ ಅಹಂಕಾರ
ಪಡೆವುವು ನೆಲೆ ಬುದ್ದಿ, ಮನಸ್ಸು, ಇಂದ್ರಿಯದಲಿ
ಪಾರ್ಥ ನಿಗ್ರಹಿಸು ಇಂದ್ರಿಯ ಮನಸ್ಸು ಬುದ್ದಿಯನು
ನಿರತನಾಗು ಕರ್ಮದಲಿ ನಿಸ್ವಾರ್ಥದಲಿ ಅರ್ಪಿಸುತ
ಸಮರವಾಗಬೇಕು ಅಂತರಂಗದಲಿ ಎದುರಾಗುವ
ಬಾಳ ಶತ್ರುಗಳಾದ ಕಾಮ, ಕ್ರೋಧ, ಅಹಂಕಾರಗಳಿಗಾಗಿ
ಅರಿವಾಗುವುದು ಆತ್ಮದ ಸಾಕ್ಷಾತ್ಕಾರವಾಗ
ಆತ್ಮದ ಅರಿವು ಆಗುವುದು ಬಾಳ ದೀವಟಿಗೆ
ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ: ೯೮೪೪೨ ೭೬೨೧೬
E-Mail:sreenivasaprasad.kv@gmail.com
No comments:
Post a Comment