Wednesday, September 19, 2012





ಗೌರಿ ಸ್ತುತಿ 


ನಮಸ್ತೇ ಕಾತ್ಯಾಯನೀ ಗೌರಿ
ನಮಸ್ತೇ ಪಾರ್ವತೀ ಶಕ್ತಿ
ನಮಸ್ತೇ ಶಿವಸತಿ ಕಾಳೀ
ನಮಸ್ತೇ ಹಿಮವತೀ ಭದ್ರೆ  

ನಮಿಸುವೆ ಉಮೇ ನಾರಾಯಣೀ
ನಾರಾಯಣನ ಪ್ರೀತಿಯ ಸಹೋದರಿ
ಹಿಮವಂತನ ಅಕ್ಕರೆಯ ಸುತೆ
ಪರಶಿವನ ಮೆಚ್ಹಿದ ಮಡದಿ

ಸ್ವಾಗತವು ನಿನಗೆ ಭೂಲೋಕಕೆ
ಹರಸು ನಿನ್ನ ಮಕ್ಕಳನು ಮನತುಂಬಿ
ನೀಡುತಲಿ ಇಷ್ಟಾರ್ಥ ಫಲಗಳ
ಸವಿಯುತ ಅವರ ತಿಂಡಿ ತಿನಸುಗಳ

ಸ್ರಿಜಿಸಿದೆ ನಿನ್ನ ಸ್ವೇದದಲಿ ಕುವರನ
ಎಲ್ಲರ ಮೆಚ್ಹಿನ ಗಣಪ ವಿನಾಯಕನ
ತಾಯಿಯಾಣತಿಯಂತೆ ನಡೆದ ಧೀರನ
ತಡೆದ ವಿರೂಪಾಕ್ಷನ ಆಗಮನವ

ಎಲ್ಲರೂ ಆಚರಿಸುವರು ಸಂಭ್ರಮವ
ಗೌರಿ-ಗಣೇಶ ಚತುರ್ಥಿಯ  ಇಂದು
ಪೂಜಿಸುತ ಗಜಮುಖನ ನಾಳೆಯಂದು
ಹರಸು ಜನತೆಯ ನೀಡಿ ಸಮೃದ್ಧಿಯ 

ರಚನೆ : ಕೆ.ವಿ.ಶ್ರೀನಿವಾಸ ಪ್ರಸಾದ್ 


Friday, July 27, 2012

Sree Rama Stotram







ಶ್ರೀ ರಾಮ ಸ್ತೋತ್ರಂ
ಕೌಸಲ್ಯಾತನಯ ಸುಂದರ ರಾಮ
ದಶರತಸುತ ಕೋದಂಡರಾಮ
ಅಯೋಧ್ಯಾಪುರಿಯ ರಕ್ಷಕ ರಾಮ
ರಾಜಾ ರಾಮ,ರಕ್ಷಿಸು ಅನುಕಾಲ
ಪಡೆದೆ ದಿವ್ಯಾಸ್ತ್ರಗಳ,ರಕ್ಷಿಸಿ
ಕೌಶಿಕರ ಯಾಗವ, ಬಾಲ್ಯದಲಿ
ವರಿಸಿದೆ ಜನಕನ ಸುತೆಯ
ಸೀತೆಯ, ಶಿವ ಧನುವ ಛೇದಿಸಿ
ಪಿತೃ ವಾಕ್ಯವೇ ಪರಮ ಪೂಜ್ಯ
ಎಂದರುಹಿ ನಡೆದೆ ವನಕೆ
ಅನುಜ ಲಕ್ಷ್ಮಣನ ಒಡಗೂಡಿ
ಅನುಸರಿಸೆ ಸೀತೆ ಕಾನನಕೆ  
ಪ್ರಜಾ ರಕ್ಷಣೆಯೇ ಪರಮಗುರಿ
ಎಂದು ನೆಲೆಸಿದೆ ಚಿತ್ರಕೂಟದಿ
ಮುನಿಗಳ ಕಾಪಾಡುತ ರಕ್ಕಸರಿಂದ
ಅಳಿಸಿದೆ ದಾನವರ ದಿವ್ಯಾಸ್ತ್ರದಿ
ತಾಪಸ ವೇಷದಿ ಅಪಹರಿಸೆ
ಸಾಧ್ವಿ ಸೀತೆಯನು, ರಾವಣನು
ಅಲೆದೆ ಕಂಗೆಟ್ಟು ಘೋರ ಅರಣ್ಯದಿ
ಸಂಧಿಸಿದೆ ವಾಯುಸುತ ಹನುಮನ
ವಾನರ ನೃಪ ಸುಗ್ರೀವನ ಸಖ್ಯಗೈದೆ
ವಧಿಸಿದೆ ವಂಚಕ ವಾಲಿಯನು
ಅರಸಿ ಹೊರಟಿತು ವಾನರ ಸೈನ್ಯ
ಚಲಿಸಿದನು ಹನುಮ ದಕ್ಷಿಣಕೆ
ಧಾಟಿದ ಸಾಗರವ ಧೀರ ಹನುಮ
ಕಂಡ ಸೀತೆಯನು ಅಶೋಕವನದಿ
ಸಿರಿಪುರಿ ಲಂಕೆ ಧಗಧಗಿಸಿತು
ನಡುಗಿದರು ದಾನವರು ಭಯದಲಿ
ರಾಮ ಸೈನ್ಯ ತಲುಪಿತು ಲಂಕೆಯನು
ಆಯಿತು ರಾವಣ ಕುಂಭಕರ್ಣರ ವಧೆ
ವಿಭೀಶಣಗೆ  ರಾಜ್ಯ ಪಟ್ಟಾಭಿಷೇಕ
ಮರಳಿದರು ರಾಮಸೀತೆಲಕ್ಷ್ಮಣರು
ಮರಳಿಸಿದ ರಾಜ್ಯ ಅನುಜ ಭರತ
ಮೆರೆಯುತ ಸೋದರ ಪ್ರೇಮವ
ಆಯಿತು ರಾಮ ಪಟ್ಟಾಭಿಷೇಕ
ನಲಿಯುತು ಅಯೋಧ್ಯೆ ಸಂತಸದಿ
ರಾಮ ನೀನಾದೆ ಪುರುಷೋತ್ತಮ
ಬ್ರಾತೃ ಪ್ರೇಮಕೆ ಮಾದರಿಯೆನಿಸಿ
ನಿಲ್ಲುವುದು  ನಿನ್ನ ಕಥೆ ಅಮರ
ಶರಣೆನುವೆ ರಕ್ಷಿಸು ಅನವರತ
ಮಂಗಳವು ಕೋಸಲೆಂದ್ರನಿಗೆ
ಮಂಗಳವು ಇಕ್ಷ್ವಾಕು ಕುಲಜನಿಗೆ
ಮಂಗಳವು ಜಾನಕೀ ವಲ್ಲಭನಿಗೆ
ಮಂಗಳವು ಹನುಮಸಖ ರಾಮಗೆ
ರಚನೆ:  ಕೆ.ವಿ.ಶ್ರೀನಿವಾಸ ಪ್ರಸಾದ್

Tuesday, June 26, 2012

















ಮರಳಿ ಬರುತಿದೆ ಸಂಕ್ರಾಂತಿ

ಬನ್ನೀರೆ ಬನ್ನೀರೆ ಅಕ್ಕ- ತಂಗಿಯರೆಲ್ಲರು
ತಂದೆ ತಾಯಿ ಮನೆಗೆ ಕೂಡಿ ನಲಿಯಲು
ಸಂಕ್ರಾಂತಿಯು ಬರುತಿದೆ ನವ ವರ್ಷದಲ್ಲಿ
ಸವಿಯೋಣ ಎಲ್ಲ ಕೂಡಿ ಬೇವು ಬೆಲ್ಲವ


ಬಯಸಿರಿ ಮಮತೆಯ ಅಣ್ಣ ತಮ್ಮಂದಿರಿಗೆ
ಸುಖ ಆರೋಗ್ಯವ ಬರುವ ವರ್ಷವೆಲ್ಲ
ತಾಯಿಯ ಮನೆಯ ಸಹಜಾತ  ಕುಡಿಗಳಿಗೆ
ನೆನೆಸುತ ಕಳೆದ ಸಂತಸದ ಬಾಲ್ಯದ ದಿನಗಳ


ಮರೆಯೋಣ ಎಲ್ಲ ಕಹಿ ನೆನಪುಗಳ
ಸವಿಯೋಣ ಬರುವ ಸಿಹಿ ದಿನಗಳ
ಮೂಡಿಸೋಣ ನಮ್ಮ ಮಕ್ಕಳ ಮನದಲಿ
ಪ್ರೇಮ,ಪ್ರೀತಿ,ವಾತ್ಸಲ್ಯವ ಭವಿಷ್ಯದಲ್ಲಿ


ಕೂಡಿ ಹಂಚೋಣ ಬೇವು ಬೆಲ್ಲ ಬಂಧುಗಳಲಿ
ಸಾರೋಣ ನಾವು ತಂದೆ ತಾಯಿಯರ ಕುಡಿಯೆಂದು
ಎಳ್ಳು ತಿಂದು ಹರಸೆಂದು ಮಮತೆಯ ಮಾತಿನಲಿ
ಆಗಲಿ ಜೀವನ ಸಿಹಿಯಾಗಿ ಬೆಲ್ಲದಂತೆ ಎಂದೆಂದೂ


ಜಗದಲಿ ಸಿಗುವುದು ಎಲ್ಲ ವಸ್ತುವು ಹಣದಿಂದ
ಆದರದು ದುರ್ಲಭವು ಒಡಹುಟ್ಟಿದವರು
ತಂದೆ ತಾಯಿಯರಿಗೆ ಜನಿಸಿದ ಒಡನಾಡಿಗಳು
ತರಲಿ ಸಂಕ್ರಾಂತಿ ಹರುಷ ನಿಮ್ಮೆಲ್ಲರಿಗೂ ಸದಾ


ರಚನೆ-ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨ ೭೬೨೧೬












ನನ್ನ ಕೆಲವು ಮಿತ್ರರ ಅಪೇಕ್ಷೆಯಂತೆ ಭಗವಾನ್ ಅಗಸ್ತ್ಯ ಮುನಿ ಪ್ರಣೀತವಾದ "ಆದಿತ್ಯ ಹೃದಯ" ಸ್ತೋತ್ರದ ಕನ್ನಡದ
ಅನುವಾದವನ್ನು ಮೂಲಕ್ಕೆ ಚ್ಯುತಿ ಬಾರದಂತೆ ಈ ಕೆಳಗೆ ಭಗವದಾಜ್ಞೆಯಂತೆ ಮಾಡಲು ಯತ್ನಿಸಿದ್ದೇನೆ.ಅದು ಮಿತ್ರರಿಗೆ
ಇಷ್ಟವಾದರೆ ನನ್ನ ಪ್ರಯತ್ನ ಸಾರ್ಥಕ.ಇದನ್ನು ಮೂರು ಕಂತಿನಲ್ಲಿ ಅಂದರೆ,ಪೀಠಿಕೆ,ಸ್ತೋತ್ರ ಮತ್ತು ಫಲಶ್ರುತಿ ಎಂಬುದಾಗಿ
ಪ್ರಕಟಿಸುತ್ತಿದ್ದೇನೆ.ಕೃಷ್ಣಾರ್ಪಣಮಸ್ತು  .

ಆದಿತ್ಯ ಹೃದಯ ಸ್ತೋತ್ರ 
ಪೀಠಿಕೆ:


ಸಮರದಲಿ ಬಳಲಿದಂತಿದ್ದ
ಚಿಂತಾಮಗ್ನನಾಗಿದ್ದ ರಾಮನನು
ಎದುರಿನಲ್ಲಿ ಯುದ್ಹಸಂನದ್ದನಾಗಿ
ನಿಂತ ರಾವಣನನು ಕಂಡರು(ಅಗಸ್ತ್ಯರು)


ದೇವತೆಯರ ಒಡಗೂಡಿ ಸಮರ
ವನು ವೀಕ್ಷಿಸಲು ಆಗಮಿಸಿದ್ದ
ಭಗವಾನ್ ಅಗಸ್ತ್ಯ ಮುನಿಗಳು
ರಾಮನನ್ನು ಸಮೀಪಿಸಿಂತೆನ್ದರು


ಹೇ ರಾಮ,ರಾಮ,ಮಹಾಬಾಹು ಕೇಳು
ಸನಾತನವು,ಗುಪ್ತವಾದ ಮಂತ್ರ
ಯಾವುದರಿಂದ ಸರ್ವ ಶತ್ರುಗಳ
ರಣರಂಗದಿ ಜಯಿಸಬಹುದೋ (ಆ ಮಂತ್ರ)


ಪುಣ್ಯಕರವೂ ಸರ್ವ ಶತ್ರುಗಳ
ನಾಶಕವೂ ಆದ ಆದಿತ್ಯಹೃದಯ
ನಿತ್ಯ ಜಪ ಮಾತ್ರ ವಿಜಯವು
ಮಂಗಳವು,ಅಕ್ಷಯವು ಲಭ್ಯವು.


ಸರ್ವರೀತಿಯ  ಮಂಗಳಕರವು
ಸರ್ವ ಪಾಪಗಳ ನಿವಾರಕವು
ಚಿಂತೆ,ಶೋಕಗಳ ಶಮನಕಾರಿಯು
ಆಯಸ್ಸು,ಸಂಪತ್ತು ವೃದ್ಧಿಸುವುದು

ಸ್ತೋತ್ರ :

ಚಿಮ್ಮುತ್ತಿರುವ ಕಿರಣವುಳ್ಳವನು
ದೇವಾಸುರರಿಂದ  ವಂದಿತನು
ವೈವಸ್ವತಸುತನು ,ಭೂಪತಿಯು
ಆದ ಸೂರ್ಯನನು ನಮಸ್ಕರಿಸು


ಸೂರ್ಯನು ಸರ್ವದೇವರಲ್ಲಿಹನು
ತೇಜಸ್ವಿ ಕಿರಣಗಳಿಂದ ಆವೃತನು  
ದೇವದಾನವ ಗಣವನು  ತನ್ನ
ಕಿರಣಗಳಿಂದ ಪೋಷಿಸುವವನು


ಇವನೇ ಪಿತಾಮಹನು,ವಿಷ್ಣುವು
ಶಿವನು,ಸ್ಕಂದನು,ಪ್ರಜಾಪತಿಯೂ
ಮಹೆಂದ್ರನು,ಕುಬೇರನು,ಕಾಲನು
ಯಮನು,ಚಂದ್ರನು,ವರುಣನಾದಿಯು


ಪಿತೃಗಳು,ಅಷ್ಟಾವಸುವು,ಸಾಧ್ಯನು
ಅಶ್ವಿನಿದೇವತೆಯು ,ಮರುತನು
ಅಗ್ನಿಯು,ವಾಯುವು,ಪ್ರಾಣವಾಯುವು
ಋತುಗಳ ಕರ್ತನು,ಪ್ರಭಾಕರನು


ಆದಿತ್ಯನು, ಪೃಥ್ವಿಗೊಡೆಯ ಸೂರ್ಯನು
ಗಗನ ಸಂಚಾರಿಯು,ವೃಷ್ಟಿಭೂತನು
ಸುವರ್ಣ ಸದೃಶ ಕಾಂತಿಯುಳ್ಳವನು
ಬ್ರಹ್ಮಾಂಡ ಕಾರಕನು,ಅಹರ್ನಿಶನು


ಪಚ್ಚೆಯ ಅಶ್ವಾರೋಹಿ,ಸಹಸ್ರಾಕ್ಷನು
ಸಪ್ಥಾಶ್ವ ರಥಿಯು,ನಿಶಾವರೋಹಿಯು
ಸುಖ ನೀಡಿ,ದುಃಖ ಕಳೆಯುವವನು
ಪ್ರಳಯದಿ ಪುನಃ ಜನಿಸುವವನು


ಸ್ವರ್ಣ ಮನದವನು,ಶೀತಲನು
ತಾಪ ಕಾರಕನು,ತೇಜೋಮಯನು
ಗರ್ಭದಿ ತೀಕ್ಷ್ನಾಗ್ನಿ ಸಹಿತನು,ರುದ್ರನು
ಹಿಮಾರಿಯು,ಅಸ್ತಮದಲಿ ಶಾಂತನು


ಆಕಾಶಪತಿಯು,ತಮೋಹಾರಿಯು
ಋಗ್ಯಜುಸ್ಸಾಮ ಪಾರಂಗತನು
ವೃಷ್ಟಿಕಾರಕನು,ಸಾಗರಮಿತ್ರನು
ವಿಂಧ್ಯಾಟವಿಯಲಿ ವೇಗಗಮಿತನು


ಅರಿಮರ್ಧನನು, ಮಂಡಲಿಯು
ಪೀತಾಂಬರಿಯು,ತಾಪಕಾರಕನು
ಮಹಾತೇಜಸ್ವಿಯು,ಕವಿಯು,ವಿಶ್ವನು
ಸಕಲ ಪ್ರಾಣಿಗಳಲಿ ಪ್ರೇಮಿಯು


ನಕ್ಷತ್ರ,ಗ್ರಹ,ತಾರಾಸಮೂಹಕೆ
ಒಡೆಯನು,ವಿಶ್ವೋತ್ಪತ್ತಿ ಕಾರಣನು
ತೇಜಸ್ವಿಗಳಲಿ ಮಹಾತೇಜಸ್ವಿಯೂ
ದ್ವಾದಶಾದಿತ್ಯನಾದವನಿಗೆ ನಮನ


ಪೂರ್ವದಿ ಏಳುವವಗೆ ನಮನ
ಪಶ್ಚಿಮದಿ ಜಾರುವವಗೆ ನಮನ
ಸಕಲ ಜ್ಯೋತಿಗಣದೊಡೆಯನೆ
ದಿವಿಕಾರಕನೆ  ಅನಂತ ನಮನ


ಜಯಪ್ರದನು,ಮಂಗಳಕಾರಕನು
ಕಪಿಲಾಶ್ವವುಳ್ಳ ರವಿಗೆ ನಮನ
ಸಹಸ್ರ ಕಿರಣವುಳ್ಳ ಅದಿತಿಸುತ
ತೇಜೋಪುಂಗನಿಗೆ ಸನಮೋನಮಃ


ಅರಿಗೆ ರುದ್ರನು,ಇಷ್ಟ ರಕ್ಷಕನು
ವೇಗದಿ ಗಮಿಸುವ ರವಿಗೆ ನಮನ
ಕಮಲೋತ್ಪತ್ತಿ ಜನಕಗೆ ನಮನ
ಮಾರ್ತಾಂಡನಿಗೆ ಸನಮೋನಮಃ


ಬ್ರಹ್ಮೇಶ  ಅಚ್ಯುತರ ಒಡೆಯನೆ
ಸೂರ್ಯನೇ,ಅಪಾರ ತೇಜಸ್ವಿಯೇ
ಜೀವಿಗಳ ಸೃಷ್ಟಿಸಿ ಕಬಳಿಸುವ
ಘೋರ ರೂಪವುಳ್ಳವನೇ ನಮನ


ತಮದ,ಹಿಮದ ನಾಶಕಾರಕನೆ
ಅಮಿತಾತ್ಮನೆ,ಶತ್ರುವಿನಾಶಕನೆ
ಕೃತಘ್ನರನು ಸಂಹರಿಸುವವನೆ
ಜ್ಯೋತಿಷಿಯರ ಜನಕನೆ ನಮನ


ಪುಟವಿಟ್ಟ ಚಿನ್ನದಂತಿರುವವನೆ
ಅಗ್ನಿಸ್ವರೂಪನೆ, ವಿಶ್ವ ಕಾರಣನೆ
ಲೋಕದ ಎಲ್ಲ ಕಾರ್ಯಗಳ ಸಾಕ್ಷಿಯೇ
ಕತ್ತಲ ನೀಗಿಸುವವನೇ ನಮನ


ಆದಿತ್ಯನು  ಭೂತಗಳ ಮರ್ಧನನು
ಪುನಃ ಅವುಗಳ ಸೃಷ್ಟಿಸುವವನು
ತಾಪದಿ ಒಣಗಿಸಿ,ಸುಡುವವನು
ಮಳೆಗರಿಸಿ ಮರಳಿ ಜೀವದಾತನು


ಮಲಗಿದವರಲಿ ಜಾಗೃತನು
ಭೂತಗಳಲಿ ಪರಿನಿಷ್ಥಿತನು
ಇವನೇ  ಅಗ್ನಿಹೋತ್ರವು ಮತ್ತು
ಅಗ್ನಿಹೋತ್ರುಗಳಿಗೆ ಫಲಧಾತನು


ಇವನೇ ಚತುರ್ವೇದವು,ಸಕಲ
ಯಜ್ಞಗಳು,ಯಜ್ಞ ಫಲವು ಇವನೇ
ಪೃಥ್ವಿಯಲಿ ನಡೆವ ಎಲ್ಲ ಕೃತ್ಯಕ್ಕೂ
ಈ ರವಿಯೇ ಒಡೆಯನೂ ಆಗಿದ್ದಾನೆ

ಫಲ ಶ್ರುತಿ :


ಯಾರು ಆಪತ್ಸಮಯದಿ ,ಕಷ್ಟದಿ
ಅರಣ್ಯದಿ,ಭಯ ಸಂದರ್ಭದಿ
ಆದಿತ್ಯ ಹೃದಯ ಪಠಿಸುವರೋ
ಅವರು ನಿಶ್ಚಯ ಸಂಕಟರಹಿತರು


ಹೇ ರಾಮ!ಏಕಾಗ್ರದಿಂದ ನಮಿಸು
ದೇವದೇವ ಜಗತ್ಪತಿ ರವಿಯ
ಆದಿತ್ಯ ಹೃದಯ ತ್ರಿವಾರ ಜಪಿಸಿ
ಸಮರದಲಿ ವಿಜಯಶಾಲಿಯಾಗು


ಈ ಕ್ಷಣದಲಿ ಹೇ!ಮಹಾಬಾಹೋ
ರಾವಣನ ನೀನು ವಧಿಸುತ್ತೀಯೇ
ಎಂದು ನುಡಿದರು ಅಗಸ್ತ್ಯ ಮುನಿ
ನಿರ್ಗಮಿಸಿದರು ಬಂದದಾರಿಯಲಿ


ಇದನಾಲಿಸಿದ ತೇಜಸ್ವಿ ರಾಮ
ದುಃಖ ಕಳೆದವನಾದವನಾಗಿ
ಸುಪ್ರೀತ,ಸುಪ್ರಸನ್ನ ರಾಘವನು
ಮರಳಿ ಪ್ರಯತ್ನವ ಮಾಡಿದನು


ಆಡಿತ್ಯನನು ವೀಕ್ಷಿಸಿ ,ಜಪಿಸಿ
ಅತ್ಯಂತ ಹರ್ಷವನ್ನು ಹೊಂದಿದನು
ಮೂರುಬಾರಿ ಆಚಮಿಸಿ,ಶುಚಿಹೊಂದಿ
ವೀರ್ಯವಂತ ರಾಮ ಧನು ಹಿಡಿದನು


ಸಮರಕ್ಕಾಗಿ ಪುನರಾಗಮಿಸಿದ
ರಾವಣನ ನೋಡಿ ಹರ್ಷಿತನಾದನು
ಸರ್ವಪ್ರಯತ್ನದಿಂದ ರಾವಣನನು
ಸಂಹರಿಸಲು ಧೃಡ ಚಿತ್ತನಾದನು


ಮುದಗೊಂಡ,ಅತ್ಯಂತ ಹರ್ಷಿತನಾದ
ರಾಮನ ಕುರಿತು ರವಿ ನುಡಿದನು
ಸುರಗಣದ ಮಧ್ಯೆ ಪ್ರತ್ಯಕ್ಷಗೊಂಡು
ನಿಶ್ಚಯ ರಾವಣನ ನಾಶ ಎಂದನು


ಇತಿ ಆದಿತ್ಯ ಹೃದಯ ಸ್ತೋತ್ರಂ ಸಂಪೂರ್ಣಂ

ರಚನೆ:ಕೆ.ವಿ.ಶ್ರೀನಿವಾಸ ಪ್ರಸಾದ್
ಇ-ಮೇಲ್:sreenivasaprasad.kv@gmail.com
  










ನಮನ ಕೋಟಿ ನಮನ 

(ಶಷ್ಟ್ಯಬ್ಧಿಪೂರ್ತಿ ಉತ್ಸವದ  ಸಂದರ್ಭದಲ್ಲಿ ರಚಿಸಿದುದು)


ಜನಿಸಿದೆ ಆರು ದಶಕಗಳ ಹಿಂದೆ
ತಂದೆತಾಯಿಯ ಪ್ರೀತಿಯ ಕುವರನಾಗಿ
ತಾತ ಅಜ್ಜಿಯರ ಮುದ್ದಿನ ಮೊಮ್ಮಗನಾಗಿ
ಅತ್ತೆ ಐವರ ಲಲನೆ ಪಾಲನೆಯಲಿ


ಕಳೆದೆ ಬಾಲ್ಯವ ಆನಂದದಲಿ, ಬಾಲ
ಸಖರೊಡನೆ,ಅತ್ತಂಗ,ಅಮ್ಮಂಗರ ಜೊತೆ
ಕಲಿತೆ ಪಾಠವ ಸದ್ಗುರು ಅನುಗ್ರಹದಿ
ವೇದಗಳ ಕಲಿತೆ ದೊಡ್ದಪ್ಪಂದಿರಲಿ


ಆಶಿಸಿದರು ತಂದೆ ಆಗೆಂದು ಇಂಜನಿಯರ್
ಇರಲಿಲ್ಲ ತಾಯಿ ಅದನೋಡಿ ಆನಂದಿಸೆ
ಬಯಸಿದರು ತಂದೆ ಆಗೆಂದು ಜಿಲ್ಲಾಧಿಕಾರಿ
ದೈವ ಬಯಸಿತು ಆಗೆಂದು ಬ್ಯಾಂಕ್ ಅಧಿಕಾರಿ


ತಂದೆ ಆದೇಶಿಸೆ ವರಿಸಿದೆ ಅತ್ತೆಸುತೆಯ
ಆದಳು ಜೀವನ ಸಖಿ ಅಂಬಾಸುತೆ ವಸಂತ
ಚಿಗುರಾದವು ಎರಡು ಎಳೆಗಳು,ತಾತನ
ಪ್ರೀತಿಯ ಮೊಮ್ಮಕ್ಕಳಾಗಿ,ಕುಡಿಯಾಗಿ ವಂಶಕೆ


ನೀಡಿದೆ ತಂದೆಗೆ ಸ್ನೇಹಹಸ್ತ ಅವರ ಕಾರ್ಯಕೆ
ಸಭೆಗಳಲಿ,ಮುದ್ರಣಾಲಯ,ಶಾಲೆಗಳಲಿ
ಪತ್ರಿಕೆಯಲಿ,ಕುಟುಂಬ ಜವಾಭ್ದಾರಿಯಲಿ
ಆಯಿತು ತಂಗಿಯರ ವಿವಾಹ ತಂದೆ ದಾರಿಯಲಿ


ನೆರವಾದೆ ಅನುಜಗೆ ಜೀವನ ಆಯ್ಕೆಯಲಿ
ಅವನ ಆಯ್ಕೆಯ ಸತಿಯ ವಿವಾಹದಲಿ
ಸಾರ್ಥಕವೆನಿಸಿದೆ ಕಳೆದ ಆರು ದಶಕಗಳು
ಗಳಿಸಿದೆ ಸತ್ಕೀರ್ತಿಯ ಬ್ಯಾಂಕ್ ಉದ್ಯೋಗದಲಿ


ಬ್ಯಾಂಕ್ ಉದ್ಯೋಗದಲಿ ನೆರವಾದೆ,ಉದ್ದಿಮೆ
ಕೈಗಾರಿಕೆಗಳ ಸ್ಥಾಪನೆ,ಪೋಷಣೆಯಲಿ
ನೆರವಾದೆ ವಿದ್ಯಾಲಯದ ಟ್ರಸ್ಟಿಯಾಗಿ
ಬಡ ಹೆಣ್ಣುಮಕ್ಕಳ ವಿದ್ಯಾವ್ಯಾಸಂಗದಲಿ


ತೀರಿಸಿರುವೆ ತಂದೆತಾಯಿಯರ ಪಿತೃ ಋಣ
ನಡೆಸಿ ಅವರ ಅಂತಿಮ ಕ್ರಿಯೆಯ ಶಾಸ್ತ್ರ ವಿಧದಿ
ನೀಡಿರುವೆ ಅವರ ಮುಕ್ತಿಗೆ ಪಿಂಡ ತರ್ಪಣವ
ಗಯೆಯಲಿ,ಬದರಿ,ಕಾಶಿ,ಗಂಗೆಸಂಗಮದಲಿ


ಬಯಸಲಿಲ್ಲ ಫಲವ,ಮಾಡಿದೆ ಕರ್ತವ್ಯವ
ಶ್ರೀ ಕೃಷ್ಣ ಸಂದೇಶದಂತೆ ಸಾತ್ವಿಕತ್ವದಲಿ
ಪ್ರೀತಿಯ ನಮನ ನನ್ನೆಲ್ಲ ಬಂಧುಗಳಿಗೆ
ಸಖರಿಗೆ,ಅತ್ತೆಯರಿಗೆ,ಅಜ್ಜಿಯರಿಗೆ


ನಮನ ಅತ್ತಂಗ,ಅಮ್ಮಂಗ,ಗೆಳೆಯರಿಗೆ
ಗುರುಗಳಿಗೆ,ಒಲವಿನ ಸತಿಸುತಸುತೆಗೆ
ಅಳಿಯರಿಗೆ,ಬೀಗರಿಗೆ,ಜೊತೆಸಾಗಿದ
ಬಂಧುಬಾಂಧವರಿಗೆ,ನೆರವಾದ ಶ್ರೀಯಃ ಪತಿಗೆ


ತೆರಳುತಿಹೆನು ವಾನಪ್ರಸ್ತ್ಹಕೆ,ಕಳೆಯೇ
ಉಳಿದೆರಡುದಿನಗಳ ಹರಿ ಸ್ಮರಣೆಯಲಿ
ಆಶೀರ್ವದಿಸಿ ದಾರಿ ಸುಗಮವಿರಲೆಂದು
ಕೋಟಿನಮನ,ನಿಮಗೆಲ್ಲರಿಗೂ ವಂದನೆಗಳು


ರಚನೆ:ಕೆ.ವಿ.ಶ್ರೀನಿವಾಸ ಪ್ರಸಾದ್ 







ಶ್ರೀ ರಾಮ ಸ್ತೋತ್ರಂ

ಕೌಸಲ್ಯಾತನಯ ಸುಂದರ ರಾಮ
ದಶರತಸುತ ಕೋದಂಡರಾಮ
ಅಯೋಧ್ಯಾಪುರಿಯ ರಕ್ಷಕ ರಾಮ
ರಾಜಾ ರಾಮ,ರಕ್ಷಿಸು ಅನುಕಾಲ

ಪಡೆದೆ ದಿವ್ಯಾಸ್ತ್ರಗಳ,ರಕ್ಷಿಸಿ
ಕೌಶಿಕರ ಯಾಗವ, ಬಾಲ್ಯದಲಿ
ವರಿಸಿದೆ ಜನಕನ ಸುತೆಯ
ಸೀತೆಯ, ಶಿವ ಧನುವ ಛೇದಿಸಿ

ಪಿತೃ ವಾಕ್ಯವೇ ಪರಮ ಪೂಜ್ಯ
ಎಂದರುಹಿ ನಡೆದೆ ವನಕೆ
ಅನುಜ ಲಕ್ಷ್ಮಣನ ಒಡಗೂಡಿ
ಅನುಸರಿಸೆ ಸೀತೆ ಕಾನನಕೆ 

ಪ್ರಜಾ ರಕ್ಷಣೆಯೇ ಪರಮಗುರಿ
ಎಂದು ನೆಲೆಸಿದೆ ಚಿತ್ರಕೂಟದಿ
ಮುನಿಗಳ ಕಾಪಾಡುತ ರಕ್ಕಸರಿಂದ
ಅಳಿಸಿದೆ ದಾನವರ ದಿವ್ಯಾಸ್ತ್ರದಿ

ತಾಪಸ ವೇಷದಿ ಅಪಹರಿಸೆ
ಸಾಧ್ವಿ ಸೀತೆಯನು, ರಾವಣನು
ಅಲೆದೆ ಕಂಗೆಟ್ಟು ಘೋರ ಅರಣ್ಯದಿ
ಸಂಧಿಸಿದೆ ವಾಯುಸುತ ಹನುಮನ

ವಾನರ ನೃಪ ಸುಗ್ರೀವನ ಸಖ್ಯಗೈದೆ
ವಧಿಸಿದೆ ವಂಚಕ ವಾಲಿಯನು
ಅರಸಿ ಹೊರಟಿತು ವಾನರ ಸೈನ್ಯ
ಚಲಿಸಿದನು ಹನುಮ ದಕ್ಷಿಣಕೆ

ಧಾಟಿದ ಸಾಗರವ ಧೀರ ಹನುಮ
ಕಂಡ ಸೀತೆಯನು ಅಶೋಕವನದಿ
ಸಿರಿಪುರಿ ಲಂಕೆ ಧಗಧಗಿಸಿತು
ನಡುಗಿದರು ದಾನವರು ಭಯದಲಿ

ರಾಮ ಸೈನ್ಯ ತಲುಪಿತು ಲಂಕೆಯನು
ಆಯಿತು ರಾವಣ ಕುಂಭಕರ್ಣರ ವಧೆ
ವಿಭೀಶಣಗೆ  ರಾಜ್ಯ ಪಟ್ಟಾಭಿಷೇಕ
ಮರಳಿದರು ರಾಮಸೀತೆಲಕ್ಷ್ಮಣರು

ಮರಳಿಸಿದ ರಾಜ್ಯ ಅನುಜ ಭರತ
ಮೆರೆಯುತ ಸೋದರ ಪ್ರೇಮವ
ಆಯಿತು ರಾಮ ಪಟ್ಟಾಭಿಷೇಕ
ನಲಿಯುತು ಅಯೋಧ್ಯೆ ಸಂತಸದಿ

ರಾಮ ನೀನಾದೆ ಪುರುಷೋತ್ತಮ
ಬ್ರಾತೃ ಪ್ರೇಮಕೆ ಮಾದರಿಯೆನಿಸಿ
ನಿಲ್ಲುವುದು  ನಿನ್ನ ಕಥೆ ಅಮರ
ಶರಣೆನುವೆ ರಕ್ಷಿಸು ಅನವರತ

ಮಂಗಳವು ಕೋಸಲೆಂದ್ರನಿಗೆ
ಮಂಗಳವು ಇಕ್ಷ್ವಾಕು ಕುಲಜನಿಗೆ
ಮಂಗಳವು ಜಾನಕೀ ವಲ್ಲಭನಿಗೆ
ಮಂಗಳವು ಹನುಮಸಖ ರಾಮಗೆ

ರಚನೆ:  ಕೆ.ವಿ.ಶ್ರೀನಿವಾಸ ಪ್ರಸಾದ್





 

    





 

 

  
 








 Reply

 Forward












Hema Prasad hemaprasad.ks@gmail.com

Sunday, February 19, 2012

ವಂದೇಹಂ ಪರಮಶಿವಂ

ನಮನ ನಟ ಶೇಖರ ನಟರಾಜ
ಗೌರೀವಲ್ಲಭ ಗಂಗಾಧರ ರುದ್ರೇಶ
ಪಾರ್ವತಿಯ ಪತಿ ಪರಮೇಶ ಶಿವ
ಜಟಾಜೂಟ ಗಜ ಚರ್ಮಾಂಬರಧರ

ಓಂಕಾರರೂಪ ಕೈಲಾಸವಾಸಿ ಗಿರೀಶ ಶಂಭೋ
ನಮಿಸುವೆ ನಾರಾಯಣೀ ವಲ್ಲಭ ಚಂದ್ರಮೌಳೇ
ತಡೆದೆ ಗಂಗಾ ಪ್ರವಾಹವ ಭಗೀರಥನಿಗಾಗಿ
ಮುಡಿದೆ ಜಟೆಯಲಿ ಗಂಗೆಯ, ಸವತಿಯಾಗಿ

ಅಮರರೆಲ್ಲರೂ ಕೂಡಿ  ದಾನವರ ಸಹಿತ 
ನಡೆಸೆ ಸಾಗರ ಮಂಥನವ ಸರ್ಪ ಪಾಶದಿ
ಜನಿಸಿದರಾಗ ವರಲಕ್ಷ್ಮಿ,ಚಂದ್ರ,ಕಾರ್ಕೋಟ
ಕುಡಿದೆ ವಿಷ ಜನಹಿತಕೆ,ನೀಲಕಂಠನಾದೆ 

ತಾರಕನ ನಾಶಕೆ ವರಿಸಿದೆ ಹಿಮಸುತೆಯ
ಮದನ ಪುಷ್ಪ ಬಾಣಕೆ ಮದಿಸಿದೆ ಮನ್ಮಥನ
ಸುತರಾಗಿ ಜನಿಸಿದರು ಆರುಮುಖ ಸ್ಕಂದನು
ಗಜಮುಖ ಗಣೇಶನು,ವಿಘ್ನ ವಿನಾಶಕನು

ರಕ್ಷಿಸೆಮ್ಮನನವರತ ದೈತ್ಯ ದಾನವರಿಂದ
ಒಳಗಿನ ಅರಿಷಡ್ವರ್ಗಗಳಿಂದ ಅಹಂನಿಂದ
ಇರಿಸೆಮ್ಮನು ಸದಾ ಕಮಲೇಶನ ಧ್ಯಾನದಿ
ಪಡೆಯೆ ಮುಕ್ತಿಯ ಭವಬಂಧನದ ಚಕ್ರದಿಂದ

ರಚನೆ:ಕೆ.ವಿ.ಶ್ರೀನಿವಾಸ ಪ್ರಸಾದ್ 
ಎ-ಮೇಲ್: sreenivasaprasad.kv@gmail.com   



Thursday, February 16, 2012

ಶುಭಾಶಯ

ಶುಭಾಶಯ
ಶುಭಾಶಯ ,ಮಗಳಿಗೂ
ಅಳಿಯರಿಗೂ,ಪ್ರೇಮ ಶುಭಾಶಯ
ಮದುವೆಯ ಎರಡನೆಯ ವರ್ಷದ
ಶುಭ ಅವಸರದಲಿ, ಶುಭಾಶಯ

ಕಳೆದಿಹಿರಿ ಎರಡು ವರುಷವ
ಸಂತಸದಿ,ಸಮರಸದಿ,ನಲಿಯುತ
ಪರ್ಯಟಿಸಿ,ದೇಶ-ವಿದೇಶಗಳಲಿ
ಅರಿಯುತ ಸಹಜೀವನದ ಸವಿಯ

ಪಡೆದಿಹಿರಿ ಕಾರ್ಯದಲಿ ಉನ್ನತಿಯ
ಶ್ರಮಿಸುತ ಇರುಳು ಹಗಲೆನ್ನದೆ
ಗಳಿಸಿಹಿರಿ ಅತ್ತೆ ಮಾವರ ಪ್ರೀತಿಯ
ಒಂದಾಗಿಸಿಹಿರಿ ಎರಡು ಕುಟುಮ್ಬವ

ಬಂದಿದೆ ನಿಮ್ಮ ಮನದಾಸೆಯ 
ನಾಲ್ಕು ಚಕ್ರದ ರಥ -ರಾಪಿಡ್
ಬರಬೇಕಿದೆ ಎರಡು ಕಾಲಿನ ರಥ
ನಿಮ್ಮ ಪ್ರೇಮ ಜೀವನದ -ಕುವರ

ತಡಬೇಡ,ತಡಿಯದಿರಿ ಸಂಭ್ರಮವ
ಹರಸಲಿ ಶ್ರೀಕಾಂತ ,ನಿಮ್ಮೊಲುಮೆಯ ಫಲ
ಶತಮಾನ ಜೀವಿಸಿರಿ ಪಸರಿಸುತ ಕಂಪನು
ಪ್ರೇಮವೇ ಜೀವನದ ಆಧಾರ ಎಂದೆಂದಿಗೂ

ರಚನೆ-ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨-೭೬೨೧೬


ಪ್ರೇಮಿಗಳ ದಿನ

ಪ್ರೇಮಿಗಳ ದಿನ 
ಪ್ರೇಮವೇ ಸುಖದ ಜೀವನದ ಆಧಾರ
ಪ್ರೇಮವಿರಬೇಕು ಸಕಲ ಜೀವಿಗಳಲಿ
ಪಶುಪಕ್ಷಿಗಳಲಿ ,ಚೇತನ ಅಚೇತನಗಳಲಿ
ಪ್ರೇಮವಿರಬೇಕು ಬ್ರಹ್ಮ ಚೈತನ್ಯದಲಿ
          
ಪ್ರೇಮ ತೋರಬೇಕು ತಂದೆತಾಯಿಯರಲಿ 
ಇಡಬೇಕು ನಿರ್ಮಲ ಪ್ರೇಮ ಅಕ್ಕ ತಂಗಿಯರಲಿ 
ಪ್ರೇಮ ತೋರಿಸಬೇಕು ಅಣ್ಣ ತಮ್ಮಂದಿರಲಿ  
ಸಾಕಿ ಸಲಹಿದವರಲ್ಲಿರಬೇಕು ಅತಿಶಯ ಪ್ರೇಮ

ಪ್ರೇಮಿಸಬೇಕು ಪಶುಪಕ್ಷಿಗಳನು 
ತರುಲತೆಗಳನು,ಮೂಕಪ್ರಾಣಿಗಳನು
ಮೂಗ ಕಿವುಡರನು,ಅಂಗವಿಕಲರನು
ಅನಾಥರನು,ಕಡು ಬಡವರನು,ಋಷಿಗಳನು

ಪ್ರೇಮ ಪವಿತ್ರ-ದುರುಪಯೋಗ ಸಲ್ಲದು
ಮೆಚ್ಚನಾ ಪರಮಾತ್ಮ -ವಿದ್ರೋಹ ಪ್ರೇಮದಲಿ
ವಂಚನೆ- ಮುಗ್ಧ ತರುಣಿಯರ ಸ್ನೇಹದಲಿ
ಒಮ್ಮೆ ಪ್ರೀತಿಸಿದರೆ,ನೀಡಿ ಹೃದಯ ಪ್ರೇಮಿಗಳಿಗೆ

ಪ್ರೆಮವಿರಲಿ ಸೃಷ್ಟಿಸಿದ ಜಗಜ್ಜನಕರಲಿ 
ಸಲಹುವ ಜನನಿ ಉಮೆ-ರಮೆಯರಲಿ
ಕರುಣಿಸುವರು ಸಕಲ ಇಷ್ಟಾರ್ಥವ ದೇವರು
ಇಟ್ಟರೆ ಅವರಲಿ ಅನನ್ಯ ಪ್ರೀತಿಯನು

ರಚನೆ-ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨ ೭೬೨೧೬

ಮರಳಿ ಬರುತಿದೆ ಸಂಕ್ರಾಂತಿ ಮರಳಿ ಬರುತಿದೆ ಸಂಕ್ರಾಂತಿ


ಮರಳಿ ಬರುತಿದೆ ಸಂಕ್ರಾಂತಿ 

ಬನ್ನೀರೆ ಬನ್ನೀರೆ ಅಕ್ಕ- ತಂಗಿಯರೆಲ್ಲರು
ತಂದೆ ತಾಯಿ ಮನೆಗೆ ಕೂಡಿ ನಲಿಯಲು
ಸಂಕ್ರಾಂತಿಯು ಬರುತಿದೆ ನವ ವರ್ಷದಲ್ಲಿ
ಸವಿಯೋಣ ಎಲ್ಲ ಕೂಡಿ ಬೇವು ಬೆಲ್ಲವ

ಬಯಸಿರಿ ಮಮತೆಯ ಅಣ್ಣ ತಮ್ಮಂದಿರಿಗೆ
ಸುಖ ಆರೋಗ್ಯವ ಬರುವ ವರ್ಷವೆಲ್ಲ 
ತಾಯಿಯ ಮನೆಯ ಸಹಜಾತ  ಕುಡಿಗಳಿಗೆ
ನೆನೆಸುತ ಕಳೆದ ಸಂತಸದ ಬಾಲ್ಯದ ದಿನಗಳ

ಮರೆಯೋಣ ಎಲ್ಲ ಕಹಿ ನೆನಪುಗಳ
ಸವಿಯೋಣ ಬರುವ ಸಿಹಿ ದಿನಗಳ
ಮೂಡಿಸೋಣ ನಮ್ಮ ಮಕ್ಕಳ ಮನದಲಿ
ಪ್ರೇಮ,ಪ್ರೀತಿ,ವಾತ್ಸಲ್ಯವ ಭವಿಷ್ಯದಲ್ಲಿ

ಕೂಡಿ ಹಂಚೋಣ ಬೇವು ಬೆಲ್ಲ ಬಂಧುಗಳಲಿ
ಸಾರೋಣ ನಾವು ತಂದೆ ತಾಯಿಯರ ಕುಡಿಯೆಂದು
ಎಳ್ಳು ತಿಂದು ಹರಸೆಂದು ಮಮತೆಯ ಮಾತಿನಲಿ
ಆಗಲಿ ಜೀವನ ಸಿಹಿಯಾಗಿ ಬೆಲ್ಲದಂತೆ ಎಂದೆಂದೂ

ಜಗದಲಿ ಸಿಗುವುದು ಎಲ್ಲ ವಸ್ತುವು ಹಣದಿಂದ
ಆದರದು ದುರ್ಲಭವು ಒಡಹುಟ್ಟಿದವರು
ತಂದೆ ತಾಯಿಯರಿಗೆ ಜನಿಸಿದ ಒಡನಾಡಿಗಳು
ತರಲಿ ಸಂಕ್ರಾಂತಿ ಹರುಷ ನಿಮ್ಮೆಲ್ಲರಿಗೂ ಸದಾ 

ರಚನೆ-ಶ್ರೀನಿವಾಸ ಪ್ರಸಾದ್
ಮೊಬ:೯೮೪೪೨ ೭೬೨೧೬ 

ಸ್ವಾಗತ ೨೦೧೨,ಬೈ ೨೦೧೧

ಸ್ವಾಗತ ೨೦೧೨,ಬೈ ೨೦೧೧ 



ಕಳೆದಿಹುದು ೨೧ ರ ಶತಕದ ೧೧ ವರುಷ
... ಬರುತಿಹುದು ೧೨,ಸಡಗರವ ಚೆಲ್ಲುತ
ಥಾನೆ ಮಾರುತವು ಬೀಸಿಹುದು ಪೂರ್ವದಲಿ
ಸೂಚಿಸುತ ದೂರದಿ ಬರಲಿರುವ ವಿಪತ್ತನು


ನುಡಿದಿಹರು ಭವಿಷ್ಯ ಸೂಚಿಸುತ ಪ್ರಳಯ
ವರ್ಶಾಂತ್ಯದಲಿ ವಿಶ್ವದ ಅಂತ್ಯವ
ನಡೆಸಿಹರು ವಿಜ್ಞಾನಿಗಳು ಶೋಧವ
ರವಿಯಂಚಿನಿಂದ ಸ್ಫೋಟಿಸುವ ಅಗ್ನಿ ಜ್ವಾಲೆಯ


ಕರಗುತಿದೆ ಹಿಮಾಲಯದ ತಣ್ಣನೆಯ ಮಂಜು
ಸುಡುತಿದೆ ಸಾಗರದಡಿಯ ಲವಣದ ನೀರು
ಜರುಗುತಿದೆ ಭೂಗೋಳ ಇಂಚಂಚಿನಲಿ
ಉಕ್ಕುತಿದೆ ಸಾಗರ ಕಬಳಿಸುತ ಭೂಮಿಯ


ಇಂದು ನಮ್ಮದು, ನಾಳೆ ಜಗದೊಡೆಯನದು
ಸ್ವಾಗತಿಸೋಣ ದಶಕ ಹನ್ನೆರದ ಸಂತಸದಿ
ಬೇಡ ಮಧ್ಯಪಾನ ,ಲಲನೆಯರ ಬಿನ್ನಾಣ
ನಡುರಾತ್ರಿಯಲಿ ಜರಗುವ ಮೋಜಿನ ನಿತ್ರಾಣ


ಕೂಡಿ ಪ್ರಾರ್ಥಿಸೋಣ ಎಲ್ಲ ದೇವ,ದೇವರ,ಅಲ್ಲಾನ
ಪಾರುಮಾಡೆಂದು ಬರಲಿರುವ ವಿಪತ್ತಿನಿಂದ
ತುಂಬಿರಲಿ ಸಂತಸ ಮನೆಮಂದಿ ಮಕ್ಕಳಲಿ
ನೂರಾರು ಶತಕಗಳಲಿ ಅನವರತ ನಿರಂತರ

ರಚನೆ-ಕೆ.ವಿ.ಶ್ರೀನಿವಾಸ ಪ್ರಸಾದ್ 

ಗಣಪ ಸ್ತುತಿ


ಗಣಪ ಸ್ತುತಿ
ಉದಯಿಸಿದೆ ನಾರಾಯಣಿಯ   ಸ್ವೇದದಿ
ಮಾತೆಯ ಆಜ್ಞೆಯಂತೆ ತಡೆದೆ ಪ್ರವೇಶವ
ರುದ್ರನ ಮುನಿಸಿಗೆ ಆಯಿತು ಶಿರದ ಛೇದನ
ವಿಘ್ನ ವಿನಾಶಕ ವಿನಾಯಕನೇ ನಮನ

ಪಡೆದೆ ಗಜಶಿರವ ಶಿವನಾಣತಿಯಂತೆ
ನಡೆಯೇ ಸ್ಪರ್ಧೆ ಗಣ ನಾಯಕನಾಗಲು
ಸ್ಕಂದನ ಗೆದ್ದೆ ತಾಯಿ ತಂದೆಯ ಪ್ರಣಮಿಸಿ
ಗಣ ನಾಯಕನೆನಿಸಿದ ಗಣಪನೇ ನಮನ

ದೈತ್ಯ ಮೂಷಕಾಸುರ ದರ್ಪದಿ ಮೆರೆಯೆ
ದಾನವರ ರಕ್ಷಿಸಲು ಕೂಡಿಸಿದೆ ದೇವಗಣ
ಅಡಗಿಸಿದೆ ಮೂಷಕನ ದರ್ಪವ ,ಕರುಣಿಸಿ
ಪ್ರಾಣವ ಆಗಿಸಿದೆ ವಾಹನ, ನಮನ ಗೌರಿ ಸುತ

ಮೂಕಾಸುರ ಸಮರದಲಿ ಎಸೆದೆ ಏಕದಂತ
ಗೌರಿ ಗಂಗೆಯರ ಸುತನಾಗಿ ದ್ವೈಮಾತುರನಾದೆ  
ತ್ರಿಮೂರ್ತಿಗಳ ವರದಲಿ  ವಿಘ್ನ ನಿವಾರಕನಾದೆ
ಅಗ್ರಪೂಜೆಗೆ ಅರ್ಹನಾದೆ ವಿದ್ಯೆಗೆ ಒಡೆಯನಾದೆ 

ಶಪಿಸಿದೆ ಚಂದ್ರನ ಚೌತಿಯಂದು ನೋಡುವವರು 
ಚೋರರೆನಿಸಿ   ಕೃಷ್ಣ ಕಥೆಯಿಂದ ವಿಮುಕ್ತಿಯೆಂದು 
ಕರುಣಿಸು ನಿನ್ನ ಭಕ್ತರಿಗೆ ಸಿದ್ಧಿ ಬುದ್ಧಿಗಳ 
ಅಖಂಡ ಸಂಪದವ ಆಯುರಾರೋಗ್ಯ, ಸುಖವ      

 ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ನಂ-೧ ಏ ಡೀ ಎನ್ಕ್ಲೇವ್ ,ಮಾರುತಿನಗರ
ಸಹಕಾರನಗರ ಅಂಚೆ, ಬೆಂಗಳೂರು-೯೨
ಫೋನ್ ;9844276216

ಶ್ರೀ ಕೃಷ್ಣ ಸ್ತುತಿ


ಶ್ರೀ ಕೃಷ್ಣ ಸ್ತುತಿ
 
ಜನಿಸಿದೆ ದೇವಕಿಗೆ ಅಷ್ಟಮ ಸುತನಾಗಿ
ಕಂಸನ ಕಾರಾಗ್ರಿಹದ ಕತ್ತಲೆ ಕೋಣೆಯಲಿ
ನಡುರಾತ್ರಿ ಸುರಿಯುತಿರುವ ಮಳೆಯ ದಿನದಿ
ವಸುದೇವ ದೇವಕಿ ತನಯ ನಿನಗೆ ನಮನ
 
ಬೆಳೆದೆ ನೀ ಯಶೋದೆಯ ಅಕ್ಕರೆಯ ಮಗನಾಗಿ
ಸಂಹರಿಸಿದೆ ಪೂತನಿ ,ಶಕಟ,ಬಕಾಸುರರ, ಗಳಿಸಿ
ಗೋಪಿಯರ ಮೋಹವ, ಮರ್ಧಿಸಿ ಕಾಳಿಂಗನ ದರ್ಪವ
ದೇವಕಿ ವಸುದೇವ ಸುತನೆ ನಿನಗೆ ನಮನ
 
ಧಮಿಸಿದೆ ಮಲ್ಲವೀರ ಚಾನೂರರ ದರ್ಪವ
ಅಳಿಸಿದೆ ಸೋದರಮಾವ ಕಂಸನ ದುರಾಡಳಿತ
ಮರಳಿಸಿದೆ ರಾಜ್ಯವ ತಾತ ಉಗ್ರಸೇನನಿಗೆ
ವಸುದೇವ ದೇವಕಿ ತನಯ ನಿನಗೆ ನಮನ
 
ವರಿಸಿದೆ ರುಕ್ಮಿಣಿಯ ಅಪಹರಿಸಿ, ಪ್ರೀತಿಸಿ
ಪಡೆದೆ ಸತ್ಯಭಾಮೆ ಮರಳಿಸಿ ಸ್ಯಮಂತಕಮಣಿ
ಅತ್ತೆಯ ಸುತರಾದ ಪಾಂಡವರಿಗೆ ಅಭಯವಿತ್ತೆ
ದೇವಕಿ ವಸುದೇವ ತನಯ ನಿನಗೆ ನಮನ
 
ಧರ್ಮವನ್ನು ರಕ್ಷಿಸಿ,ಪಾಂಡವರಿಗೆ ರಾಜ್ಯ ಕೊಡಿಸೆ  
ಆದೆ ಶಾಂತಿಧೂತ, ಕ್ರೂರ ಕೌರವರ ಬಳಿ ನಡೆದೆ
ವಿಫಲವಾಗೆ ಸಂಧಾನ, ಅಳಿಸಿದೆ ಕುರುಸಂತಾನ
ಗೀತೆ ಅರುಹಿ ಬೆಳಕ ನೀಡಿದ ಗೋಪನಿಗೆ ನಮನ
 
 
 
 ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ನಂ-೧ ಏ ಡೀ ಎನ್ಕ್ಲೇವ್ ,ಮಾರುತಿನಗರ
ಸಹಕಾರನಗರ ಅಂಚೆ, ಬೆಂಗಳೂರು-೯೨ 

ರಕ್ಷಾ ಬಂಧನದ ಶುಭಾಶಯ


ರಕ್ಷಾ ಬಂಧನದ ಶುಭಾಶಯ
 
ಒಲವಿನ ತಂಗಿಯರೆಲ್ಲರಿಗೆ ಶುಭಾಶಯ
ಶ್ರಾವಣ ಶುಕ್ಲ ಪೌರ್ಣಮಿಯ ದಿನವಿಂದು
ಬಯಸುವೆವು ನಿಮಗೆ ಆಯುರಾರೋಗ್ಯ
ಸಕಲ ಸಂಪದವ, ಸುಖ, ನೆಮ್ಮದಿಯ 
 
ಜನಿಸಿದೆವು ಒಂದೇ ತಾಯಿಯ ಮಡಿಲಲ್ಲಿ
ಬೆಳೆದೆವು ಕೂಡಿ ನಲಿಯುತ ಕುಣಿಯುತ
ಛೇಡಿಸಿದೆವೆಷ್ಟೋ ಸಮಯ ಕೆಣಕುತ ನಲಿಯುತ
ಉಂಡೆವು   ಒಂದೇ ತಟ್ಟೆಯಲಿ  ಎಳೆದಾಡುತ  
 
ಕಳೆದಿಹೆವು ಆ ಸುಂದರ ದಿನಗಳ ನೆನಪಲಿ
ನೀವಾಗಿರುವಿರಿ ಗ್ರಿಹಿಣಿಯರು ಜೀವನದಲೀಗ
ಮರೆಯದಿರಿ ತಂದೆ,ತಾಯಿಯ,ಸಹೋದರರ
ಹರಸಿರಿ, ಪ್ರಾರ್ಥಿಸಿರಿ, ನಮ್ಮಗಳ ಕ್ಷೇಮ ಸದಾ
 
ಕಟ್ಟಿಹಿರಿ ರಕ್ಷಾ ಬಂಧನವ ಶುಭದಿನವಿಂದು
ನಲಿವಿನಲಿ,ಸಂತಸದಿ ಬೆರೆತು ನಮ್ಮೊಡನೆ
ಹಂಚಿಹಿರಿ ಸಿಹಿಯನು ಬಯಸುತ ಕ್ಷೇಮವ
ನೆನೆಯುವೆವು ಸದಾ ನೀವು ಕಟ್ಟಿದ ಬಂಧನವ
 
ಎಂದೆಂದಿಗೂ ಇರಲಿ ಹಸಿರಾಗಿ ಈ ನಿಮ್ಮ ಪ್ರೀತಿ
ನಾವಾಗುವೆವು ನಿಮ್ಮ ಕಷ್ಟ ಸುಖದಿ ಒಂದಾಗಿ
ನೀಡಲಿ ಶ್ರೀ ಹರಿಯು ಸುಖ ಶಾಂತಿ ನೆಮ್ಮದಿಯ
ನಿಮ್ಮ ಜೀವನದಿ ನೂರ್ಕಾಲ ಅನವರತ, ನಿರತ
 
 
 ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ನಂ-೧ ಏ ಡೀ ಎನ್ಕ್ಲೇವ್ ,ಮಾರುತಿನಗರ
ಸಹಕಾರನಗರ ಅಂಚೆ, ಬೆಂಗಳೂರು-೯೨
ಫೋನ್ ;9844276216  

೬೫ ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು


೬೫ ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು
ನಾವಾಗಿದ್ದೆವು ದಾಸರು ಬ್ರಿಟೀಷರಿಗೆ
ದಶಕ ನಲವತ್ತರ ಪೂರ್ವದಲಿ
ಆಳಿದರು ಅನುಕಂಪವಿಲ್ಲದೆ ಮೃಗದಂತೆ
ಅಳಿಸಿದರು ಸಹಸ್ರರನು ತೋಪಿನಂಕುಶದೆ

ಪಣತೊಟ್ಟರು ಪೂರ್ವಜರು ಪಡೆವೆವೆಂದು
ವಿಮುಕ್ತಿಯ ದಾಸ್ಯದಿಂದ ಒಡ್ಡಿದರೆದೆಯಂದು
ಗುಂಡಿನ ಕಾಳಗದಿ ,ಶಾಂತಿಮಂತ್ರವ ಪಟಿಸುತಾ
ಸೋತರಂದು ಬ್ರಿಟಿಶರು ಒಪ್ಪಿಸುತ ಭಾರತವ

ಕಳೆದಿಹೆವು ಆರುದಶಕಗಳ ಸ್ವಾತಂತ್ರದಲಿ
ಅತಂತ್ರರಾಗಿಹೆವು ಅರಿಯದೆ ನಾವೆಲ್ಲಾ ಒಂದೇ
ಕಾದಾಡುತ  ಸೆಣೆಸಾಡುತ ಭೂಮಿ,ನೀರಿಗಾಗಿ
ಪದವಿ ,ಕುರ್ಚಿಗಾಗಿ ಮರೆಯುತ ದೇಶ ಹಿತವ

ಆಗಬೇಕಿದೆ ಭಾರತ ವಿಶ್ವದ ಅಗ್ರಮಾನ್ಯ
ಕಲೆತು ಶ್ರಮಿಸೋಣ ವಿಜ್ಞಾನಿಗಳು ಸುಜ್ಞಾನಿಗಳು
ಬೇಡ ಪರದೇಶ ಮೋಹ, ಬೆಳೆಸೋಣ  ದೇಶ,
ಮುನ್ನಡೆಸೋಣ ವಿಜ್ಞಾನ, ವೈದ್ಯ, ತಾಂತ್ರಿಕತೆಯಲಿ

ವ್ಯಯಿಸೋಣ ಸಂಪತ್ತನು ದೇಶದೊಳಿತಿಗಾಗಿ
ಬೇಡ ಸ್ವಾರ್ಥಕ್ಕಾಗಿ ಕುಟುಂಬ ಪೋಷಣೆಗಾಗಿ
ಹರಿಸೋಣ ಪರಿಶ್ರಮ ಮನಸುಗಳನು
ಉಳಿಸಿ ಬೆಳೆಸೋಣ ಸುಧೃಡ ಭಾರತವ

ಹಾರಾಡಲಿ ಭಾರತ ಧ್ವಜ ವಿಶ್ವದೆಲ್ಲೆಡೆ
ಗೌರವಿಸುವಂತಾಗಲಿ ಭಾರತವನ್ನೆಲೆಡೆ
ಭಾರತೀಯರು ಪುರಸ್ಕೃತರಾಗಲಿ ವಿಶ್ವದಲಿ
ಜಯಹೇ ಜಯಹೇ ಜಯ ಜಯ ಭಾರತಮಾತೆ

ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ನಂ-೧ ಏ ಡೀ ಎನ್ಕ್ಲೇವ್ ,ಮಾರುತಿನಗರ
ಸಹಕಾರನಗರ ಅಂಚೆ, ಬೆಂಗಳೂರು-೯೨
ಫೋನ್ ;9844276216 
 

ಪಂಡಿತ ಕೆ ಏನ್ ವಿ ಯವರ ೨೧ ನೆಯ ಪುಣ್ಯ ತಿಥಿ ಸ್ಮರಣೆ


ಪಂಡಿತ ಕೆ ಏನ್ ವಿ ಯವರ ೨೧ ನೆಯ ಪುಣ್ಯ ತಿಥಿ ಸ್ಮರಣೆ
 
ಛಲವಾದಿ ನನ್ನ ತಂದೆ ಪಂಡಿತ ಕೆ ಏನ್ ವಿ
ಕಂಡರು ಕೊರತೆಯ ಹೆಣ್ಣು ಮಕ್ಕಳ ವ್ಯಾಸಂಗದಿ
ಸಂಕಲ್ಪಿಸಿದರು ತೆರೆಯಲು ಬಾಲಿಕಾ ಶಾಲೆಯ
ತೆರೆದರು ಪ್ರಥಮದಿ ಶಾಲೆಯ ಅರವತ್ಮೂರರಲಿ
 
ಬೆಳೆಯಿತು ಸಣ್ಣ ಬಾಡಿಗೆ ಕೊಠಡಿಯಿಂದ 
ಹೆಮ್ಮರವಾಗಿ ಮೂವತ್ತು ಕೊಠಡಿಯ ಸೌಧವಾಗಿ
ಶಿಶುವಿಹಾರದಾರಭ್ಯ ಮಹಿಳಾವಿದ್ಯಾಲಯವರೆಗೆ
ಬೋಧಕರಿಗೆ ಜೀವನ ನೀಡುವ ಕಲ್ಪವ್ರಿಕ್ಷವಾಗಿ
 
ಕಲಿತರದೆಷ್ಟೋ ಬಾಲಿಕೆಯರು ವಿವಿಧಹಂತದಿ
ಪಡೆದರು ಉನ್ನತ ವೃತ್ತಿಯ, ವ್ಯಕ್ತಿತ್ತ್ವವ 
ಗಳಿಸಿತು ಸಂಸ್ಥೆ ಜನಾದರಣೆ , ಪ್ರೀತಿಯ
ಕೈಜೋಡಿಸಿದರು ಗಣ್ಯರದರ ಅಭಿವೃದ್ಧಿಗೆ 
 
ಗತಿಸಿದರು ತೀರ್ಥರೂಪರು ತೊಂಬತ್ತರಲಿ
ಉಳಿಸಿಹೋದರು ಶ್ರಮದಿ ಬೆಳೆಸಿದ ಸಂಸ್ಥೆಯ
ಸ್ಥಾಪಿಸಿದೆವು ಅವರ ನೆನಪಿನ ಟ್ರಸ್ಟ್ ಅನ್ನು 
ಉಳಿಸಿ ಬೆಳೆಸಲು ಅವರು ನೆಟ್ಟ ವ್ರಿಕ್ಷವನು 
 
ಮನಃಪೂರ್ಣ ನಮನ ಪಂಡಿತ ಅಯ್ಯಂಗಾರ್ಯರಿಗೆ
ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರಮಿಸಿದವರಿಗೆ
ತೊಡುವೆವು ಪಣವ ಧ್ಯೇಯವದ  ವಿಸ್ತರಿಸೆ
ಹರಸಲಿ ಶ್ರೀಕಾಂತ ನಮಗೆ ಶಕ್ತಿ ಬೆಂಬಲ ನೀಡಿ 
 
ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್, ಟ್ರಸ್ಟ್ ಸದಸ್ಯ,
ಪಂಡಿತ  ಕೆ.ಎನ್.ವರದರಾಜ ಅಯ್ಯಂಗಾರ್ ಮೆಮೊರಿಅಲ್ ಟ್ರಸ್ಟ್, ಮೈಸೂರ್  
ಮೊಬ: ೯೮೪೪೨ ೭೬೨೧೬  
 
  
   

ವರಮಹಾಲಕ್ಷ್ಮಿವ್ರತದ   ನೆನಪಿಗಾಗಿ
 
ಜಗದೊಡೆಯ ಶ್ರೀನಿವಾಸನ ಪ್ರೇಯಸಿಯೇ
ಅವನ ವಕ್ಷಸ್ಥಳದಲಿ ನೆಲೆಸಿರುವ ಪದ್ಮಾವತಿಯೇ
ಕರಗಳಲಿ ಕಮಲವ ಹಿಡಿದ ಕಮಲಾಸನೆಯೇ
ಕಮಲೋದ್ಬ್ಹವೇ ಮಹಾಲಕ್ಷ್ಮಿಯೆ ನಿನಗೆ ನಮನ
 
ಹಾಲ್ಕಡಲ ಕಡೆಯುವಾಗ ಚಂದ್ರನೊಡನೆ ಜನಿಸಿ
ಚಂದ್ರ ಸಹೋದರಿಯೆನಿಸಿದ ಪದ್ಮನಾಭಪ್ರಿಯೇ
ಚಂದ್ರಮುಖಿ ಚತುರ್ಭುಜೆ ಇಂದುಶೀತಲೇ
ಕಮಲೋದ್ಬ್ಹವೇ ಮಹಾಲಕ್ಷ್ಮಿಯೆ ನಿನಗೆ ನಮನ
 
ಭೂಸಂಜಾತೆಯಾಗಿ ಜನಕಸುತೆಯೆನಿಸಿ
ವರಿಸಿ ದಶರಥತನಯನ ಸ್ವಯಮ್ವರದಿ  
ವನದಲಿ ಪತಿಯನನುಸರಿಸಿ ಪಯಣಿಸಿದ
ಸಾಗರತನಯೇ ಸೀತಾಲಕ್ಷ್ಮಿಯೇ ನಿನಗೆ ನಮನ
 
ಭಜಿಸೆ ಶ್ರದ್ದೆಯಲಿ ಕರುಣಿಸುವೆ ತಾಯೆ
ಸಕಲಸಂಪದವ ನೀಗಿಸಿ ಕಷ್ಟಗಳೆಲ್ಲವ
ಹರಸುವೆ ಸಂತಾನವ ಧನಧಾನ್ಯವ ಅನವರತ
ಸರಸಿಜೆ ವರಲಕ್ಷ್ಮಿಯೇ ನಿನಗೆ ನಮನ
 
ದಿವ್ಯನಾಮಸ್ಮರನೆಯಲಿ ನೀಗುವುದು ದರಿದ್ರ
ಆಗಮಿಸುವುದು ಅಖಂಧಸಂಪದವು
ಲಭಿಸುವುದು  ಸರಸಿಜಾಕ್ಷನ  ಕರುಣೆ
ತಾಯೆ ವಸುಪ್ರದೆ ವಾಸವಿಯೇ ನಿನಗೆ ನಮನ
 
ರಚನೆ   : ಕೆ.ವಿ. ಶ್ರೀನಿವಾಸ ಪ್ರಸಾದ್
೧ಎ,ಡೀ ಎನ್ಕ್ಲೇವ್    ,  ಮಾರುತಿನಗರ,
ಸಹಕಾರನಗರ ಅಂಚೆ, ಬೆಂಗಳೂರು-೯೨
ಫೋ: 9844276216