Friday, July 27, 2012

Sree Rama Stotram







ಶ್ರೀ ರಾಮ ಸ್ತೋತ್ರಂ
ಕೌಸಲ್ಯಾತನಯ ಸುಂದರ ರಾಮ
ದಶರತಸುತ ಕೋದಂಡರಾಮ
ಅಯೋಧ್ಯಾಪುರಿಯ ರಕ್ಷಕ ರಾಮ
ರಾಜಾ ರಾಮ,ರಕ್ಷಿಸು ಅನುಕಾಲ
ಪಡೆದೆ ದಿವ್ಯಾಸ್ತ್ರಗಳ,ರಕ್ಷಿಸಿ
ಕೌಶಿಕರ ಯಾಗವ, ಬಾಲ್ಯದಲಿ
ವರಿಸಿದೆ ಜನಕನ ಸುತೆಯ
ಸೀತೆಯ, ಶಿವ ಧನುವ ಛೇದಿಸಿ
ಪಿತೃ ವಾಕ್ಯವೇ ಪರಮ ಪೂಜ್ಯ
ಎಂದರುಹಿ ನಡೆದೆ ವನಕೆ
ಅನುಜ ಲಕ್ಷ್ಮಣನ ಒಡಗೂಡಿ
ಅನುಸರಿಸೆ ಸೀತೆ ಕಾನನಕೆ  
ಪ್ರಜಾ ರಕ್ಷಣೆಯೇ ಪರಮಗುರಿ
ಎಂದು ನೆಲೆಸಿದೆ ಚಿತ್ರಕೂಟದಿ
ಮುನಿಗಳ ಕಾಪಾಡುತ ರಕ್ಕಸರಿಂದ
ಅಳಿಸಿದೆ ದಾನವರ ದಿವ್ಯಾಸ್ತ್ರದಿ
ತಾಪಸ ವೇಷದಿ ಅಪಹರಿಸೆ
ಸಾಧ್ವಿ ಸೀತೆಯನು, ರಾವಣನು
ಅಲೆದೆ ಕಂಗೆಟ್ಟು ಘೋರ ಅರಣ್ಯದಿ
ಸಂಧಿಸಿದೆ ವಾಯುಸುತ ಹನುಮನ
ವಾನರ ನೃಪ ಸುಗ್ರೀವನ ಸಖ್ಯಗೈದೆ
ವಧಿಸಿದೆ ವಂಚಕ ವಾಲಿಯನು
ಅರಸಿ ಹೊರಟಿತು ವಾನರ ಸೈನ್ಯ
ಚಲಿಸಿದನು ಹನುಮ ದಕ್ಷಿಣಕೆ
ಧಾಟಿದ ಸಾಗರವ ಧೀರ ಹನುಮ
ಕಂಡ ಸೀತೆಯನು ಅಶೋಕವನದಿ
ಸಿರಿಪುರಿ ಲಂಕೆ ಧಗಧಗಿಸಿತು
ನಡುಗಿದರು ದಾನವರು ಭಯದಲಿ
ರಾಮ ಸೈನ್ಯ ತಲುಪಿತು ಲಂಕೆಯನು
ಆಯಿತು ರಾವಣ ಕುಂಭಕರ್ಣರ ವಧೆ
ವಿಭೀಶಣಗೆ  ರಾಜ್ಯ ಪಟ್ಟಾಭಿಷೇಕ
ಮರಳಿದರು ರಾಮಸೀತೆಲಕ್ಷ್ಮಣರು
ಮರಳಿಸಿದ ರಾಜ್ಯ ಅನುಜ ಭರತ
ಮೆರೆಯುತ ಸೋದರ ಪ್ರೇಮವ
ಆಯಿತು ರಾಮ ಪಟ್ಟಾಭಿಷೇಕ
ನಲಿಯುತು ಅಯೋಧ್ಯೆ ಸಂತಸದಿ
ರಾಮ ನೀನಾದೆ ಪುರುಷೋತ್ತಮ
ಬ್ರಾತೃ ಪ್ರೇಮಕೆ ಮಾದರಿಯೆನಿಸಿ
ನಿಲ್ಲುವುದು  ನಿನ್ನ ಕಥೆ ಅಮರ
ಶರಣೆನುವೆ ರಕ್ಷಿಸು ಅನವರತ
ಮಂಗಳವು ಕೋಸಲೆಂದ್ರನಿಗೆ
ಮಂಗಳವು ಇಕ್ಷ್ವಾಕು ಕುಲಜನಿಗೆ
ಮಂಗಳವು ಜಾನಕೀ ವಲ್ಲಭನಿಗೆ
ಮಂಗಳವು ಹನುಮಸಖ ರಾಮಗೆ
ರಚನೆ:  ಕೆ.ವಿ.ಶ್ರೀನಿವಾಸ ಪ್ರಸಾದ್

No comments:

Post a Comment