ನನ್ನ ಜೀವನ ಚರಿತೆ ಭಾಗ ೩
ತಾಯಿಯವರ ಮರಣದ ದುಃಖದಲ್ಲಿ ಪರೀಕ್ಷೆ ಬರೆಯುವ ಮನಸಿರಲಿಲ್ಲ . ಸಂತಾಪ ಸೂಚಿಸಲು ಬಂದಿದ್ದ ನನ್ನ ಪ್ರಾಧ್ಯಾಪಕರು ಹಾಗೂ ಸ್ನೇಹಿತರು ಒತ್ತಾಯಿಸಿದರು . ತಂದೆಯವರು ತಾಯಿಯ ಆಸೆಯಂತೆ ಪರೀಕ್ಷೆ ಬರೆಯಲು ಸೂಚಿಸಿದರು . ಅದರಂತೆ ಪರೀಕ್ಷೆ ಬರೆದೆ . ಮೊದಲ ದರ್ಜೆಯಲಿ ಪಾಸಾದೆ . ತಂದೆಯವರಿಗೆ ಅತೀವ ಸಂತೋಷ ಆಯಿತು . ಮುಂದೇನು ಎಂಬ ಪ್ರಶ್ನೆ ಕಾಡತೊಡಗಿತು . ತಂದೆಯವರು ಕೆಲಸ ಹುಡುಕಲು ಬಲವಂತ ಮಾಡಿದರು . ಆದರೆ ನನಗೆ ತಂದೆಯವರನ್ನು ಈ ಸ್ಥಿತಿಯಲ್ಲಿ ಬಿಟ್ಟು ಹೋಗಲು ಮನಸಾಗಲಿಲ್ಲ . ತಂದೆಯವರಿಗೆ ಸಹಾಯವಾಗಿ ಜೊತೆಯಲ್ಲೇ ಇರಲು ತೀರ್ಮಾನಿಸಿದೆ . ಪತ್ರಿಕೆಯ ಪ್ರಕಾಶನದಲ್ಲಿ ಹತ್ತು ವರುಷ ತೊಡಗಿಸಿಕೊಂಡೆ .ಅನೇಕ ಕೈಗಾರಿಕೆಗಳಿಂದ ಅವಕಾಶಗಳು ಬಂದವು ಪ್ರಖ್ಯಾತ ಉದ್ದಿಮೆಗಳಾದ ಬಾಬಾ ಅಟಾಮಿಕ್ ಎನರ್ಜಿ,ಹೆಚ್ ಸಿ ಎಲ್ ,ಈ ಸಿ ಐ ಎಲ್ ಮುಂತಾದ ಉದ್ದಿಮೆಗಳು ತಕ್ಷಣ ಕೆಲಸ ಸೇರುವಂತೆ ಅವಕಾಶ ಮಾಡಿಕೊಟ್ಟವು. ಆದರೆ ತಾಯಿಯೂ ಇಲ್ಲದಿದ್ದಾಗ ತಂದೆಯನ್ನು ಒಬ್ಬರನ್ನೇ ಬಿಟ್ಟಿರಲು ಮನಸ್ಸು ಒಪ್ಪಲಿಲ್ಲ ತಂದೆಯವರ ಬಳಿಯೇ ನೆರವಾಗಿ ಉಳಿದೆ ತಂದೆಯವರ ಇಚ್ಚೆಯಂತೆ ಅಖಿಲ ಭಾರತ ಸಂಸ್ಕೃತ ಸಮ್ಮೇಳನ ನಡೆಸಲು ನೆರವಾದೆ. ಎರಡನೆಯ ಪುಟದಲ್ಲಿ ಪ್ರತಿ ಸೋಮವಾರ ಮೈಸೂರು ಜಿಲ್ಲೆಯ ದೇವಾಲಯಗಳ ಬಗ್ಗೆ ಲೇಖನ ಬರೆಯಲು ಮುಂದಾದೆ ಸ್ನೇಹಿತ ಅಮರದಾಸ್ ನೆರವಿನೊಂದಿಗೆ ಮೈಸೂರು ಜಿಲ್ಲೆಯ ಅತಿ ಹೆಸರಾದ ೪೦ ದೇವಾಲಯಗಳ ಬಗ್ಗೆ ಚಿತ್ರ ಲೇಖನ ಬರೆದೆ . ಆ ಲೇಖನಗಳನ್ನು ಪುಸ್ತಕ ರೂಪದಲ್ಲಿ ಹೊರತಂದೆ .ಸಂಸ್ಕೃತದಲ್ಲಿ ಬರೆದ ಪ್ರತಿಗಳೆಲ್ಲ ಮುಗಿದುಹೋದವು. ಅಮೆರಿಕಾದ ಪುಸ್ತಕ ಸಂಗ್ರಹಾಲಯಎಲ್ಲ ಪ್ರತಿಗಳನ್ನೂ ಖರೀದಿಸಿತು. ಆಗ ಪುಸ್ತಕದ ಕನ್ನಡ ಆವೃತ್ತಿ ಹೊರತಂದೆ .
ಮೈಸೂರಿನ ಜಿಲ್ಲಾಧಿಕಾರಿಗಳು ಕನ್ನಡ ಪುಸ್ತಕದ ಬಿಡುಗಡೆ ಮಾಡಿ ಪ್ರಶಂಸಿಸಿದರು . ತಂದೆಯವರಿಗೆ ತುಂಬಾ ಸಂತೋಷ ಆಯಿತು . ಪತ್ರಿಕೆಯ ಚಂದಾದಾರರ ಸಂಖ್ಯೆ ಕ್ರಮೇಣ ಅಧಿಕವಾಗತೊಡಗಿತು .
ಮೈಸೂರಿನ ಜಿಲ್ಲಾಧಿಕಾರಿಗಳು ಕನ್ನಡ ಪುಸ್ತಕದ ಬಿಡುಗಡೆ ಮಾಡಿ ಪ್ರಶಂಸಿಸಿದರು . ತಂದೆಯವರಿಗೆ ತುಂಬಾ ಸಂತೋಷ ಆಯಿತು . ಪತ್ರಿಕೆಯ ಚಂದಾದಾರರ ಸಂಖ್ಯೆ ಕ್ರಮೇಣ ಅಧಿಕವಾಗತೊಡಗಿತು .
ನನ್ನ ಬಿಡುವಿನ ಸಮಯದಲ್ಲಿ ಐ ಎ ಎಸ್ ಪರೀಕ್ಷೆಗೆ ತಯಾರಾದೆ . ಆದರೆ ವಿಧಿ ಬೇರೆಯೇ ಇತ್ತು . ನನ್ನ ಆರೋಗ್ಯದಲ್ಲಿ ಏರುಪೇರಾಯಿತು . ಪರೀಕ್ಷೆ ಬರೆಯಲಾಗಲಿಲ್ಲ . ಬೇಸರ ಆಯಿತು . ನನ್ನ ತಮ್ಮ ಓದಿನಲ್ಲಿ ಹಿಂದೆ ಇದ್ದ . ಅವನ ಓದಿಗೆ ಸರಿಯಾಗಿ ಉದ್ಯೋಗವು ದೊರೆಕಲಿಲ್ಲ . ಕೆಲಸ ದೊರೆತಾಗಲು ಕೆಲಸದಲ್ಲಿ ಉಳಿಯಲಿಲ್ಲ . ತಂದೆಯವರು ನಿರಾಸೆ ಹೊಂದಿದರು ಇಬ್ಬರು ಗಂಡು ಮಕ್ಕಳು ಪ್ರೆಸ್ ನಲ್ಲಿ ಕೆಲಸ ಮಾಡುವುದು ಅವರಿಗೆ ಬೇಸರ ತಂದಿತ್ತು . ಈ ಮಧ್ಯೆ ಪತ್ರಿಕೆಯ ೧೦ ನೆ ವರ್ಷದ ಸಮಾರಂಭ ಅದ್ದೊರಿಯಾಗಿ ನಡೆಸಲು ತಂದೆಯವರು ತೀರ್ಮಾನಿಸಿದರು . ಅಂತೆಯೇ ಭಾರತದ ಉಪ ರಾಷ್ಟ್ರಪತಿಗಳಾಗಿದ್ದ ಬಿ ಡಿ ಜತ್ತಿಯವರನ್ನು ಆಹ್ವಾನಿಸಲು ಉದ್ದೇಶಿಸಿದರು ಅವರ ಆಸೆಯಂತೆ ಜತ್ತಿಯವರನ್ನು ನೇರವಾಗಿ ಆಹ್ವಾನಿಸಲು ಡೆಲ್ಲಿಗೆ ತೆರಳಿದೆ ಅವರು ಸಮಾರಂಭಕ್ಕೆ ಬರಲು ಒಪ್ಪಿದರು . ಅದಕ್ಕಾಗಿ ಒಂದು ವಿಶೇಷ ಸಂಚಿಗೆ ಹೊರತರಲು ಇಚ್ಛಿಸಿದರು . ನಾನು ಹಗಲಿರುಳೆನ್ನದೆ ಜಾಹಿರಾತು ಸಂಗ್ರಹಿಸಲು ಬೆಂಗಳೂರಿನ ಅನೇಕ ದೊಡ್ಡ ಉದ್ದಿಮೆದಾರರನ್ನು ಭೇಟಿಯಾದೆ . ಪರಿಣಾಮ ಸುಮಾರು ೪೦ ಜಾಹಿರಾತನ್ನು ಸಂಗ್ರಹಿಸಿದೆ. ಒಂದು ದೊಡ್ಡ ಸ್ಮರಣ ಸಂಚಿಕೆ ತಯಾರಾಯಿತು . ಜತ್ತಿಯವರ ಉಪಸ್ಥಿತಿಯಲ್ಲಿ ಸಮಾರಂಭ ಅದ್ದೊರಿಯಾಗಿ ನಡೆಯಿತು . ಭಾರತದ ಬಹುತೇಕ ಪತ್ರಿಕೆಯಲ್ಲಿ ದೃಶ್ಯ ಮಾಧ್ಯಮದಲ್ಲಿ ಪ್ರಚಾರವಾಯಿತು . ತಂದೆ ತುಂಬಾ ಸಂತೋಷಗೊಂಡರು . ಅವರ ಮಿತ್ರರೆಲ್ಲ ಹೊಗಳಿದರು . ಆದರೆ ಯಾರು ಆರ್ಥಿಕವಾಗಿ ನೆರವು ನೀಡಲು ಮುಂದಾಗಲಿಲ್ಲ . ತಂದೆಯವರ ಆರ್ಥಿಕ ಸ್ಥಿತಿ ಹದಗೆಡತೊಡಗಿತು . ತಂದೆಯವರ ಸ್ಥಿತಿ ನನ್ನ ಮನಸನ್ನು ಕಲಕತೊಡಗಿತು . ತಂದೆಯವರು ನೀನು ಚೆನ್ನಾಗಿ ಓದಿದ್ದೀಯ ಏಕೆ ಬೇಕು ಈ ಪತ್ರಿಕಾ ಜೀವನ .ಎಲ್ಲಾದರು ಕೆಲಸ ಗಳಿಸಿ ಚೆನ್ನಾಗಿರು ಎಂದು ಒತ್ತಾಯಿಸ ತೊಡಗಿದರು . ಈ ನಡುವೆ ನನ್ನ ಉಳಿದ ಅವಿವಾಹಿತ ತಂಗಿಯರ ಮದುವೆಯೂ ನಡೆಯಿತು . ಓಡಾಡಲು ಯಾರೂ ಇರಲಿಲ್ಲ . ಒಂದು ತಂಗಿಯನ್ನು ನಾನೇ ಧಾರೆಯೆರೆದರೆ ಮತ್ತೋರ್ವಳನ್ನು ನನ್ನ ದೊಡ್ಡಪ್ಪನ ಮಗ ಧಾರೆ ಎರೆದ . ತಂದೆಯವರು ಕೂಡಿಟ್ಟ ಹಣವೆಲ್ಲ ಖರ್ಚಾಗಿ ಹೋಗಿತ್ತು . ತಮ್ಮನಾದರೋ ಯಾವ ಕೆಲಸದಲ್ಲೂ ಉತ್ಸಾಹ ತೋರಲಿಲ್ಲ . ಅವನು ಪ್ರೆಸ್ಸನ್ನು ನೋಡಿಕೊಳ್ಳಲು ತೀರ್ಮಾನಿಸಿದ್ದ ನನಗೆ ದಿಕ್ಕು ತೋಚಲಿಲ್ಲ . ಸರಿ ಕೆಲಸ ಹುಡುಕಲು ಆರಂಭಿಸಿದೆ . ಅನೇಕ ಕಡೆ ಕೆಲಸ ದೊರಕಿತು . ಆದರೆ ತಂದೆಯನ್ನು ಬಿಟ್ಟು ಹೋಗಲಾಗದೆ ಮೈಸೂರಲ್ಲೇ ಕೆಲಸ ಅರಸಿದೆ . ಆದರೆ ಆ ಕೆಲಸ ರಾತ್ರಿಯ ಪಾಳಿಯದಾದ್ದರಿಂದ ಹೆಚ್ಚು ದಿನ ಅಲ್ಲಿ ಕೆಲಸ ಮಾಡಲಾಗಲಿಲ್ಲ . ಅಷ್ಟರಲ್ಲಿ ಬ್ಯಾಂಕ್ ಉದ್ಯೋಗ ದೊರಕಿತು . ತಂದೆಯವರ ಆಶಯದಂತೆ ಕಾರ್ಪೋರೇಶನ್ ಬ್ಯಾಂಕ್ ಸೇರಿದೆ . ನನ್ನ ತಮ್ಮ ಪ್ರೆಸ್ಸ್ನಲ್ಲಿ ಉಳಿದ .
ನನ್ನ ಯೌವನದ ದಿನಗಳು ಹೀಗೆ ಆರಂಭವಾಯಿತು .
ನನ್ನ ಯೌವನದ ದಿನಗಳು ಹೀಗೆ ಆರಂಭವಾಯಿತು .
No comments:
Post a Comment