ನನ್ನ ಜೀವನ ಚರಿತೆ ಭಾಗ ೧
ಅಂದು ಆಗಸ್ಟ್ ೫ನೆ ತಾರೀಖು ೧೯೯೦ ನೆ ಇಸವಿ ಭಾನುವಾರ ಬೆಳಿಗೆ ೪-೩೦ ಘಂಟೆ ,ನನ್ನ ಪ್ರೀತಿಯ ತಂದೆ ೬೯ ವರುಷ ಪೂರ್ಣಗೊಳಿಸಿ ಇಲ್ಲವಾಗಿದ್ದರು . ನನ್ನ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿತ್ತು ಮನೆಗೆ ನಾನೇ ಹಿರಿಯ ಮಗ .ಆಗ ನನಗೆ ೨೮ ವರುಷ ನನ್ನ ತಾಯಿ ತೀರಿಹೋಗಿ ೧೬ ವರುಷವಾಗಿತ್ತು ಮನೆಯ ಎಲ್ಲ ಜವಾಬ್ಧಾರಿ ನನ್ನ ಮೇಲೆ ಬಿದ್ದಿತ್ತು . ಮುಂದಿನ ಕೆಲಸಗಳೆಲ್ಲವೂ
ಆಗಬೇಕಿತ್ತು ನನ್ನ ತಂದೆಗೆ ನನ್ನನ್ನು ಸೇರಿ ೬ ಮಕ್ಕಳು ೪ ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳು . ಹೆಣ್ಣು ಮಕ್ಕಳಿಗೆಲ್ಲ ಮದುವೆ ಆಗಿತ್ತು . ನನಗೂ ಮದುವೆ ಆಗಿ ೯ ವರುಷ ಆಗಿತ್ತು ನನಗೆ ಎರಡು ಮಕ್ಕಳಿದ್ದರು . ತಂದೆಯವರು ಅಪಾರ ಬಂಧು ಬಳಗ ಸ್ನೇಹಿತರು ಅಭಿಮಾನಿಗಳನ್ನು ಬಿಟ್ಟು ಹೋಗಿದ್ದರು . ಬೆಳಗಾಗುತಿದ್ದಂತೆ ಅಪಾರ ಸಂಖ್ಯೆಯಲ್ಲಿ ಜನ ಸಾಗರ ಬರತೊಡಗಿತು . ಹಾರಗಳನ್ನು ಹಿಡಿದು ಬರುವವರು ಕೆಲವರಾದರೆ ಪುಷ್ಪ ಗುಚ್ಛ ಹಿಡಿದು ಬಂದವರು ಕೆಲವರಾಗಿದ್ದರು . ಎಲ್ಲರ ಕಣ್ಣಲ್ಲಿ ಕಂಬನಿ ಮೂಡಿತ್ತು . ಪತ್ರಿಕೆಯವರು ಆಕಾಶವಾಣಿಯವರು ಆಗಮಿಸಿದ್ದರು ಸಾಂತ್ವನದ ನುಡಿಗಳು ಹರಿದಿದ್ದವು ೧೧ಘಂಟೆಗೆ ಮುಂದಿನ ಕಾರ್ಯಗಳು ಆರಂಭ ಗೊಂಡವು . ಬಂಧುಗಳು ಅಭಿಮಾನಿಗಳು ತಂದೆಯ ಶರೀರವನ್ನು ಬಿಜಯಗೊಳಿಸುವುದಾಗಿ ವಿನಂತಿಸಿದರು . ಅಂತೆಯೇ ಅಂತಿಮ ಯಾತ್ರೆ ೧೨ ಘಂಟೆಗೆ ಆರಂಭ ವಾಯಿತು ೨ ಘಂಟೆಗೆ ಚಿತೆಗೆ ಅಗ್ನಿ ಸ್ಪರ್ಶ ಮಾಡಲಾಯಿತು . ತಂದೆಯ ಭೌತಿಕ ಶರೀರ ಅಂತರಿಕ್ಷದಲ್ಲಿ ಲೀನವಾಯಿತು . ಒಂದು ಅಧ್ಯಾಯ ಮುಗಿದು ನೂತನ ಯುಗಕ್ಕೆ ಎಡೆಮಾಡಿ ಕೊಟ್ಟಿತ್ತು .
ಮುಂದುವರೆಯುವ ಮೊದಲು ಪೂರ್ವ ವೃತ್ತಾಂತ ತಿಳಿಸಲು ಬಯಸುತ್ತೇನೆ . ನನ್ನ ತಂದೆ ಜನಿಸಿದ್ದು ೧೯೨೧ ನೆ ಇಸವಿ ಸೆಪ್ಟೆಂಬರ್ ೧೪ ರಂದು . ಅವರ ತಂದೆ ನಡಾದುರ್ ಶ್ರೀನಿವಾಸ ಅಯ್ಯಂಗಾರ್ .
ತಾಯಿ ಕನಕಮ್ಮ . ಅವರದ್ದು ಸಂಪ್ರದಾಯ ಕುಟುಂಬ .
ತುಂಬು ಕುಟುಂಬದಲ್ಲಿ ೫ ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು . ತಂದೆಯ ಅಕ್ಕಂದಿರು ಅಲಮೇಲು ಮತ್ತು ಚೇಚಮ್ಮ . ತಂಗಿಯರು ಕ್ರಮವಾಗಿ ಜಯಮ್ಮ,ಪದ್ಮಮ್ಮ ಮತ್ತು ಅಂಬಮ್ಮ. ಅಣ್ಣನವರು ನಡಾದುರ್ ಲಕ್ಷ್ಮೀಕಾಂತ ಅಯ್ಯಂಗಾರ್ ತಂದೆ ಮತ್ತು ಅಣ್ಣ ಸಂಸ್ಕೃತ ಪಂಡಿತರು . ಮೈಸೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಾಪಕರಾಗಿದ್ದರು ದೊಡ್ಡಪ್ಪನವರು ಮೈಸೂರಿನ ಸಂಸ್ಕೃತ ಪಾಠಶಾಲೆಯಲ್ಲಿ ವ್ಯಾಕರಣ ಪ್ರಾಧ್ಯಾಪಕರಾಗಿದ್ದರು ಅವರ ಹಾದಿಯಲ್ಲೇ ತಂದೆಯವರು ಪಾಠ ಶಾಲೆಯಲ್ಲಿ ಸಂಸ್ಕೃತ ವಲ್ಲದೆ ಇಂಗ್ಲಿಷ್ ಶಾಲೆಯಲ್ಲಿ ಆಂಗ್ಲ ಭಾಷೆಯ ಅಧ್ಯಯನವನ್ನು ಮಾಡಿದರು ಕಾಲಕ್ರಮದಲ್ಲಿ ಪಂಡಿತ ಪರೀಕ್ಷೆಯಲ್ಲಿ ಪಾಂಚರಾತ್ರಾಗಮದಲ್ಲಿ ಪದವಿ ಪಡೆದರು . ಆದರೆ ಹಿರಿಯರಂತೆ ಅಧ್ಯಾಪಕ ವೃತ್ತಿ ಮಾಡಲು ಅವರು ಬಯಸಲಿಲ್ಲ ತಮ್ಮ ೨೦ ನೆಯ ವಯಸ್ಸಿನಲ್ಲಿ ಸೀತಾಲಕ್ಷ್ಮಿ ಎಂಬ ಕನ್ಯೆಯೊಂದಿಗೆ ವಿವಾಹವಾಯಿತು . ಆಗ ತಾಯಿಗೆ ೧೪ ವರುಷ . ತಂದೆ ೧೯೪೨ ರಲ್ಲಿ ಸಣ್ಣ ಪ್ರಮಾಣದಲ್ಲಿ ಒಂದು ಮುದ್ರಣಾಲಯ ತೆರೆದರು . ತಾವೇ ಸ್ವತಃ ನಿಂತು ಮುದ್ರಣ ಮಾಡಿದರು ಅನೇಕ ಸ್ತೋತ್ರ ಪುಸ್ತಕಗಳನ್ನು ಮುದ್ರಿಸಿದರು ಅಯ್ಯಂಗಾರ್ ಲಗ್ನಪತ್ರಿಕೆಗೆಂದೇ ಒಂದು ಮಾದರಿ ಸ್ರಿಷ್ಟಿಸಿದರು . ಕಾಲ ಕ್ರಮದಲ್ಲಿ ಮುದ್ರಣಾಲಯ ವಿಸ್ತರಿಸಿದರು ಸ್ಥಳೀಯ ದಿನಪತ್ರಿಕೆಗಳನ್ನು ಮುದ್ರಿಸಲು ಆರಂಬಿಸಿದರು ಪ್ರಶ್ನ ಪತ್ರಿಕೆಗಳು ಸಿನಿಮಾ ಟಿಕೆಟ್ಗಗಳು ಚುನಾವಣಾ ಬಿತ್ತಿ ಪತ್ರಗಳು ಹೀಗೆ ಹಲವಾರು ವಿಧಗಳಲ್ಲಿ ಮುಂದುವರಿದರು . ಅವರು ಪರಿಷ್ಕಾರ ಮಾಡಿ ಮುದ್ರಿಸಿದ ಸರಳ ಆರಾಧನಾ ಕ್ರಮ, ಸಂಧ್ಯಾವಂದನ ಕ್ರಮ,ಶ್ರಾದ್ಧಪ್ರಯೋಗ ಮುಂತಾದ ಪುಸ್ತಕಗಳು ಜನಪ್ರಿಯವಾದವು . ತಂದೆಯವರ ಆತ್ಮೀಯ ಸ್ನೇಹಿತರೆಂದರೆ ಟಿ ಬಿ ಸೂರ್ಯನಾರಾಯಣ,ಡಿ ಕೃಷ್ಣ ಅಯ್ಯಂಗಾರ್,ವೆಂಕಟರಂಗ ಅಯ್ಯಂಗಾರ್ ಮುಂತಾದವರು . ಪರಿಶ್ರಮವೇ ಜೀವನೋಪಾಯ ಎಂದು ಸಾರಿ ಹೇಳಿದರು. ಕೆಲಸದವರು ಕೈ ಕೊಟ್ಟಾಗಲೂ ಅಂಜದೆ ತಾವೇ ನಿಂತು ಕೆಲಸ ಮಾಡಿದವರು . ಸರಳ ಜೀವನ ಅಂದ ಮಾತ್ರಕ್ಕೆ ಆಡಂಬರ ಬೇಡವೆಂದವರಲ್ಲ. ಮೊದಲು ರೇಡಿಯೋ ಖರೀದಿಸಿದವರು ತಂದೆಯವರು. ಬೀದಿಯ ಮಂದಿಯೆಲ್ಲಾ ರೇಡಿಯೋ ಕೇಳಲು ಬರುತ್ತಿದ್ದರು . ಸಿನಿಮಾ ಎಂದರೆ ಪಂಚಪ್ರಾಣ . ಸ್ನೇಹಿತರೊಂದಿಗೆ ರಾತ್ರಿಯಲ್ಲಿ ಚಿತ್ರಮಂದಿರಕ್ಕೆ ಹೋಗುತ್ತಿದ್ದರು. ಹಾಗೆಂದು ಮಕ್ಕಳನ್ನು ಸ್ವಚ್ಛಂದವಾಗಿ ಬಿಡಲಿಲ್ಲ . ಶಿಸ್ತಿನ ಸಿಪಾಯಿಯಂತಿದ್ದರು . ವಿದ್ಯೆಗೆ ಮೊದಲ ಆದ್ಯತೆ ಎನ್ನುತ್ತಿದ್ದರು ಹೀಗೆ ನಾನು ಶಿಸ್ತಿನ ವಾತಾವರಣದಲ್ಲಿ ಬೆಳೆದೆ. ತಾಯಿ ಮಮತೆಯ ಪ್ರತಿರೂಪ. ಅವರಿಗೆ ನನ್ನ ಮೇಲೆ ಅತಿಯಾದ ಪ್ರೀತಿ ನನಗೋ ಎಣ್ಣೆ ತಿಂಡಿಯೆಂದರೆ ಪಂಚಪ್ರಾಣ . ಯಾವಾಗಲೂ ಮನೆಯಲ್ಲಿ ತಿಂಡಿ ಇರುತ್ತಿತ್ತು . ಅಮ್ಮನ ಬಿಸಿಬೇಳೆಬಾತ್ , ಪುಳಿಯೋಗರೆ ,ಪೊಂಗಲ್ ,ದೋಸೆ ಎಂದರೆ ಬಲೇ ಇಷ್ಟ .ಇವುಗಳಿಲ್ಲದ ದಿನವಿರಲಿಲ್ಲ . ಈ ತಿನಿಸುಗಳ ತಯಾರಿಕೆಯಲ್ಲಿ ಯಾವ ಪದಾರ್ಥವು ಕೊರೆಯಾಗಬಾರದು . ಹಾಗಾಗಿ ಅವರ ತಿನಿಸುಗಳೆಂದರೆ ಬಂಧುಗಳಿಗೂ ಇಷ್ಟ . ನಮ್ಮದು ಆಗ ಒಟ್ಟು ಕುಟುಂಬ . ಅತ್ತೆಯವರೆಲ್ಲ ಒಟ್ಟಿಗೆ ಇರುತ್ತಿದ್ದರು ಹೀಗಾಗಿ ತಿನಿಸು ಮಾಡಬೇಕಾದರೆ ದೊಡ್ಡ ಪ್ರಮಾಣದಲ್ಲೇ ಮಾಡಬೇಕಿತ್ತು. ತಾಯಿಯವರು ಎಲ್ಲವನ್ನೂ ನಿಭಾಯಿಸುತ್ತಿದ್ದರು.
ನನ್ನ ತಾಯಿಯ ತಂದೆ ಪ್ರಸಿದ್ಧ ಪುರೋಹಿತರು .ಅವರ ಹೆಸರು ಕಂದಾಡೈ ತಿರುನಾರಾಯಣ ಅಯ್ಯಂಗಾರ್ ಎಂದು. ಅವರಿಗೆ ಇಬ್ಬರು ಮಡದಿಯರು . ನನ್ನ ತಾಯಿ ಮೊದಲಮಡದಿಯ ಏಕೈಕ ಪುತ್ರಿ. ಎರಡನೆಯ ಮಡದಿಗೆ ೭ ಜನ ಮಕ್ಕಳು. ನನ್ನ ಅಜ್ಜಿಗೆ ನಾನೆಂದರೆ ತುಂಬಾ ಇಷ್ಟ , ಹೆಚ್ಚಿನದಿನಗಳು ಸಂಜೆಯ ಸಮಯ ಅಜ್ಜಿಮನೆಯಲ್ಲಿಯೇ ಕಳೆಯುತ್ತಿದ್ದೆ . ಅಜ್ಜಿಯ ಹೆಸರು ಸುಂದರಮ್ಮ. ಹೆಸರಿಗೆ ತಕ್ಕಂತೆ ಸುಂದರವಾಗಿಯೇ ಇದ್ದರು. ಮೊದಲ ಮಗು ಹೆಣ್ಣು ಮಗು ಆಯಿತಲ್ಲ ಎಂದು ಅಜ್ಜ ಎರಡನೆಯ ಮದುವೆ ಆಗಿದ್ದರು. ಆದರೂ ತಾತನಿಗೆ ಮುದ್ದಿನ ಮೊಮ್ಮಗ ಆಗಿದ್ದೆ. ಅಜ್ಜಿ ದೋಸೆ ಚೆನ್ನಾಗಿ ಮಾಡುತ್ತಿದ್ದರು ನಾನು ಅವರ ಮನೆಗೆ ಹೋದಾಗಲೆಲ್ಲಾ ದೋಸೆ ಸಿದ್ಧವಾಗಿರುತಿತ್ತು. ಅಜ್ಜಿಗೆ ಸಿನಿಮಾ ನೋಡಲು ಜೊತೆ ನಾನಾಗಿದ್ದೆ . ಅಪ್ಪ ತುಂಬಾ ಸ್ಟ್ರಿಕ್ಟ್ . ರಾತ್ರಿ ಅಜ್ಜಿಮನೆಯಲ್ಲಿ ಇರುವೆನೆಂದು ಹೋಗಿ ಅಜ್ಜಿಯ ಸಂಗಡ ರಾತ್ರಿ ಸಿನಿಮಾ ನೋಡುತ್ತಿದ್ದೆ . ಹೀಗೆ ನನ್ನ ಬಾಲ್ಯ ಸುಂದರ ಸಮಯವಾಗಿತ್ತು. ಕಳೆದ ಆ ಬಾಲ್ಯದ ದಿನಗಳು ರಸಮಯವಾಗಿತ್ತು.

No comments:
Post a Comment