ನನ್ನ ಜೀವನ ಚರಿತೆ ಭಾಗ ೪
೧೯೮೧ರಲ್ಲಿ ಕಾರ್ಪೋರೇಶನ್ ಬ್ಯಾಂಕ್ ಸೇರಿದೆ. ನನ್ನ ಈ ಹಿಂದಿನ ೬ ತಿಂಗಳ ಕೈಗಾರಿಕೆಯೊಂದರಲ್ಲಿ ಮಾಡಿದ ಕೆಲಸದ ಅನುಭವ ಸಹಾಯ ಮಾಡಿತು. ನೇರವಾಗಿ ಅಧಿಕಾರಿಯಾಗಿ ನೇಮಕಗೊಂಡೆ . ಮೊದಲಬಾರಿಗೆ ಮಂಗಳೂರಿನಲ್ಲಿ ಕೆಲಸ ಸೇರಿದೆ . ತಂದೆಯವರಿಗೆ ಆದ ಆನಂದ ಅಷ್ಟಿಷ್ಟಲ್ಲ . ಅವರಿಗೆ ಮಂಗಳೂರಿಗೆ ಒಬ್ಬನನ್ನೇ ಕಳುಹಿಸಲು ಅಂಜಿಕೆ . ಮದುವೆಗೆ ಒಪ್ಪಲೇಬೇಕೆಂದರು . ತಂದೆಯ ಮಾತನ್ನು ಎಂದೂ ಮೀರಿದವನಲ್ಲ . ಒಪ್ಪಿದೆ. ವಧುಗಳ ಪಟ್ಟಿಯೇ ಸಿದ್ದವಾಯಿತು . ಆದರೆ ಯಾರೂ ಒಪ್ಪಿಗೆಯಾಗಲಿಲ್ಲ. ಈ ಮಧ್ಯೆ ನನ್ನ ಅತ್ತೆ ಅಂದರೆ ತಂದೆಯ ತಂಗಿ, ತಾಯಿ ತೀರಿಕೊಂಡಷ್ಟು ದಿನದಿಂದಲೂ ತಾಯಿಯಂತೆ ನಮ್ಮನ್ನು ನೋಡಿಕೊಳ್ಳುತ್ತಿದ್ದರು .ಅವರಿಗೆ ಒಬ್ಬಳು ಮದುವೆಯ ವಯಸ್ಸಿನ ಮಗಳಿದ್ದಳು. ಅತ್ತೆ ಮದುವೆಯ ಬಗ್ಗೆ ಪ್ರಸ್ತಾಪಿಸಿದರು. ಆದರೆ ನನ್ನ ಅಭಿರುಚಿ ಒಪ್ಪಲಿಲ್ಲ. ತಂದೆಯವರ ಬಳಿ ತಿಳಿಸಿದೆ.ಅವರು ನೊಂದು ನುಡಿದರು. ಋಣ ತೀರಿಸಬೇಕಾದ್ದು ಕರ್ತವ್ಯವೆಂದರು. ತಂದೆಯ ಯಾವ ಮಾತನ್ನು ಮೀರದ ನಾನು ಒಪ್ಪಿದೆ. ಬ್ಯಾಂಕ್ ಸೇರಿದ ಎರಡು ತಿಂಗಳಲ್ಲಿಅಂದರೆ ಅಕ್ಟೋಬರ್ ೩೦, ೧೯೮೧ ರಂದು ನನ್ನ ಮತ್ತು ವಸಂತ ಕಲಾಳ ಮಾಡುವೆ ನೆರವೇರಿತು.
ತಂದೆಯವರಿಗೆ ಸಂತೋಷವಾಗಿತ್ತು. ಕೆಲವೇ ತಿಂಗಳಲ್ಲಿ ನನಗೆ ಹುಬ್ಬಳ್ಳಿಗೆ ವರ್ಗವಾಯಿತು. ಹೊಸದಾಗಿ ಸಂಸಾರ ಆರಂಭಿಸಿದೆ. ಮೊದಲ ದಿನಗಳು ತುಂಬಾ ಸಂತಸದಿಂದ ಕೂಡಿತ್ತು. ತಿಂಗಳಿಗೊಮ್ಮೆ ಮೈಸೂರಿಗೆ ಹೋಗಿ ತಂದೆಯನ್ನು ನೋಡಿ ಬರುತ್ತಿದ್ದೆ. ೧೯೮೩ ರಲ್ಲಿ ಮಗಳು ಜನಿಸಿದಳು.ಅವಳಿಗೆ ಹೇಮಾ ಎಂದು ನಾಮಕರಣ ಮಾಡಿದೆ . ತಂದೆಯವರ ಮುಖ ಅರಳಿತು . ಅವರ ಸಂತಸ ಇಮ್ಮಡಿಯಾಗಿತ್ತು
೧೯೮೪ ರಲ್ಲಿ ನನಗೆ ಹಾಸನಕ್ಕೆ ವರ್ಗವಾಯಿತು. ೧೯೮೫ ರಲ್ಲಿಗಂಡು ಮಗುವಾಯಿತು. ಆನಂದಕ್ಕೆ ಎಲ್ಲೆಯಿರಲಿಲ್ಲ. ಗುರು ರಾಘವೇಂದ್ರರ ಅನುಗ್ರಹವೆಂದೇ ಭಾವಿಸಿ ಮಗನಿಗೆ ರಾಘವ ಕಮ್ ಪ್ರದೀಪ ಎಂದು ನಾಮಕರಣ ಮಾಡಿದೆ.
೧೯೮೯ರವರೆಗೂ ಎಲ್ಲವೂ ಚೆನ್ನಾಗಿಯೇ ನಡೆಯಿತು. ಆಗ ತಂದೆಯವರ ಆರೋಗ್ಯ ಬಿಗಡಾಯಿಸಿತು. ಅವರು ಪಾರ್ಶ್ವವಾಯುವಿಗೆ ತುತ್ತಾದರು.ತಂದೆಯವರು ಚಿಂತೆಗೆ ಒಳಗಾದರು . ಕೊನೆಯ ಮಗಳ ಮದುವೆ ಶೀಘ್ರದಲ್ಲಿ ಆಗಬೇಕೆಂದು ಹಠಮಾಡಿದರು .ಕೊನೆಗೆ ನನ್ನ ಮಡದಿಯ ತಮ್ಮ ಒಪ್ಪಿದರು .ತಂಗಿಯ ಮದುವೆ ೧೯೯೦ರ ಜುಲೈನಲ್ಲಿ ನೆರವೇರಿತು. ತಂದೆಯವರ ಅಶಕ್ತಿಯಲ್ಲಿ ನಾನೇ ಧಾರೆಗೆ ಒಪ್ಪಿದೆ. ಅವರ ಕಣ್ಣೆದುರಲ್ಲಿ ಆ ಮದುವೆ ನಡೆಯಿತು. ಆರ್ಥಿಕವಾಗಿ ಶಕ್ತನಲ್ಲದಿದ್ದರೂ ಆಪ್ತರ ನೆರವಿನಿಂದ ಮದುವೆ ಒಪ್ಪವಾಗಿ ನೆರವೇರಿಸಿದೆ . ಓಡಾಡಲೂ ಯಾರೂ ಇಲ್ಲ . ನಾನು ಮತ್ತು ನನ್ನ ಮಡದಿ ಬೆಂಗಳೂರಿಗೆ ತೆರಳಿ ಸೀರೆ ಪಾತ್ರೆಗಳು ಓದಿಸಲು ಬೇಕಾದ ಗಿಫ್ಟ್ ಪದಾರ್ಥಗಳು ಹೀಗೆ ಎಲ್ಲವನ್ನು ಎರಡು ಮೂರು ದಿನದಲ್ಲಿ ಖರೀದಿಸಿ ಅವುಗಳನ್ನು ಮೈಸೂರಿಗೆ ಬಸ್ನಲ್ಲಿ ತುಂಬಿಸಿಕೊಂಡು ರಾತ್ರಿಯಲ್ಲಿ ತಲಪಿದೆವು. ಮದುವೆಗೆ ಛತ್ರ ಹುಡುಕುವುದರಿಂದ ಹಿಡಿದು ಪುರೋಹಿತರು,ಓಲಗದವರು,ಅಡಿಗೆಯವರು ಚಿತ್ರಗ್ರಾಹಕರು ಎಲ್ಲವನ್ನು ೧೫ ದಿನದಲ್ಲಿ ಮುಗಿಸಿದೆವು ಏಕೆಂದರೆ ನಿಶ್ಚಿತಾರ್ಥವಾಗಿ ಮದುವೆಗೆ ಇದ್ದದ್ದು ೨೦ ದಿನ ಮಾತ್ರ . ಮೈಸೂರಿನಲ್ಲಿ ಕರೆಯುವ ಕೆಲಸ ನಾನು ವಹಿಸಿಕೊಂಡೆ ಬೆಂಗಳೂರಿನಲ್ಲಿ ಕರೆಯುವ ಕೆಲಸ ತಂಗಿಯರಿಗೆ ನೀಡಿದೆ . ಮದುವೆಯ ದಿನ ಬಂದೇ ಬಿಟ್ಟಿತು ತಂದೆಯವರಿಗೆ ಆತಂಕವೋ ಆತಂಕ . ಈ ಸಮಯದಲ್ಲಿ ಹಣ ಸಹಾಯ ಮಾಡಿದ ತಂದೆಯವರ ಆಪ್ತ ಸ್ನೇಹಿತರಾಗಿದ್ದ ಶ್ರೀ ಶಿತಿಕಂಠ ಶರ್ಮರನ್ನು ನೆನೆಸಿಕೊಳ್ಳದಿದ್ದರೆ ಅಪರಾಧವಾಗುತ್ತದೆ . ನನ್ನ ಕೈ ಯಲ್ಲಿ ಎರಡು ಲಕ್ಷ ರೂಪಾಯಿ ಹಣವನ್ನು ಕಾಗದ ಪಾತ್ರ ಏನು ಇಲ್ಲದೆ ತಂದಿಟ್ಟರು . ನಿನ್ನಲ್ಲಿ ವಿಶ್ವಾಸವಿದೆ ಬೇರೆ ಏನು ಬೇಡ ಕಾರ್ಯ ಮುಗಿಸು ಎಂದರು. ಅವರ ನೆರವಿಲ್ಲದಿದ್ದರೆ ಈ ಮದುವೆ ನಡೆಯುತ್ತಿರಲಿಲ್ಲ ಜೊತೆಯಲ್ಲಿ ಮೂರು ದಿನವೂ ಜತೆಯಲ್ಲಿ ಇದ್ದು ಮದುವೆ ಚೆನ್ನಾಗಿ ನಡೆಯಲು ನಿರ್ದೇಶನ ನೀಡಿದರು. ಮದುವೆ ನಿರಾತಂಕವಾಗಿ ನಡೆಯಿತು ತಂದೆಯವರ ಕಣ್ಣಲ್ಲಿ ಆನಂದ ಭಾಷ್ಪ ಕೊಡಿಹರಿಯಿತು. ನನ್ನ ಕೈ ಹಿಡಿದು ಗದ್ಗದಿತ ಕಂಠದಿಂದ ನುಡಿದರು "ನನ್ನ ಕೊನೆಯಾಸೆ ನೆರವೇರಿಸಿದೆ ನಿನ್ನನ್ನು ಮಗನಾಗಿ ಪಡೆದದ್ದು ಸಾರ್ಥಕವಾಯಿತು "ಎಂದರು
ದುರಾದೃಷ್ಟವೆಂದರೆ ಅದೇ ವರ್ಷ ನನಗೆ ಮಂಗಳೂರಿಗೆ ವರ್ಗವಾಯಿತು. ತಂದೆಗೆ ಪಾರ್ಶ್ವವಾಯು ಆಗಿದೆ ಒಂದು ವರ್ಷ ವರ್ಗಾವಣೆ ಮುಂದೂಡಿ ಎಂದು ಪರಿಪರಿಯಾಗಿ ಪ್ರಾರ್ಥಿಸಿ ಪ್ರಯತ್ನಿಸಿದೆ . ಆದರೆ ಬ್ಯಾಂಕ್ ನವರು ಒಪ್ಪಲಿಲ್ಲ.ತಂದೆಯವರ ಬಲಭಾಗ ನಿಷ್ಕ್ರಿಯವಾಗಿತ್ತು .ಅವರಿಗೆ ಸ್ವತಂತ್ರವಾಗಿ ಏನನ್ನೂ ಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ . ತಂಗಿ ತಮ್ಮಂದಿರು ಇನ್ನೂ ಚಿಕ್ಕವರು ಬೇರೆ ಮಾರ್ಗವಿಲ್ಲದೆ ಮಡದಿಯನ್ನು ಮೈಸೂರಿನಲ್ಲಿ ಬಿಟ್ಟು ಒಂಟಿಯಾಗಿ ಮಂಗಳೂರಿಗೆ ನಡೆದೆ.ಒಂದು ವರ್ಷವೇ ಕಷ್ಟ ಪಟ್ಟರು , ಮನೆಗೇ ಚಿಕಿತ್ಸೆಗೆ ವೈದ್ಯರು ಬರುತ್ತಿದ್ದರು ಆದರೆ ಪ್ರಯತ್ನ ಫಲಕಾರಿಯಾಗಲಿಲ್ಲ . ತಂದೆಯವರ ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ನಾಟಿ ವೈದ್ಯ ಪ್ರಯೋಗಿಸಲಾಯಿತು ಆದರೆ ಅದೇ ಕುತ್ತಾಯಿತು . ೧೯೯೦ ರ ಆಗಸ್ಟ್ ೫ ರಂದು ತಂದೆಯವರು ವಿಧಿವಶರಾದರು. ನಮ್ಮ ಪ್ರಯತ್ನ ಪ್ರಾರ್ಥನೆ ಫಲಿಸಲಿಲ್ಲ.ಅಂದು ಭಾನುವಾರವಾದರೂ ಆಪ್ತರ ದಂಡೇ ಆಗಮಿಸಿತು . ನಗರದ ಪ್ರತಿಷ್ಠಿತ ವ್ಯಕ್ತಿಗಳು ಆಗಮಿಸಿ ಶ್ರಾದ್ಧನಂಜಲಿ ಅರ್ಪಿಸಿದರು ನಾನು ತಂದೆಯವರ ಚರಿತೆ ತಯಾರಿಸಿದ್ದೆ ಬಂಡ ಪತ್ರಕರ್ತರಿಗೆ ಒಂದೊಂದು ಪ್ರತಿ ನೀಡಿದೆ. ಎಲ್ಲ ಪತ್ರಿಕೆಯವರು ಭಾವಪೂರ್ಣ ಶ್ರದ್ದಾಂಜಲಿ ಪ್ರಕಟಿಸಿದರು. ತಂದೆಯವರ ಅಂತಿಮ ಕಾರ್ಯ ೧ಘಂಟೆಗೆ ಆರಂಭವಾಯಿತು. ವೇದ ಘೋಷ ಮೊಳಗಿಸಲಾಯಿತು .ಪುರುಷಸೂಕ್ತದೊಂದಿಗೆ ಸ್ನಾನ ಮಾಡಿಸಲಾಯಿತು ನಂತರ ವಿಪ್ರರು ದೇಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ದರು ನಗರದ ಹರಿಶ್ಚನ್ದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಯಿತು. ತುಳಸಿ ಚಂದನ ಕಾಷ್ಠ ದಲ್ಲಿ ಚಿತೆಗೆ ಅಗ್ನಿ ಸ್ಪರ್ಶ ಮಾಡಲಾಯಿತು . ಕಣ್ಣಿನಲ್ಲಿ ಅಶ್ರು ಧರೆ ಧಾರಾಕಾರವಾಗಿ ಹರಿಯಿತು. ನನ್ನ ಪ್ರೀತಿಯ ತಂದೆ ಇಲ್ಲವಾಗಿದ್ದರು. ಪ್ರಕೃತಿಯಲ್ಲಿ ಲೀನವಾಗಿದ್ದರು . ನಮ್ಮ ಜೀವನದ ಅತ್ಯಮೂಲ್ಯ ವಸ್ತುವೊಂದನ್ನು ಕಳೆದುಕೊಂಡಿದ್ದೆವು . ಮಾರನೆಯ ದಿನ ಬೆಳಿಗ್ಗೆ ಅಸ್ತಿ ಸಂಗ್ರಹಣ ಮತ್ತು ಪಶ್ಚಿಮ ವಾಹಿನಿಯಲ್ಲಿ ಅಸ್ತಿ ವಿಸರ್ಜನೆ ಮಾಡಲಾಯಿತು . ೧೦ ದಿನಗಳು ಶೋಕಾಚರಣೆ ನಡೆಯಿತು. ಹತ್ತನೆಯ ದಿನ ಬಂಧುಗಳಿಂದ ತಿಲೋದಕ ಏರ್ಪಡಿಸಲಾಗಿತ್ತು. ೧೧ ನೆಯ ದಿನಕ್ಕೆ ಸಾಮಾನ್ಯವಾಗಿ ಜನ ಸಿಗುವುದು ಕಷ್ಟ . ಆದರೆ ಆ ದಿನಕ್ಕೆ ನನ್ನ ಹಿರಿಯ ಅತ್ತೆಯ ಮಗ ಮತ್ತು ತಂದೆಯ ಆಪ್ತ ಒಡನಾಡಿ ಶೀನು ಇರಲು ಒಪ್ಪಿದ . ೧೨ ನೇ ದಿನದಂದು ದಾನ ಪ್ರಮುಖ . ನಾನು ಪುರೋಹಿತರಿಗೆ ಹೇಳಿದೆ ಯಾವ ಕೊರತೆಯೂ ಬೇಡ ವೆಂದು ಅದರಂತೆ ಚಿನ್ನದ ಉಂಗುರವನ್ನು ಮಾಡಿಸಿದ್ದೆ ಅದನ್ನು ನಮ್ಮ ಮನೆ ವೈದ್ಯರಾದ ಡಾಕ್ಟರ್ ಕಸ್ತೂರಿಯವರಿಗೆ ನೀಡಲಾಯಿತು . ೧೩ ನೆಯ ದಿನ ವೈಕುಂಠ ಸಮಾರಾಧನೆ ವೈಭವದಿಂದ ನಡೆಯಿತು ಆಪ್ತರು,ಬಂಧುಗಳು ಸ್ನೇಹಿತರು ಕಲೆತು ಊಟ ಮಾಡಿದರು . ಅಲ್ಲಿಗೆ ಆತ್ಮ ಪರಮಾತ್ಮನಲ್ಲಿ ಲೀನವಾಯಿತು
ಕೊನೆಯ ತಂಗಿ ಮದುವೆಯ ನಂತರ ಪತಿಮನೆಗೆ ತೆರಳಿದಳು. ನಂತರ ತಮ್ಮ ಒಂಟಿಯಾದ. ಅಷ್ಟು ದೊಡ್ಡ ಮನೆಯಲ್ಲಿ ತಮ್ಮನನ್ನು ಒಂಟಿಯಾಗಿ ಬಿಡಲು ಮನಸ್ಸು ಒಪ್ಪಲಿಲ್ಲ.ಅದೂ ತಂದೆ ಮೃತರಾದ ಮೇಲೆ ಮನೆ ಬಿಕೋ ಎನ್ನುತಿತ್ತು. ತೀರ್ಮಾನಿಸಿದೆ . ತಮ್ಮನ ಮದುವೆಯವರೆಗೆ ಆದರೂ ನನ್ನ ಮಡದಿಯನ್ನು ಮೈಸೂರಿನಲ್ಲೇ ಬಿಟ್ಟು ಒಂಟಿಯಾಗಿ ಮಂಗಳೂರಿಗೆ ತೆರಳಲು ಹಾಗೂ ಇರಲು ನಿರ್ಧರಿಸಿದೆ. ಮಡದಿಯೂ ಒಪ್ಪಿದಳು. ಮಡದಿ, ಮಕ್ಕಳನ್ನುಮೈಸೂರಿನಲ್ಲಿ ಬಿಟ್ಟು ಒಂಟಿಯಾಗಿ ನಡೆದೆ .ಪ್ರತಿ ವಾರ ಶನಿವಾರ ಮೈಸೂರಿಗೆ ಬರುತ್ತಿದ್ದೆ ಪ್ರತಿ ತಿಂಗಳೂ ಮಾಸಿಕಗಳು ನೆರವೇರಿಸಿದೆ ಮಡದಿ ಪ್ರತಿ ತಿಂಗಳೂ ಮಾಸಿಕಕ್ಕೆ ಶ್ರೀರಂಗ ಪಟ್ಟಣಕ್ಕೆ ತೆರಳಿ ಕಾವೇರಿ ಸ್ನಾನ ಮಾಡಿ ಬಂದು ಪಂಚಕವ್ಯ ಸ್ವೀಕರಿಸುತ್ತಿದ್ದಳು ಆದಷ್ಟು ಭಕ್ತಿ ಶ್ರದ್ದೆ ಯಿಂದ ತಂದೆಯವರ ಅಂತಿಮ ಕಾರ್ಯಗಳನ್ನೆಲ್ಲಾ ಮುಗಿಸಿದೆ
೧೯೯೧ ಆಗಸ್ಟ್ ನಲ್ಲಿ ತಂದೆಯವರ ವರ್ಷ ಪುಣ್ಯತಿಥಿ.ನಡೆಯಿತು ಅದನ್ನೂ ಭಕ್ತಿ ಶ್ರದ್ದೆಯಿಂದ ನೆರವೇರಿಸಿದೆ ಹಿರಿಯ ಮಗನಾಗಿ ಕರ್ತವ್ಯ ಮಾಡಿ ಮುಗಿಸಿದೆ . ಅದಾದ ಮೇಲೆ ತಮ್ಮನಿಗೆ ಕನ್ಯಾನ್ವೇಷಣೆ ಆರಂಭವಾಯಿತು ಎಲ್ಲರೂ ಉದ್ಯೋಗದಲ್ಲಿರುವ ವರನನ್ನು ಅಪೇಕ್ಷಿಸುವವರೇ ಅಂತೂ ಕೊನೆಗೆ ಕನ್ಯೆ ದೊರೆತಳು . ಬೆಂಗಳೂರು ನಗರ ಸಭೆಯ ಮಾಜಿ ಸದಸ್ಯರಾದ ಶ್ರೀ ಶ್ರೀನಿವಾಸ ಅಯ್ಯಂಗಾರ್ ರವರ ಸೀಮಂತ ಪುತ್ರಿ ಜಯಲಕ್ಷ್ಮಿಯೊಂದಿಗೆ ೧೯೯೨ ಜನವರಿಯಲ್ಲಿ ತಮ್ಮನ ಮದುವೆ ಬೆಂಗಳೂರಿನಲ್ಲಿ ನೆರವೇರಿತು. ಕುಟುಂಬ ಸಮೇತ ಒಂದು ಬಸ್ ಮಾಡಿಕೊಂಡು ಬೆಂಗಳೂರಿಗೆ ನಡೆದೆವು . ಮದುವೆ ಚೆನ್ನಾಗಿ ನಡೆಯಿತು. ನನ್ನ ಮಡದಿ ನೂತನ ವಧುವನ್ನು ಮನೆಗೆ ಬರಮಾಡಿಕೊಂಡಳು . ಮೂರು ತಿಂಗಳು ಜೊತೆಯಲ್ಲಿ ಇದ್ದು ಪರಿಚಯಿಸಿ ಕೊಟ್ಟಳು . ಮಕ್ಕಳ ಪರೀಕ್ಷೆಯ ನಂತರ ಏಪ್ರಿಲ್ ನಲ್ಲಿ ಮಡದಿಯನ್ನು ಮಂಗಳೂರಿಗೆ ಕರೆಯಿಸಿಕೊಂಡೆ.ದುಃಖ ವೆಂದರೆ ನಾನು ಮಾಡಿದ ಕರ್ತವ್ಯಗಳನ್ನೆಲ್ಲಾ ಒಡಹುಟ್ಟಿದವರೂ ತೃಣವಾಗಿ ಕಂಡರು ಆದರೂ ಬೇಸರ ಪಡಲಿಲ್ಲ. ಎಲ್ಲವನ್ನೂ ನನ್ನ ಕರ್ತವ್ಯವೆಂದು ಮಾಡಿದ್ದೆ ಅದು ಭಗವಂತನಿಗೆ ತೃಪ್ತಿಯಾಗಿದ್ದರೆ ಸಾಕು ಎಂದೆನಿಸಿತು. ಕಾಲಕ್ರಮದಲ್ಲಿ ನನ್ನ ಪರಿಶ್ರಮವೆಲ್ಲ ನೀರಿನಲ್ಲಿ ಮಾಡಿದ ಹೋಮದಂತಾಗಿತ್ತು

ಆದರೆ ಎಲ್ಲವೂ ಸರಿಯಾಗಿ ನಡೆಯಲಿಲ್ಲ. ತಮ್ಮ ಪ್ರೆಸ್ ಗಾಗಿ ಮಾಡಿದ್ದ ಸಾಲದ ಮರುಪಾವತಿಗೆ ಮೈಸೂರ್ ಬ್ಯಾಂಕ್ ನನಗೆ ನೋಟೀಸ್ ನೀಡಿತು. ತಮ್ಮನನ್ನುಒತ್ತಾಯಿಸಿದೆ. ಅವನು ಸಾಲ ಮರುಪಾವತಿಸಲಿಲ್ಲ. ಮೈಸೂರ್ ಬ್ಯಾಂಕ್ ನನ್ನ ಬ್ಯಾಂಕ್ ಮೂಲಕ ಒತ್ತಡ ತಂದಿತು. ನನಗೆ ದಿಕ್ಕೇ ತೋಚಲಿಲ್ಲ. ಆಗ ತಾನೇ ತಂಗಿಯ ಮದುವೆಗೆ ಹಾಗೂ ತಂದೆಯವರ ಆಸ್ಪತ್ರೆಯ ಖರ್ಚಿಗೆ ಮತ್ತು ಅಂತ್ಯಕ್ರಿಯೆಗೆ ಎಂದು ಬಹಳ ಸಾಲ ಮಾಡಿದ್ದೆ. ನನ್ನ ಆರ್ಥಿಕ ಸ್ಥಿತಿಯೂ ಉತ್ತಮವಾಗಿರಲಿಲ್ಲ.ಕೆಲಸ ಸೇರಿ ೯ ವರ್ಷವಷ್ಟೇ ಆಗಿತ್ತು . ಈ ಮದ್ಯದಲ್ಲಿ ತಂದೆಯ ಖರ್ಚಿಗಾಗಿ ಎಂದು ಪ್ರತಿ ತಿಂಗಳೂ ಹಣ ಕಳುಹಿಸುತ್ತಿದ್ದೆ . ಆದ ಕಾರಣ ಉಳಿತಾಯ ಏನು ಇರಲಿಲ್ಲ .ಇವೆಲ್ಲವನ್ನೂ ತಮ್ಮನಲ್ಲಿ ತಿಳಿಯಹೇಳಿ ಬ್ಯಾಂಕ್ ಸಾಲವನ್ನುಕ್ರಮವಾಗಿ ತೀರಿಸಲು ಬ್ಯಾಂಕ್ ಗೆ ವಿವರಿಸಲು ತಿಳಿಸಿದೆ. ಆದರೆ ಬ್ಯಾಂಕ್ ನವರು ಒಪ್ಪಲಿಲ್ಲ ದಾರಿ ಕಾಣಲಿಲ್ಲ ಬ್ಯಾಂಕ್ ಸಾಲ ತೀರಿಸದಿದ್ದರೆ ತಂದೆಯವರ ಮನೆ ಮತ್ತು ಪ್ರೆಸ್ ಹರಾಜಿಗೆ ಬರುತಿತ್ತು. ತಮ್ಮನ ಜೀವನವೂ ಕಷ್ಟವಾಗುತ್ತಿತ್ತು ನಾನೂ ನನ್ನ ಉದ್ಯೋಗವನ್ನೂ ಕಳೆದುಕೊಳ್ಳುತ್ತಿದ್ದೆ ಇವೆಲ್ಲವನ್ನೂ ತಮ್ಮನ ಗಮನಕ್ಕೆ ತಂದು ಆಪ್ತರ ಸಹಾಯ ಯಾಚಿಸಿ ಅದರಿಂದ ಬ್ಯಾಂಕ್ ಸಾಲ ಮರುಪಾವತಿಸಿ ಆಗಬಹುದಾಗಿದ್ದ ಅನಾಹುತ ತಪ್ಪಿಸಿದೆ. ಸಾಲದ ಹೊರೆ ನೋವುಂಟುಮಾಡಿತು..ಆಪ್ತರ ಕೆಂಗಣ್ಣೂ ಬೇಸರ ತಂದಿತು. ನನ್ನ ತಂಗಿಯರು ಯಾರೂ ಸಹಾಯಕ್ಕೆ ಬರಲಿಲ್ಲ. ತಮ್ಮನ ಅಸಹಕಾರ ತಂಗಿಯರ ಗಮನಕ್ಕೆ ತಂದೆ. ಆದರೆ .ಪ್ರಯೋಜನವಾಗಲಿಲ್ಲ.ತಂದೆಯವರ ಅಂದಿನ ಆಸ್ತಿ ಎಂದರೆ ಹಳೆಯ ವಾಸವಿದ್ದ ಮನೆ ,ಕಳೆದ ವರ್ಷ ನಿರ್ಮಿಸಿದ ೪ ಚದರದ ಸಣ್ಣ ತಾರಸಿ ಮನೆ ಮತ್ತು ಮುದ್ರಣಾಲಯ ಅದರ ವಿಭಜನೆ ಯಲ್ಲದೆ ಬೇರೆ ಮಾರ್ಗ ತೋರಲಿಲ್ಲ . ಆಸ್ತಿ ವಿಭಜನೆ ಅನಿವಾರ್ಯವಾಯಿತು.
ಜೀವನದ ಮುಖ್ಯ ತಿರುವು ಅಲ್ಲಿಂದ ಮುಂದೆ ಆರಂಭವಾಯಿತು

No comments:
Post a Comment