Monday, July 16, 2018

Deshika Prabhandam

When Swami Desikan returned to Srirangam after 12 years in Satyagalam, it was time for yearly utsavams when the entire Divya Prabandham are recited in 20 days. The first ten days the utsavam is during the day and for the next 10 days it is in the night. Since this utsavam was stopped for many years due to Muslim invasion, the orthodox people objected to recitation of Divya Prabandham since it is in Tamil and only Sanskrit vedas should be recited. They also objected to install vigrahas of Azhvars because they were just human beings and many of them were not even Brahmins. Swami Desikan argued with them at length proving that the divya prabandham is nothing but the essence of Vedas and Upanishads and the Azhvars are great devotees of Sriman Narayana and they are fit to be worshipped in side the temple. Finally the orthodox devotees agreed with Sri Desikan and the utsavam has been celebrated in a grand manner. Swami was pained to see the objections and to make sure no such problems in the future he has got the details of the utsavam written in a stone and installed in the temple. 
No other Acharya among the followers of Sri Ramanuja have fought for the rightful place for Divya Prabandham as did Swami Desikan. It was he who re established the recitation of Divya Prabanhdam in Srirangam and other temples.

Tamil poetic works of Sri Vedanta Desika.
  1. Amritaranjani
  2. Adhikaara Sangraham
  3. Amritasvaadini
  4. Paramapada Sopanam
  5. Meyviradanannilattu Maanmiyam (Tamil verses only)
  6. Paramata Bhangam (Tamil verses only)
  7. Adaikkalappattu
  8. Artha Panchakam
  9. Sri Vaishnava Dinachari
  10. Tirucchinnamalai
  11. Pannirunamam
  12. Tirumantra Churukku
  13. Dvaya Churukku
  14. Charamasloka Churukku
  15. Gitartha Sangraha
  16. Mummanikkovai
  17. Navamaṇimâlai
  18. Prabandha Saram


Sreenivasa Prasad.K.V.
President Coordination committee
Sree Venkatesha Sabha, Bangalore

Thursday, June 28, 2018


ಸರ್ವತಂತ್ರ ಸ್ವತಂತ್ರ , ತಾರ್ಕಿಕ  ಸಿಂಹ ವೇದಾಂತ ದೇಶಿಕರು----ಒಂದು ವೈಜ್ಞಾನಿಕ ನೋಟ

ಸ್ವಾಮಿ ದೇಶಿಕರು ಕೇವಲ ಒಬ್ಬ ಹಿರಿಯ ಕವಿ, ದಾರ್ಶನಿಕ , ವೇದಾಂತಿ ಅಷ್ಟೇ ಆಗಿರದೇ ಒಬ್ಬ ದೊಡ್ಡ ವಿಜ್ಞಾನಿಯೂ , ಗಣಿತ ಶಾಸ್ತ್ರಜ್ಞರೂ ಆಗಿದ್ದರೆಂಬುದು ವಿಶೇಷ . ವಿಜ್ಞಾನದ ನಾಲ್ಕು ಅಂಗಗಳಾದ ಗಣಿತ,ಭೂಗೋಳ,ವೈದ್ಯ ಮತ್ತು ಭೌತಶಾಸ್ತ್ರ ಗಳಲ್ಲಿಯೂ ಯೂ ಪ್ರತಿಭೆ ಹೊಂದಿದ್ದರು ಎಂಬುದಕ್ಕೆ ಅವರ ಕಾವ್ಯಗಳೇ ಸಾಕ್ಷಿ. ಆದರೆ ಅವರು ತಮ್ಮ ಪ್ರತಿಭೆಯನ್ನು ಕೇವಲ ಆಧ್ಯಾತ್ಮಿಕಕ್ಕೆ ಮೀಸಲಾಗಿಸಿದ್ದರೆ ವಿನಹ ಜೀವನೋಪಾಯಕ್ಕೆ ಉಪಯೋಗಿಸಲಿಲ್ಲ. ದೇಶಿಕರ ಕೃತಿಗಳಾದ ತತ್ವಮುಕ್ತಾಕಾಲಾಪ , ಸುಭಾಷಿತ ನೀವಿ ಮತ್ತು ಪಾದುಕಾ ಸಹಸ್ರ ಅವರ ಗಣಿತ ಜ್ಞಾನಕ್ಕೆ  ಸಾಕ್ಷಿ . ಗಣಿತ ವಿಜ್ಞಾನದಲ್ಲಿ ಅವರಿಗಿದ್ದ ಪ್ರತಿಭೆ ಈ ಕೃತಿಗಳ ಲ್ಲಿ ಕಾಣಸಿಗುತ್ತದೆ .ವ್ಯಾಸ,ವೃತ್ತ ,ಮುಂತಾದ ಗಣಿತ ಪದಗಳನ್ನು ಗ್ರಂಥದುದ್ದಕ್ಕೂ ಉಪಯೋಗಿಸಿದ್ದಾರೆ .  ಈ ಕೃತಿಗೆ ೨೦ ಬಗೆಯ ವ್ಯಾಖ್ಯಾನಗಳು  ದೊರಕಿವೆ . ಇಲ್ಲಿ ಕೃಷಿ ಪದ್ಧತಿಗಳ ಬಗ್ಗೆಯೂ ವಿವರಣೆ ನೀಡಲಾಗಿದೆ .ನೇಗಿಲು ಸಣ್ಣ ಪ್ರಮಾಣದ ಉಳಿಮೆಗೆ ಸರಿಯೇ ವಿನಹ ದೊಡ್ಡ ಪ್ರಮಾಣದ ಕೃಷಿಗೆ ಯಂತ್ರಗಳು ಅವಶ್ಯ ಎಂದು ಬಣ್ಣಿಸಿದ್ದಾರೆ .  ಕೃಷಿಗಾಗಿ ಪ್ರಾಣಿಹಿಂಸೆಯನ್ನು ದೇಶಿಕರು ವಿರೋಧಿಸಿದ್ದರು  . ದೇಶಿಕರು ಸೌಂದರ್ಯೋಪಾಸಕರೂ ಆಗಿದ್ದರು   ಅಧಿಕರಣ ಸಾರಾವಳಿಯಲ್ಲಿ  ಸೌಂದರ್ಯ ವರ್ಧಕಗಳ ಬಗ್ಗೆ ವಿವರಣೆ ನೀಡಿದ್ದಾರೆ. ಸೌಂದರ್ಯ ಸಾಧನೆಗಳು ಹೇಗಿರಬೇಕೆಂದು ದೇಶಿಕರು ವಿವರಿಸಿದ್ದಾರೆ . ಉಪಸ್ಕಾರ ಅಂದರೆ ಸೌಂದರ್ಯ ವರ್ಧಕಗಳು ಪರಿಮಳದಿಂದ ಕೂಡಿರಬೇಕು, ಇವುಗಳನ್ನು ನುರಿತ ಕಾರ್ಯಕರ್ತರು ತಯಾರಿಸಬೇ ಕು ,ಉಜ್ವಲವಾಗಿರಬೇಕು, ಶುದ್ಧವಾಗಿರಬೇಕು ಎಂದು ಅಧಿಕರಣ ಸಾರಾವಳಿಯಲ್ಲಿ ತಿಳಿಸಿದ್ದಾರೆ.  ವೈದಿಕ ಗಣಿತದ ಸಂಖ್ಯಾ ಕೋಡ್ ಗಳು ಅನಿಪುಣಪದ್ಧತಿ ಯಲ್ಲಿನ ೮ ನೇ ಶ್ಲೋಕ ಮತ್ತು ಇತರ ಶ್ಲೋಕಗಳಲ್ಲಿ  ವಿವರಿಸಲ್ಪಟ್ಟಿವೆ  . ಅಂತೆಯೇ ಸರ್ವಾರ್ಥ ಸಿದ್ಧಿ ಎಂಬ ಗ್ರಂಥದಲ್ಲಿ ಶ್ಲೋಕಗಳನ್ನು ವಿಮರ್ಶಿಸಿದಾಗ ಎರಡನೆಯ ವ್ಯಾಖ್ಯಾನದಲ್ಲಿ  ಗಣಿತ ವಿಜ್ಞಾನವನ್ನು ಪ್ರತಿಪಾದಿಸಲಾಗಿದೆ .ವೇದಾಂತ ದೇಶಿಕರು ವೇದ ಗಣಿತ ವಿಜ್ಞಾನದ ಜ್ಞಾನವನ್ನು ತಲಪಿಸುವಲ್ಲಿ ದಿಟ್ಟತನದಿಂದ ಪ್ರಯತ್ನಿಸಿದ್ದಾರೆ .
ಶಬ್ದ ಸಾಹಿತ್ಯದಲ್ಲಿ ಅನಾಗ್ರಮ್ ಎಂಬ ಪದ್ಧತಿ ಬಹಳವಾಗಿ ಉಪಯೋಗದಲ್ಲಿದೆ . ಅನಾಗ್ರಮ್ ಎಂದರೆ ಕೆಲವು ಪದಗಳನ್ನು ಉಪಯೋಗಿಸಿ ರಚಿಸಿದ ವಾಕ್ಯವನ್ನು ಅದೇ ಪದಗಳನ್ನು ಪುನರ್ಜೋಡಿಸಿ ಮತ್ತೊಂದು ವಾಕ್ಯ ರಚಿಸುವುದು . ಈ ಕಲೆಯನ್ನು ಕವಿಸಿಂಹರೆಂದೇ ಖ್ಯಾತರಾದ  ದೇಶಿಕರು ಕರಗತಮಾಡಿಕೊಂಡಿದ್ದರು . ಇದನ್ನು ತಮ್ಮ ಬಹುತೇಕ ಎಲ್ಲ ಗ್ರಂಥಗಳಲ್ಲಿಯೂ ಉಪಯೋಗಿಸಿದ್ದಾರೆ . ಉದಾಹರಣೆಗೆ ಇಂಗ್ಲಿಷ್ ಭಾಷೆಯಲ್ಲಿ eat cool  shop  curd  ಎಂಬುದು school poured cat ಎಂಬುದರ ಅನಾಗ್ರಮ್ .ಇದೆ ರೀತಿ ೩೨ ಅಕ್ಷರದ ಅನಾಗ್ರಮ್ ಪಾದುಕಾ ಸಹಸ್ರದಲ್ಲಿ ಅನೇಕವಾಗಿ ಸಿಗುತ್ತವೆ ಪ್ರಾಯಶಃ ಇಷ್ಟು ಉದ್ದದ ವಾಖ್ಯಗಳು ಬೇರೆ ಸಾಹಿತ್ಯದಲ್ಲಿ ಸಿಗಲಾರದೇನೋ . ಉದಾಹರಣೆಗೆ स्थिरागसा सदाराध्या विहता कलता मता .सत्पादुके सरासा मा  रन्गराजपदं नय ಈ ಶ್ಲೋಕದ ಅನಾಗ್ರಮ್ ಇಂತಿದೆ .स्थिता समयराजत्या गतरामादके गवि  दुरहमसाम् संनतादा साध्यातापकरा सरा ಇಲ್ಲಿ ಮೊದಲಿನ ಶ್ಲೋಕದ ೩೨ ಅಕ್ಷರ ಗಳನ್ನು  ಪುನರ್ಜೋಡಿಸಿ ಎರಡನೆಯ ಶ್ಲೋಕ ರಚಿಸಲಾಗಿದೆ . ಇಂತಹ ಅನೇಕ ಕವಿ ಸಮಯವನ್ನು ದೇಶಿಕರ ಕೃತಿಗಳಲ್ಲಿ ನೋಡಬಹುದು.
ದೇಶಿಕರನ್ನು ಸಾಕ್ಷಾತ್ ರಂಗನಾಥನೇ ಸರ್ವತಂತ್ರ ಸ್ವತಂತ್ರ ಎಂದು ಕರೆದಿದ್ದಾರೆಂಬುದು ಪ್ರಸಿದ್ಧಿ   . ತಂತ್ರ ಎಂದರೆ ಎಲ್ಲ ಬಗೆಯ ವಿಜ್ಞಾನದ ಅರಿವು ಎಂದು ತಿಳಿಯಲ್ಪಡುತ್ತದೆ . ಪ್ರಖ್ಯಾತ ಅಪ್ಪಯ್ಯ ದೀಕ್ಷಿತರು ಸರ್ವತಂತ್ರ ಸ್ವತಂತ್ರ ಎಂಬ ಬಿರುದಿಗೆ ಈ ರೀತಿ ವ್ಯಾಖ್ಯಾನ ನೀಡಿದ್ದಾರೆ .
सर्वेषु तन्त्रेषु सिद्धन्तेषु न्यायवैशेषिक पूर्वोत्तरमीमांसासान्ख्य  योग शैव वैष्णवादिषु स्वतन्त्रस्य स्वेच्छया कन्चिदर्थं स्थापयितुं समर्थः .ಎಂದು ಕೊಂಡಾಡಿದ್ದಾರೆ  ಆದರೆ  ದೇಶಿಕರು ಅಂದಿನ ದಿನದಲ್ಲಿ ಎಲ್ಲ ವಿಜ್ಞಾನ ಮತ್ತು ತಂತ್ರ ಜ್ಞಾನವಲ್ಲದೆ ಸಕಲ  ಕಲೆಗಳನ್ನೂ ಕರಗತ ಮಾಡಿಕೊಂಡಿದ್ದರು. ಅವರಿಗೆ ಶಿಲ್ಪ ಶಾಸ್ತ್ರದ ಬಗ್ಗೆಯೂ ಅರಿವಿತ್ತು. ಅವರಿಗೆ ಒಬ್ಬ ಶಿಲ್ಪಿಯು ಸವಾಲೆಸಗಿದಾಗ ಅವರು ತಮ್ಮದೇ ಆದ ಲೋಹದ ಮೂರ್ತಿಯನ್ನು ತಯಾರಿಸಿದರೆಂದೂ, ಆದರೆ ತೃಪ್ತನಾಗದ ಶಿಲ್ಪಿಯು ದೋಷಹುಡುಕಲು ಯತ್ನಿಸಿದಾಗ, ಸವಾಲನ್ನು ಸ್ವೀಕರಿಸಿದ ದೇಶಿಕರು ಶಿಲ್ಪಿಯು ನಿರ್ಮಿಸಿದ್ದ ಪೀಠದಲ್ಲಿ ದೋಷ ತಿಳಿಸಿ ತಾವು ರಚಿಸಿದ ಮೂರ್ತಿಯನ್ನು ಪೀಠದಲ್ಲಿ ಅಡಕಗೊಳಿಸಿದರೆಂದೂ ತಿಳಿದುಬರುತ್ತದೆ .ಈ ಮೂರ್ತಿಯ ವಿಶೇಷ ವೆಂದರೆ ಮೂರ್ತಿ ಸಲಕ್ಷಣದಿಂದ ಕೂಡಿದ್ದು ಎರಡು ಕೈಗಳಲ್ಲೂ  ಉಂಗುರದ ಬೆರಳುಗಳಲ್ಲಿ ಪವಿತ್ರ, ಶಿಖೆಯನ್ನು ಗಂಟುಹಾಕಿರುವ ವಿವಿಧತೆ ,ಎಡಗೈಯಲ್ಲಿ ದೇಶಿಕರ ಮೆಚ್ಚಿನ ಕೃತಿ  ಶ್ರೀಭಾಷ್ಯ ಪುಸ್ತಕ ಇತ್ಯಾದಿಗಳು ಅಂದಿನ ದಿನಗಳಲ್ಲಿ ಇದ್ದ ಸಾಂಪ್ರದಾಯಿಕ ರೀತಿಗಳನ್ನು ತಿಳಿಸುತ್ತದೆ. ಈ ವಿಗ್ರಹವನ್ನು ಇಂದಿಗೂ ತಿರುವಹೀಂದ್ರಪುರದ ದೇವಾಲಯದಲ್ಲಿ ಕಾಣಬಹುದು .ಹಾಗೆಯೇ ಕೆಲವು ಗಾರೆ ಕೆಲಸದವರು ಭಾವಿಯೊಂದನ್ನು ನಿರ್ಮಿಸಲು ಸವಾಲು ಒಡ್ಡಿದಾಗ ದೇಶಿಕರು ಷಟ್ಕೋಣ ವುಳ್ಳ ಭಾವಿ ನಿರ್ಮಿಸಿದರೆಂದೂ, ಇಂದಿಗೂ ತಿರುವಹೀಂದ್ರಪುರದಲ್ಲಿ ಈ ಭಾವಿಯನ್ನು ಕಾಣಬಹುದಾಗಿದೆ .   ಅವರದೇ ಕೃತಿಯಾದ ಭೂಗೋಳ ನಿರ್ಣಯ ಗ್ರಂಥ ನ್ಯೂಟನ್ನಸಾಪೇಕ್ಷ  ಚಲನಾ ನಿಯಮಕುರಿತಾಗಿ ೧೩ ನೇ ಶತಮಾನದಲ್ಲಿಯೇ ದೇಶಿಕರು ಅರಿತಿದ್ದರು ಎಂಬುದಕ್ಕೆ ಸಾಕ್ಷಿ ಅವರ ಕೃತಿಯಾದ ಯಾದವಾಭ್ಯುದಯದ ೧೮ ನೇ ಸರ್ಗದ ೧೮ ನೇ ಶ್ಲೋಕದಲ್ಲಿ ಇದರ ಬಗ್ಗೆ ವಿವರಿಸಿದ್ದಾರೆ.   ಇದೆ ಕೃತಿಯಲ್ಲಿ  ರೇಡಿಯೋ ತರಂಗಾಂತರ ಗುರುತಿಸುವಿಕೆ ಬಗ್ಗೆ ತಿಳಿಸಿದ್ದಾರೆ .ಇದನ್ನು ಇಂದಿನ ವಿಜ್ಞಾನಿಗಳು RFID (radio frequency identification )  ತಂತ್ರ  ಎಂದು ಬಣ್ಣಿಸುತ್ತಾರೆ. ಉದಾಹರಣೆಗೆ ಯಾದವಾಭ್ಯುದಯದ ೧೧ನೇ ಸರ್ಗ ೩೩ ನೇ ಶ್ಲೋಕದಲ್ಲಿ ಹೀಗೆ ವರ್ಣಿಸಿದ್ದಾರೆ .
गतागतार्थं हरिवाहिनीनां सेतुञ्च योगेन बबन्ध सिन्धो चकार दिक्कालविमूदतां यः प्रत्यर्थिनां चक्रधर प्रभावात्
ಚಕ್ರಧರ ಎಂದರೆ ಗುರುತುಹೊಂದಿರುವವನು  ಎಂದು . ಚಕ್ರಧರ ಎಂದರೆ ವಿಷ್ಣು ಎಂತಲೂ ಇನ್ನೊಂದರ್ಥ ಚಕ್ರ ಚಿನ್ಹೆ ಹೊಂದಿರುವವನು ಎಂದೂ ಆಗುತ್ತದೆ  ಇದನ್ನೇ ಸ್ವಯಂ ಚಾಲಿತ ನಿಯಂತ್ರಣ ಅಂದರೆ remote access control ಎಂದು ಇಂದಿನ ತಂತ್ರಜ್ಞರು ಕರೆಯುತ್ತಾರೆ . ದೇಶಿಕರು ಹೀಗೆ ಅರಿತೋ ಅರಿಯದೆಯೋ ತಮ್ಮ ಗ್ರಂಥಗಳಲ್ಲಿ ವಿಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ ಎಂಬುದು ವಾದ .
ದೇಶಿಕರು ಸವಿಸ್ತಾರವಾಗಿ ತಮ್ಮ ಕೃತಿಗಳಲ್ಲಿ ಇಂದ್ರಿಯ ಗ್ರಹಿಕೆ ಅಥವಾ ಭ್ರಮ ಗ್ರಹಿಕೆ ಯ ಬಗ್ಗೆ ತಿಳಿಸಿದ್ದಾರೆ . ಇದನ್ನು ಇಂದಿನ ವಿಜ್ಞಾನಿಗಳು sense perception  ಎಂದು ಕರೆಯುತ್ತಾರೆ . ದೇಶಿಕರು  ಶತ  ಶತಮಾನಗಳ ಹಿಂದೆಯೇ ಇದನ್ನು ಅರಿತಿದ್ದರು ಎಂಬುದಕ್ಕೆ ಅವರ ಕೃತಿಗಳೇ ಸಾಕ್ಷಿ . ಭ್ರಮೆ ಗ್ರಹಿಕೆ, ಅದರ ಗ್ರಹಣ  ಮತ್ತು ನಿರಸನದ ಬಗ್ಗೆ ತಮ್ಮ ಕೃತಿಗಳಲ್ಲಿ ಅಂದಿನ ದಿನದಲ್ಲಿಯೇ ವಿವರಣೆ ನೀಡಿದ್ದಾರೆ ಎಂದರೆ ಅವರ ಜ್ಞಾನ ಎಷ್ಟರ ಮಟ್ಟಿಗೆ ಇತ್ತೆಂಬುದು ಅರಿವಾಗುತ್ತದೆ . ಇಂದಿನ ದಿನಗಳಲ್ಲಿ ಭ್ರಮೆ ಭೂತಾಕಾರವಾಗಿ ಬೆಳೆಯುತ್ತಿದ್ದು ಪರಿಣಾಮವಾಗಿ ಬುದ್ಧಿ ಭ್ರಂಶರಾಗಿ ಜೀವನವನ್ನು ಕೊನೆಗಾಣಿಸಿಕೊಳ್ಳುತ್ತಿರುವ ನಿದರ್ಶನಗಳು ಹೆಚ್ಚಾಗಿ ಕಾಣ  ಸಿಗುತ್ತವೆ . ದೇಶಿಕರು ಇದನ್ನು ಸವಿಸ್ತಾರವಾಗಿ ವಿವರಿಸಿ ಅದರ ನಿರಸನಕ್ಕೆ ಉಪಾಯಗಳನ್ನು ಸೂಚಿಸಿದ್ದಾರೆ ಎಂದರೆ ದೇಶಿಕರ ವೈಜ್ಞಾನಿಕ ದೃಷ್ಟಿ ಎಷ್ಟಿತ್ತೆಂಬುದಕ್ಕೆ ಸಾಕ್ಷಿಗಳಾಗಿವೆ . ದೇಶಿಕರು ತಮ್ಮ ತತ್ವ ಠೀಕಾದಲ್ಲಿ ಲಾಕ್ಷಣಿಕ ಪ್ರವಚನ ವಿಶ್ಲೇಷಣೆಯ (semantic discourse analysis )ಬಗ್ಗೆ ಬೆಳಕು ಚೆಲ್ಲಿದ್ದಾರೆ .
ದೇಶಿಕರ ಮತ್ತೊಂದು ಮಹಾಕಾವ್ಯ ಪಾದುಕಾ ಸಹಸ್ರ . ಒಂದೇ ರಾತ್ರಿಯಲ್ಲಿ ಸಾವಿರ ಶ್ಲೋಕಗಳನ್ನು ರಚಿಸಿ ತಮ್ಮ ಅಸಾಧಾರಣ ಪ್ರತಿಭೆಯನ್ನು ಮೆರೆದಿದ್ದಾರೆ . ಈ ಗ್ರಂಥವನ್ನು ವಿಶ್ಲೇಷಿಸಿದ ಆಧುನಿಕ ವಿಜ್ಞಾನಿಗಳು ಇದೊಂದು ಕಠಿಣ  ಗಣಿತ ಸಮಸ್ಯೆಗಳನ್ನು ಪರಿಹರಿಸಬಲ್ಲ ಮಹಾನ್ ಗ್ರಂಥ ಎಂದು ವಿವರಿಸಿದ್ದಾರೆ . ೮ x ೮ ವಿಸ್ತಾರವುಳ್ಳ ೬೪ಕೋಶಗಳುಳ್ಳ ಚೆಸ್ ಹಲಗೆಯಲ್ಲಿ ನೈಟ್ಸ್ ಪ್ರವಾಸ ಎಂಬುದು ಬಹಳ ಕ್ಲಿಷ್ಟವಾದ ಸರಿಕೆ (move ).. ಇದರ ಪ್ರಕಾರ ಹಲಗೆಯ ಮೇಲೆ ಸೈನಿಕನ ಚಲನೆಯು ಅತಿ ಮುಖ್ಯ. ಇದರಂತೆ ಸರಿಕೆಯಲ್ಲಿ ಪ್ರತಿಯೊಂದೂ ಕೋಶಗಳೂ ಒಮ್ಮೆ ಸೈನಿಕನಿಂದ ತಲಪಲ್ಪಡುತ್ತವೆ . ಕೊನೆಯ ಕೋಶ ದಿಂದ ಮೊದಲ ಕೋಶ ವನ್ನು ನೈಟ್ಸ್ ಪ್ರವಾಸದಲ್ಲಿ ತಲಪಲು ಸಾಧ್ಯವಾದರೆ ಆಟ  ಮುಗಿದಂತೆ . ಇಲ್ಲದಿದ್ದರೆ ಅದು ಅಪೂರ್ಣ ಎಂದೇ . ಈ ಸಮಸ್ಯೆಗೆ ಸುಮಾರು ೩೦೦ ವರ್ಷಗಳ ಹಿಂದೆ ಪರಿಹಾರ ಕಂಡು ಹಿಡಿಯಲಾಗಿತ್ತು . ಆದರೆ ಸ್ವಾಮಿ ದೇಶಿಕರು ೧೩ ನೇ ಶತಮಾನದಲ್ಲಿಯೇ ತಮ್ಮ ಪಾದುಕಾಸಹಸ್ರದ ೯೨೯ ಮತ್ತು ೯೩೦ ನೇ ಶ್ಲೋಕಗಳಲ್ಲಿ ಪದ್ಯ ರೂಪದಲ್ಲಿ ಈ ನೈಟ್ಸ್ ಪ್ರವಾಸಕ್ಕೆ ಪರಿಹಾರ ಸೂಚಿಸಿದ್ದಾರೆ ಎಂಬುದು ಪರಿಶೋಧದಿಂದ ತಿಳಿಯುತ್ತದೆ .ಇದನ್ನು ಚದುರಂಗ ತುರಂಗ ಬಂದಂ ಎಂದು ವರ್ಣಿಸಲಾಗಿದೆ
ಭೂಗೋಳ ನಿರ್ಣಯದ ೯ ಸೂತ್ರಗಳಲ್ಲಿ ಗ್ಲೋಬ್ , ಬ್ರಹ್ಮಾಂಡ , ಅಖಿಲ ಬ್ರಹ್ಮಾಂಡ ಗಳ  ಬಗ್ಗೆ ವಿವರಣೆ ನೀಡುವ ಮೂಲಕ ದೇಶಿಕರು  ತಮ್ಮ ಭೌಗೋಲಿಕ ವಿಜ್ಞಾನದ ಬಗ್ಗೆ ಇರುವ ಜ್ಞಾನವನ್ನು ತಿಳಿಯಪಡಿಸಿದ್ದಾರೆ .ದೇಶಿಕರು ಮುಟ್ಟದ ವಿಷಯವಿಲ್ಲ . ಆದರೆ ಅದನ್ನು ಅರ್ಥ ಮಾಡಿಕೊಳ್ಳಲು ೭೦೦ ವರ್ಷಗಳೇ ಬೇಕಾಯಿತು . ಈಗ ೧೦ ವರ್ಷದಿಂದ ಪರಿಶೋಧನೆ ಆರಂಭಗೊಂಡಿದೆ .ಕೆಲವು ವಿಜ್ಞಾನಿಗಳು ದೇಶಿಕರ ಗ್ರಂಥಗಳನ್ನುಈ ದೃಷ್ಟಿಯಲ್ಲಿ  ಅಧ್ಯಯಿಸಲು ಆರಂಭಿಸಿದ್ದಾರೆ
ದೇಶಿಕರು ತಮ್ಮ ಪಾದುಕಾಸಹಸ್ರದಲ್ಲಿ ಗೂಢಲಿಪೀಕರಣ (encryption )ಮತ್ತು ಅಸಂಕೇತೀಕರಣ (decryption ) ಬಗ್ಗೆಯೂ ವಿವರಿಸಿದ್ದಾರೆ. ಇದು ಇಂದಿನ ಗಣಕ ಯಂತ್ರ ಕಾರ್ಯಕ್ರಮದಲ್ಲಿ ಬಹಳ ಉಪಯುಕ್ತವಾಗಿದೆ . ದೇಶಿಕರು ಒಳ್ಳೆಯ ಪಾಕ ಪ್ರವೀಣರೂ ಆಗಿದ್ದರು. ಅವರು ರಚಿಸಿರುವ ಆಹಾರ ನಿಯಮ ಎಂಬ ಗ್ರಂಥ ಉತ್ತಮವಾದ ಮತ್ತು ಆರೋಗ್ಯಕರವಾದ ಸಸ್ಯಾಹಾರಿ ಆಹಾರ ಪದ್ಧತಿಯನ್ನು ವಿವರಿಸುತ್ತದೆ.ವೈದ್ಯರಾಗಿ ಹೇಗೆ ಆಹಾರ ಪದ್ಧತಿಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ವಿಸ್ತಾರವಾಗಿ ತಿಳಿಸಿದ್ದಾರೆ.
ದೇಶಿಕರ ಬಗ್ಗೆ ಅವರ ಕೃತಿಗಳ ಬಗ್ಗೆ ಹೇಳಲು ಒಂದೆರಡು ಪುಟಗಳು ಸಾಲದು . ನುಡಿದಷ್ಟೂ ಮುಗಿಯದಂತಹುದು. ವಿಜ್ಞಾನಿಗಳ ಪ್ರಯತ್ನ ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ .ಎಲ್ಲ ವಿಜ್ಞಾನಿಗಳಿಗೂ ಅಭಿನಂದನೆಗಳು.

ಕೆ.ವಿ. ಶ್ರೀನಿವಾಸ ಪ್ರಸಾದ್






Monday, May 28, 2018


ಸ್ವಾಗತವು ಪೌತ್ರನಿಗೆ 

ಶ್ರೀವತ್ಸ ಗೋತ್ರೋದ್ಭವಸ್ಯ ಪ್ರದೀಪಕುಮಾರಸ್ಯ ಪುತ್ರ ;
ಶ್ರೀವತ್ಸ ಗೋತ್ರೋದ್ಭವಸ್ಯ ಶ್ರೀನಿವಾಸ ಪ್ರಸಾದಸ್ಯ ಪೌತ್ರ :
ಶ್ರೀವತ್ಸ ಗೋತ್ರೋದ್ಭವಸ್ಯ ವರದರಾಜ ಅಯ್ಯಂಗಾರ್ಯಸ್ಯ ಪ್ರಪೌತ್ರ :
ಸ್ವಾತಿ ನಕ್ಷತ್ರೇ ಜಾತಾಯಾ :ಶ್ರೀವಾಸವರದ ಶರ್ಮ: ಚಿರಂಜೀವ

ಜನಿಸಿದೆ ಅಧಿಕ ಜ್ಯೇಷ್ಠ ಶುಕ್ಲ
ತ್ರಯೋದಶಿ ಸ್ವಾತಿ ನಕ್ಶತ್ರದೆ
ಶುಭ ನರಸಿಂಹ ಜಯಂತಿಯಂದು
ಭಾನುವಾರ ಸಂಜೆ ೩. ೩೪ ರ ವೇಳೆ

ಗಗನ ಮೋಡದಿ ತುಂಬಿರಲು
ಹನಿ ತುಂತುರು ಭೂಮಿಯನು
ಸಿಂಚಿಸಲು ,ತಂಪಾದ ಗಾಳಿ ಬೀಸಲು
ಮೊಳಗಿತು ನಿನ್ನಯ ಅಳು ದನಿಯು

ಸ್ವಾಗತವು ನಿನಗೆ ನನ್ನ ಪ್ರೀತಿಯ
ಮೊಮ್ಮಗನಿಗೆ ನನ್ನ ಒಲವಿನ
ಕುಮಾರ ಪ್ರದೀಪನ ಸೀಮಂತಸುತನಿಗೆ
ಸೊಸೆ ರಾಜಶ್ರೀಯ ತನುಜಾತನಿಗೆ 

ಸಂತಸ ನಲಿದಾಡಿರಲು ಅಂಗಳದಿ
ಮಡದಿ ವಸಂತ ಕಲಳ ಮೊಗದಲಿ
ಮಗಳು ಹೇಮಾ  ಅತ್ತೆಯಾಗಿರಲು
ಮೊಮ್ಮಗಳು ದಿಯಾಗೆ  ಜೊತೆಯಾಗಿ

ಮೂಡಿದೆ ಸಂತಸದ ಉದಯವು
ಎರಡು ಕುಟುಂಬದಲಿ ಅನುಕಾಲ
ರಾಘವ ನೀರಜರ ಪೌತ್ರ ನೆನಿಸಲು
ನಡಾದೂರ್ ವಸಂತ ಪ್ರಸಾದರಪೌತ್ರ

ನೂರ್ಕಾಲ ಬಾಳು ಸಂತಸದಿ ಕ್ಷೇಮದಿ
ಗಳಿಸು ಉನ್ನತ ವಿದ್ಯೆಯ ಉದ್ಯೋಗವ
ಬಾಳು ಗುಣ ಸಂಪನ್ನನೆನಿಸಿ ಜನರಲಿ
ಒಡೆಯ ಶ್ರೀಕಾಂತನ ಪ್ರೀತಿಗೆ ಪಾತ್ರನಾಗಿ 


.... ರಚನೆ ಕೆ ವಿ ಶ್ರೀನಿವಾಸ ಪ್ರಸಾದ್



Friday, March 16, 2018


ಕಳಲೆ ಲಕ್ಷ್ಮೀಕಾಂತಸ್ವಾಮಿ

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿರುವ ಕಳಲೆ ಗ್ರಾಮ ಪೌರಾಣಿಕರೀತ್ಯ ಪ್ರಸಿದ್ಧವಾಗಿರುವ ಒಂದು ಪುಣ್ಯ ಯಾತ್ರಾಸ್ಥಳ . ಕಳಲೆಗೆ ತುಳಸೀಕಾನನ , ಕಪಿಲಾಶ್ರಮ , ವೇಣುಪುರಿ ಎಂಬಿತ್ಯಾದಿ ಹೆಸರುಗಳು ಪ್ರಸಿದ್ಧಿಯಲ್ಲಿವೆ . ಪ್ರಕೃತಿಯ ಸುಂದರ ಸೊಬಗಿನ ಪ್ರಶಾಂತ ಹಿನ್ನೆಲೆಯಲ್ಲಿ ಆಕರ್ಷಕವಾಗಿ ರಾರಾಜಿಸುತ್ತಿರುವ ಲಕ್ಷ್ಮೀಕಾಂತನ ನೆಲೆ , ಕಳಲೆ , ಪ್ರತಿಯೋರ್ವ ಆಸ್ತಿಕನೂ ನೋಡಲೇಬೇಕಾದ ರಮ್ಯಾ ಸ್ಥಳ .
ಕಳಲೆ ದಳವಾಯಿಗಳ ತವರೂರು . ದಳವಾಯಿಗಳೆಂದರೆ ರಾಜ ಮಹಾರಾಜರ ಬಲಗೈ ಇದ್ದಂತೆ . ಕಳಲೆಯ ದಳವಾಯಿಗಳು ವಿಜಯನಗರದ ಸಾಮ್ರಾಜ್ಯದಲ್ಲೂ , ಯದುವಂಶ ಭೂಪಾಲರ ರಾಜ್ಯದಲ್ಲೂ ಉನ್ನತ ಸ್ಥಾನದಲ್ಲಿದ್ದ ಬಗ್ಗೆ ಮಾಹಿತಿಗಳು ಇವೆ . ಕಳಲೆ ೧೮೩೧ನೇ ಇಸವಿಯವರೆವಿಗೂ ಉತ್ತಮ ಸ್ಥಿತಿಯಲ್ಲಿತ್ತೆಂಬುದಕ್ಕೆ ಸಾಕಷ್ಟು ಆಧಾರಗಳಿವೆ . ಕಳಲೆಯ ಲಕ್ಷ್ಮೀಕಾಂತಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ ಮೈಸೂರು ಅರಸರು ಬಹಳವಾಗಿ ಶ್ರಮಿಸಿದ್ದರೆಂದು ತಿಳಿದುಬರುತ್ತದೆ ಇದಕ್ಕೆ ಆಧಾರವಾಗಿ ಮೈಸೂರು ಅರಸರ ಲಾಂಛನಗಳಾದ ಶಂಖ ಚಕ್ರ ಮತ್ಸ್ಯ ಮುಂತಾದ ವುಗಳು ದೇವಾಲಯದಲ್ಲಿವೆ. ಅಂತೆಯೇ ಟೀಪೂ ಸುಲ್ತಾನನು ನೀಡಿದನೆಲ್ಲಲಾದ ಪೂಜಾ ಸಾಮಗ್ರಿಗಳು ದೇವಾಲಯದಲ್ಲಿ ಕಾಣಸಿಗುತ್ತವೆ . ಹಾಗೆಯೇ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಸೊಸೆ ಲಕ್ಷಮ್ಮಣ್ಣಿ ಅವರು ಅರ್ಪಿಸಿರುವ ಬೃಹತ್ ಘಂಟೆಯೊಂದು ದೇವಾಲಯದಲ್ಲಿದೆ .
ಲಕ್ಷ್ಮೀಕಾಂತ ದೇವಾಲಯ ಬಹು ವಿಸ್ತಾರವಾಗಿದ್ದು ದ್ರಾವಿಡ ಶೈಲಿಯಲ್ಲಿ ಕಟ್ಟಲ್ಪಟ್ಟಿದೆ . ದೇವಾಲಯದ ಸ್ಥಾಪನೆ ಎಂದೆಂಬುದು ಖಚಿತವಾಗಿ ತಿಳಿಯದಿದ್ದರೂ ಇದು ಬಹು ಪುರಾತನವೆಂಬುದಕ್ಕೆ ಪೌರಾಣಿಕ ಸ್ಥಳ ಚರಿತ್ರೆ ಇಂಬುಕೊಡುತ್ತದೆ . ಪಾಂಡು ವಂಶ ತಿಲಕ ಜನಮೇಜಯ ರಾಜ ಒಮ್ಮೆ ಭೇಟೆಗಾಗಿ ಬಂದಿದ್ದಾಗ ಕಪಿಲ ಕೌಂಡಿನ್ಯ ನದಿಗಳ ತೀರದಲ್ಲಿ ಒಂದು ವಿಸ್ಮಯ ಕಂಡು ಬೆರಗಾದನಂತೆ . ಶಾಶ್ವತ ವೈರಿಗಳಾದ ಗೋ ವ್ಯಾಘ್ರ ಮೊದಲಾದವು ಸಾಮರಸ್ಯದಿಂದ ಕಲೆತಿರುವ ದೃಶ್ಯ ಕಂಡು ಚಕಿತನಾಗಿ ಪರಿಶೀಲಿಸಲು ಸನಿಹದ ಬಿದಿರಿನ ಮೆಳೆಯೊಂದರಲ್ಲಿ ಅದ್ಭುತವಾದ ನಾರಾಯಣನ ವಿಗ್ರಹ ಕಂಡನಂತೆ . ಅಲ್ಲಿಂದ ಮೂರ್ತಿಯನ್ನು ತೆಗೆಸಿ ದೇವಾಲಯ ನಿರ್ಮಿಸಿದನೆಂದು ಸ್ಥಳಪುರಾಣ ವರ್ಣಿಸುತ್ತದೆ . ಮೂರ್ತಿ ಸುಮಾರು ೪ ಅಡಿ ಎತ್ತರವಿದ್ದು ಬಲಗೈನಲ್ಲಿ ಶಂಖವನ್ನು ಎಡಗೈನಲ್ಲಿ ಚಕ್ರವನ್ನು ಹಿಡಿದುದಾಗಿ ನಂಬಿ ನಾರಾಯಣ ರೂಪದಲ್ಲಿರುವುದು ವಿಶೇಷ . ಮೂಲ ಮೂರ್ತಿಯ ಪ್ರಭಾವಳಿಯಲ್ಲಿ ದಶಾವತಾರದ ಚಿತ್ರಗಳನ್ನು ಬಿಡಿಸಲಾಗಿದೆ . ಇಲ್ಲಿ ದೇವರಿಗೆ ಪಾಂಚರಾತ್ರಾಗಮ ರೀತ್ಯ ನಿತ್ಯ ಪೂಜೆಗಳು ನಡೆಯುತ್ತವೆ . ಲಕ್ಷ್ಮೀದೇವಿಗೆ ಪ್ರತ್ಯೇಕವಾಗಿ ಗುಡಿಯಿದ್ದು ಅಮ್ಮನವರನ್ನು ಅರವಿಂದನಾಯಕಿ ಎಂದು ಕರೆಯಲಾಗುತ್ತದೆ . ಸಂಸ್ಕೃತದಲ್ಲಿ ಕಳಲೆ ಎಂದರೆ ಬಿದಿರು ಎಂದರ್ಥ . ಮೂಲ ವಿಗ್ರಹ ಬಿದಿರಿನ ಮೆಳೆಯಲ್ಲಿ ದೊರೆತದ್ದರಿಂದ ಸ್ಥಳಕ್ಕೆ ಕಳಲೆ ಎಂಬ ಹೆಸರು ಬಂದಿರುವುದೆಂದು ತಿಳಿಯುತ್ತದೆ .
ಕರ್ದಮ ಮಹರ್ಷಿಗಳ ಪುತ್ರರಾದ ಕಪಿಲ ಮುನಿಗಳು ಪಾತಾಳದಲ್ಲಿ ತಪಸ್ಸನ್ನು ಆಚರಿಸುತ್ತಿರುವ ವೇಳೆ ಸಾಗರ ಚಕ್ರವರ್ತಿಯ ೧೦೦ ಪುತ್ರರು ತಂದೆ ನಡೆಸುತ್ತಿದ್ದ ಅಶ್ವಮೇಧ ಯಜ್ಞದ ಅಶ್ವವನ್ನು ಅರಸುತ್ತ ಪಾತಾಳಕ್ಕೆ ಬಂದಾಗ ಕಪಿಲ ಮುನಿಗಳ ಪಕ್ಕದಲ್ಲಿ ನಿಂತಿದ್ದ ಯಜ್ಞಾಶ್ವವನ್ನು ಕಂಡು ದೀರ್ಘ ತಪದಲ್ಲಿದ್ದ ಮುನಿಗಳ ತಪೋಭಂಗ ಮಾಡಲಾಗಿ ಮುನಿಗಳು ಎಚ್ಚರಗೊಂಡು ಶಾಪ ನೀಡಲು ಸಾಗರ ಚಕ್ರವರ್ತಿಯ ೧೦೦ ಮಕ್ಕಳು ಭಸ್ಮರಾದರು. ತಮ್ಮ ತಮೋಗುಣಕ್ಕೆ ನೊಂದ ಮುನಿಗಳು ಬೇರೊಂದು ಪ್ರಶಾಂತ ಸ್ಥಳವನ್ನರಸುತ್ತ ಬರಲಾಗಿ ಕಪಿಲ ಕೌಂಡಿನ್ಯ ನದೀ ತೀರದಲ್ಲಿದ್ದ ಕಳಲೆಯಲ್ಲಿ ಆಕರ್ಷಿತರಾಗಿ ಇಲ್ಲಿ ತಪಸ್ಸನ್ನು ಮುಂದುವರಿಸಿದರೆಂದು ಸ್ಥಳ ಪುರಾಣ ವರ್ಣಿಸುತ್ತದೆ . ಇದಕ್ಕೆಂದೇ ಇಲ್ಲಿಯ ಕ್ಷೇತ್ರಕ್ಕೆ ಕಪಿಲಾಶ್ರಮ ಎಂಬ ಹೆಸರು ಬಂದಿತೆಂದು ಪ್ರತೀತಿ .
ಸಪ್ತ ಋಷಿಗಳಲ್ಲಿ ಅಗ್ರಗಣ್ಯರಾದ ಅತ್ರಿ ಮಹರ್ಷಿಗಳು ಇಲ್ಲಿ ನೆಲೆಸಿ ಲಕ್ಷ್ಮೀಕಾಂತನನ್ನು ಸೇವಿಸಿದರೆಂದೂ ಅವರ ಕುಮಾರನೆನಿಸಿದ ದತ್ತಾತ್ರೇಯ ರೂಪದಲ್ಲಿ ಲಕ್ಷ್ಮೀಕಾಂತನನ್ನು ಪೂಜಿಸಲಾಗುತ್ತದೆ ಎಂದು ಕ್ಷೇತ್ರ ಮಹಿಮೆ ತಿಳಿಸುತ್ತದೆ . ಅದೇನೇ ಇರಲಿ ಇದೊಂದು ಪೌರಾಣಿಕ ಪುರಾಣ ಕ್ಷೇತ್ರವೆಂಬುದು ತಿಳಿದುಬರುತ್ತದೆ .
ಕಾಲಕ್ರಮದಲ್ಲಿ ಮೈಸೂರು ಅರಸರ ಪ್ರಭಾವದಿಂದಲೂ ದಳವಾಯಿಗಳ ಆದರದಿಂದಲೂ ಬಹಳವಾಗಿ ವಿಸ್ತಾರಗೊಂಡು ಬಹು ದೊಡ್ಡ ದೇಗುಲವಾಗಿ ಬೆಳೆದು ನಿಂತಿದೆ .  ದೇವಾಲಯದ ಮುಖ್ಯ ಗೋಪುರ ಸುಮಾರು ೫೦ ಅಡಿಯೆತ್ತರವಿದ್ದು ಉಭಯ ಪಾರ್ಶ್ವಗಳಲ್ಲಿ ಒಂದುಕಡೆ ಯಾಗಶಾಲೆ ಮತ್ತೊಂದೆಡೆ ಪಾಕಶಾಲೆಯನ್ನು ಹೊಂದಿದೆ . ಪ್ರಾಕಾರ ಬಹಳ ವಿಸ್ತಾರವಾಗಿದ್ದು ಅನೇಕ ಸಣ್ಣ ಸಣ್ಣ ಗುಡಿಗಳನ್ನು ಹೊಂದಿದೆ . ವಿಶಿಷ್ಟಾದ್ವೈತ ಸ್ಥಾಪಕರಾದ ರಾಮಾನುಜರು , ಭಕ್ತಿ ಪಂಥದ ೧೨ ಮಂದಿ ಆಳವಾರರ ಗುಡಿಗಳು , ವಾಹನ ಮಂಟಪಗಳು , ಆಂಡಾಳ್ ಗುಡಿ , ನಾರಾಯಣನ ವಿವಿಧರೂಪಗಳಾದ ಪಟ್ಟಾಭಿರಾಮ ಲಕ್ಷ್ಮೀನಾರಾಯಣ ವರದರಾಜ ರಾಜಮನ್ನಾರ್ ಸಂಪತ್ಕುಮಾರ ಶ್ರೀನಿವಾಸ ಕೋದಂಡರಾಮ ವೇಣುಗೋಪಾಲ ಮುಂತಾದ ದೇವರುಗಳ ಸಣ್ಣ ಸಣ್ಣ ಗುಡಿಗಳಿವೆ . ಅಂತೆಯೇ ಅರವಿಂದ ನಾಯಕಿ ಅಮ್ಮನವರ ಗುಡಿಯೂ ಇದೆ . ಅಲ್ಲದೆ ವೇದಾಂತ ದೇಶಿಕರ , ಜೀಯರ್ ರವರ  ಗುಡಿಗಳೂ ಇವೆ . ವಾಹನಗಳಾದ ಅಶ್ವ ಗಜ ತುರಗ ಸಿಂಹ ಆಂಜನೇಯ ಆದಿಶೇಷ ಗಳಿಗೆ ಪ್ರತ್ಯೇಕ ಮಂಟಪಗಳಿವೆ . ದಳವಾಯಿಗಳು ನೀಡಿದರೆನ್ನಲಾದ ಬೃಹತ್ ಢಮರು , ಪುಷ್ಪ ಮಂಟಪ ವಾಹನ ಗಳು ಇವೆ . ಪೂರ್ವದಲ್ಲಿ ಪೂಜೆಯವೇಳೆಯಲ್ಲಿ ಬೃಹತ್ ಢಮರುವನ್ನ ಭಾರಿಸಲಾಗುತ್ತಿದ್ದೆಂದೂ ತಿಳಿಯುತ್ತದೆ. ದೇವಾಲಯದ ಮುಂಬಾಗದಲ್ಲಿ ಅಕ್ಕಪಕ್ಕಗಳಲ್ಲಿ ಎರಡು ಬೃಹತ್ತಾದ ಮಂಟಪಗಳಿವೆ . ಇವುಗಳನ್ನು ಮೈಸೂರಿನ ಒಡೆಯರ್ ಅವರ ಧಾರ್ಮ ಪತ್ನಿಗಳ ಹೆಸರಿನಲ್ಲಿ ಕಟ್ಟಲಾಗಿದ್ದು ಈ ಹಿಂದೆ ಬ್ರಹ್ಮೋತ್ಸವದ ಸಮಯದಲ್ಲಿ ದೇವರನ್ನು ಇಲ್ಲಿ ಬಿಜಯಮಾಡಿಸಿ  ಸೇವಾರ್ಥಗಳನ್ನು ನಡೆಸಲಾಗುತ್ತಿತ್ತೆಂದು ಆದರೆ ಕಾಲಕ್ರಮದಲ್ಲಿ ಅದು ನಿಂತುಹೋಗಿ ಈಗ ಪಾಲು ಮಂಟಪವಾಗಿದೆಯೆಂದೂ ತಿಳಿಯುತ್ತದೆ .
ದೇವಾಲಯದಲ್ಲಿ ಉತ್ಸವಾದಿಗಳು ನಿತ್ಯ ಪೂಜೆಗಳು ಸಕ್ರಮವಾಗಿ ನಡೆಯಲು ೧೯೦೬ರಲ್ಲಿ ಕಳಲೆ ಶ್ರೀನಿವಾಸ ಅಯ್ಯಂಗಾರ್ಯರ ನೇತೃತ್ವದಲ್ಲಿ ಸಭೆಯೊಂದನ್ನು ಆರಂಭಿಸಲಾಗಿದ್ದು ಕಳೆದ ೧೧೨ ವರ್ಷದಿಂದ ಈ ಸಭೆ ಉತ್ಸವಾದಿಗಳನ್ನು ಆಗಮೋಕ್ತರೀತ್ಯಾ ನಡೆಸುತ್ತ ಬಂದಿದೆ . ದೇವಾಲಯಕ್ಕೆ ಸೇರಿದ್ದ ಜಮೀನುಗಳು ಸರ್ಕಾರದ ವಶಕ್ಕೆ ಹೋದಮೇಲೂ ಭಕ್ತ ಜನಗಳ ಉದಾರ ನೆರವಿನಿಂದ ಸೇವೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ . ಇದೀಗ ಭಕ್ತ ಜನರ ತಂಗುವಿಕೆಗಾಗಿ ದೇಣಿಗೆಯ ನೆರವಿನಿಂದ ಸಭಾ ಭವನ ನಿರ್ಮಿಸಲಾಗಿದ್ದು ಉತ್ಸವಾದಿಗಳ ದಿನಗಳಂದು ಅಣ್ಣ ಸಂತರ್ಪಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ . ಪ್ರತಿ ವರುಷ ಎರಡು ಬ್ರಹ್ಮೋತ್ಸವಗಳು ನಡೆಯುತ್ತವೆ . ಮೀನಮಾಸದಲ್ಲಿ ಲಕ್ಷ್ಮೀಕಾಂತದೇವರ ಬ್ರಹ್ಮೋತ್ಸವ ೯ ದಿನಗಳು ವಿಜೃಂಭಣೆಯಿಂದ ನಡೆಯುತ್ತದೆ ಸ್ವಾತಿ ನಕ್ಷತ್ರದಂದು ರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ . ಸುತ್ತಲಿನ ಗ್ರಾಮದ ಸಹಸ್ರಾರು ಜನರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ . ರಥೋತ್ಸವದ ರಾತ್ರಿ ಶ್ರೀಕಾಂತ ಮುಡಿ ಉತ್ಸವ ಇಡೀ ರಾತ್ರಿ ವೈಭವದಿಂದ ನಡೆಯುತ್ತದೆ . ಮನಮುಟ್ಟುವ ಓಲಗದ ಮೇಳ , ಪುಷ್ಪಗಳಿಂದ ತುಂಬಿ ಬಗೆ ಬಗೆಯ ಆಭರಣಗಳಿಂದ ಅಲಂಕೃತನಾದ ಉಭಯ ದೇವಿ ಸಮೇತ ಲಕ್ಷ್ಮೀಕಾಂತನ ಉತ್ಸವ ವರ್ಣಿಸಲಸಾಧ್ಯ . ಕೆಂಪು ಹರಳುಗಳಿಂದ ಕಂಗೊಳಿಸುವ ಶ್ರೀಕಾಂತ ಮುಡಿ .ವಿದ್ಯುತ್ ದೀಪಾಲಂಕಾರಗಳೊಂದಿಗೆ ಅಲಂಕೃತವಾದ ಪುಷ್ಪ ಚಪ್ಪರ , ಇಡೀ ರಾತ್ರಿ ಉತ್ಸವದೊಂದಿಗೆ ಕಳೆಯುವ ಭಕ್ತ ವೃಂದ . ಮೇಲುಕೋಟೆಯಲ್ಲಿ ನಡೆಯುವ ವೈರಮುಡಿ ಉತ್ಸವ ನೆನಪಿಸುತ್ತದೆ.ಈ ವರ್ಷ ಏಪ್ರಿಲ್ ೩ ರಂದು ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. 

ಎರಡನೆಯ ಬ್ರಹ್ಮೋತ್ಸವ ಅರವಿಂದ ನಾಯಕಿ ಅಮ್ಮನವರಿಗೆ ನಡೆಯುವ ಉತ್ಸವ ಇದು ನವರಾತ್ರಿಯ ಸಮಯದಲ್ಲಿ ೯ ದಿನ ನಡೆಯುತ್ತದೆ . ಚಿಕ್ಕ ರಥೋತ್ಸವವು ಆರನೆಯ ದಿನ ನಡೆಯುತ್ತದೆ.
ಕಳಲೆಯಲ್ಲಿ ಲಕ್ಷ್ಮೀಕಾಂತನ ದೇವಾಲಯವಲ್ಲದೆ ಈಶ್ವರನ ದೇವಾಲಯ ಕೂಡ ಕಲಾ  ಕುಸುಮದಿಂದ ಕೂಡಿದ್ದು ಆಕರ್ಷಣೀಯವಾಗಿದೆ . ಅಂತೆಯೇ ರಥ ಬೀದಿಯ ಆಂಜನೇಯ ದೇವಾಲಯ ಕೂಡ ಪ್ರಸಿದ್ಧವಾಗಿದೆ . ಸಮೀಪವಿರುವ ಕಲ್ಯಾಣಿ ಯಲ್ಲಿ ಬ್ರಹ್ಮೋತ್ಸವ ಕಾಲದಲ್ಲಿ ತೆಪ್ಪೋತ್ಸವ ನಡೆಯುತ್ತದೆ . ಊರ ಹೊರಭಾಗದಲ್ಲಿ ಗ್ರಾಮ ದೇವತೆ ಕೈವಲ್ಯಾ ದೇವಿಯ ಗುಡಿಯೂ ಪ್ರಮುಖವಾಗಿದೆ . ಇದರ ಹಿಂದೆ ಕಥೆಯೊಂದು ಪ್ರಚಲಿತದಲ್ಲಿದೆ. ಕಪಿಲ ಮುನಿಗಳು ಇಲ್ಲಿ ತಪಸ್ಸನ್ನಾಚರಿಸುತ್ತಿದ್ದ ಕಾಲದಲ್ಲಿ ಲವಣಾಸುರನೆಂಬ ರಾಕ್ಷಸನು ತಪಭಂಗ ಮಾಡಲು ಆಕ್ರಮಣ ಮಾಡಲು ಮುನಿಗಳು ತಪಸ್ಸಿನಿಂದ ರಕ್ಷಣೆಗಾಗಿ ಶಕ್ತಿಯೊಂದನ್ನು ರೂಪಿಸಿದರೆಂದೂ ಆ ದೇವಿಯು ಲವಣಾಸುರನನ್ನು ಸಂಹರಿಸಿ ಮುನಿಗಳ ತಪಸ್ಸು ಯಶಸ್ವಿಯಾಗಲು ನೆರವಾದಳೆಂದೂ ,
ಆಕೆಯನ್ನು ಗ್ರಾಮ ದೇವತೆಯಾಗಿ ಪೂಜಿಸಲಾಗುತ್ತದೆ   ಇಲ್ಲಿಯೂ ವರ್ಷಕ್ಕೊಮ್ಮೆ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ . ಸುತ್ತಲಿನ ಗ್ರಾಮದ ಜನರು ಉತ್ಸಾಹದಿಂದ ಸೇರುತ್ತಾರೆ. 

Wednesday, March 14, 2018

                 ಶ್ರೀ :  
               ಶ್ರೀ ಲಕ್ಷ್ಮೀಕಾಂತ ಪರಬ್ರಹ್ಮಣೇ ನಮಃ 
                 ಶ್ರೀ ಮತೆ ರಾಮಾನುಜಾಯ ನಮಃ 
             ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ 
             ಶ್ರೀಮತೇ ಶ್ರೀನಿವಾಸ ಮಹಾದೇಶಿಕಾಯ ನಮಃ 
                     ಭಜತಾಂ ಕಲ್ಪ ವೃಕ್ಷಾಯ ಕರೀರಪುರವಾಸಿನೇ 
                   ಯೋಗಿಮಾನಸ ಹಂಸಾಯ ಲಕ್ಷ್ಮೀಕಾಂತಾಯ ಮಂಗಳಂ 


ಉ.ವೇ ಪ್ರವರ್ತಕರಾದ  ಶ್ರೀ                                                                           ಸನ್ನಿಧಿಯಲ್ಲಿ ವಿಜ್ಞಾಪನೆ  

ಇದೇ ವಿಳಂಬಿನಾಮ  ಸಂವತ್ಸರದ  ಉತ್ತರಾಯಣ ಮೀನ ಮಾಸದ ಕೃಷ್ಣ ಪಕ್ಷದ ದಶಮಿ ತಿಥಿ ಧನಿಷ್ಟಾ ನಕ್ಷತ್ರ ಕೂಡಿದ ಬುಧವಾರ ೧೧ ನೇ ತಾರೀಕಿನಂದು (೧೧-೦೪-೨೦೧೮)ಬೆಳಿಗ್ಗೆ ೦೯.೩೦  ರಿಂದ ೦೯ ೪೫ ರೊಳಗೆ ಸಲ್ಲುವ ವೃಷಭಲಗ್ನದಲ್ಲಿ 
ನಮ್ಮ  ಹಿರಿಯ ಮಗ ಚಿ ರಾ ಪ್ರದೀಪ ಕುಮಾರನ ಧರ್ಮಪತ್ನಿ ಚಿ ಸೌ ರಾಜಶ್ರೀ ಯ 

ಪುಂಸವನ ಸೀಮಂತೋತ್ಸವವು 

ನಡೆಯಲು ಶ್ರೀ ಲಕ್ಷ್ಮೀಕಾಂತನ ಆಶೀರ್ವಾದದಿಂದ ಗುರು ಹಿರಿಯರು ನಿಶ್ಚಯಿಸಿರುವುದರಿಂದ 
ತಾವುಗಳು ಸಕುಟುಂಬರಾಗಿ ಆಗಮಿಸಿ ದಂಪತಿಗಳನ್ನು ಆಶೀರ್ವದಿಸಬೇಕೆಂದು  ಪ್ರಾರ್ಥಿಸುತ್ತೇವೆ  

                                ಸ್ಥಳ:  ಬೆಂಗಳೂರಿನ ಸಹಕಾರನಗರದಲ್ಲಿರುವ ಕ್ಷೇಮ ಭವನ (ಕೊಡಿಗೇಹಳ್ಳಿ ರೈಲ್ವೆ ನಿಲ್ದಾಣದ ಎದುರು )

                                                                                              ತಮ್ಮ ಆಗಮನಾಕಾಂಕ್ಷಿ 
                                                                         ಶ್ರೀಮತಿ ವಸಂತಕಲಾ ಮತ್ತು ಶ್ರೀನಿವಾಸ ಪ್ರಸಾದ್ 

ಆಗಮನವನ್ನು ಬಯಸುವವರು: ಶ್ರೀಮತಿ ಹೇಮಾ ಪ್ರಸಾದ್ , ಶ್ರೀ  ರಾಘವನ್ ಮತ್ತು ಚಿ:ದಿಯಾ    ಹಾಗೂ ಶ್ರೀಮತಿ ನೀರಜಾ ಮತ್ತು ಚಿ ಶ್ರೀಕಾಂತ್ 



Thursday, March 8, 2018



ತಿರುಮಕೂಡ್ಲು ನರಸೀಪುರದ ಗುಂಜಾ ನರಸಿಂಹ

ಮೈಸೂರು ನಗರದಿಂದ ೨೦ ಮೈಲಿ ದೂರದಲ್ಲಿರುವ ತಿರುಮಕೂಡ್ಲು ನರಸೀಪುರ ಐತಿಹಾಸಿಕವಾಗಿ ಮತ್ತು ಪೌರಾಣಿಕವಾಗಿ ಪ್ರಸಿದ್ಧವಾಗಿರುವ ಪ್ರಾಚೀನ ಪುಣ್ಯ ಕ್ಷೇತ್ರ . ಕಪಿಲಾ ಮತ್ತು ಕಾವೇರಿ ನದಿಗಳು ಒಂದಾಗಿ ಹರಿಯುವ ಈ ಪುಣ್ಯ ಸಂಗಮ ಕ್ಷೇತ್ರ ಮೈಸೂರು ಜಿಲ್ಲೆಯ ವೈಭವವನ್ನು ಖ್ಯಾತಿಯನ್ನು ಬಹುವಾಗಿ ಹೆಚ್ಚಿಸಿದೆ . ನದೀ ತೀರದಲ್ಲಿ ಅಗೆಯಲಾಗಿ ನವಶಿಲಾಯುಗದ ಇತಿಹಾಸ ಪೂರ್ವ ಕಾಲದವರೆಗಿನ ಪ್ರಾಚ್ಯ ವಸ್ತುಗಳು , ಅವಶೇಷಗಳು ದೊರಕಿರುವುದು ಈ ಕ್ಷೇತ್ರದ ಪ್ರಾಚೀನತೆಯನ್ನು ಮನದಟ್ಟುಮಾಡಿ ಕೊಡುತ್ತದೆ . ಇಲ್ಲಿ ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದವೆನ್ನಲಾದ  ಮಡಿಕೆಗಳು ಆಯುಧಗಳು ಶವಸಂಪುಟಗಳು ಕುಡಿಕೆಗಳು ಪ್ರಾಣಿಗಳ ಮೂಳೆಗಳು ದೊರಕಿವೆಯೆಂದು ಸಂಶೋಧನಾ ಮೂಲಗಳಿಂದ ತಿಳಿದು ಬಂದಿದೆ .
ಭವ್ಯ ಇತಿಹಾಸವುಳ್ಳ ಪರಂಪರೆಯನ್ನುಳ್ಳ ನರಸೀಪುರ ಕ್ಷೇತ್ರ ಪೌರಾಣಿಕವಾಗಿಯೂ ಒಂದು ಪುಣ್ಯ ಕ್ಷೇತ್ರ. ಕೊಡಗಿನ ತಲಕಾವೇರಿಯಲ್ಲಿ ಜನಿಸಿ ಹರಿದುಬರುವ ಕರ್ನಾಟಕದ ಜೀವನದಿ ಕಾವೇರಿಯು ಮತ್ತು ಕೇರಳದ ವೈನಾಡಿನಲ್ಲಿ ಹುಟ್ಟಿ ಹರಿದು ಬರುವ ಕಪಿಲೆಯು ನರಸೀಪುರದಲ್ಲಿ ಸಂಗಮವಾಗುವುದು ವೈಶಿಷ್ಟ್ಯ . ಸಂಗಮ ಸ್ಥಳದಲ್ಲಿ ಅಗೋಚರವಾದ ಸ್ಫಟಿಕ ಸರೋವರವೂ ಇದ್ದು ಇದನ್ನು ದಕ್ಷಿಣ ಭಾರತದ ತ್ರಿವೇಣಿ ಸಂಗಮವೆಂದೂ ಕರೆಯಲಾಗುತ್ತದೆ . ಕಾವೇರಿ ತೀರದಲ್ಲಿ ನರಸೀಪುರವೂ ಸಂಗಮಸ್ಥಳದಲ್ಲಿ ತಿರುಮಕೂಡ್ಲು ಕ್ಷೇತ್ರವೂ ಇದ್ದು ಎರಡು ಕ್ಷೇತ್ರವನ್ನು ಕೂಡಿಸುವಂತೆ ಸೇತುವೆಯನ್ನು ನಿರ್ಮಿಸಲಾಗಿದೆ . ಸಂಗಮ ಕ್ಷೇತ್ರದಲ್ಲಿ ಅಗಸ್ತ್ಯೇಶ್ವರ ದೇವಾಲಯವೂ ಕಾವೇರೀ ತೀರದಲ್ಲಿ ನರಸಿಂಹ ದೇವಾಲಯವೂ ಇದ್ದು ಈ ಕ್ಷೇತ್ರವನ್ನು ತಿರುಮಕೂಡ್ಲು ನರಸೀಪುರ ಅಥವಾ ಟಿ ನರಸೀಪುರ ಎಂಬುದಾಗಿಯೂ ಕರೆಯಲಾಗುತ್ತದೆ .
ನರಸೀಪುರದ ನರಸಿಂಹ ದೇವಾಲಯ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು ಬಹು ವಿಸ್ತಾರವಾಗಿದೆ . ಇತ್ತೀಚೆಗೆ ನವೀಕರಣಗೊಂಡು ನವ ವಧುವಂತೆ ಶೃಂಗಾರ ಗೊಂಡಿದೆ . ಮೂಲ ದೇಗುಲದ ಸ್ಥಾಪನೆ ಎಂದೆಂಬುದು ತಿಳಿಯದಿದ್ದರೂ ಕಾಲಕ್ರಮದಲ್ಲಿ ಮೂಗೂರಿನ ಒಡೆಯರಿಂದ ವಿಸ್ತರಿತಗೊಂಡಿದೆ ಎಂಬುದು ಶಾಸನದಿಂದ ತಿಳಿದುಬರುತ್ತದೆ . ನದಿಯ ತೀರದಲ್ಲಿ ಕಲಾತ್ಮಕವಾಗಿ ರೂಪುಗೊಂಡಿರುವ ಸುಂದರ ದೇವಾಲಯದ ಮೂಲಮೂರ್ತಿ ನರಸಿಂಹ . ತೊಡೆಯಮೇಲೆ ಲಕ್ಷ್ಮೀದೇವಿಯನ್ನು ಕುಳ್ಳಿರಿಸಿಕೊಂಡಿರುವ ಮೂಲಮೂರ್ತಿಯ ವಿಗ್ರಹ ನಯನ ಮನೋಹರವಾಗಿದೆ
ನರಸಿಂಹನ ಮೂರ್ತಿಯ ಬಲ ಕೈನಲ್ಲಿ ಬೆರಳುಗಳ ನಡುವೆ ಗುಲಗಂಜಿಯ ಮೂಲಿಕೆಯಿದ್ದು ತನ್ನಿಮಿತ್ತ ಗುಂಜಾ ನರಸಿಂಹನೆಂದೇ ಖ್ಯಾತವಾಗಿದೆ . ಈ ಕ್ಷೇತ್ರ ಪಾವಿತ್ರ್ಯತೆಯಲ್ಲಿ ಕಾಶಿಗಿಂತ ಗುಲಗಂಜಿಯಷ್ಟು ಹೆಚ್ಚು ಶ್ರೇಷ್ಠವೆಂದು ಸ್ಥಳಪುರಾಣದಲ್ಲಿ ವರ್ಣಿಸಲಾಗಿದೆ . ಉತ್ತರ ಭಾರತದ ಕಾಶಿ ಭಾರತೀಯರೆಲ್ಲರಿಗೂ ಬಹಳ ಪವಿತ್ರವಾದ ಕ್ಷೇತ್ರ . ನರಸಿಂಹ ದೇವಾಲಯದ ಗೋಪುರ , ನವರಂಗ ಮಂಟಪದಲ್ಲಿರುವ ಕಂಭಗಳ ವಿನ್ಯಾಸ ಅದರಲ್ಲಿನ ಕಲಾತ್ಮಕ ಕೆತ್ತನೆಗಳು ಆಕರ್ಷಕವಾಗಿದ್ದು ಮನಮೋಹಕವಾಗಿವೆ .
ಮೂಲಮೂರ್ತಿಯ ಸ್ಥಾಪನೆಯ ಬಗ್ಗೆ ದಂತಕಥೆಯೊಂದು ಪ್ರಚಲಿತದಲ್ಲಿದೆ . ಸ್ಥಳೀಯ ಅಗಸನೋರ್ವನಿಗೆ ಒಮ್ಮೆ ಸ್ವಪ್ನದಲ್ಲಿ ನರಸಿಂಹ ಕಾಣಿಸಿಕೊಂಡು ತಾನೊಂದು ಹುತ್ತದಡಿಯಲ್ಲಿ ಇರುವುದಾಗಿಯೂ ಸಮೀಪದ ಒಗೆಯುವ ಕಲ್ಲಿನಡಿಯಲ್ಲಿ ನಿಧಿಯಿರುವುದಾಗಿಯೂ ತಿಳಿಸಿ ಆ ನಿಧಿಯನ್ನು ಉಪಯೋಗಿಸಿ ಹುತ್ತದಡಿಯ ನರಸಿಂಹ ಮೂರ್ತಿಗೆ ದೇಗುಲ ಕಟ್ಟುವಂತೆಯೂ ಆದೇಶವಾಯಿತೆಂದೂ ಅದರಂತೆ ಆ ಅಗಸನು ದೇವಾಲಯ ನಿರ್ಮಿಸಿದನೆಂದೂ ಕಥೆಯಲ್ಲಿ ತಿಳಿಸಲಾಗಿದೆ . ಗರ್ಭಗೃಹದ ಹೊಸಿಲು ಆ ಒಗೆಯುವ ಕಲ್ಲೆಂದೂ ಕಲ್ಲಿನ ಮೇಲಿರುವ ಚಿತ್ರ ಅಗಸನದೆಂದೂ ತಿಳಿಸಲಾಗುತ್ತದೆ. ಅದೇನೇ ಇರಲಿ ಮೂರ್ತಿಯಂತೂ ಬಹಳ ಸುಂದರವಾಗಿದ್ದು ಮನದಾಳದಲ್ಲಿ ನಿಲ್ಲುವಂತೆ ಸೊಗಸಾಗಿದೆ. ನರಸಿಂಹ ದೇವಾಲಯದ ವಿಮಾನಕ್ಕೆ ಅನಂತ ಪುಣ್ಯಕೋಟಿ ವಿಮಾನ ಎಂದು ಕರೆಯಲಾಗುತ್ತದೆ . ಕ್ಷೇತ್ರಕ್ಕೆ ಭಾಸ್ಕರ ಕ್ಷೇತ್ರವೆಂದೂ ಪ್ರಸಿದ್ಧಿ . ದೇವಾಲಯದ ಹೊರ ಪ್ರಾಕಾರದಲ್ಲಿ ಶ್ರೀನಿವಾಸ, ನಾರಾಯಣ, ಶ್ರೀರಾಮ , ಕೃಷ್ಣ , ವರದರಾಜ ಮತ್ತು ಆಂಡಾಳ್ ಅಮ್ಮನವರ ಗುಡಿಗಳೂ ಕಂಗೊಳಿಸುತ್ತವೆ . ಅಮ್ಮನವರ ಗುಡಿಯಲ್ಲಿ ಹನುಮಂತನ ವಿಗ್ರಹವೊಂದಿದ್ದು ಗೋಡೆಯಲ್ಲಿ ಕೃಷ್ಣಲೀಲೆಯನ್ನು ವಿವರಿಸುವ ತೈಲಚಿತ್ರಗಳು ಕಾಣಸಿಗುತ್ತವೆ . ಪ್ರಾಕಾರದ ಗೋಡೆಯಮೇಲೆ ನರಸಿಂಹನ ನವರೂಪಗಳನ್ನು ಚಿತ್ರಿಸಲಾಗಿದೆ . ಇಂದಿಗೂ ಶತಮಾನಗಳು ಕಳೆದರೂ ಮಾಸದೆ ಆಕರ್ಷಕವಾಗಿವೆ . ನವರೂಪಗಳೆಂದರೆ ಕಂಭ ಛೇದಿಸುತ್ತಿರುವ ನರಸಿಂಹ,ಹಿರಣ್ಯಕಶಿಪುವಿನೊಡನೆ ಯುದ್ಧನಿರತನಾಗಿರುವ ನರಸಿಂಹ,ಜಠರವನ್ನು ಬಗೆಯುತ್ತಿರುವ ನರಸಿಂಹ, ಧ್ಯಾನ ರೂಪಿ ನರಸಿಂಹ, ಲಕ್ಷ್ಮೀನರಸಿಂಹ , ಪ್ರಹ್ಲಾದವರದ ನರಸಿಂಹ, ಸೂಲಗಿತ್ತಿ ವಲ್ಲಭ ನರಸಿಂಹ , ಅಷ್ಟಭುಜ ನರಸಿಂಹ ,ಯೋಗನರಸಿಂಹ ಎಂದು . ಬಲಿಪೀಠದ ಬಳಿ ದೇವಾಲಯದ ಅಭಿವೃದ್ಧಿಗೆ ಕಾರಣನಾದ ಮೂಗೂರಿನ ಒಡೆಯನ ಹಾಗೂ ಅವನ ತಮ್ಮನದೆಂದು ಹೇಳುವ ಎರಡು ವಿಗ್ರಹಗಳಿವೆ . ಸಮೀಪದಲ್ಲಿ ಪ್ರಹ್ಲಾದ ಮಂಟಪ ಹಾಗೂ ಜೀರ್ಣಾವಸ್ಥೆಯಲ್ಲಿರುವ ಜನಾರ್ದನ ದೇವಾಲಯಗಳು ಇವೆ .
ಒಂದು ಅಭಿಪ್ರಾಯದ ಪ್ರಕಾರ ಅದ್ವೈತ ಮತ ಸ್ಥಾಪಕರಾದ ಆದಿ ಶಂಕರರು ಈ ಕ್ಷೇತ್ರಕ್ಕೆ ಭೇಟಿನೀಡಿದುದಾಗಿಯೂ ನರಸಿಂಹನ ದಿವ್ಯ ಮಂಗಳ ಮೂರ್ತಿಗೆ ಮಾರುಹೋದ ಶಂಕರರು ಇಲ್ಲಿ ನರಸಿಂಹನನ್ನು ಕುರಿತಾದ ಪ್ರಸಿದ್ಧ ಕರಾವಲಂಬ ಸ್ತೋತ್ರ ರಚಿಸಿದರೆಂದೂ ಪ್ರತೀತಿ .
ಇಲ್ಲಿ ಪ್ರತಿ ವರ್ಷ ಮೀನಮಾಸದಲ್ಲಿ ರಥೋತ್ಸವ ನಡೆಯುತ್ತದೆ. ಈ ವರ್ಷ ಮಾರ್ಚ್  ೩೧ರಂದು ರಥೋತ್ಸವ ನಡೆಯಲಿದೆ .

ಕೆ ವಿ ಶ್ರೀನಿವಾಸ ಪ್ರಸಾದ್ 

Wednesday, March 7, 2018

ನಂಜನಗೂಡು ಒಂದು ಪ್ರಸಿದ್ಧ ಶೈವ ಕ್ಷೇತ್ರ

ನಂಜನಗೂಡು ಮೈಸೂರಿನಿಂದ ೧೨ ಮೈಲಿ ದೂರದಲ್ಲಿದೆ . ಕಪಿಲಾನದಿ ತೀರದಲ್ಲಿರುವ ನಂಜನಗೂಡು ಪ್ರಸಿದ್ಧ ಶೈವ ಕ್ಷೇತ್ರ . ಪುಣ್ಯ ತೀರ್ಥವೂ ಕೂಡ . ಸಗರಕುಮಾರರನ್ನು ದೃಷ್ಟಿ ಮಾತ್ರದಲ್ಲಿ ಭಸ್ಮ ಮಾಡಿದ ಕಪಿಲ ಮುನಿಗಳು ಇಲ್ಲಿ ತಪಸ್ಸನ್ನಾಚರಿಸಿದರೆಂದು ಪ್ರತೀತಿ . ಅಮೃತವನ್ನು ಪಡೆಯಲು ದೇವತೆಗಳು ದಾನವರೂ ಒಂದಾಗಿ ವಾಸುಕಿಯನ್ನು ಹಗ್ಗವನ್ನಾಗಿಸಿ ಮಂದಾರ ಪರ್ವತವನ್ನು ಕಡುಗೋಲಾಗಿಸಿ ಸಾಗರವನ್ನು ಕಡೆಯಲು ಮೊದಲು ವಿಷ ಉತ್ಪತ್ತಿ ಆಯಿತೆಂದು ಭಯಭೀತರಾದ ದೇವತೆಗಳು ತಮ್ಮನ್ನು ವಿಷದಿಂದ ರಕ್ಷಿಸುವಂತೆ ಉಮಾಪತಿಯನ್ನು ಪ್ರಾರ್ಥಿಸಲು ಶಿವನು ವಿಷವನ್ನು ಗಟ ಗಟನೆ ಕುಡಿದನಂತೆ . ಶಿವನ ಸಾಹಸವನ್ನು ಕಂಡು ಭಯಗೊಂಡ ಉಮೆ ಹರಣ ಕಂಠ ವನ್ನು ಬಿಗಿಯಾಗಿ ಹಿಡಿಯಲಾಗಿ ವಿಷ ಕೆಳಗಿಳಿಯದೆ ಕಂಠ ದಲ್ಲೇ ಉಳಿದು ಮೃತ್ಯುಂಜಯನು 'ನೀಲಕಂಠ ' ನಾದನೆಂತು ಪುರಾಣದಲ್ಲಿ ತಿಳಿಸಲಾಗಿದೆ . ತನ್ನಿಮಿತ್ತ ಶಿವನಿಗೆ ನಂಜುಂಡ , ವಿಷಕಂಠ , ಶ್ರೀಕಂಠ ಎಂಬ ಹೆಸರುಗಳು ರೂಢಿಗೆ ಬಂದವು . ನಂಜನಗೂಡಿಗೆ ಗರಳಪುರಿ ಎಂಬ ಹೆಸರೂ ಉಂಟು .
ನಂಜುಂಡೇಶ್ವರ ದೇವಾಲಯ ದ್ರಾವಿಡ ಶೈಲಿಯಲ್ಲಿ ಕಟ್ಟಲ್ಪಟ್ಟಿದ್ದರೂ ಅಲ್ಲಲ್ಲಿ ಹೊಯ್ಸಳರ ಚೋಳರ ಪ್ರಭಾವವೂ ಕಾಣುತ್ತದೆ . ದೇವಾಲಯ ವಿಸ್ತಾರವಾಗಿದ್ದು ಮುಖ್ಯ ಗೋಪುರ ಸುಮಾರು ೧೦೦ ಅಡಿ ಎತ್ತರವಿದ್ದು ಆಕರ್ಷಕವಾಗಿದೆ . ಗೋಪುರದಲ್ಲಿ ನೂರಾರು ಗೊಂಬೆಗಳನ್ನು ಬಿಡಿಸಲಾಗಿದೆ . ಮೂಲಗುಡಿಯ ಸ್ಥಾಪನೆ ಎಂದಾಯಿತೆಂಬುದು ತಿಳಿಯದು . ೧೪೭ ಕಂಭಗಳ ಮುಂದಿನ ಮಂಟಪ ವನ್ನು ಕರಾಚೂರಿನ ನಂದಿರಾಜ ಮತ್ತು ಮೈಸೂರಿನ ದಿವಾನ್ ಪೂರ್ಣಯ್ಯ ನವರು ಕಾಲಕ್ರಮದಲ್ಲಿ ವಿಸ್ತರಿಸಿದರೆಂದು ತಿಳಿದುಬರುತ್ತದೆ . ಮುಖ್ಯ ಗೋಪುರವನ್ನು ೧೮೪ ೫ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು ಕಟ್ಟಿಸಿದುದಾಗಿ ಶಾಸನದಿಂದ ತಿಳಿಯುತ್ತದೆ . ಆಲಯದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರ ಹಾಗೂ ಅವರ ಪತ್ನಿಯರ ಪ್ರತಿಮೆಗಳು ಇಂದಿಗೂ ಪುರಸ್ಕಾರ ಪಡೆಯುತ್ತಿವೆ . ಪ್ರಾಕಾರದಲ್ಲಿ ೬೩ಮಂದಿ ಶಿವಭಕ್ತರ ಶೀಲಾ ಮೂರ್ತಿಗಳು ಮತ್ತು ಲೋಹದ ಮೂರ್ತಿಗಳು ಸ್ಥಾಪಿಸಲ್ಪಟ್ಟಿವೆ . ಎಲ್ಲ ೬೩ ಮಂದಿ ಶಿವಭಕ್ತರ ಪ್ರತಿಮೆ ಹೊಂದಿರುವ ಏಕೈಕ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ . ಆಲಯದ ಪಶ್ಚಿಮದಲ್ಲಿ ಅನೇಕ ಶಿವಲಿಂಗಗಳಿವೆ . ಲಿಂಗದ ಪೀಠದಲ್ಲಿ ಅವುಗಳನ್ನು ಸ್ಥಾಪಿಸಿದ ರಾಣಿಯರ ಹೆಸರುಗಳು ಇವೆ . ಆ ಲಿಂಗಗಳನ್ನು ಆಯಾ ಹೆಸರಿನಲ್ಲಿ ಕರೆಯುಲಾಗುತ್ತದೆ . ಉತ್ತರದಲ್ಲಿ ಶಿವ ಲೀಲಾತ್ಮಕವಾದ ೨೫ ಬೃಹತ್ ವಿಗ್ರಹಗಳಿವೆ . ಏಕಪಾದ ಮೂರ್ತಿ ,ಗಿರಿಜಾಕಲ್ಯಾಣ , ತ್ರಿಪುರಾಸುರ ಸಂಹಾರ , ಮಾರ್ಕಂಡೇಯ ವರದ , ಅರ್ಧನಾರೀಶ್ವರ ಮುಂತಾದವು ಪ್ರಸಿದ್ಧವಾದವು . ಮೂರ್ತಿಗಳು ಸೂಕ್ಷ್ಮವಾಗಿ ಕೆತ್ತಲ್ಪಟ್ಟಿವೆ . ನವರಂಗ ಮಂಟಪದಲ್ಲಿ ಎಡದಲ್ಲಿ ಸತ್ಯನಾರಾಯಣನ ಅಥವಾ ಆದಿಕೇಶವ ಮೂರ್ತಿಯ ಗುಡಿಯಿದೆ . ಗುಡಿಯಲ್ಲಿ ರಾಮಾನುಜಾಚಾರ್ಯರ ನಮ್ಮಾಳ್ವಾರರ ಪ್ರತಿಷ್ಠಿತ ಶಿಲಾ ಮೂರ್ತಿಗಳಿರುವುದು ವೈಶಿಷ್ಟ್ಯ . ಶೈವಾಗಮ ಅನ್ವಯ ಪೂಜೆ ನಡೆಯುವ ದೇವಾಲಯಗಳಲ್ಲಿ ವಿಷ್ಣು ಮೂರ್ತಿ ಇರುವುದು ಪದ್ಧತಿ . ನವರಂಗದ ಬಲಭಾಗದಲ್ಲಿ ದಂಡಾಯುಧಪಾಣಿ ಷಣ್ಮುಖನ ಗುಡಿಯಿದೆ . ಸಪ್ತಹೆಡೆಯ ಸರ್ಪದ ಸುರಳಿಯ ಮೇಲೆ ಸುಬ್ರಹ್ಮಣ್ಯ ನಿಂತಿದ್ದಾನೆ . ಪೀಠದಲ್ಲಿ ನಾಲ್ಕು ಮಂದಿ ಮುನಿಗಳ ಚಿತ್ರಣವಿದೆ . ಮೂರ್ತಿ ಮನಮೋಹಕವಾಗಿದೆ . ಆಲಯದಲ್ಲಿರುವ  ರುದ್ರಾಕ್ಷಿ ಮಂಟಪ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರ ಪತ್ನಿ ಲಿಂಗಾಜಮ್ಮಣ್ಣಿ ಕಟ್ಟಿಸಿದುದು . ಪ್ರಾಕಾರದಲ್ಲಿ ಪಾರ್ವತಿ ದೇವಿಯ ಗುಡಿ ಇದೆ . ದೇವಿಯ ಎಡಭಾಗದಲ್ಲಿ ಪಚ್ಚೆ  ಲಿಂಗವಿದೆ ಇದು ಟೀಪೂ ವಿನ ಕೊಡುಗೆಯೆಂದು ತಿಳಿಯುತ್ತದೆ .
ದೇವಾಲಯಗಳ ಪರಮ ವೈರಿ ಟಿಪೂವಿಗೆ ನಂಜುಂಡೇಶ್ವರನಲ್ಲಿ ಅಪಾರ ಭಕ್ತಿ . ಇದಕ್ಕೆ ಕಾರಣವಿಲ್ಲದಿಲ್ಲ . ಟಿಪೂವಿನ ಪ್ರೀತಿಯ ಆನೆಯೊಂದು ಒಮ್ಮೆ ಕಣ್ಣಿನ ಬೇನೆಯೊಂದಕ್ಕೆ ಗುರಿಯಾಯಿತು . ದಿನಕಳೆದಂತೆ ವ್ಯಾಧಿ ಉಲ್ಭಣ ವಾಗತೊಡಗಿತು . ಆನೆ ಆಹಾರ ತ್ಯಜಿಸಿತು . ಅನೇಕ ವಿಖ್ಯಾತ ವೈದ್ಯರುಗಳು ಉಪಚಾರ ಮಾಡಿದರೂ ಪ್ರಯೋಜನವಾಗಲಿಲ್ಲ . ಟಿಪೂ ಕಂಗಾಲಾದ . ಆತನ ಕೆಲವು ಹಿತ ಚಿಂತಕರು ನಂಜುಂಡನ ಆಲಯದಲ್ಲಿ ವಿಶೇಷ ಪೂಜೆಮಾಡುವಂತೆ ಸಲಹೆ ನೀಡಿದರು . ಟೀಪೂ ಸಿಡಿದೆದ್ದ . ಆನೆ ಗುಣವಾಗದಿದ್ದರೆ ಇಡೀ ದೇವಾಲಯವನ್ನು ಧ್ವಂಸ ಮಾಡುವುದಾಗಿ ಎಚ್ಚರಿಸಿದ . ಅದರಂತೆ ದೇವಾಲಯದಲ್ಲಿ ೪೮ ದಿನಗಳು ದೇವರಿಗೆ ವಿಶೇಷ ಪೂಜೆಗಳು ನಡೆದವು . ಆನೆ ಗುಣಮುಖ ಆಗತೊಡಗಿತು . ಟೀಪೂ ಸುಪ್ರೀತನಾದ . ನಂಜುಂಡನ ಭಕ್ತನಾದ . ಅಮೂಲ್ಯವಾದ ಪಚ್ಚೆಯ ಕಂಕೀಹಾರ ವನ್ನು ದಾನವಾಗಿ ನೀಡಿದ . ಅಂದಿನಿಂದ ನಂಜುಂಡ 'ಹಕೀಮ್ ನಂಜುಂಡ ' ನೆಂದು ಪ್ರಸಿದ್ಧನಾದ . ಆಲಯದಲ್ಲಿ ಆಭರಣಗಳಿಗೆ ಕೊರತೆಯಿಲ್ಲ . ಸ್ವರ್ಣದ ಜಡೇ ಬಂಗಾರ , ಕುಚ್ಚು , ಕಿರೀಟಗಳು ರತ್ನಮಯವಾದ ಶ್ರೀಕಂಠ ಮುಡಿ , ಸ್ವರ್ಣದ ಸರ್ಪವಾಹನ ಮುಂತಾದ ಅಮೂಲ್ಯ ಆಭರಣಗಳು ಆಲಯದಲ್ಲಿವೆ . ಅನೇಕವು ಕೃಷ್ಣರಾಜ ಒಡೆಯರ್ ರವರ ಕೊಡುಗೆಗಳು .
ಇಲ್ಲಿಯ ಬ್ರಹ್ಮೋತ್ಸವ ವಿಶಿಷ್ಟವಾದುದು . ರಥೋತ್ಸವದಲ್ಲಿ ಪಂಚ ರಥಗಳು ಭಾಗವಹಿಸುತ್ತವೆ . ಕ್ರಮವಾಗಿ ಶಿವ , ಉಮೆ ,ವಿನಾಯಕ , ಸುಬ್ರಹ್ಮಣ್ಯ , ಚಂಡಿಕೇಶ್ವರ ರ ಪಂಚ ರಥಗಳು ಪಾಲ್ಗೊಳ್ಳುತ್ತವೆ . ಗಜ ರಥ ಆನೆಯಿಂದ ಎಳೆಯಲ್ಪಡುತ್ತದೆ. ಉಳಿದವು ಕಿರಿಯ ರಥಗಳು . ಅವುಗಳಲ್ಲಿ ಒಂದು ರಜತ ರಥ ಕೂಡ . ಬೃಹದ್ ರಥ ಕೃಷ್ಣರಾಜ ಒಡೆಯರ್ ರವರ ಕೊಡುಗೆ .
ನಂಜನಗೂಡು ಪರಶುರಾಮನಿಗೆ ಈಶ್ವರನು ಪ್ರತ್ಯಕ್ಷನಾದ ಕ್ಷೇತ್ರ . ಗುಂಡಲು ಮತ್ತು ಚೂರ್ಣಾವತಿ ನದಿಗಳು ಸಂಧಿಸುವ ಸ್ಥಳದಲ್ಲಿ ನಂಜುಂಡನ ಆಲಯದಿಂದ ಅನತಿ ದೂರದಲ್ಲಿಯೇ ಪರಶುರಾಮ ಕ್ಷೇತ್ರವಿದೆ . ಇಲ್ಲಿ ಪರಶುರಾಮನ ಆಲಯವಿದೆ . ಈ ಕ್ಷೇತ್ರದ ಮಣ್ಣು ಅನೇಕ ಚರ್ಮ ರೋಗಗಳಿಗೆ ಉತ್ತಮ ಮದ್ದು . ಅದಕ್ಕೆಂದೇ ಭಕ್ತರು ಇಲ್ಲಿಯ ಮಣ್ಣನ್ನು ಕೊಂಡೊಯ್ಯುತ್ತಾರೆ .
ದೇವಾಲಯದ ಮಹಿಮೆಯನ್ನು ಒಂದು ಕಲ್ಲಿನ ಮೇಲೆ ಕೆತ್ತಲಾಗಿದೆ . ಸ್ಥಳ ಪುರಾಣದ ಅನ್ವಯ ಪರಶುರಾಮ ಕ್ಷೇತ್ರ ಸಂದರ್ಶನವಲ್ಲದೆ ನಂಜುಂಡನ ದರ್ಶನ ಫಲ ದೊರಕದು . ಆಲಯದಲ್ಲಿ ಒಂದು ರಜತ ವೀರಾಂಗಿಯಿದೆ . ಇದರ ಮೇಲೆ ಪರಶುರಾಮನ ಪರಶು ಹಿಡಿದ ಚಿತ್ರವಿದೆ . ಈ ವೀರಾಂಗಿ ೧೮೬೧ ರಲ್ಲಿ ಕೊಡಲ್ಪಟ್ಟಿತೆಂದು ತಿಳಿಯುತ್ತದೆ .
ನಂಜನಗೂಡಿನಲ್ಲಿ ರಾಘವೇಂದ್ರ ಸ್ವಾಮಿಗಳ ಮಠವಿದೆ . ಈ ಮಠವನ್ನು ರಾಘವೇಂದ್ರ ತೀರ್ಥ ಸ್ವಾಮಿಗಳು ಸ್ಥಾಪಿಸಿದರೆಂದು ತಿಳಿಯುತ್ತದೆ . ಮಠದಲ್ಲಿ ಅಮೂಲ್ಯ ಗ್ರಂಥಗಳ ಸಂಗ್ರಹಾಗಾರವಿದೆ .
ಈ ವರ್ಷ ಮಾರ್ಚ್  ೨೫ರಂದು ಶ್ರೀಕಂಠ ಮುಡಿ ಉತ್ಸವವೂ ೨೮ರಂದು ಪಂಚ ಮಹಾ ರಥೋತ್ಸವವೂ ನಡೆಯಲಿದೆ .
ಶ್ರೀನಿವಾಸ ಪ್ರಸಾದ್ .ಕೆ ವಿ 

Monday, March 5, 2018

ಯದುಶೈಲ ಮೇಲುಕೋಟೆ ..ಒಂದು ಕಿರು ಪರಿಚಯ

ಮೇಲುಕೋಟೆ ಮಂಡ್ಯ ಜಿಲ್ಲೆಯಲ್ಲಿರುವ ಪ್ರಸಿದ್ಧ ವೈಷ್ಣವ ಕ್ಷೇತ್ರ . ಮೈಸೂರಿನಿಂದ ೩೨ ಮೈಲಿ ದೂರದಲ್ಲಿರುವ ಮೇಲುಕೋಟೆಗೆ ನಾರಾಯಣಾದ್ರಿ , ವೇದಾದ್ರಿ , ಯತಿಶೈಲ , ತಿರುನಾರಾಯಣಪುರ ಎಂಬಿತ್ಯಾದಿ ಹೆಸರುಗಳು ಪ್ರಸಿದ್ಧಿಯಲ್ಲಿವೆ . ಇಲ್ಲಿ ವಿಶಿಷ್ಟಾದ್ವೈತ ಮತ ಸ್ಥಾಪಕರಾದ ಭಾಷ್ಯಕಾರ ರಾಮಾನುಜಾಚಾರ್ಯರು ನೆಲೆಸಿ ಚೆಲುವನಾರಾಯಣನ ಸೇವೆಗೈದರೆಂದು ಚರಿತ್ರೆಯಿಂದ ತಿಳಿಯುತ್ತದೆ . ಸುಂದರ ಪ್ರಕೃತಿಯ ಭವ್ಯ ಆಶ್ರಯದಲ್ಲಿ ಆಕರ್ಷಕವಾಗಿ ರಾರಾಜಿಸುತ್ತಿರುವ ದಕ್ಷಿಣ ಭಾರತದ ಬದರೀ ಎಂದು ಖ್ಯಾತವಾಗಿರುವ ಮೇಲುಕೋಟೆ ರಾಷ್ಟ್ರದ ಪ್ರಸಿದ್ಧ ಕ್ಷೇತ್ರಗಳಲ್ಲೊಂದು .

ಮೇಲುಕೋಟೆಯ ಪ್ರಮುಖ ಆಕರ್ಷಣೆ ಚೆಲುವ ನಾರಾಯಣನ ಭವ್ಯ ದೇವಾಲಯ . ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯವನ್ನು ಹೊಯ್ಸಳ ಚಕ್ರವರ್ತಿ ಬಿಟ್ಟಿದೇವ ಕಟ್ಟಿಸಿದನೆಂದು ಶಾಸನದಿಂದ ತಿಳಿಯುತ್ತದೆ . ಮೂಲ ಮೂರ್ತಿಯು ಬ್ರಹ್ಮಾರಾಧಿತವೆಂದು ಅದನ್ನು ಸನತ್ಕುಮಾರರು ಇಲ್ಲಿ ಸ್ಥಾಪಿಸಿದರೆಂದು ಸ್ಥಳಪುರಾಣ ವರ್ಣಿಸುತ್ತದೆ . ಈ ಕ್ಷೇತ್ರದಲ್ಲಿ ದತ್ತಾತ್ರೇಯನು ಸನ್ಯಾಸ ಸ್ವೀಕಾರಮಾಡಿ ವೇದೋಪದೇಶ ಮಾಡಿದುದರಿಂದ ವೇದಾದ್ರಿಯೆಂದೂ , ಶ್ರೀ ಕೃಷ್ಣನು ಯಾದವರೊಡಗೂಡಿ ಪೂಜೆ ಸಲ್ಲಿಸುತ್ತಿದ್ದುದರಿಂದ ಯಾದವಾದ್ರಿಯೆಂದೂ , ಯತಿರಾಜ ರಾಮಾನುಜರು ನೆಲೆಸಿದುದರಿಂದ ಯತಿಶೈಲವೆಂಬ ಹೆಸರುಗಳು ಬಂದುವೆಂದು ಸ್ಥಳಪುರಾಣ ಬಣ್ಣಿಸುತ್ತದೆ . ಈ ದೇವಾಲಯ ಪ್ರವರ್ಧಮಾನಕ್ಕೆ ಬರಲು ಮೈಸೂರಿನ ಅರಸರು ಹಾಗೂ ವಿಜಯನಗರದ ಅರಸರು ಪ್ರಮುಖ ಕಾರಣರು . ಯದುಕುಲತಿಲಕ ರಾಜವೊಡೆಯರ್ ಅವರು ಯದುಗಿರಿಗೆ ಕೋಟೆ ಕಟ್ಟಿಸಿ "ಮೇಲುಕೋಟೆ"ಎಂಬ ಹೆಸರಿತ್ತಿದ್ದಲ್ಲದೆ ಸಮೀಪವಿರುವ ನೃಸಿಂಹಗಿರಿಯ ಮೇಲಿರುವ ನೃಸಿಂಹದೇವಾಲಯವನ್ನು ಕಟ್ಟಿಸಿದರೆಂದು ತಿಳಿದುಬರುತ್ತದೆ . ರಾಜಮುಡಿ ಎಂಬ ಅಮೂಲ್ಯ ಕಿರೀಟವು ರಾಜಒಡೆಯರ್ ಅವರ ಕಾಣಿಕೆ . ಹಾಗೆಯೇ ಕೃಷ್ಣರಾಜ ಒಡೆಯರ್ ರವರು ಕೃಷ್ಣರಾಜ ಮುಡಿ ಎಂಬ ಕಿರೀಟವನ್ನಲ್ಲದೆ ಗಂಡಭೇರುಂಡ ಪದಕ, ಮುತ್ತಿನಹಾರ, ಕರ್ಣಪದಕಗಳನ್ನೂ ಅರ್ಪಿಸಿದ್ದಾರೆ. ರಾಜ ಒಡೆಯರ್ ಅವರು ಸಲ್ಲಿಸಿರುವ ಅಮೂಲ್ಯ ಸೇವೆಯ ನೆನಪಾಗಿ ಅವರ ಪ್ರತಿಮೆ ಇಂದಿಗೂ ದೇವಾಲಯದಲ್ಲಿ ಪುರಸ್ಕಾರ ಪಡೆಯುತ್ತಿದೆ . ಮೊಗಲರ ಕಾಲದಲ್ಲಿ ನಡೆದ ದೇವಾಲಯಗಳ ನಾಶದ ಧಾಳಿಗೆ ಮೇಲುಕೋಟೆಯ ದೇವಾಲಯವೂ ಬಲಿಪಶು ಆಗದಿರಲಿಲ್ಲ . ಆದರೆ ಕಾಲಕ್ರಮದಲ್ಲಿ ವಿಜನಗರದ ಅರಸರ ಆಸಕ್ತಿಯಿಂದಾಗಿ ಪುನರುಜ್ಜೆವಿತವಾಯಿತು. .
ರಾಮಾನುಜರು ಮೇಲುಕೋಟೆಗೆ ಬಂದಾಗ ಅಲ್ಲಿ ಉತ್ಸವ ಮೂರ್ತಿಯಿರಲಿಲ್ಲ . ಅದು ಮೊಗಲರ ಧಾಳಿಯ ಕಾಲದಲ್ಲಿ ಅಪಹೃತವಾಗಿತ್ತೆಂದು ತಿಳಿಯುತ್ತದೆ. ಒಬ್ಬ ಮೊಗಲರ ದೊರೆ ತನ್ನ ಮಗಳಿಗಾಗಿ ಆಟಿಕೆಗಾಗಿ ವಿಗ್ರಹವನ್ನು ಕೊಂಡೊಯ್ದಿದ್ದನೆಂದು ವಿಷ್ಯ ಅರಿತ ರಾಮಾನುಜರು ಕೂಡಲೇ ದೆಹಲಿಗೆ ಪ್ರಯಾಣ ಬೆಳೆಸಿ , ಸುಲ್ತಾನನನ್ನು ಕಂಡರು . ರಾಮಾನುಜರ ಪ್ರತಿಭೆಗೆ, ತೇಜಸ್ಸಿಗೆ ಮಾರುಹೋದ ಸುಲ್ತಾನನು , ತನ್ನ ಕೊಳ್ಳೆಹೊಡೆದ ವಿಗ್ರಹರಾಶಿಯಲ್ಲಿ ಅವರು ಬಯಸಿದ  ವಿಗ್ರಹ ಇರುವುದಾದರೆ ಕೊಂಡೊಯ್ಯಬಹುದೆಂದು ಅಜ್ಞಾಪಿಸಿದ  . ಆದರೆ .ಆ ರಾಶಿಯಲ್ಲಿ ನೆಚ್ಚಿನ ವಿಗ್ರಹವಿರಲಿಲ್ಲ . ತಮ್ಮ ಇಷ್ಟ ಮೂರ್ತಿ ರಾಜಕುಮಾರಿಯಬಳಿ ಇರುವುದನ್ನು ದಿವ್ಯ ದೃಷ್ಟಿಯಿಂದ ಗ್ರಹಿಸಿದ ರಾಮಾನುಜರು ಆ ಮೂರ್ತಿಯನ್ನು ಧ್ಯಾನಿಸಿದರು . ಕೂಡಲೇ ಆ ವಿಗ್ರಹ ಜಿಗಿಯುತ್ತ ಇವರಬಳಿ ಓಡಿಬಂದಿತು . ತಡಮಾಡಿದರೆ ಕೆಡುಕೆಂದು ತಿಳಿದು ಕೂಡಲೇ ವಿಗ್ರಹ ಸಮೇತ ದಕ್ಷಿಣಕ್ಕೆ ಧಾವಿಸಿದರು . ಕಾಲ್ನಡಿಗೆಯೇ ಅಂದಿನದಿನದಲ್ಲಿ ಗತಿಯಾಗಿತ್ತು . ಅರಮನೆಗೆ ಮರಳಿದ ರಾಜಕುಮಾರಿಗೆ ತನ್ನ ಪ್ರೀತಿಯ ವಿಗ್ರಹ ಇಲ್ಲದಿರುವುದು ಗಮನಕ್ಕೆ ಬಂದು ಸೇನೆಯನ್ನು ಹುಡುಕಲು ಯೋಜಿಸಿದಳು .ಅದು ರಾಮಾನುಜರಿಗೆ ಕೊಡಲ್ಪಟ್ಟಿತೆಂದು ತಿಳಿದು ತಾನೇ ವಿಗ್ರಹವನ್ನು ಹುಡುಕಿಕೊಂಡು ಬಂದಳು. ರಾಮಾನುಜರು ವಾಸ್ತವಾಂಶವನ್ನು ತಿಳಿಸಿ ಬಯಸಿದಾದರೆ ತನ್ನೊಡನೆ   ಮೇಲುಕೋಟೆಗೆ ಬರಬಹುದೆಂದು ತಿಳಿಸಲು ವಿಗ್ರಹವನ್ನು ಬಿಟ್ಟಿರಲಾಗದ ರಾಜಕುಮಾರಿಯು ಮೇಲುಕೋಟೆಗೆ ಬಂದು ತನ್ನ ಕೊನೆಯುಸಿರು ಇರುವವರೆಗೂ ವಿಗ್ರಹದ ಸಾನ್ನಿಧ್ಯದಲ್ಲಿ ಕಳೆದಳೆಂದೂ , ಅವಳ ಭಕ್ತಿಯನ್ನು ಮೆಚ್ಚಿದ ರಾಮಮಾನುಜರು ಮೂಲಮೂರ್ತಿಯ ಚರಣಗಳ ಬಳಿಯಲ್ಲಿ ಅವಳ ವಿಗ್ರಹಕ್ಕೂ ಅವಕಾಶ ಮಾಡಿಕೊಟ್ಟು ಗೌರವಿಸಿದರೆಂದು ತಿಳಿಯುತ್ತದೆ .
ಉತ್ಸವ ಮೂರ್ತಿಗೆ ಸಂಪತ್ಕುಮಾರ ಎಂದು ಹೆಸರು . ಪ್ರತಿ ವರುಷ ಮೀನ ಮಾಸದ ಪುಷ್ಯ ನಕ್ಷತ್ರದಂದು ನಡೆಯುವ ವೈರಮುಡಿ ಉತ್ಸವ ಜಗತ್ ಪ್ರಸಿದ್ಧ . ವೈರ ಎಂದರೆ ವಜ್ರ . ಮುಡಿ ಎಂದರೆ ಕಿರೀಟ .ಈ  ವಜ್ರಕಿರೀಟ ಸಾವಿರ ಸಾವಿರ ಅಮೂಲ್ಯ ವಜ್ರಗಳಿಂದ ಕೂಡಿದ್ದಾಗಿದೆ . ಇದನ್ನು ಸೂರ್ಯನ ಮುಂದೆ ಹಿಡಿದರೆ ಅದರಿಂದ ಹೊರಬರುವ ಕಾಂತಿ ಸಹಸ್ರ ಸೂರ್ಯರಿಗೆ ಸಾಟಿಯಾಗಿರುತ್ತದೆ . ಈ ಕಾಂತಿಯನ್ನು ಬರಿ ಕಣ್ಣಿಂದ ನೋಡಿದರೆ ಅಂಧರಾಗುತ್ತಾರೆಂದು ಪ್ರತೀತಿ. ಆದ್ದರಿಂದಲೇ ಈ ಕಿರೀಟವನ್ನು ಹಗಲಲ್ಲಿ ತೆಗೆಯುವುದಿಲ್ಲ. ವರ್ಷದಲ್ಲಿ ಒಂದು ಬಾರಿ ಮಾತ್ರ ರಾತ್ರಿಯಲ್ಲಿ ಈ ಕಿರೀಟವನ್ನು ಉತ್ಸವ ಮೂರ್ತಿಗೆ ಧರಿಸುತ್ತಾರೆ ಇದನ್ನು ವೈರಮುಡಿ ಉತ್ಸವ ಎಂದು ಕರೆಯುತ್ತಾರೆ. ಇಡೀ ರಾತ್ರಿ ನಡೆಯುವ ವೈರಮುಡಿ ಉತ್ಸವ ವೀಕ್ಷಿಸಲು ದೇಶದ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ .ಪುರಾಣದನ್ವಯ ಈ ಕಿರೀಟ ದ್ವಾಪರ ಯುಗದ್ದೆಂದೂ , ಕುರುಕ್ಷೇತ್ರ ಯುದ್ಧ ಕಾಲದಲ್ಲಿ ಪಾರ್ಥ ಧರಿಸಿದ್ದನೆಂದೂ ಕರ್ಣನ ನಾಗಾಸ್ತ್ರದಿಂದ ಕೃಷ್ಣನ ಯುಕ್ತಿಯಿಂದಾಗಿ ತಳ್ಳಲ್ಪಟ್ಟಾಗ ನೆಲದ ಮೇಲೆ ಬಿದ್ದ ಕಿರೀಟವನ್ನು ಗರುಡನು ಸ್ವೀಕರಿಸಿ ಇಲ್ಲಿನ ಸಂಪತ್ಕುಮಾರ ವಿಗ್ರಹಕ್ಕೆ ತೊಡಿಸಿದನೆಂದು ಸ್ಥಳ ಪುರಾಣ ವರ್ಣಿಸುತ್ತದೆ.
ಮೇಲುಕೋಟೆಯಲ್ಲಿ ಚೆಲುವ ನಾರಾಯಣನ ಆಲಯವಲ್ಲದೆ ಅಕ್ಕ ತಂಗಿಯರ ಕೊಳ , ನಾಮದ ಚಿಲುಮೆ , ವೇದ ಪುಷ್ಕರಿಣಿ , ಕಲ್ಯಾಣಿ , ಧನುಷ್ಕೋಟಿ , ದರ್ಭ ತೀರ್ಥ , ಯಾದವ ತೀರ್ಥ , ಪದ್ಮ ತೀರ್ಥ ಮುಂತಾದವು ನೋಡತಕ್ಕ ಸ್ಥಳಗಳು. ಸಮೀಪದಲ್ಲಿರುವ ನೃಸಿಂಹ ಗಿರಿಯ ಮೇಲೆ ಪ್ರಹ್ಲಾದನಿಂದ ಸ್ಥಾಪಿಸಲ್ಪಟ್ಟುದೆಂದು ಪ್ರಸಿದ್ಧವಾಗಿರುವ ಯೋಗಾ ನರಸಿಂಹ ದೇವಾಲಯ ಪ್ರಸಿದ್ಧ . ಬೆಟ್ಟವನ್ನು ಏರಲು ಕಡಿದಾದ ೨೦೦ ಮೆಟ್ಟಲಿನ ಮಾರ್ಗವಿದೆ . ನರಸಿಂಹ ಮೂರ್ತಿ ಭವ್ಯವಾಗಿದ್ದು ನೋಡಲು ಆಕರ್ಷಕವಾಗಿದೆ. ಬೆಟ್ಟದ ಮೇಲಿನಿಂದ ಮೇಲುಕೋಟೆಯ ಸುಂದರ ದೃಶ್ಯ ರಮಣೀಯವಾಗಿರುತ್ತದೆ .
ಕರ್ನಾಟಕದ ಈ ಭಾಗದಲ್ಲಿ ರಾಮಾನುಜರು ನೆಲೆಸಿದ್ದರಿಂದ ಇಲ್ಲಿ ವಿಶಿಷ್ಟಾದ್ವೈತ ಪ್ರಮುಖ ಆಚಾರ್ಯರ ಮಠಗಳೂ , ವಸತಿ ನಿಲಯಗಳೂ , ವೇದಾಂತ ದೇಶಿಕರ ಭವ್ಯ ದೇವಾಲಯವೂ , ಸಂಸ್ಕೃತ ಸಂಶೋಧನಾ ಕೇಂದ್ರವು ಕಾಣ ಸಿಗುತ್ತದೆ . ಮೇಲುಕೋಟೆಯಿಂದ ೪ ಮೈಲಿ ದೂರದಲ್ಲಿ ತೊಂಡನೂರೆಂಬ ಕ್ಷೇತ್ರವಿದ್ದು ಇಲ್ಲಿ ರಾಮಾನುಜರ ಆದಿಶೇಷ ರೂಪವುಳ್ಳ ಅಪರೂಪದ ವಿಗ್ರಹ ಕಾಣ ಸಿಗುತ್ತದೆ .ರಾಮಾನುಜರು ಆದಿಶೇಷನ ಅವತಾರವೆಂದೇ ಪ್ರಸಿದ್ಧಿ.
ಈ ವರ್ಷ ಮಾರ್ಚ್ ೨೬ ರಂದು ಸೋಮವಾರ ರಾತ್ರಿ ಜಗತ್ಪ್ರಸಿದ್ಧ ವೈರಮುಡಿ ಉತ್ಸವ ನಡೆಯುತ್ತದೆ . ಹಾಗೂ ಮಾರ್ಚ್ ೨೯ರಂದು ಗುರುವಾರ ರಥೋತ್ಸವವು ನಡೆಯುತ್ತದೆ .

ಶ್ರೀನಿವಾಸ ಪ್ರಸಾದ್ . ಕೆ ವಿ


Wednesday, February 21, 2018

Tatvamuktakalapa


Tatvamuktaa Kalapam of Deshikar

The Tatva Muktha Kalaapam (TMK) is one of the four magnificent philosophical gems of Swamy Desikan. The other three are Sathadhusini, Nyaya Parisuddhi and Nyaya Siddhanjana. TMK is categorized as a Prakarana grantham, a manual or Independent treatise to present and defend Visishtadhvaithic doctrines and to evaluate critically the deficiencies in the rival philosophical systems.

While Sathadhushani confined itself to the criticism of Advaitham alone, TMK went farther and provided a comprehensive evaluation of the metaphysical doctrines(Thathvaas) of significant rival schools of thought. With the sure footedness of a Mastergymnast, Swamy Desikan created TMK in the form of 500 verses in the majestic Sragdhara meter to house his dialectical arguments in poetry. 
The Taarkika Simham (the Lion among the Logicians) combined his extraordinary poetic skills with those of his dialectic skills to bless us with 500 verses brimming with such elegance about the serious topics of philosophy. Nobody has ever dared to achieve this extraordinary feat. Regarding his scope of coverage in TMK, Swamy Desikan paraphrases the statement of Sage Vyasa about Mahaabhaaratham and describes: “what is not considered here(TMK) cannot be found elsewhere”. 
Swamy Desikan is referring to the topics on Philosophy here. Regarding the name selected by Swamy Desikan for this Prakarana grantham, he was inspired by the passage in Vishnu Puranam, which refers to the Tatthvams as ornaments of the Lord. Swamy Desikan, a long term resident of Srirangam at the time of creating this Sri Sookthi decided to name this grantham as “Pearl (mukta) ornament (Kalapa) of metaphysical doctrines (Tathvaas)”. Swamy Desikan, who had offered MummaNikkivai (three strands of Pearls); a Tamizh Prabhandham as a garland to Sri Hemabhjavalli Thayar of Thiru Ayindhai decided to offer a Five strand Pearl ornament to Lord Ranganatha this time. 
The five pearl strands are the five major parts of TMK: (1) dhravya (substance), (2) Jeeva (Individual Soul), (3) Iswara (God), (4) Buddhi (Knowledge) and (5) adhravya(non-substance). TMK is a treasured bhushanam (Aabharanam) of LordRanganatha, which He adorns with great joy. The rival schools of philosophy examined by Swamy Desikan in TMK to establish the soundness of Visishtadhvaitham and to expose the deficiencies of Para Mathams are:
Nyaya and Vaiseshika, Saankya and Yoga, Poorva Mimaamsa, Vedantha (Bhaskara, Yaadhava Prakasa and Sankara), the four schools of Buddhism, Jainism andCharvakam. No wonder Swamy Desikan said in TMK: “yannasmin kvapinaitath” (What is not considered here can not be found elsewhere).Swamy Desikan blessed us with a commentary for TMK to elucidate the fine points taken up in TMK

Sreenivasa Prasad.K.V.
President , Coordination committee, Bangalore

Monday, January 22, 2018

abhaya pradaanasaara of vedanta deshikar


ಅಭಯಪ್ರದಾನಸಾರ =ವೇದಾಂತ ದೇಶಿಕರ ಮೇರು ಕೃತಿ

 ಶ್ರೀಮದ್ರಾಮಾಯಣವು ವೇದಕ್ಕೆ ಸಮಾನ. ಇದರಲ್ಲಿ ವಿಭೀಷಣ ಶರಣಾಗತಿ ಎಂಬ ಘಟ್ಟವು ಉಪನಿಷತ್ತೆಂದು ಪ್ರಸಿದ್ಧವಾಗಿದೆ . ಈ ಭಾಗಲ್ಲಿರುವ ಶರಣಾಗತಿಯ ಮಹತ್ವವನ್ನು ಮೆಚ್ಚಿದ ದೇಶಿಕರು ಈ ತತ್ವವನ್ನು ಬಹಳ ಸುಂದರವಾಗಿ ಅಭಯಪ್ರದಾನಸಾರದಲ್ಲಿ ವಿವರಿಸಿದ್ದಾರೆ . ಆರಂಭದಲ್ಲಿ ಶ್ರೀ ರಾಮನಿಗೆ ಮಂಗಳಾಶಾಸನ ಮಾಡಿ ನಂತರ ರಂಗನಾಥನಿಗೆ ಮಂಗಳಾಶಾಸನ ಮಾಡಿದ್ದಾರೆ. ಭಗವಂತನಲ್ಲಿ ಶರಣಾಗುವುದರಿಂದ ಅಭಯ ದೊರಕುವುದೆಂದೂ ನಂತರ ಮೋಕ್ಷ ಪ್ರಾಪ್ತಿಯಾಗುವುದೆಂದು ಸುಂದರವಾಗಿ ವರ್ಣಿಸಿದ್ದಾರೆ . ಇದಕ್ಕೆ ಉದಾಹರಣೆಯಾಗಿ ಅಹಲ್ಯಾ ಶಾಪ ವಿಮೋಚನೆ ಕಾಕಾಸುರ ನಿಗ್ರಹ ಮುಂತಾದ ಉದಾಹರಣೆಗಳನ್ನು ತಿಳಿಸಿದ್ದಾರೆ. ಹತ್ತು ಅಧಿಕಾರಗಳನ್ನು ಹೊಂದಿರುವ ಈ ಕೃತಿಯು ತಮಿಳಿನಲ್ಲಿದೆ . ರಾಮಾಯಣದ ವಿಭೀಷಣ ಶರಣಾಗತಿಯ ಕಥಾ ಸಂಧರ್ಭವನ್ನು ಆರಿಸಿಕೊಂಡು ಅಭಯ ಪ್ರದಾನಸಾರ ವೆಂಬ ಮಣಿಪ್ರವಾಳ ರಹಸ್ಯ ಗ್ರಂಥವನ್ನು ರಚಿಸಿದ್ದಾರೆ . ಈ ಗ್ರಂಥದಲ್ಲಿ ಶರಣಾಗತಿಯ ವಿದ್ಯೆಯ ಮಹಿಮೆಯನ್ನು , ಪ್ರಪತ್ತಿ ಧರ್ಮದ ರೂಪುರೇಖೆಗಳನ್ನು, ಅಗತ್ಯವನ್ನು ಅನೇಕ ಪ್ರಮಾಣಗಳಿಂದ ಸಮರ್ಥಿಸಿ ಬಹು ಅದ್ಭುತ ರೀತಿಯಲ್ಲಿ ಆಚಾರ್ಯರು ವಿಶದೀಕರಿಸಿದ್ದಾರೆ . ಆದ್ದರಿಂದ ಅಭಯಪ್ರದಾನಸಾರವು ಸರ್ವಾದರಣೀಯ ಗ್ರಂಥವಾಗಿದೆ .
೧೦ ಅಧಿಕಾರಗಳು ಇಂತಿವೆ :
ಪ್ರಬಂಧಾವತಾರ ,ಪರತತ್ವ ನಿರ್ಣಯಾಧಿಕಾರ,ಶರಣಾಗತಿ ತಾತ್ಪರ್ಯ ಪ್ರಪಂಚಾಧಿಕಾರ , ಪ್ರಕರಣ ತಾತ್ಪರ್ಯ ನಿರ್ಣಯಾಧಿಕಾರ , ಶರಣ್ಯಶೀಲ ಪ್ರಕಾಶಾಧಿಕಾರ , ಶರಣ್ಯ ವೈಭವ ಪ್ರಕಾಶಾಧಿಕಾರ , ಪರಧರ್ಮ ನಿರ್ಣಯಾಧಿಕಾರ , ಶರಣ್ಯ ವ್ರತ ವಿಶೇಷ ಪ್ರಕಾಶಾಧಿಕಾರ , ಶರಣ್ಯ ಶರಣಾಗತ ಸಂಗಮ ಲಾಭಾಧಿಕಾರ ಪ್ರಾಪ್ತಿ ಪ್ರಕಾರ ಪ್ರಪಂಚಾಧಿಕಾರ ಎಂಬುದಾಗಿ ಹತ್ತು ಅಧಿಕಾರಗಳಿವೆ . 

Friday, January 19, 2018

Vedanta deshikar

ವೇದಾಂತ ದೇಶಿಕರು ಅಥವಾ ವೆಂಕಟನಾಥರು ಅಥವಾ ತೂಪ್ಪುಲ್ ದೇಶಿಕರು (೧೨೬೮-೧೩೭೦)  ------ಒಂದು ಪಕ್ಷಿನೋಟ 
ವೇದಾಂತ ದೇಶಿಕರು ರಾಮಾನುಜರ ನಂತರ ಬಂದ ಶ್ರೀ ವೈಷ್ಣವ ಸಿದ್ದಾಂತದ ಅತ್ಯಂತ ಮೇಧಾವಿಪ್ರವರ್ತಕರು ಹಾಗೂ ವೇದಾಂತ ಪ್ರಚಾರಕರು ಆಗಿದ್ದರು , ಅವರು ಒಬ್ಬ ಕವಿ, ದಾರ್ಶನಿಕ ಮತ್ತು
ಪ್ರಭಾವಿ ಗುರುಗಳೂ ಆಗಿದ್ದರು . ಅವರು ಕಿಡಾಂಬಿ ಅಪ್ಪುಲ್ಲಾರ್ ಅಥವಾ ಆತ್ರೇಯ ರಾಮಾನುಜಾಚಾರ್ಯ ರವರ ಶಿಷ್ಯರಾಗಿದ್ದರು . ಕಿಡಾಂಬಿ ಅಪ್ಪುಲ್ಲಾರ್ ರವರು ಸ್ವತಃ ರಾಮಾನುಜರ ಅನುಯಾಯಿ ಆಗಿದ್ದವರು . ಸ್ವಾಮೀ ದೇಶಿಕರನ್ನು ತಿರುಮಲೆ ಶ್ರೀನಿವಾಸನ ಘಂಟಾವತಾರವೆಂದೂ
ಕರೆಯುವುದುಂಟು . ಇವರು ಕಾಂಚೀಪುರದ ಸಮೀಪವಿರುವ ತೂಪ್ಪುಲ್ ನಲ್ಲಿ ಅನಂತಸೂರಿ ಮತ್ತುತೋತಾರಂಬ ಎಂಬ ದಿವ್ಯ ದಂಪತಿಗಳಿಗೆ ಜನಿಸಿದರು . ಇವರ ಬಾಲ್ಯದ ಹೆಸರು ವೇಂಕಟನಾಥ ಎಂದು. ಬಾಲ್ಯದಲ್ಲಿಯೇ ಅಪ್ರತಿಮ ಪ್ರತಿಭೆಯನ್ನು ತೋರಿದವರು . ಇವರ ವಿದ್ಯಾಭ್ಯಾಸ ಸೋದರ ಮಾವನವರಾದ ಕಿಡಾಂಬಿ ಅಪ್ಪುಲ್ಲಾರ್ ರವರಲ್ಲಿ ಆರಂಭವಾಯಿತು. ೧೭ ವಯಸ್ಸಿರುವಾಗಲೇ ಎಲ್ಲ ನಾಲ್ಕು ವೇದಗಳು , ದಿವ್ಯ ಪ್ರಬಂಧ, ಪುರಾಣ  ಮತ್ತು ಶಾಸ್ತ್ರಗಳಲ್ಲಿ ಪಾಂಡಿತ್ಯವನ್ನು ಪಡೆದರು . ಸಂಸ್ಕೃತ ತಮಿಳ್ ಪ್ರಾಕೃತ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದರು. ರಾಮಾನುಜರ ಸಿದ್ಧಾಂತದಲ್ಲಿ ಆಸಕ್ತಿ ತಳೆದ ದೇಶಿಕರು ಶ್ರೀ ವೈಷ್ಣವ ಸಿದ್ಧಾಂತದ ಪ್ರವರ್ತಕರೆನಿಸಿಕೊಂಡರು . ಅಪ್ರತಿಮ ಪಾಂಡಿತ್ಯ ಹೊಂದಿದ್ದ ದೇಶಿಕರು ನೂರಾರು ಸ್ತೋತ್ರಗಳನ್ನು, ಗ್ರಂಥಗಳನ್ನು ರಚಿಸಿ ಕವಿಸಿಂಹ ಎಂಬ ಬಿರುದಿಗೆ ಪಾತ್ರರಾದರು . ಎದುರಾಳಿಗಳನ್ನು ವಾದದಲ್ಲಿ ಸೋಲಿಸಿ ಪರಮತ ಭಂಗ ಎಂಬ ಕಾವ್ಯ ರಚಿಸಿ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಎತ್ತಿ ಹಿಡಿದರು. ಗ್ರಂಥ ರಚನೆಯಲ್ಲಿ ಎದುರಾದ ಸ್ಪರ್ಧೆಯನ್ನು ಎದುರಿಸಿ ಒಂದೇ ರಾತ್ರಿಯಲ್ಲಿ ಸಾವಿರ ಶ್ಲೋಕವುಳ್ಳ ಪಾದುಕಾ ಸಹಸ್ರವೆಂಬ ಸ್ತೋತ್ರ ಸಾಹಿತ್ಯವನ್ನು ರಚಿಸಿ ಅಪ್ರತಿಮರೆನಿಸಿದರು. ಆದರೂ ದುರಹಂಕಾರ  ಪಡದೆ ಎದುರಾಳಿಯನ್ನು ಹೊಗಳುತ್ತಾ ಅವರ ಕೃತಿಯನ್ನು ಆನೆಗೆ ಹೋಲಿಸಿ ಅತಿ ಶ್ರೇಷ್ಠವೆಂದು ಹೊಗಳಿ ಮೆರೆದರು .ಕವಿರತ್ನ ಕಾಳಿದಾಸನಿಗೆ ತಾನೇನೂ ಕಮ್ಮಿಯಿಲ್ಲ ಎಂಬುದನ್ನು ನಿರೂಪಿಸಲು  ಕಾಳಿದಾಸನ ಮೇಘ ಸಂದೇಶಕ್ಕೆ ಪ್ರತಿಯಾಗಿ ಹಂಸ ಸಂದೇಶವೆಂಬ ಅತ್ಯುನ್ನತ ಕೃತಿಯನ್ನು ರಚಿಸಿದರು. ನಾಟಕ ರಚನೆಯಲ್ಲಿಯೂ ಕೈ ಚಳಕ ತೋರಿಸಿ ಸಂಕಲ್ಪ ಸೂರ್ಯೋದಯ ಎಂಬ ನಾಟಕವನ್ನು ರಚಿಸಿದರು. ಯಾದವಾಭ್ಯುದಯ ವೆಂಬ ಮಹಾ ಕಾವ್ಯವನ್ನೂ ರಚಿಸಿದರು. ರಾಮಾನುಜರ ಶರಣಾಗತಿ ತತ್ವವನ್ನು ಬಹುವಾಗಿ ಮೆಚ್ಚಿದ ದೇಶಿಕರು ಆ ತತ್ವ ಬಿಂಬಿಸುವ ಅಭಯಪ್ರದಾನಸಾರ ವೆಂಬ ಮಹಾಗ್ರಂಥವನ್ನೂ,  ನ್ಯಾಸ ದಶಕ , ನ್ಯಾಸ ತಿಲಕ, ನ್ಯಾಸ ವಿಂಶತಿ ಎಂಬಿತ್ಯಾದಿ ಸ್ತೋತ್ರಗಳನ್ನು  ರಚಿಸಿ ಜನಪ್ರಿಯರಾದರು . ಸುಭಾಷಿತ ಗಳ  ಸಂಗ್ರಹ ಸುಭಾಷಿತ ನೀವಿ ಎಂಬ ಕೃತಿ ರಚಿಸಿ ಮೆಚ್ಚುಗೆ ಪಡೆದರು. ಇವರ ರಚನೆಗಳು ಒಟ್ಟು ೧೨೮. ಇವುಗಳ ಪೈಕಿ ೨೮ ಸ್ತೋತ್ರಗಳು ,೫ ಕಾವ್ಯ ಗ್ರಂಥಗಳು, ಒಂದು ನಾಟಕ,೩೨ ರಹಸ್ಯ ಗ್ರಂಥಗಳು , ೧೧ವೇದಾಂತ ಗ್ರಂಥಗಳು,೧೦ ವ್ಯಾಖ್ಯಾನ ಗ್ರಂಥಗಳು,೪ ಅನುಷ್ಟಾನ ಗ್ರಂಥಗಳು, ೨೪ ತಮಿಳು ಪ್ರಬಂಧಗಳು, ಹಾಗೂ ೧೩ ಇತರ ಗ್ರಂಥಗಳನ್ನು ದೇಶಿಕರು ರಚಿಸಿ ಕವಿಸಿಂಹ ಎಂಬ ಬಿರುದಿಗೆ ಭಾಜನರಾಗಿದ್ದಾರೆ.
ವೇದಾಂತ ದೇಶಿಕರು ಲಕ್ಷ್ಮಿ ಹಯಗ್ರೀವರ ಪರಮ ಭಕ್ತರು. ಅವರು ಗುರುಗಳ ಆದೇಶದಂತೆ ತಿರುವಹೀಂದ್ರಪುರದಲ್ಲಿ ಗರುಡನನ್ನು ಕುರಿತು ದೀರ್ಘ ತಪಸ್ಸು ಮಾಡಲು, ಗರುಡನು ಪ್ರತ್ಯಕ್ಷವಾಗಿ ವರವನ್ನು ಕೇಳಲು ಹಯಗ್ರೀವರ ದರ್ಶನ ವನ್ನು ಅಪೇಕ್ಷಿಸಲು ಗರುಡನು ಹಯಗ್ರೀವ ಮಂತ್ರ ಉಪದೇಶಿಸಿ ಅನುಸಂಧಾನ ಮಾಡಲು ತಿಳಿಸಲಾಗಿ ಅದರಂತೆ ದೇಶಿಕರು ಮಂತ್ರ ಜಪಿಸಲು ಹಯಗ್ರೀವರು ಪ್ರತ್ಯಕ್ಷವಾಗಿ ತನ್ನ ಮೂರ್ತಿ ಪ್ರಸಾದಿಸಿದರೆಂದೂ, ಅದನ್ನು ತಿರುವಹೀಂದ್ರಪುರದಲ್ಲಿ ಸ್ಥಾಪಿಸಿದರೆಂದು ಪ್ರತೀತಿ.
ದೇಶಿಕರು ತಮ್ಮ ಜೀವನವನ್ನು ಹೆಚ್ಚಿನ ಕಾಲ ಶ್ರೀರಂಗದಲ್ಲಿ ಕಳೆದರೂ , ಮುಸಲ್ಮಾನರ ಆಕ್ರಮಣದ ಸ್ವಲ್ಪ ಕಾಲ ಮೈಸೂರು ಮತ್ತು ತಮಿಳನಾಡು ಅಂಚಿನಲ್ಲಿರುವ ಸತ್ಯಾಗಾಲದಲ್ಲಿ ೧೨ ವರ್ಷ ಕಳೆದರೆಂದು ತಿಳಿದುಬರುತ್ತದೆ . ಶ್ರೀರಂಗದಲ್ಲಿ ಅವರು ವಾಸವಿದ್ದ ಮನೆಯನ್ನು ತಿರುಮಾಳಿಗೈ ಎಂದು ಕರೆಯುತ್ತಾರೆ. ದೇಶಿಕರ ಕುಮಾರರಾದ ವರದಾರ್ಯ ಎಂಬುವರು ತಂದೆಯ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋದರೆಂದು ತಿಳಿಯುತ್ತದೆ . ಅದೇನೇ ಆಗಲಿ ದೇಶಿಕರು ಶ್ರೀ ವೈಷ್ಣವ ಸಿದ್ಧಾಂತದ ಅಗ್ರಗಣ್ಯ ಪ್ರತಿಪಾದಕರೆನಿಸಿದರು . 
೧೦೨ ವರ್ಷ ತುಂಬು ಜೀವನ ನಡೆಸಿದ ದೇಶಿಕರು ೧೩೭೦ ರಲ್ಲಿ ಕೊನೆಯುಸಿರು ಎಳೆದರು.

ಕೆ ವಿ ಶ್ರೀನಿವಾಸ ಪ್ರಸಾದ್ 

Wednesday, January 10, 2018

Swamy Deshikar: A brief on Deshikar
Sri Vedanta Desikan (Swami DesikanSwami Vedanta DesikanThoopul Nigamaantha Desikan) (1268–1370) was a Sri Vaishnava guru/philosopher and one of the most brilliant stalwarts of Sri Vaishnavism in the post-Ramanuja period. He was a poet  a devoteephilosopher and master-teacher (desikan). He was the disciple of Kidambi Appullar, also known as Aathreya Ramanujachariar, who himself was of a master-disciple lineage that began with Ramanuja. Swami Vedanta Desika is considered to be avatar (incarnation) of the divine bell  of  Lord Venkateswara of Tirumalai by the Vadakalai sect of Sri Vaishavites.
Vedanta deshika was one of the greatest reformer and literary giant of south India. He was a great poet, devotee and master teacher.He was born in a suburb of Kanchipuram called Thoopul . Ananta Suri was his father and his mother was Totarambha. His original name was Venkatanatha. He was a multi-faceted personality: a polyglot, who was well versed in Sanskrit, Prakritam and Tamil. A great poet who held aloft the banner of Bhagawan Ramanuja and a title of Kavitarkika Simha( A lion among poets)going by the contributions made by him to Hindu Religion And Sri Vaishnava community in particular. He is only next to Ramanuja when it comes to contributing to our community. He laid the foundation stone to Vishistadwaita philosophy which was articulated by Ramanuja.
Vedanta deshika got his education under his scholarly maternal uncle named Kidambi Appullalar, who was a direct disciple of Ramanuja. It was under his able guidance he became a master of all vedas, Divya Prabhandas ,Puranas and Shastras.. The death of Ramanuja split the Ramanuja sampradaya into Vadakalai and Thengalai. Sri Deshikar was Acharya of followers of Vadakalai sect. During the time of Vedanta Deshikar the Tamilnadu was under frequent invasion by foreigners’ and that made him to move to Karnataka and stay in Satyagala  a village at the border between Tamil nadu & Karnataka for 12 years.
Vedanta Deshikar was a very creative writer and composer. He became a great scholar within the age of Twenty, which is unique in the history of Vaishnavism itself. His writings include more than 130 works in both prose and poetry in Sanskrit ,Prakrit and Tamil.
He created history by composing one thousand verses in praise of Paduka (Feet) of Lord Ranganatha, the presiding deity of Srirangam, known as Paduka Sahasram in one night. At the age of 21 he got married to Tirumangai (Kanakavalli) and got a son named Varadarya in 1317 AD, who later became a great scholar and spread the teachings of his father.
Vedanta Deshika became Acharya at the age of 27 years and wrote several works His Yadavabhyudayam  a long poem of 21 cantos ,was recognized as a Maha Kavyam. He also wrote Hamsa Sandesham  modelled on the famous work Meghaduta of Kalidasa .
Vedanta Deshikar is believed to be the incarnation of the Holy bell at Tirumala and is known as Ghantavataram. He is believed to have done penance at Tiruvahindrapuram chanting Garuda mantram and Garuda appeared and taught Hayagreeva Mantram. When Deshikar chanted Hayagreeva Mantram, Lord Hayagreeva appeared and gave an idol of Himself, which is still being worshipped there.
Vedanta Deshikar lived for 102 years & spent most of his time in Srirangam. The place where he lived in Srirangam is even today revered as Deshikan Tirumaligai in Srirangam. His teachings are respected even today. He is a legend of his times in the pages of Sree Vaishnavism.