ನಂಜನಗೂಡು ಒಂದು ಪ್ರಸಿದ್ಧ ಶೈವ ಕ್ಷೇತ್ರ
ನಂಜನಗೂಡು ಮೈಸೂರಿನಿಂದ ೧೨ ಮೈಲಿ ದೂರದಲ್ಲಿದೆ . ಕಪಿಲಾನದಿ ತೀರದಲ್ಲಿರುವ ನಂಜನಗೂಡು ಪ್ರಸಿದ್ಧ ಶೈವ ಕ್ಷೇತ್ರ . ಪುಣ್ಯ ತೀರ್ಥವೂ ಕೂಡ . ಸಗರಕುಮಾರರನ್ನು ದೃಷ್ಟಿ ಮಾತ್ರದಲ್ಲಿ ಭಸ್ಮ ಮಾಡಿದ ಕಪಿಲ ಮುನಿಗಳು ಇಲ್ಲಿ ತಪಸ್ಸನ್ನಾಚರಿಸಿದರೆಂದು ಪ್ರತೀತಿ . ಅಮೃತವನ್ನು ಪಡೆಯಲು ದೇವತೆಗಳು ದಾನವರೂ ಒಂದಾಗಿ ವಾಸುಕಿಯನ್ನು ಹಗ್ಗವನ್ನಾಗಿಸಿ ಮಂದಾರ ಪರ್ವತವನ್ನು ಕಡುಗೋಲಾಗಿಸಿ ಸಾಗರವನ್ನು ಕಡೆಯಲು ಮೊದಲು ವಿಷ ಉತ್ಪತ್ತಿ ಆಯಿತೆಂದು ಭಯಭೀತರಾದ ದೇವತೆಗಳು ತಮ್ಮನ್ನು ವಿಷದಿಂದ ರಕ್ಷಿಸುವಂತೆ ಉಮಾಪತಿಯನ್ನು ಪ್ರಾರ್ಥಿಸಲು ಶಿವನು ವಿಷವನ್ನು ಗಟ ಗಟನೆ ಕುಡಿದನಂತೆ . ಶಿವನ ಸಾಹಸವನ್ನು ಕಂಡು ಭಯಗೊಂಡ ಉಮೆ ಹರಣ ಕಂಠ ವನ್ನು ಬಿಗಿಯಾಗಿ ಹಿಡಿಯಲಾಗಿ ವಿಷ ಕೆಳಗಿಳಿಯದೆ ಕಂಠ ದಲ್ಲೇ ಉಳಿದು ಮೃತ್ಯುಂಜಯನು 'ನೀಲಕಂಠ ' ನಾದನೆಂತು ಪುರಾಣದಲ್ಲಿ ತಿಳಿಸಲಾಗಿದೆ . ತನ್ನಿಮಿತ್ತ ಶಿವನಿಗೆ ನಂಜುಂಡ , ವಿಷಕಂಠ , ಶ್ರೀಕಂಠ ಎಂಬ ಹೆಸರುಗಳು ರೂಢಿಗೆ ಬಂದವು . ನಂಜನಗೂಡಿಗೆ ಗರಳಪುರಿ ಎಂಬ ಹೆಸರೂ ಉಂಟು .
ನಂಜುಂಡೇಶ್ವರ ದೇವಾಲಯ ದ್ರಾವಿಡ ಶೈಲಿಯಲ್ಲಿ ಕಟ್ಟಲ್ಪಟ್ಟಿದ್ದರೂ ಅಲ್ಲಲ್ಲಿ ಹೊಯ್ಸಳರ ಚೋಳರ ಪ್ರಭಾವವೂ ಕಾಣುತ್ತದೆ . ದೇವಾಲಯ ವಿಸ್ತಾರವಾಗಿದ್ದು ಮುಖ್ಯ ಗೋಪುರ ಸುಮಾರು ೧೦೦ ಅಡಿ ಎತ್ತರವಿದ್ದು ಆಕರ್ಷಕವಾಗಿದೆ . ಗೋಪುರದಲ್ಲಿ ನೂರಾರು ಗೊಂಬೆಗಳನ್ನು ಬಿಡಿಸಲಾಗಿದೆ . ಮೂಲಗುಡಿಯ ಸ್ಥಾಪನೆ ಎಂದಾಯಿತೆಂಬುದು ತಿಳಿಯದು . ೧೪೭ ಕಂಭಗಳ ಮುಂದಿನ ಮಂಟಪ ವನ್ನು ಕರಾಚೂರಿನ ನಂದಿರಾಜ ಮತ್ತು ಮೈಸೂರಿನ ದಿವಾನ್ ಪೂರ್ಣಯ್ಯ ನವರು ಕಾಲಕ್ರಮದಲ್ಲಿ ವಿಸ್ತರಿಸಿದರೆಂದು ತಿಳಿದುಬರುತ್ತದೆ . ಮುಖ್ಯ ಗೋಪುರವನ್ನು ೧೮೪ ೫ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು ಕಟ್ಟಿಸಿದುದಾಗಿ ಶಾಸನದಿಂದ ತಿಳಿಯುತ್ತದೆ . ಆಲಯದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರ ಹಾಗೂ ಅವರ ಪತ್ನಿಯರ ಪ್ರತಿಮೆಗಳು ಇಂದಿಗೂ ಪುರಸ್ಕಾರ ಪಡೆಯುತ್ತಿವೆ . ಪ್ರಾಕಾರದಲ್ಲಿ ೬೩ಮಂದಿ ಶಿವಭಕ್ತರ ಶೀಲಾ ಮೂರ್ತಿಗಳು ಮತ್ತು ಲೋಹದ ಮೂರ್ತಿಗಳು ಸ್ಥಾಪಿಸಲ್ಪಟ್ಟಿವೆ . ಎಲ್ಲ ೬೩ ಮಂದಿ ಶಿವಭಕ್ತರ ಪ್ರತಿಮೆ ಹೊಂದಿರುವ ಏಕೈಕ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ . ಆಲಯದ ಪಶ್ಚಿಮದಲ್ಲಿ ಅನೇಕ ಶಿವಲಿಂಗಗಳಿವೆ . ಲಿಂಗದ ಪೀಠದಲ್ಲಿ ಅವುಗಳನ್ನು ಸ್ಥಾಪಿಸಿದ ರಾಣಿಯರ ಹೆಸರುಗಳು ಇವೆ . ಆ ಲಿಂಗಗಳನ್ನು ಆಯಾ ಹೆಸರಿನಲ್ಲಿ ಕರೆಯುಲಾಗುತ್ತದೆ . ಉತ್ತರದಲ್ಲಿ ಶಿವ ಲೀಲಾತ್ಮಕವಾದ ೨೫ ಬೃಹತ್ ವಿಗ್ರಹಗಳಿವೆ . ಏಕಪಾದ ಮೂರ್ತಿ ,ಗಿರಿಜಾಕಲ್ಯಾಣ , ತ್ರಿಪುರಾಸುರ ಸಂಹಾರ , ಮಾರ್ಕಂಡೇಯ ವರದ , ಅರ್ಧನಾರೀಶ್ವರ ಮುಂತಾದವು ಪ್ರಸಿದ್ಧವಾದವು . ಮೂರ್ತಿಗಳು ಸೂಕ್ಷ್ಮವಾಗಿ ಕೆತ್ತಲ್ಪಟ್ಟಿವೆ . ನವರಂಗ ಮಂಟಪದಲ್ಲಿ ಎಡದಲ್ಲಿ ಸತ್ಯನಾರಾಯಣನ ಅಥವಾ ಆದಿಕೇಶವ ಮೂರ್ತಿಯ ಗುಡಿಯಿದೆ . ಗುಡಿಯಲ್ಲಿ ರಾಮಾನುಜಾಚಾರ್ಯರ ನಮ್ಮಾಳ್ವಾರರ ಪ್ರತಿಷ್ಠಿತ ಶಿಲಾ ಮೂರ್ತಿಗಳಿರುವುದು ವೈಶಿಷ್ಟ್ಯ . ಶೈವಾಗಮ ಅನ್ವಯ ಪೂಜೆ ನಡೆಯುವ ದೇವಾಲಯಗಳಲ್ಲಿ ವಿಷ್ಣು ಮೂರ್ತಿ ಇರುವುದು ಪದ್ಧತಿ . ನವರಂಗದ ಬಲಭಾಗದಲ್ಲಿ ದಂಡಾಯುಧಪಾಣಿ ಷಣ್ಮುಖನ ಗುಡಿಯಿದೆ . ಸಪ್ತಹೆಡೆಯ ಸರ್ಪದ ಸುರಳಿಯ ಮೇಲೆ ಸುಬ್ರಹ್ಮಣ್ಯ ನಿಂತಿದ್ದಾನೆ . ಪೀಠದಲ್ಲಿ ನಾಲ್ಕು ಮಂದಿ ಮುನಿಗಳ ಚಿತ್ರಣವಿದೆ . ಮೂರ್ತಿ ಮನಮೋಹಕವಾಗಿದೆ . ಆಲಯದಲ್ಲಿರುವ ರುದ್ರಾಕ್ಷಿ ಮಂಟಪ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರ ಪತ್ನಿ ಲಿಂಗಾಜಮ್ಮಣ್ಣಿ ಕಟ್ಟಿಸಿದುದು . ಪ್ರಾಕಾರದಲ್ಲಿ ಪಾರ್ವತಿ ದೇವಿಯ ಗುಡಿ ಇದೆ . ದೇವಿಯ ಎಡಭಾಗದಲ್ಲಿ ಪಚ್ಚೆ ಲಿಂಗವಿದೆ ಇದು ಟೀಪೂ ವಿನ ಕೊಡುಗೆಯೆಂದು ತಿಳಿಯುತ್ತದೆ .
ದೇವಾಲಯಗಳ ಪರಮ ವೈರಿ ಟಿಪೂವಿಗೆ ನಂಜುಂಡೇಶ್ವರನಲ್ಲಿ ಅಪಾರ ಭಕ್ತಿ . ಇದಕ್ಕೆ ಕಾರಣವಿಲ್ಲದಿಲ್ಲ . ಟಿಪೂವಿನ ಪ್ರೀತಿಯ ಆನೆಯೊಂದು ಒಮ್ಮೆ ಕಣ್ಣಿನ ಬೇನೆಯೊಂದಕ್ಕೆ ಗುರಿಯಾಯಿತು . ದಿನಕಳೆದಂತೆ ವ್ಯಾಧಿ ಉಲ್ಭಣ ವಾಗತೊಡಗಿತು . ಆನೆ ಆಹಾರ ತ್ಯಜಿಸಿತು . ಅನೇಕ ವಿಖ್ಯಾತ ವೈದ್ಯರುಗಳು ಉಪಚಾರ ಮಾಡಿದರೂ ಪ್ರಯೋಜನವಾಗಲಿಲ್ಲ . ಟಿಪೂ ಕಂಗಾಲಾದ . ಆತನ ಕೆಲವು ಹಿತ ಚಿಂತಕರು ನಂಜುಂಡನ ಆಲಯದಲ್ಲಿ ವಿಶೇಷ ಪೂಜೆಮಾಡುವಂತೆ ಸಲಹೆ ನೀಡಿದರು . ಟೀಪೂ ಸಿಡಿದೆದ್ದ . ಆನೆ ಗುಣವಾಗದಿದ್ದರೆ ಇಡೀ ದೇವಾಲಯವನ್ನು ಧ್ವಂಸ ಮಾಡುವುದಾಗಿ ಎಚ್ಚರಿಸಿದ . ಅದರಂತೆ ದೇವಾಲಯದಲ್ಲಿ ೪೮ ದಿನಗಳು ದೇವರಿಗೆ ವಿಶೇಷ ಪೂಜೆಗಳು ನಡೆದವು . ಆನೆ ಗುಣಮುಖ ಆಗತೊಡಗಿತು . ಟೀಪೂ ಸುಪ್ರೀತನಾದ . ನಂಜುಂಡನ ಭಕ್ತನಾದ . ಅಮೂಲ್ಯವಾದ ಪಚ್ಚೆಯ ಕಂಕೀಹಾರ ವನ್ನು ದಾನವಾಗಿ ನೀಡಿದ . ಅಂದಿನಿಂದ ನಂಜುಂಡ 'ಹಕೀಮ್ ನಂಜುಂಡ ' ನೆಂದು ಪ್ರಸಿದ್ಧನಾದ . ಆಲಯದಲ್ಲಿ ಆಭರಣಗಳಿಗೆ ಕೊರತೆಯಿಲ್ಲ . ಸ್ವರ್ಣದ ಜಡೇ ಬಂಗಾರ , ಕುಚ್ಚು , ಕಿರೀಟಗಳು ರತ್ನಮಯವಾದ ಶ್ರೀಕಂಠ ಮುಡಿ , ಸ್ವರ್ಣದ ಸರ್ಪವಾಹನ ಮುಂತಾದ ಅಮೂಲ್ಯ ಆಭರಣಗಳು ಆಲಯದಲ್ಲಿವೆ . ಅನೇಕವು ಕೃಷ್ಣರಾಜ ಒಡೆಯರ್ ರವರ ಕೊಡುಗೆಗಳು .
ಇಲ್ಲಿಯ ಬ್ರಹ್ಮೋತ್ಸವ ವಿಶಿಷ್ಟವಾದುದು . ರಥೋತ್ಸವದಲ್ಲಿ ಪಂಚ ರಥಗಳು ಭಾಗವಹಿಸುತ್ತವೆ . ಕ್ರಮವಾಗಿ ಶಿವ , ಉಮೆ ,ವಿನಾಯಕ , ಸುಬ್ರಹ್ಮಣ್ಯ , ಚಂಡಿಕೇಶ್ವರ ರ ಪಂಚ ರಥಗಳು ಪಾಲ್ಗೊಳ್ಳುತ್ತವೆ . ಗಜ ರಥ ಆನೆಯಿಂದ ಎಳೆಯಲ್ಪಡುತ್ತದೆ. ಉಳಿದವು ಕಿರಿಯ ರಥಗಳು . ಅವುಗಳಲ್ಲಿ ಒಂದು ರಜತ ರಥ ಕೂಡ . ಬೃಹದ್ ರಥ ಕೃಷ್ಣರಾಜ ಒಡೆಯರ್ ರವರ ಕೊಡುಗೆ .
ನಂಜನಗೂಡು ಪರಶುರಾಮನಿಗೆ ಈಶ್ವರನು ಪ್ರತ್ಯಕ್ಷನಾದ ಕ್ಷೇತ್ರ . ಗುಂಡಲು ಮತ್ತು ಚೂರ್ಣಾವತಿ ನದಿಗಳು ಸಂಧಿಸುವ ಸ್ಥಳದಲ್ಲಿ ನಂಜುಂಡನ ಆಲಯದಿಂದ ಅನತಿ ದೂರದಲ್ಲಿಯೇ ಪರಶುರಾಮ ಕ್ಷೇತ್ರವಿದೆ . ಇಲ್ಲಿ ಪರಶುರಾಮನ ಆಲಯವಿದೆ . ಈ ಕ್ಷೇತ್ರದ ಮಣ್ಣು ಅನೇಕ ಚರ್ಮ ರೋಗಗಳಿಗೆ ಉತ್ತಮ ಮದ್ದು . ಅದಕ್ಕೆಂದೇ ಭಕ್ತರು ಇಲ್ಲಿಯ ಮಣ್ಣನ್ನು ಕೊಂಡೊಯ್ಯುತ್ತಾರೆ .
ದೇವಾಲಯದ ಮಹಿಮೆಯನ್ನು ಒಂದು ಕಲ್ಲಿನ ಮೇಲೆ ಕೆತ್ತಲಾಗಿದೆ . ಸ್ಥಳ ಪುರಾಣದ ಅನ್ವಯ ಪರಶುರಾಮ ಕ್ಷೇತ್ರ ಸಂದರ್ಶನವಲ್ಲದೆ ನಂಜುಂಡನ ದರ್ಶನ ಫಲ ದೊರಕದು . ಆಲಯದಲ್ಲಿ ಒಂದು ರಜತ ವೀರಾಂಗಿಯಿದೆ . ಇದರ ಮೇಲೆ ಪರಶುರಾಮನ ಪರಶು ಹಿಡಿದ ಚಿತ್ರವಿದೆ . ಈ ವೀರಾಂಗಿ ೧೮೬೧ ರಲ್ಲಿ ಕೊಡಲ್ಪಟ್ಟಿತೆಂದು ತಿಳಿಯುತ್ತದೆ .
ನಂಜನಗೂಡಿನಲ್ಲಿ ರಾಘವೇಂದ್ರ ಸ್ವಾಮಿಗಳ ಮಠವಿದೆ . ಈ ಮಠವನ್ನು ರಾಘವೇಂದ್ರ ತೀರ್ಥ ಸ್ವಾಮಿಗಳು ಸ್ಥಾಪಿಸಿದರೆಂದು ತಿಳಿಯುತ್ತದೆ . ಮಠದಲ್ಲಿ ಅಮೂಲ್ಯ ಗ್ರಂಥಗಳ ಸಂಗ್ರಹಾಗಾರವಿದೆ .
ಈ ವರ್ಷ ಮಾರ್ಚ್ ೨೫ರಂದು ಶ್ರೀಕಂಠ ಮುಡಿ ಉತ್ಸವವೂ ೨೮ರಂದು ಪಂಚ ಮಹಾ ರಥೋತ್ಸವವೂ ನಡೆಯಲಿದೆ .
ಶ್ರೀನಿವಾಸ ಪ್ರಸಾದ್ .ಕೆ ವಿ

No comments:
Post a Comment