ಸ್ವಾಗತವು ಪೌತ್ರನಿಗೆ
ಶ್ರೀವತ್ಸ ಗೋತ್ರೋದ್ಭವಸ್ಯ ಪ್ರದೀಪಕುಮಾರಸ್ಯ ಪುತ್ರ ;
ಶ್ರೀವತ್ಸ ಗೋತ್ರೋದ್ಭವಸ್ಯ ಶ್ರೀನಿವಾಸ ಪ್ರಸಾದಸ್ಯ ಪೌತ್ರ :
ಶ್ರೀವತ್ಸ ಗೋತ್ರೋದ್ಭವಸ್ಯ ವರದರಾಜ ಅಯ್ಯಂಗಾರ್ಯಸ್ಯ ಪ್ರಪೌತ್ರ :
ಸ್ವಾತಿ ನಕ್ಷತ್ರೇ ಜಾತಾಯಾ :ಶ್ರೀವಾಸವರದ ಶರ್ಮ: ಚಿರಂಜೀವ
ಜನಿಸಿದೆ ಅಧಿಕ ಜ್ಯೇಷ್ಠ ಶುಕ್ಲ
ತ್ರಯೋದಶಿ ಸ್ವಾತಿ ನಕ್ಶತ್ರದೆ
ಶುಭ ನರಸಿಂಹ ಜಯಂತಿಯಂದು
ಭಾನುವಾರ ಸಂಜೆ ೩. ೩೪ ರ ವೇಳೆ
ಗಗನ ಮೋಡದಿ ತುಂಬಿರಲು
ಹನಿ ತುಂತುರು ಭೂಮಿಯನು
ಸಿಂಚಿಸಲು ,ತಂಪಾದ ಗಾಳಿ ಬೀಸಲು
ಮೊಳಗಿತು ನಿನ್ನಯ ಅಳು ದನಿಯು
ಸ್ವಾಗತವು ನಿನಗೆ ನನ್ನ ಪ್ರೀತಿಯ
ಮೊಮ್ಮಗನಿಗೆ ನನ್ನ ಒಲವಿನ
ಕುಮಾರ ಪ್ರದೀಪನ ಸೀಮಂತಸುತನಿಗೆ
ಸೊಸೆ ರಾಜಶ್ರೀಯ ತನುಜಾತನಿಗೆ
ಸಂತಸ ನಲಿದಾಡಿರಲು ಅಂಗಳದಿ
ಮಡದಿ ವಸಂತ ಕಲಳ ಮೊಗದಲಿ
ಮಗಳು ಹೇಮಾ ಅತ್ತೆಯಾಗಿರಲು
ಮೊಮ್ಮಗಳು ದಿಯಾಗೆ ಜೊತೆಯಾಗಿ
ಮೂಡಿದೆ ಸಂತಸದ ಉದಯವು
ಎರಡು ಕುಟುಂಬದಲಿ ಅನುಕಾಲ
ರಾಘವ ನೀರಜರ ಪೌತ್ರ ನೆನಿಸಲು
ನಡಾದೂರ್ ವಸಂತ ಪ್ರಸಾದರಪೌತ್ರ
ನೂರ್ಕಾಲ ಬಾಳು ಸಂತಸದಿ ಕ್ಷೇಮದಿ
ಗಳಿಸು ಉನ್ನತ ವಿದ್ಯೆಯ ಉದ್ಯೋಗವ
ಬಾಳು ಗುಣ ಸಂಪನ್ನನೆನಿಸಿ ಜನರಲಿ
ಒಡೆಯ ಶ್ರೀಕಾಂತನ ಪ್ರೀತಿಗೆ ಪಾತ್ರನಾಗಿ
.... ರಚನೆ ಕೆ ವಿ ಶ್ರೀನಿವಾಸ ಪ್ರಸಾದ್
No comments:
Post a Comment