ಅಭಯಪ್ರದಾನಸಾರ =ವೇದಾಂತ ದೇಶಿಕರ ಮೇರು ಕೃತಿ
ಶ್ರೀಮದ್ರಾಮಾಯಣವು ವೇದಕ್ಕೆ ಸಮಾನ. ಇದರಲ್ಲಿ ವಿಭೀಷಣ ಶರಣಾಗತಿ ಎಂಬ ಘಟ್ಟವು ಉಪನಿಷತ್ತೆಂದು ಪ್ರಸಿದ್ಧವಾಗಿದೆ . ಈ ಭಾಗಲ್ಲಿರುವ ಶರಣಾಗತಿಯ ಮಹತ್ವವನ್ನು ಮೆಚ್ಚಿದ ದೇಶಿಕರು ಈ ತತ್ವವನ್ನು ಬಹಳ ಸುಂದರವಾಗಿ ಅಭಯಪ್ರದಾನಸಾರದಲ್ಲಿ ವಿವರಿಸಿದ್ದಾರೆ . ಆರಂಭದಲ್ಲಿ ಶ್ರೀ ರಾಮನಿಗೆ ಮಂಗಳಾಶಾಸನ ಮಾಡಿ ನಂತರ ರಂಗನಾಥನಿಗೆ ಮಂಗಳಾಶಾಸನ ಮಾಡಿದ್ದಾರೆ. ಭಗವಂತನಲ್ಲಿ ಶರಣಾಗುವುದರಿಂದ ಅಭಯ ದೊರಕುವುದೆಂದೂ ನಂತರ ಮೋಕ್ಷ ಪ್ರಾಪ್ತಿಯಾಗುವುದೆಂದು ಸುಂದರವಾಗಿ ವರ್ಣಿಸಿದ್ದಾರೆ . ಇದಕ್ಕೆ ಉದಾಹರಣೆಯಾಗಿ ಅಹಲ್ಯಾ ಶಾಪ ವಿಮೋಚನೆ ಕಾಕಾಸುರ ನಿಗ್ರಹ ಮುಂತಾದ ಉದಾಹರಣೆಗಳನ್ನು ತಿಳಿಸಿದ್ದಾರೆ. ಹತ್ತು ಅಧಿಕಾರಗಳನ್ನು ಹೊಂದಿರುವ ಈ ಕೃತಿಯು ತಮಿಳಿನಲ್ಲಿದೆ . ರಾಮಾಯಣದ ವಿಭೀಷಣ ಶರಣಾಗತಿಯ ಕಥಾ ಸಂಧರ್ಭವನ್ನು ಆರಿಸಿಕೊಂಡು ಅಭಯ ಪ್ರದಾನಸಾರ ವೆಂಬ ಮಣಿಪ್ರವಾಳ ರಹಸ್ಯ ಗ್ರಂಥವನ್ನು ರಚಿಸಿದ್ದಾರೆ . ಈ ಗ್ರಂಥದಲ್ಲಿ ಶರಣಾಗತಿಯ ವಿದ್ಯೆಯ ಮಹಿಮೆಯನ್ನು , ಪ್ರಪತ್ತಿ ಧರ್ಮದ ರೂಪುರೇಖೆಗಳನ್ನು, ಅಗತ್ಯವನ್ನು ಅನೇಕ ಪ್ರಮಾಣಗಳಿಂದ ಸಮರ್ಥಿಸಿ ಬಹು ಅದ್ಭುತ ರೀತಿಯಲ್ಲಿ ಆಚಾರ್ಯರು ವಿಶದೀಕರಿಸಿದ್ದಾರೆ . ಆದ್ದರಿಂದ ಅಭಯಪ್ರದಾನಸಾರವು ಸರ್ವಾದರಣೀಯ ಗ್ರಂಥವಾಗಿದೆ .
೧೦ ಅಧಿಕಾರಗಳು ಇಂತಿವೆ :
ಪ್ರಬಂಧಾವತಾರ ,ಪರತತ್ವ ನಿರ್ಣಯಾಧಿಕಾರ,ಶರಣಾಗತಿ ತಾತ್ಪರ್ಯ ಪ್ರಪಂಚಾಧಿಕಾರ , ಪ್ರಕರಣ ತಾತ್ಪರ್ಯ ನಿರ್ಣಯಾಧಿಕಾರ , ಶರಣ್ಯಶೀಲ ಪ್ರಕಾಶಾಧಿಕಾರ , ಶರಣ್ಯ ವೈಭವ ಪ್ರಕಾಶಾಧಿಕಾರ , ಪರಧರ್ಮ ನಿರ್ಣಯಾಧಿಕಾರ , ಶರಣ್ಯ ವ್ರತ ವಿಶೇಷ ಪ್ರಕಾಶಾಧಿಕಾರ , ಶರಣ್ಯ ಶರಣಾಗತ ಸಂಗಮ ಲಾಭಾಧಿಕಾರ ಪ್ರಾಪ್ತಿ ಪ್ರಕಾರ ಪ್ರಪಂಚಾಧಿಕಾರ ಎಂಬುದಾಗಿ ಹತ್ತು ಅಧಿಕಾರಗಳಿವೆ .
No comments:
Post a Comment