Tuesday, February 22, 2011

ಕರಮುಗಿವೆ ಕರವೀರಪುರವಾಸಿ ಲಕ್ಷ್ಮಿಕಾಂತನೆ

ವ್ಯಾಸ ಭಾರತದ ಜನಮೇಜಯನು ಅಡವಿಯಲಿ
ಸಂಚರಿಸುತಿರಲು ಕಂಡೆ ನೀನು ಬಿದಿರಿನ ಮೇಳೆಯಲಿ
ಮೆಚ್ಚಿ   ನಿನ್ನ ಸೊಬಗನು ಕಟ್ಟಿದನು ಆಲಯವನಂದು
ಕರಮುಗಿವೆ ಕರವೀರಪುರವಾಸಿ ಲಕ್ಷ್ಮಿಕಾಂತನೆ
 
ಕಾಲಕ್ರಮದಲಿ  ವಿಸ್ತರಿಸಿದರು ಆಲಯವ ಒಂದಾಗಿ
ಬ್ರಿಹದಾಕಾರದಲಿ ಆವರಣದಲಿ ಅರವಿಂದನಾಯಕಿ
ದ್ವಾದಶ   ಆಳ್ವಾರರ   ದೇಶಿಕ ಜೀಯರ್ ರರ   ಮೂರ್ತಿಇರಿಸಿ
ಕರಮುಗಿವೆ ಕರವೀರಪುರವಾಸಿ ಲಕ್ಷ್ಮಿಕಾಂತನೆ
ಕರೆದರು  ವೆಣುಪುರಿ ಕಳಲೆ ಕಪಿಲಾಶ್ರಮ ವೆಂದು
ಸಂದರ್ಶಿಸಿದರು ಮೈಸೂರಿನ ಯದುವಂಶದರಸರು
ಮೈಸೂರಿನಹುಲಿ ಟೀಪೂ ನೀಡಿದನು ಸ್ವರ್ಣಪಾತ್ರೆಗಳ
ಕರಮುಗಿವೆ ವೇಣು ಪುರಾಧೀಶ  ಲಕ್ಷ್ಮೀ ವಲ್ಲಭನೆ
ನಿನಗೆ ವರ್ಶೋತ್ಸವವು ಮೀನಮಾಸದಲಿ ಸೇರುವರು
ಜನಜಾತ್ರೆ ಹಳ್ಳಿ ಹಳ್ಳಿಗಳಿಂದ   ನಗರ ನಗರಗಳಿಂದ
ಉದಯದಲಿ ಏರುವೆ ತೇರು ಸಂಜೆ ಪುಷ್ಪ ವ್ಯಾಳಿಯಲಿ
ನಡೆವುದು ತೇರಡಿ ಉತ್ಸವ ರಾತ್ರಿಇಡೀ ನಾದ ತರಂಗದಿ
ತಂದೆ ನೀ ಕರುಣಿಸುತಿರುವೆ ಭಕ್ತಜನರ ಅಭೀಷ್ಟವ
ನಿವಾರಿಸುತ ಮಕ್ಕಳ ನೋವುರುಜಿನಗಳ ಅಭಯದಿ
ನೀಡುತ ಸಿರಿ ವ್ರಿಷ್ಟಿಯ ಮಾತೆ ಅರವಿಂದನಾಯಕಿಯಕೂಡಿ
ನಿನಗಿದೋ ಮನದಾಳದ ನಮನ ವೆಣುಪುರಿ ಲಕ್ಷ್ಮಿಕಾಂತ

ರಚನೆ: ಕೆ.ವಿ ಶ್ರೀನಿವಾಸ ಪ್ರಸಾದ
ಮೊಬ: ೯೮೪೪೨ ೭೬೨೧೬
ಇ -ಮೇಲ್:
sreenivasaprasad.kv@gmail.com

 

Wednesday, February 16, 2011

Mother is the first god ತಾಯಲ್ಲವೆ ಮೊದಲ ದೈವ ಬಾಳ ಪಯಣದಲಿ

goddess Aravindanayaki amma at Kalale
ಬೆಚ್ಚನೆ ಮಲಗಿದ್ದೆ ತಾಯಗರ್ಭದಲಿ ನವಮಾಸ
ಹೊರಬಂದೊಡನೆ ಚೀರಿದೆ ಅಮ್ಮಾ ಎಂದು
ಅರಿಯದೆ ಹಸಿವೆಂದು , ನೀಡಿದಳು ಹಾಲಜೇನು
ತಾಯಲ್ಲವೆ ಮೊದಲ ದೈವ ಬಾಳ ಪಯಣದಲಿ
 
ಅಡಿಯಿಡಲು ಮೊದಲ ಹೆಜ್ಜೆ, ನಡೆಸಿದಳು ಕೈ ಹಿಡಿದು
ಚೀರಿದಳು ನಾ ಜಾರಿ ಕೆಳಗುರುಳಿ ಘಾಸಿಯಾಗಳು
ಸಂತೈಸಿದಳು ಬಳಿಯಿದ್ದು , ಕಲಿಸಿದಳು ನಡೆವ ಹಾದಿಯನು
ತಾಯಲ್ಲವೆ ಮೊದಲ ದೈವ ಬಾಳ ಪಯಣದಲಿ
 
ಕಲಿಸಿದಳು ಅಕ್ಷರವ ಬೋಧಿಸುತ ಸತತ ಸನ್ನಡತೆಯ
ರೂಪಿಸಿದಳು ಜೀವನವ ಎದಿರಿಸುವ ಕಲೆಯಲ್ಲಿ
ಹಿಗ್ಗಿದಳು ನಾ ಪಡೆದ ಮೊದಲ ಪದವಿಯ ಸಂಭ್ರಮದಲಿ
ತಾಯಲ್ಲವೆ ಮೊದಲ ದೈವ ಬಾಳ ಪಯಣದಲಿ
 
ಅರಳಿದೆನು ಕಲಿತ ವಿದ್ಯೆಯ ಕಂಪನು ಪಸರಿಸುತ
ಗಳಿಸಿದೆನು ಸಂಪದವ ನೆನೆಯುತಾ ತಾಯ ಹಿತನುಡಿಯ
ಪಡೆದೆನು ಒಲವಿನ ಸತಿಯ ಮರೆಯದಲೆ  ತಾಯ ಸಿಹಿಮುತ್ತ
ತಾಯಲ್ಲವೆ ಮೊದಲ ದೈವ ಬಾಳ ಪಯಣದಲಿ
 
ಅರಳಿಹವು ಹೂವೆರಡು ಹೇಮದೀಪಗಲೆಂದು   
ನುಡಿಯುತಿರುವೆ ಹಿತನುಡಿಯ ಮರೆಯದಿರಿ ತಾಯಿಯ
ಕೊನೆತನಕ ನಿಮ್ಮೊಲುಮೆಯ ಜೇನಹಾಲನುನಿಸುತ 
ತಾಯಲ್ಲವೆ ಮೊದಲ ದೈವ ಬಾಳ ಪಯಣದಲಿ
 

ರಚನೆ: ಕೆ.ವಿ ಶ್ರೀನಿವಾಸ ಪ್ರಸಾದ್  
Mob:9844276216
Please send your comments to:
E-Mail;sreenivasaprasad.kv@gmail.com
 

Monday, February 14, 2011

ಶುಭಾಶಯ ಪ್ರೀತಿಯ ಕುಮಾರನಿಗೆ


with my loved son in flight to singapore

ಶುಭಾಶಯ ಪ್ರೀತಿಯ ಕುಮಾರನಿಗೆ
ಇಪ್ಪತ್ತೈದು ತುಂಬಿರುವ ಶುಭ ದಿನದಲ್ಲಿ
ಬಾಳು ನೂರ್ಕಾಲ ಸಂತಸದಿ ಸುಖದಲಿ
ಹರಸುತಿಹೆನು ನಿನ್ನೊಲುಮೆಯ ತಂದೆ 


ಜೀವನವು ಒಂದು ದೀರ್ಘಪಯಣ
ಬರುವುದದರಲಿ ಹಲವಾರು ತೊಡರುಗಳು
ಎದುರಿಸು ಧೃತಿಗೆಡದೆ ನೆನೆಯುತ ದೇವರನು
ಹರಸುತಿಹೆನು ನಿನ್ನೊಲುಮೆಯ ತಂದೆ

 ಮರೆಯದಿರೆಂದೆಂದು ತಂದೆತಾಯಿಯರನು
ಪ್ರೀತಿಯೆರೆದ ಹಿರಿಯಕ್ಕ ಹೇಮಳನು
ಸನ್ನಡತೆಯ ಮೈಗೂಡಿಸಿ ಉಪಕರಿಸು ಆರ್ತರನು
ಹರಸುತಿಹೆನು ನಿನ್ನೊಲುಮೆಯ ತಂದೆ 


ಗಳಿಕೆಯನು ವಿನಿಯೋಗಿಸು ಸತ್ಕಾರ್ಯಕೆಬೇಡವದು ಎಂದೆಂದೂ ದುರ್ಮಾರ್ಗಕೆ
ಅನುಭವಿಸು ಅದನು ದೀನರಲಿ ಹಂಚುತಲಿ
ಹರಸುತಿಹೆನು ನಿನ್ನೊಲುಮೆಯ ತಂದೆ 


ಬರಲಿ ಮನವರಿತು ನಡೆಯುವ ಸರಿಸತಿಯು
ಕೀರ್ತಿಯನು ತರುವ ಸುತಸುತೆಯರೆರಡು
ಮೂಡಿರಲಿ ಹರುಷ ಬಾಳಿನುದ್ದಕು, ಮರೆಯದಿರು
ಜಗವು ದೇವನದು ಬರಿಯ  ಬಾಡಿಗೆಗಿರುವೆವು ನಾವು 


ನೀಡುವವನು ಅವನು ಸೇವಿಸು ಅವನದೆಂದು
ತ್ರಿಪ್ತಿಯಿರಲಿ ಗಳಿಕೆಯಲಿ, ಸಂತಸದಲಿ
ಬಯಸದಿರು ಪರರ ವಸ್ತುವನು, ಸಿರಿಯನು
ಹರಸುವೆನು ನೂರ್ಕಾಲ ಬಾಳು ಸಂತಸದೆಂದೆಂದು


ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್ 
Mob:9844276216
E-Mal:sreenivasaprasad.kv@gmal.com


 

Friday, February 11, 2011

ವರಮಹಾಲಕ್ಷ್ಮಿವ್ರತದ ನೆನಪಿಗಾಗಿ

ವರಮಹಾಲಕ್ಷ್ಮಿವ್ರತದ   ನೆನಪಿಗಾಗಿ  

ಜಗದೊಡೆಯ ಶ್ರೀನಿವಾಸನ ಪ್ರೇಯಸಿಯೇ
ಅವನ ವಕ್ಷಸ್ಥಳದಲಿ ನೆಲೆಸಿರುವ ಪದ್ಮಾವತಿಯೇ
ಕರಗಳಲಿ ಕಮಲವ ಹಿಡಿದ ಕಮಲಾಸನೆಯೇ
ಕಮಲೋದ್ಬ್ಹವೇ ಮಹಾಲಕ್ಷ್ಮಿಯೆ ನಿನಗೆ ನಮನ

ಹಾಲ್ಕಡಲ ಕಡೆಯುವಾಗ ಚಂದ್ರನೊಡನೆ ಜನಿಸಿ
ಚಂದ್ರ ಸಹೋದರಿಯೆನಿಸಿದ ಪದ್ಮನಾಭಪ್ರಿಯೇ
ಚಂದ್ರಮುಖಿ ಚತುರ್ಭುಜೆ ಇಂದುಶೀತಲೇ
ಕಮಲೋದ್ಬ್ಹವೇ ಮಹಾಲಕ್ಷ್ಮಿಯೆ ನಿನಗೆ ನಮನ

ಭೂಸಂಜಾತೆಯಾಗಿ ಜನಕಸುತೆಯೆನಿಸಿ
ವರಿಸಿ ದಶರಥತನಯನ ಸ್ವಯಮ್ವರದಿ 
ವನದಲಿ ಪತಿಯನನುಸರಿಸಿ ಪಯಣಿಸಿದ
ಸಾಗರತನಯೇ ಸೀತಾಲಕ್ಷ್ಮಿಯೇ ನಿನಗೆ ನಮನ

ಭಜಿಸೆ ಶ್ರದ್ದೆಯಲಿ ಕರುಣಿಸುವೆ ತಾಯೆ
ಸಕಲಸಂಪದವ ನೀಗಿಸಿ ಕಷ್ಟಗಳೆಲ್ಲವ
ಹರಸುವೆ ಸಂತಾನವ ಧನಧಾನ್ಯವ ಅನವರತ
ಸರಸಿಜೆ ವರಲಕ್ಷ್ಮಿಯೇ ನಿನಗೆ ನಮನ

ದಿವ್ಯನಾಮಸ್ಮರನೆಯಲಿ ನೀಗುವುದು ದರಿದ್ರ
ಆಗಮಿಸುವುದು ಅಖಂಧಸಂಪದವು
ಲಭಿಸುವುದು  ಸರಸಿಜಾಕ್ಷನ  ಕರುಣೆ
ತಾಯೆ ವಸುಪ್ರದೆ ವಾಸವಿಯೇ ನಿನಗೆ ನಮನ

ರಚನೆ   : ಕೆ.ವಿ. ಶ್ರೀನಿವಾಸ ಪ್ರಸಾ
ದ್
೧ಎ,ಡೀ ಎನ್ಕ್ಲೇವ್    ,  ಮಾರುತಿನಗರ,
ಸಹಕಾರನಗರ ಅಂಚೆ, ಬೆಂಗಳೂರು-೯೨
ಫೋ: 9844276216






Thursday, February 10, 2011

ಆಗುವನು ಉತ್ತಮ ಸ್ನೇಹಿತನು
ಸನ್ಮಾರ್ಗವ,ಸನ್ನಡತೆಯ ತಿಳಿಸುವವನು
ಬಯಸುವವನೆಂದಿಗು ಉನ್ನತಿಯ
ಹಂಚಿ ಹರಸುವನು ಸಿರಿ ವೇದನೆಯ

ಜಗತ್ತಿಗೆ ಬೆಳಕು ಆಮ್ಲವ ನೀಡಿ
ದಾಹವನು ಅಡಗಿಸಲು ನೀರ ನೀಡಿ
ಆರೋಗ್ಯ ತುಂಬಿಸಲು ಶಕ್ತಿ ಕಿರಣವ ನೀಡಿ
ಹರಸುವ ಆದಿತ್ಯನೇ ಆದಿಮಿತ್ರನು

ಬಾಲ್ಯದಲಿ ಹಾಲ ಕುಡಿಸಿ ಕಲಿಸಿ ಹೆಜ್ಜೆಯ
ತೋರುತಲಿ ಮಾರ್ಗವ, ಪೋಷಿಸಿ  ಉದರವ
ವೇದನೆಯಲಿ ಮರುಗಿ ಸಂತಸದಿ ನಲಿಯುವ
ತಾಯಿಯೇ ದಿನದಾದಿಯ ಮೊದಲ ಸ್ನೇಹಿತೆಯು

ಕಲಿಸಿ ಉತ್ತಮ ವಿದ್ಯೆಯ, ನೀಡಿ ಸುಜ್ಞಾನವ
ಬಾಳಿನ ಹಾದಿಯಲಿ ಜ್ಯೋತಿಯ ಬೆಳಗಿಸಿ
ನೋವುನಲಿವಿನಲಿ ತನ್ನದೆಲ್ಲವ ನೀಡಿ
ನಡೆಸುವ ತಂದೆಯೇ ಬಾಳಿನ ಸನ್ಮಿತ್ರನು

ಇಟ್ಟು ಸಪ್ತಪದಿಯ ಬಯಸಿ ಗೆಳೆತನವ
ಜೀವದಂತ್ಯದವರೆಗೂ ಒಂದಾಗಿ ಬಾಳುವ
ಸತಿಗೆ ಪತಿ ಗೆಳೆಯ ಪತಿಗೆ ಸತಿ ಸಖಿಯು
ಸ್ನೇಹವದು ಶಾಶ್ವತವು ಕಲೆತು ಬಾಳ್ವೆ ನಡೆಸೆ

ಮರೆಯದಿರಿ ಬಾಳಿನಲಿ ಸನ್ಮಿತ್ರ ಶ್ರೀಪತಿಯು
ಆಗುವನು ಬಾಳ ಬೆಳಕು ಭಜಿಸೆ ಮನದಾಳದಲಿ
ಕಳೆವನು ಕಷ್ಟಗಳೆಲ್ಲವನು ಅರಿತು ಆರಾಧಿಸಲು
ಬಲಿಗೋಡಿಬಂದು ತೊರೆದು ವೈಕುಂಟವನು 


ರಚನೆ: ಶ್ರೀನಿವಾಸ ಪ್ರಸಾದ್.ಕೆ.ವಿ
ನಂ  ೧ಎ : ಡೀ ಎನ್ಕ್ಲೇವ್ ,ಮಾರುತಿನಗರ,
ಸಹಕಾರನಗರ ಅಂಚೆ
ಬೆಂಗಳೂರು-೯೨
ಫೋನ್: 9844276216  
 

Wednesday, February 9, 2011

ಸುಧರ್ಮಾ ಹುಟ್ಟು ಹಬ್ಬಕ್ಕೆ ಶುಭಾಶಯಗಳು

ಸುಧರ್ಮಾ ಹುಟ್ಟು ಹಬ್ಬಕ್ಕೆ ಶುಭಾಶಯಗಳು    ಮೊಳಗಲಿ ಮೊಳಗಲಿ ಮೊಳಗಲಿ
ಸಂಸ್ಕೃತದ ಕಹಳೆಯು ಅನವರತ  ಮೊಳಗಲಿ

ಸಂಸ್ಕೃತವೇ ತಾಯ್ನುಡಿಯು ಭಾಷೆ ಎಲ್ಲರದು
ಮಗುವಿನ ಮೊದಲ ನುಡಿಯು ಮಾ ಎಂಬುದು
ಮರೆಯದಿರಿ ಸಂಸ್ಕೃತಿಯ ತಳಹದಿಯು ಸಂಸ್ಕೃತವು
ಉಳಿದರೆ ಅದು ಶಾಶ್ವತವು ಭವ್ಯ ಪರಂಪರೆಯು

ಮರೆತರು ಕೆಲವರು ಸಂಸ್ಕೃತವೇ ಜೀವನುಡಿಯೆಂದು
ಗುಡುಗಿದರದು ಮೃತ ಭಾಷೆಯೆಂದು ಅಜ್ಞಾನದಲಿ
ಮನನೊಂದರು ತಂದೆಯಂದು ಪಣತೊಟ್ಟರು
ಪಸರಿಸುವೆ ಸಂಸ್ಕೃತದ ಕಂಪನು ಜೀವನಾಡಿಯೆಂದು

ಮೂಡಿತ್ತಂದು ಭಾವನೆ ಸಂಸ್ಕೃತ ಕಟಿನವೆಂದು
ಪಂಡಿತರ ಭಾಷೆಯದು ಪಾಮರರಿಗಲ್ಲವೆಂದು
ವೇದ ಭಾಷೆ ದ್ವಿಜರ ಪಂಡಿತರ ಮಡಿಭಾಷೆಯೆಂದು
ಅಳಿಸಲಪನಂಬಿಕೆ ಮಾಧ್ಯಮ ಪತ್ರಿಕೆಯೆಂದರು

ತಂದೆತಂದರಾದಿಸಂಚಿಕೆ ಎಪ್ಪತ್ತರದಶಕದಲಿ
ತುಂಬಿಹುದು ನಲವತ್ತಿಂದು ಅನುಜನಂಕಿತದಲಿ
ಹರಸುವೆನು ಆನಂದದಿ ಚಿರಕಾಲ ಇರಲೆಂದು
ಪಸರಿಸುತಾ ಕಂಪನು ದೇಶವಿದೆಶಗಳಲಿ

ಬೇಕು ಸಹಕಾರ ಸರಕಾರ ಅಭಿಮಾನಿಗಳೆಲ್ಲರ
ಉಳಿಸಲು ಚಿರಕಾಲ ಸುಧರ್ಮಾ ಪತ್ರಿಕೆಯನು 
ಧನರೂಪ ಅನುರೂಪ ಲೇಖನರೂಪಗಳಲಿ
ಹರಸಿರಿ ಅನುಕಾಲ ಚಿರಕಾಲ ಜಗದಿ ಬೆಳಗಲೆಂದು


-ರಚನೆ:ಕೆ.ವಿ.ಶ್ರೀನಿವಾಸ ಪ್ರಸಾದ್
 



  



 

Monday, February 7, 2011

ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ನಾವಾಗಿದ್ದೆವು ದಾಸರು ಬ್ರಿಟೀಷರಿಗೆ
ದಶಕ ನಲವತ್ತರ ಪೂರ್ವದಲಿ
ಆಳಿದರು ಅನುಕಂಪವಿಲ್ಲದೆ ಮ್ರಿಗದಂತೆ
ಅಳಿಸಿದರು ಸಹಸ್ರರನು ತೋಪಿನಂಕುಶದೆ

ಪಣತೊಟ್ಟರು ಪೂರ್ವಜರು ಪಡೆವೆವೆಂದು
ವಿಮುಕ್ತಿಯ ದಾಸ್ಯದಿಂದ ಒಡ್ಡಿದರೆದೆಯಂದು
ಗುಂಡಿನಕಾಳಗಡಿ   ಶಾಂತಿಮಂತ್ರವ ಪಟಿಸುತಾ
ಸೋತರಂದು ಬ್ರಿಟಿಶರು ಒಪ್ಪಿಸುತ ಭಾರತವ

ಕಳೆದಿಹೆವು ಆರುದಶಕಗಳ ಸ್ವಾತಂತ್ರದಲಿ
ಅತಂತ್ರರಾಗಿಹೆವು ಅರಿಯದೆ ನಾವೆಲ್ಲಾ ಒಂದೇ
ಕಾದಾಡುತ  ಸೆನೆಸಾಡುತ ಭೂಮಿನೀರಿಗಾಗಿ
ಪದವಿ ಕುರ್ಚಿಗಾಗಿ ಮರೆಯುತ ದೇಶ ಹಿತವ

ಆಗಬೇಕಿದೆ ಭಾರತ ವಿಶ್ವದ ಅಗ್ರಮಾನ್ಯ
ಕಲೆತು ಶ್ರಮಿಸೋಣ ವಿಜ್ಞಾನಿಗಳು ಸುಜ್ಞಾನಿಗಳು
ಬೇಡ ಪರದೇಶ ಮೋಹ ಬೆಳೆಸೋಣ  ದೇಶ
ಮುನ್ನಡೆಸೋಣ ವಿಜ್ಞಾನ ವೈದ್ಯ ತಾಂತ್ರಿಕತೆಯಲಿ

ವ್ಯಯಿಸೋಣ ಸಂಪತ್ತನು ದೇಶದೊಳಿತಿಗಾಗಿ
ಬೇಡ ಸ್ವಾರ್ಥಕ್ಕಾಗಿ ಕುಟುಂಬ ಪೋಷಣೆಗಾಗಿ
ಹರಿಸೋಣ ಪರಿಶ್ರಮ ಮನಸುಗಳನು
ಉಳಿಸಿ ಬೆಳೆಸೋಣ ಸುದ್ರಿಢ  ಭಾರತವ

ಹಾರಾಡಲಿ ಭಾರತ ಧ್ವಜ ವಿಶ್ವದೆಲ್ಲೆಡೆ
ಗೌರವಿಸುವಂತಾಗಲಿ ಭಾರತವನ್ನೆಲೆಡೆ
ಭಾರತೀಯರು ಪುರಸ್ಕ್ರಿತರಾಗಲಿ ವಿಶ್ವದಲಿ
ಜಯಹೇ ಜಯಹೇ ಜಯ ಜಯ ಭಾರತಮಾತೆ

ರಚನೆ: ಕೆ.ವಿ.ಶ್ರೀನಿವಾಸ ಪ್ರಸಾದ್
ನಂ-೧ ಏ ಡೀ ಎನ್ಕ್ಲೇವ್ ,ಮಾರುತಿನಗರ
ಸಹಕಾರನಗರ ಅಂಚೆ, ಬೆಂಗಳೂರು-೯೨
ಫೋನ್ ;9844276216  



 

Sunday, February 6, 2011

ಮುಂಗಾರಿಗಿದೋ ಸುಸ್ವಾಗತ ತರುತ ಹರುಷ

ಮುಂಗಾರಿಗಿದೋ ಸುಸ್ವಾಗತ ತರುತ ಹರುಷ

ಬೇಸಿಗೆಯ ಉರಿಬಿಸಿಲ ಬೇಗೆಯಲಿ
ಕಾದು ಕೆಂಡವಾಗಿಹುದು ಧರೆ ಉರಿದು
ತಾಪದಲಿ ಬೆಂದಿಹರು ಜನತೆ ಮುಗಿಲನೋದುತ
ಮುಂಗಾರಿಗಿದೋ ಸುಸ್ವಾಗತ ತರುತ ಹರುಷ

ಕವಿದಿಹುದು ಕಾರ್ಮೋಡ ಗಗನದಲಿ
ಬೀಸಿಹುದು ಚಂಡಮಾರುತ ದಿಗಂತದಲಿ
ಓಲಾದುತಿಹುದು  ಮರಗಿಡಗಳು ಸಂತಸದಿ
ಮುಂಗಾರಿಗಿದೋ ಸುಸ್ವಾಗತ ತರುತ ಹರುಷ

ತಂಪೀರಲು ಜಿನುಗಿಹುದು  ಮಳೆಹನಿ
ನಲಿದಿರಲು ನೆನೆಯುತ ಮಕ್ಕಳಾದಿಯಾಗಿ
ಕಂಪ ಬೀರುತಿಹುದು ಭುವಿ ತಮ್ಪಪಡೆಯುತ
ಮುಂಗಾರಿಗಿದೋ ಸುಸ್ವಾಗತ ತರುತ ಹರುಷ

ಹಿಡಿದು ನೇಗಿಲ ಭೂಸುತರು   ಧಾವಿಸಿಹರು
ಹದವ ಮಾಡುತ ಮೃತ್ತಿಕೆಯ  ಮಳೆಹನಿಯಲಿ
ವನಿತೆಯರು ನೆಡುತಿಹರು ಹಸಿವ ನೀಗುವ ಸಸಿಯ
ಮುಂಗಾರಿಗಿದೋ ಸುಸ್ವಾಗತ ತರುತ ಹರುಷ

ಓಡಿಹುದು ಕತ್ತಲೆಯ ಕರಿದಿನಗಳು
ತುಂಬಿರಲು ಬಹುತೇಕ ಜಲಾಶಯಗಳು
ಉತ್ಪಾದಿಸುತ ವಿದ್ಯುಚ್ಚಕ್ತಿಯ  ಸಾಮರ್ಥ್ಯಪೂರ್ಣ
ಮುಂಗಾರಿಗಿದೋ ನಲ್ಮೆಯ ಸುಸ್ವಾಗತ

ಬೇಡ ವ್ಯರ್ಥಾಲಾಪ ಚರಂಡಿಗಳು ತುಂಬಿಹವೆಂದು
ಶಪಿಸುತಾ ಮಳೆಹನಿಯ ಬಾರದಿರಲೆಂದು
ಬಹುಜನಹಿತಾಯ ಮುಂಗಾರುಮಳೆಯು ತಿಳಿದು
ಸ್ವಾಗತಿಸೋಣ ಮುದದಿ ಮುಂಗಾರು ಮಳೆ ಹನಿಯ


--ರಚನೆ: ಕೆ ವಿ ಶ್ರೀನಿವಾಸ ಪ್ರಸಾದ
 Mob:9844276216
E-Mail:sreenivasaprasad.kv@gmail.com