Thursday, March 31, 2011

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧

ಶ್ರೀ ಕೃಷ್ಣ ಸಂದೇಶ-ಅಧ್ಯಾಯ ೧

ಅರ್ಜುನನಾಶಯದಂತೆ ಸ್ಥಾಪಿಸಿದ
ಕೃಷ್ಣ ರಥವನ್ನು ರಣರಂಗದಮಧ್ಯೆ
ಕಂಗಾಲಾದ ಪಾರ್ಥ ಬಂಧು ಸ್ನೇಹಿತರನು ಕಂಡು
ಸಮರವೇತಕೆ   ಕೃಷ್ಣ ಸಾಧಿಸಲು ಏನನೆಂದ

ಪಿತಾಮಹ ಭೀಷ್ಮ ಗುರು ದ್ರೋಣ ಅನುಜರು
ಕೌರವರು ಒಂದೆಡೆಯಾದರೆ   ಅಗ್ರಜ ಧರ್ಮರಾಯ
ಅನುಜರು ವ್ರಿಕೋದರ ನಕುಲ  ಸಹದೇವರು
ಸಮರದಲಿ ಯಾರಗಲಿದರು   ಸಂತಸವು ಎಲ್ಲಿಂದ

ಬೇಡ ಸಮರ ಬಂಧು ಬಾಂಧವರಿಲ್ಲದ ಧನ
ರಾಜ್ಯ ಸಂಪತ್ತು ಏತಕ್ಕೆಂದು ವಿಷಾದಿಸಿದ
ವೀರ ಪಾರ್ಥ ಸಮರ ರಂಗದ ಮಧ್ಯದಲಿ
ಪಾರ್ಥಸಾರಥಿಯಲಿ ಅಳುವನು ತೋಡುತ

ನಡುಗಿದವು ತೋಲ್ಗಳು ಕಂಪಿಸಿದವು ಕಾಲ್ಗಳು
ಜಾರಿತು ಗಾಂಡೀವ ಪಾರ್ಥನ ಕೈಗಳಿಂದ           
ಕುಸಿದನು ಗಾಂಡೀವಿ ರಥದ ಮಧ್ಯದಲಿ
ಬೇಡ ಸಮರ, ರಾಜ್ಯ, ಸಂಪತ್ತು, ವಿಜಯ

ಆದಿದೇವ ವಾಸುದೇವ ವಿಸ್ಮಯಗೊಂಡ
ಎಲ್ಲಡಿಗಿತು ಪಾರ್ಥನ ಶೌರ್ಯ, ವೀರ್ಯ ಪರಾಕ್ರಮ
ಮಡದಿ ದ್ರೌಪದಿಯ ಸೀರೆಯೆಳೆದಾಗ ಮಾಡಿದ ಪಣ
ಮುರಿದ ಶಾಂತಿ ಸಂಧಾನ ತನಗಾದ ಅಪಮಾನ

-ರಚನೆ: ಕೆ ವಿ ಶ್ರೀನಿವಾಸ ಪ್ರಸಾದ್
ಮೊಬ; ೯೮೪೪೨೭೬೨೧೬
e-Mail: sreenivasaprasad.kv@gmail.com 

   


 

Friday, March 25, 2011

ಮೇಲುಕೋಟೆ ವೈರಮುಡಿ Melukote Vairamudi

ನರಸಿಂಹ ಕಾಪಾಡು ಎನ್ನ ಅನವರತ

ಮಗನೆಂದು ಕುಲದ ಕುಡಿಯೆಮ್ಬುದನ್ನು
ಲೆಕ್ಕಿಸದೆ ಆದೇಶಿಸಲು ಕುಡಿಸೆ ಕಾರ್ಕೊತವನು
ಪರಿತಪಿಸಲು ಮಾತೆ ಕಯಾದು  ಮಮತೆಯಲಿ
ನರಸಿಂಹ ರಕ್ಷಿಸಿದೆ ಪ್ರಹ್ಲಾದನನು ವಿಷದಿಂದ

ಹರಿಯನಾಮವ ನುಡಿದನೆಂದು  ಆಗ್ರಹದಲಿ
ಎಸೆಯಲು ಗಿರಿಶಿಖರದಿಂದ  ಅನುಚರರು
ಹಿಡಿದೇ ಪ್ರಹ್ಲಾದನನು ತೋಳತೆಕ್ಕೆಯಲಿ
ನರಸಿಂಹ ರಕ್ಷಿಸುತ ಭಕ್ತನ ಆಶ್ಚರ್ಯದಲಿ

ವೈರಸಾದಿಸುತ ಸಹೋದರ ಹಿರನ್ಯಾಕ್ಷಣ
ಸಂಹರಿಸಿದ ವರಾಹರೂಪಿ ಹರಿಯನರಿಯದೆ
ಗಜಸಮೂಹದಿಂದ ತುಳಿಸಲು ಭಕ್ತ ಪ್ರಹ್ಲಾದನ
ಕಾಪಾಡಿದೆ ಗಜೇಂದ್ರಮೋಕ್ಷ ನೀಡಿದ ವಿಷ್ನುವಂತೆ

ಆರ್ಭಟಿಸಲು ಹರಿಯೆಲ್ಲಿ  ರುಂಡ ಚೆನ್ದಾಡುವೆನೆಂದು
ಕಂಭ ಕಂಭಗಳ ಕೆಡವುತ ಪ್ರಹ್ಲಾದನ ಕಾಡುತಲಿ
ಜಿಗಿದೆ ಕಂಭದಿಂದ ನರನಲ್ಲದ ಮ್ರಿಗವಲ್ಲದ
ನರಸಿಂಹರೂಪದಲಿ ಇರುಳುಹಗಲಲ್ಲದ ಸಂಜೆಯಲಿ

ಸಂಹರಿಸಿದೆ ದಾನವ ಹಿರನ್ಯಕಶಿಪುವನು
ಒಳಗಲ್ಲದೆ ಹೊರಗಲ್ಲದೆ ಅರಮನೆಯ ದ್ವಾರದಲಿ
ನರಸಿಂಹರೂಪದಲಿ ಪಾಲಿಸುತ ಭಕ್ತಪ್ರಹ್ಲಾದನ
ವಂದಿಪೆನು ನರಸಿಂಹ ಕಾಪಾಡು ಎನ್ನ ಅನವರತ

ರಚನೆ:ಕೆ.ವಿ.ಶ್ರೀನಿವಾಸ ಪ್ರಸಾದ್
ಮೊಬ:9844276216

Monday, March 14, 2011

ಮಗಳೇ- ಮದುವೆಯ ಪ್ರಥಮ ವರ್ಷದ ಶುಭಾಶಯ

ಮದುವೆಯ ಪ್ರಥಮ ವರ್ಷದ ಶುಭಾಶಯ

ಶುಭಾಶಯ  ನಲ್ಮೆಯ ಮಗಳಿಗೂ
ಕೈಹಿಡಿದ ನೆಚ್ಚಿನ  ಅಳಿಯರಿಗೂ
ಮದುವೆಯ ಮೊದಲ  ವರ್ಷ ಉತ್ಸವದಲಿ
ಮನಮಿಡಿದ ಎದೆತುಂಬಿದ ಶುಭಾಶಯ

ನಡೆದಿಹಿರಿ ಜೊತೆಯಲಿ ವರ್ಷ ಒಂದನು
ಮಿಲನದಲಿ ಮಿಡಿಯುತ ಮನದಾಳದಲಿ
ಜೀವನದ ಕಹಿಸಿಹಿಯನು ಸವಿಸುತ ಸ್ನೇಹದಲಿ
ನಿಮಗಿದೋ ಮನಮಿಡಿದ ಎದೆತುಂಬಿದ ಶುಭಾಶಯ

ಕಳೆದಿಹಿರಿ ಜೊತೆಯಲಿ ಕಡಲಾಚೆಯ ದ್ವೀಪದಲಿ
ಜನರಹಿತ ವನ್ಯಜೀವಿಗಳ ನಡುವಿನಲಿ ಕಾಡಿನಲಿ
ಸವಿಯುತ ಅರಿಯುತ ಸುಸ್ನೇಹದ ಪರಿಮಳವ
ನಿಮಗಿದೋ ಮನಮಿಡಿದ ಎದೆಯಾಳದ ಅಭಿನಂದನೆ

ಮಗಳೇ ಗಳಿಸಿರುವೆ ಅತ್ತೆಮಾವಂದಿರ ಪ್ರೀತಿ
ಬಂಧು ಬಾಂಧವ ಸ್ನೇಹಿತರ ಮೆಚ್ಚುಗೆ
ತಂದಿರುವೆ ಸತ್ಕೀರ್ತಿ ತಂದೆ ತಾಯಂದರಿಗೆ
ನಿನ್ನ ಸದ್ಗುನದಿ ನಿನಗಿದೋ ಅಭಿನಂದನೆ

ನೂರ್ಕಾಲ ಇರಲಿ ನಿಮ್ಮ ದಾಂಪತ್ಯ ಜೊತೆಯಲಿ
ಅರಳಲಿ ನಗೆ ಚೆಲ್ಲುವ ಮನೆತುಂಬುವ ಕುಡಿಗಳು ಎರಡು
ಹರಸಲಿ ಶ್ರೀನಿವಾಸನು ಜೀವನದಿ ಸುಖಸಂಪತ್ತನು
ಕಾಣುವಿರಿ ಸಹಸ್ರಚಂದ್ರನನು ಇದೋ ನನ್ನ ಶುಭಾಶಯ


-ಶ್ರೀನಿವಾಸ ಪ್ರಸಾದ್.ಕೆ.ವಿ
ಮಾರುತಿನಗರ, ಬೆಂಗಳೂರು-92
 

Wednesday, March 9, 2011

ಕೃಷ್ಣನಿಗೆ ನಮನಗಳು

ಕೃಷ್ಣ ನಮನ

ವಸುದೇವ ಸುತ ದೇವಕಿತನಯ
ರೋಹಿಣಿಪಾಲಿತ ರುಕ್ಮಿನಿವಲ್ಲಭ
ಗೋಪಿಲೋಲ ಬ್ರಿಂದಾವನನಿಲಯ
ಜಗದ್ವಂದ್ಯ ಕೃಷ್ಣನಿಗೆ ನಮನಗಳು

ಪೂತನಿ ಸಂಹಾರಕ ಚಾನೂರಮರ್ಧನ
ಕಾಳಿಂಗಸರ್ಪವ ತುಳಿದು ಗೋವರ್ಧನ
ಪರ್ವತವ ಎತ್ತಿದ ಗೋಸಂರಕ್ಷಕ
ಜಗದ್ವಂದ್ಯ ಕೃಷ್ಣನಿಗೆ ನಮನಗಳು

ತಂದೆತಾಯಿಯರ ಬಂಧಿಸಿ ಅನುಜೆ
ದೇವಕಿಯ ಸೆರೆಯಲಿರಿಸಿ ಜನಿಸಿದ
ಆರುಮಕ್ಕಳನು ಕೊಲಿಸಿದ ಮಾವ
ಕಂಸನ ಮರ್ಧಿಸಿದ ಕೃಷ್ಣನಿಗೆ ನಮನ

ಜಾಮ್ಭವತಿ ಸತ್ಯಭಾಮೆಯರ ವರಿಸಿ ತಂಗಿ
ದ್ರೌಪದಿಗೆ ವಸ್ತ್ರ ನೀಡಿದ ಮಾನ ರಕ್ಷಕ
ದ್ಯೂತದಲಿ ಸೋತು ರಾಜ್ಯಗಳನು ಕಳೆದ
ಅತ್ತೆಕುಂತಿಪುತ್ರರ ಮಿತ್ರ ಕೃಷ್ಣನಿಗೆ ನಮನ

ಕುರುರಂಗದಲಿ ಗೀತೆ ಬೋಧಿಸಿ ಕದನದಲಿ
ಪಾನ್ದುಸುತರಿಗೆ ಜಯವ ತಂದಿತ್ತು
ಧರ್ಮಪಾಲಕನಾಗಿ ಅಧರ್ಮವ ದಹಿಸುತ
ಜಗವ ಕಾಯುವ ತಂದೆ ಕೃಷ್ಣನಿಗೆ ನಮನ


ರಚನೆ; ಕೆ ವಿ ಶ್ರೀನಿವಾಸ ಪ್ರಸಾದ್
೧ಎ  , ಡೀ ಎನ್ಕ್ಲೇವ್    ,ಮಾರುತಿನಗರ
ಕೊಡಿಗೆಹಳ್ಳಿ, ಬೆಂಗಳೂರು-೯೨
 
 

ಮಗಳ ಮದುವೆ

ಈ ಪದ್ಯವನ್ನು ಮಗಳ ಮದುವೆಯಲ್ಲಿ ಬರೆದಿದ್ದೆನು. ಹಾಡಿದರು ನನ್ನ ನೆಂಟರು ಗ್ರಿಹಪ್ರವೇಶದಲಿಮಂಗಳವು ಈ ದಿನವು
ಮಗಳೇ ಜೀವನದ ಸುದಿನವು
ತರಲಿ ಹರುಷ ಅನುದಿನವು
ವೈಭವದ ಮದುವೆಯ ಈ ದಿನವು

ಅರಳಲಿ ಸಂತಸವು ಅನುಕಾಲ
ನೀನಾಗು ಪತಿಗೆ ಸರಿಸತಿಯು
ಸಾಗು ನೀ ಜೊತೆಯಲಿ ನೂರ್ಕಾಲ
ಮಡದಿಯಾಗಿ ಪ್ರತಿದಿನವೂ

ಅರಸಿ ಬಂದಿಹನು ಗೀತಾಸುತನು
ಒಲವಿನಾಸರೆಯ ಸೆಲೆಯಾಗಿ
 ನೀಡೆಂದು ಮುದವ ಕಲಾಸುತೆ
ಮಧುವಾಗಿ ಪರಿಮಳದ ಹೂವಾಗಿ

ನೀನಾಗು ಪತಿಮನೆಗೆ  ಮಗಳು
ಎಲ್ಲರಲಿ ಪ್ರೀತಿಯನು ಪಸರಿಸುತ
ಮರೆಯದಿರು ತಂದೆಯ ಮನೆಯ
ತರುತ ತಾಯ್ಮನೆಗೆ ಸುಕೀರ್ತಿಯ

ನಡೆಯು ಚೆನ್ನಿರಲಿ ಮೂಡಲಿ
ನುಡಿಯು ಮಧುರ ಹಾಡಾಗಿ
ಮಗಳೇ ಮರೆಯದಿರು ಹಿತನುಡಿ
ಆಗುವೆ ನೀ ಆದರ್ಶಸೊಸೆಯಾಗಿ

ನೋವು ನಲಿವುಗಳು ಸಹಜವು
ಜೀವನದ ದೂರ ಪಯಣದಲಿ
ಧ್ರಿತಿಯು ಜಾರದಿರಲಿ ಮರೆಯದೆಲೆ
ನಾವಿಕನು ಶ್ರೀಪತಿಯು  ಬಾಳದಾಳದಲಿ

ರಚನೆ :ಕೆ ವಿ ಶ್ರೀನಿವಾಸ ಪ್ರಸಾದ್
Mob:9844276216

E-Mail:sreenivasaprasad.kv@gmail.com

 

Sunday, March 6, 2011

ನ್ಯಾಸ ಅಷ್ಟಕ

ನ್ಯಾಸ ಅಷ್ಟಕ 




ಕಾಪಾಡು ದೇವದೇವೇಶ
ನನ್ನರಕ್ಷನೆಯು  ನಿನ್ನದೇ
ನನ್ನದೆಂಬುದು ಏನಿಲ್ಲವು
ಅರ್ಪಿಸುವೇ ನಿನಗೆ ಎಲ್ಲವನು


ವರದರಾಜನೆ ಅಭಯಪ್ರದನೆ
ಶರಣಾಗಿರುವೆನು ನಿನ್ನಲಿ
ಈ  ನನ್ನ ದೇಹದ ಅಂತ್ಯದಲಿ
ಕರುನಿಸೆನಗೆ ನಿನ್ನ ಚರಣಪದ್ಮವ


ನನ್ನ ಮನಸ್ಸೆಂದು ಸ್ಥಿರವಾಗಿರಲಿ
ನಿನ್ನ ಪಡೆಯುವ ಏಕೈಕ ಗುರಿಯಲಿ
ಆಸೆ ಆಮಿಷಗಳಿಂದ ಸರಿದಿರಲಿ
ಸ್ವೀಕರಿಸು ಎನ್ನ ನಿತ್ಯ ಕಿಂಕರನೆಂದು


ಮಾಡಿರುವೆ ಎಲ್ಲ ಕರ್ಮವ
ನಿಸ್ಸಂಗದಿ ನಿರ್ಮೋಹಡಿ
ನಿರ್ಮಲಚಿತ್ತದಿ   ನಿನ್ನದೆಂದು
ನೀಡು ವಿಮೋಚನೆಯ ಸರ್ವ ಪಾಪದಿ


ಗಳಿಸಿರುವುದೆಲ್ಲವು ನಿನ್ನ ಅನುಗ್ರಹದಿ
ನಿನ್ನ ಆಜ್ಞೆಯಂತೆ ನಿನ್ನ ಪ್ರೀತಿಗಾಗಿ
ಸ್ವೀಕರಿಸು ಚರಾಚರೆಗಳೆಲ್ಲವ
ನಿನ್ನ ಅನಂತ ಸೇವೆಯಲಿ ತೊಡಗಿಸೆನ್ನ


ಪಾಪಕೃತ್ಯಗಳು ನಡೆಯದಿರಲಿ ಎನ್ನಿಂದ
ರಕ್ಷಿಸು ಸದಾ ಕಣ್ಣ ರೆಪ್ಪೆಯಂತೆ
ನಿನ್ನ ಚರಣಸೇವೆಯೇ ಗುರಿಯಾಗಿರಲಿ
ನಡೆಸೆನ್ನ ಸರಿ ದಾರಿಯಲಿ ಗುರುವಂತೆ


ನೀನೆ ಅಂಬಿಗನು ನಿರ್ದೇಶಕನು
ಬರಿಯ ಪಾತ್ರದಾರನು ನಾನು
ನಿನ್ನ ಶಕ್ತಿಯಲಿ ತೇಜಸ್ಸಿನಲಿ
ನಡೆಯುತಿರುವೆನು ನಿರ್ಜೀವನಾಗಿ


ಬಾಳಗುರಿಯಾಗಿಸಿಹೆನು ನಿನ್ನ  ಹೊಂದಲು
ನಿರಪೇಕ್ಷಿತನಾಗಿ  ನಿನ್ನಾದೇಶದಂತೆ
ಕರುನಿಸೆನಗೆ ನಿನ್ನ ಪಾದಸೇವೆಯ 
ಸಾಕೆನಗೆ ಶ್ರೀಪತಿಯು ನೀನು ಬಳಿಯಿರಲು




-ಶ್ರೀನಿವಾಸ ಪ್ರಸಾದ್.ಕೆ.ವಿ.
ಡೀ ಎನ್ಕ್ಲೇವ್ ,ಮಾರುತಿನಗರ,
ಸಹಕಾರನಗರ ಅಂಚೆ, ಬೆಂಗಳೂರು-೯೨
ಫೋ: ೯೮೪೪೨ ೭೬೪೧೬
 

Friday, March 4, 2011

ಮನಮಿಡಿದ ಅಭಿನಂದನೆ

ಮನಮಿಡಿದ ಅಭಿನಂದನೆ

ನಿಮಗಿದೋ ಮನಮಿಡಿದ ಅಭಿನಂದನೆ
ತುಂಬಿಹಿದು ಆರುದಶಕ ಪರಿಪೂರ್ಣ
ಸಾರ್ಥ ಜೀವನದ ದಾರಿಯಲಿ ಹರುಷದಿ
ನಿಮಗಿದೋ ಶ್ರೀನಿವಾಸನ ಅಭಿನಂದನೆ

ಜನಿಸಿದಿರಿ ಸಂಪತ್ಕುಮಾರಸುತರಾಗಿ
ಅನುಜ ಸುಂದರ ಅಗ್ರಜ ಕೃಷ್ಣರೊಡನೆ
ಪ್ರೀತಿಯ ಐದು ಸಹೋದರಿಯರೊದಗೂಡಿ
ಚುಂಚ ಚುಂಚಿಯರ ರಾಮನನುಗ್ರಹದಲಿ

ದಶಕ ಮೂರರಪೂರ್ವ ಸಪ್ತಪದಿಯ ತುಳಿದಿರಿ
ಪ್ರಣಯ ಹಸ್ತವ ಹಿಡಿದು ಗೀತರೊಂದಿಗೆ
ಪಡೆದಿರಿ ಸಡ್ಗುನಸಂಪನ್ನ ಮೇಧಾವಿ ರಾಘವನ
ನಿಮಗಿದೋ ಮನಮಿಡಿದ ಅಭಿನಂದನೆ

ತಂದಿರಿ   ನಿಮ್ಮ ಶಷ್ಟ್ಯಬ್ಧಿ ಪೂರ್ವದಲಿ
ಸಂತಸದ ಮನೆಗೆ ಕಲಾಸುತೆಹೇಮಳನು
ಸೊಸೆಯಾಗಿ ಸುತನಿಗೆ ಪ್ರಣಯಿಯಾಗಿ
ನಿಮಗಿದೋ ಮನಮಿಡಿದ ಅಭಿನಂದನೆ

ಶತಶತಮಾನ ಬಾಳಿ ಸತಿಪಾಣಿಹಿಡಿದು
ಸುತಸೊಸೆಯರ ಒಡಗೂಡಿ ಸಂಭ್ರಮದಿ
ಅರಳಲಿ ಪೌತ್ರರು ವಾಲ್ಮೀಕಿಸಂತತಿಯಲಿ
ನಿಮಗಿದೋ  ಮನಮಿಡಿದ ಅಭಿನಂದನೆ


ರಚನೆ:  ಕೆ ವಿ ಶ್ರೀನಿವಾಸ ಪ್ರಸಾದ್
ನಂ ೧, ಡೀ ಎನ್ಕ್ಲೇವ್ ಮಾರುತಿನಗರ
ಸಹಕಾರ ನಗರ ಅಂಚೆ
ಬೆಂಗಳೂರು-೫೬೦೦೯೨
ಫೋನ್;೯೮೪೪೨ ೭೬೪೧೬   
  

Tuesday, March 1, 2011

ರಾಘವ ರ (ಅಳಿಯಂದಿರ) ಜನ್ಮದಿನದ ಶುಭ ಅವಸರದಲಿ

ರಾಘವ ರ (ಅಳಿಯಂದಿರ) ಜನ್ಮದಿನದ ಶುಭ ಅವಸರದಲಿ
ಶತಮಾನಂ ಭವತಿ ಶತಾಯುಹ್
ಜನ್ಮದಿನದ ಶುಭ ಹಾರೈಕೆಗಳು
ಕಳೆದಿಹುದು ಮೂರು ದಶಕಗಳು
ಆದರೂ ಹೊಸದಿಂದಿನ ಜನ್ಮದಿನವು

ವಿವಾಹನಂತರದ ಪ್ರಥಮ ಜನ್ಮದಿನವು
ವಿಷೆಶವಿಂದಿನ  ಹುಟ್ಟುಹಬ್ಬವೂ 
ಇರುವಳು ಆಚರಿಸಲು ಸತಿಬಳಿಯು
ಸಿಹಿಯೂಟವನು ಹಂಚಿ ಅನುಭವಿಸಲು

ನೂರ್ಕಾಲ ನೀಡಲು ಸಂತಸವ ರಾಘವಸತಿಯು
ಬಾಳು ಹಸಿರಾಗಲಿ ಅನುಕಾಲ ಹರುಷದಲಿ
ವಸಂತಗಳರಲಿ  ಶತಕಾಲ ವಸಂತಸುತೆಯ
ಸಂಗದಂಗಳದಲಿ ಬದುಕು ಹಸನಾಗಲಿ

ಹರಸುತಿಹನು ವರದಸುತನು ಸತಿಒದಗೂಡಿ     
ಬರಲಿ ಏಳಿಗೆಯೂ   ನಿಮ್ಮ ಕಾಯಕಲ್ಪದಲಿ
ಅರಳಲಿ ನಿಮ್ಮ ಒಲುಮೆಯ ಮಡಿಲಲಿ ಹೂವೊಂದು
ತರಲಿ ಸುಕೀರ್ತಿಯ ವಾಲ್ಮೀಕಿ ಪ್ರಸಾದರಲಿ


-ರಚನೆ:ಶ್ರೀನಿವಾಸ ಪ್ರಸಾದ .ಕೆ.ವಿ  
E-Mail: sreenivasaprasad.kv@gmail.com