ಗೆಳತಿ ಶ್ರುತಿಗೆ ಶುಭಾಶಯ
ಗೆಳತಿಯೋ ಸೋದರ ಸೊಸೆಯೋ ನಾ ಅರಿಯೆ
ನೀನಾದೆ ಸಹಪಾಠಿ ಸ್ನಾತಕೋತ್ತರ ಶಾಲೆಯಲಿ
ಕಳೆದೆವು ಎರಡು ವರುಷಗಳು ಓದುತ ಜೊತೆಯಲಿ
ಶಾಲೆಯಲಿ ಗಣಕಯಂತ್ರದಲಿ ದಿನದ ಸಂಜೆಯಲಿ
ಕಠಿಣ ಎನಿಸಿದರೂ ವಿಷಯಗಳು ಸಂಸ್ಕೃತದಲಿ
ಕೂಡಿ ವಿಮರ್ಶಿಸಲು ಸರಳವೆನಿಸಿತು ವ್ಯಾಕರಣ
ಸುಂದರ ವಾಗಿ ಕಂಡಿತು ಸುಂದರ ರಾಮಾಯಣ
ಹನುಮನ ಆಕ್ರೋಶ ಆರ್ಭಟಗಳು ಸಾಹಸಗಳು
ಕಂಡೆವು ಶಾಕುನ್ತಲೆಯ ವಿಯೋಗ ವಿಪರ್ಯಾಸ
ರಚಿಸಿದೆವು ಪತ್ರಗಳ ಪದ ಸಂಕುಲವ ಸಂಸ್ಕೃತದಿ
ಅರಿತೆವು ಬಾಳಿನ ಮೌಲ್ಯಗಳ ಸುಭಾಷಿತಶತಕದಿ
ಸಾಲದಾಯಿತು ಸಮಯ ಹೆಚ್ಚೆಚ್ಚು ಕಲಿಯಲು
ಗೆಳತಿಯೇ ನೀನಾಗುತಿರುವೆ ವಿವಾಹ ಪರಿಣಯ
ಮೂರುವರೆ ದಶಕದ ನಂತರ ವೈದ್ಯರೊಂದಿಗೆ
ನೀನಿಚ್ಚಿಸಿದ ಡಾಕ್ಟೊರೇಟ್ ಗಳಿಸಿದ ನಂತರ
ನೂರ್ಕಾಲವಿರಲಿ ನಿಮ್ಮ ಸಮೃದ್ಧ ಸುಖ ದಾಂಪತ್ಯ
ನೀನಿಚ್ಚಿಸಿದ ಜೀವನ ನಿನಗಾಗಿರಲಿ ಅನವರತ
ಜನಿಸಲಿ ಕುಡಿಗಳು ಹಲವು ನಿನ್ನ ದಾರಿಯಲಿ
ನೀ ಕಲಿತ ವಿಮಾನ ವಿಜ್ಞಾನವ ಪಸರಿಸಲು
ಹರಸುವೆ ನಿನ್ನತ್ತೆ ವಸಂತಕಲಾಳ ಜೊತೆಗೂಡಿ
ರಚನೆ :ಶ್ರೀನಿವಾಸ ಪ್ರಸಾದ್ ಕೆ.ವಿ
No comments:
Post a Comment