ಕಳಲೆ ಲಕ್ಷ್ಮಿಕಾಂತ ಸ್ವಾಮಿ ಸ್ತುತಿ
ವ್ಯಾಸ ಭಾರತದ ಜನಮೇಜಯನು ಅಡವಿಯಲಿ
ಸಂಚರಿಸುತಿರಲು ಕಂಡೆ ನೀನು ಬಿದಿರಿನ ಮೇಳೆಯಲಿ
ಮೆಚ್ಚಿ ನಿನ್ನ ಸೊಬಗನು ಕಟ್ಟಿದನು ಆಲಯವನಂದು
ಕರಮುಗಿವೆ ಕರವೀರಪುರವಾಸಿ ಲಕ್ಷ್ಮಿಕಾಂತನೆ
ಕಾಲಕ್ರಮದಲಿ ವಿಸ್ತರಿಸಿದರು ಆಲಯವ ಒಂದಾಗಿ
ಬೃಹದಾಕಾರದಲಿ ಆವರಣದಲಿ ಅರವಿಂದನಾಯಕಿ
ದ್ವಾದಶ ಆಳ್ವಾರರ ದೇಶಿಕ ಜೀಯರ್ ರರ ಮೂರ್ತಿಇರಿಸಿ
ಕರಮುಗಿವೆ ಕರವೀರಪುರವಾಸಿ ಲಕ್ಷ್ಮಿಕಾಂತನೆ
ಕರೆದರು ವೆಣುಪುರಿ ಕಳಲೆ ಕಪಿಲಾಶ್ರಮ ವೆಂದು
ಸಂದರ್ಶಿಸಿದರು ಮೈಸೂರಿನ ಯದುವಂಶದರಸರು
ಮೈಸೂರಿನಹುಲಿ ಟೀಪೂ ನೀಡಿದನು ಸ್ವರ್ಣಪಾತ್ರೆಗಳ
ಕರಮುಗಿವೆ ವೇಣು ಪುರಾಧೀಶ ಲಕ್ಷ್ಮೀ ವಲ್ಲಭನೆ
ನಿನಗೆ ವರ್ಶೋತ್ಸವವನು ಮೀನಮಾಸದಲಿ ಸೇರುವರು
ಜನಜಾತ್ರೆ ಹಳ್ಳಿ ಹಳ್ಳಿಗಳಿಂದ ನಗರ ನಗರಗಳಿಂದ
ಉದಯದಲಿ ಏರುವೆ ತೇರು ಸಂಜೆ ಪುಷ್ಪ ವ್ಯಾಳಿಯಲಿ
ನಡೆವುದು ತೇರಡಿ ಉತ್ಸವ ರಾತ್ರಿಇಡೀ ನಾದ ತರಂಗದಿ
ತಂದೆ ನೀ ಕರುಣಿಸುತಿರುವೆ ಭಕ್ತಜನರ ಅಭೀಷ್ಟವ
ನಿವಾರಿಸುತ ಮಕ್ಕಳ ನೋವುರುಜಿನಗಳ ಅಭಯದಿ
ನೀಡುತ ಸಿರಿ ವೃಷ್ಟಿಯ ಮಾತೆ ಅರವಿಂದನಾಯಕಿಯಕೂಡಿ
ನಿನಗಿದೋ ಮನದಾಳದ ನಮನ ವೆಣುಪುರಿ ಲಕ್ಷ್ಮಿಕಾಂತ
ರಚನೆ: ಕೆ.ವಿ ಶ್ರೀನಿವಾಸ ಪ್ರಸಾದ
ಮೊಬ: ೯೮೪೪೨ ೭೬೨೧೬
ಇ -ಮೇಲ್: sreenivasaprasad.kv@ gmail.com
No comments:
Post a Comment