ಬಣ್ಣ ನನ್ನ ಪ್ರೀತಿಯ ಬಣ್ಣ
ಬಣ್ಣ ನನ್ನ ಪ್ರೀತಿಯ ಬಣ್ಣ
ಒಲವಿನ ಬಣ್ಣ, ನಲ್ಮೆಯ ಬಣ್ಣ
ಪ್ರಕೃತಿಯ ಬಣ್ಣ, ಸುಂದರ ಬಣ್ಣ
ಕಾಮನ ಬಣ್ಣ, ಕಾಮಿಸುವ ಬಣ್ಣ
ಮುಖದ ಬಣ್ಣ ಶ್ವೇತ ವರ್ಣ
ಕೂದಲ ಬಣ್ಣ ಶ್ಯಾಮಲ ಬಣ್ಣ
ತುಟಿಯ ಬಣ್ಣ ರಂಗಿನ ಬಣ್ಣ
ದಂತದ ಬಣ್ಣ ಬಿಳಿಯ ಬಣ್ಣ
ಗಗನದ ಬಣ್ಣ ನೀಲ ವರ್ಣ
ಮೇಘದ ಬಣ್ಣ ಕಪ್ಪು ಬಣ್ಣ
ಉದಯದ ಸೂರ್ಯ ಕೆಂಪು ಬಣ್ಣ
ಉಷೆಯ ಬಣ್ಣ ರಂಗು ರಂಗಿನ ಬಣ್ಣ
ಗುಡ್ಡದ ಬಣ್ಣ ಸವಿ ಗೆಂಪು
ಗಿಡ ಮರಗಳು ಪಚ್ಚೆ ಹಸಿರು
ಹಣ್ಣಿನ ಬಣ್ಣ ಸಿಹಿಗೆಂಪು ಬಣ್ಣ
ಕಾಯಿಯ ಬಣ್ಣ ತುಸ ಹಸಿರು
ಹೂವಿನ ಬಣ್ಣ ಬಗೆ ಬಗೆಯವು
ಬಣ್ಣಿಸಲು ಸಾಲದು ಪದಗಳು
ಬಣ್ಣಗಳ ಜಗದಲಿ ತಂದೆ ಹರಿಯ
ಬಣ್ಣ ಕೃಷ್ಣ ವರ್ಣ, ಆಗೋಚರವು
ಹೋಳಿಯು ಬರುತಿಹುದು
ಬಣ್ಣದ ಓಕುಳಿಯಾಡಲು
ಹರೆಯದ ಹರಿಣಿಯರ ತನುವಲ್ಲಿ
ಮೂಡಿಸಲು ಕಾಮನೆಯ ರಂಗನು
ಶುಭಾಶಯವು ರಂಗಿನ ಹಬ್ಬಕೆ
ರಂಗನ ರಂಗಿನ ಕಾಮದಾಟಕೆ
ರಂಗೆರಚುವ ಯುವಕ ಯುವತಿಗೆ
ಕಾಮನ ಪ್ರಣಯದ ಓಕುಳಿಗೆ
---ಕೆ. ವಿ. ಶ್ರೀನಿವಾಸ ಪ್ರಸಾದ್
No comments:
Post a Comment