ಸಿಂಹಾವಲೋಕನ
ವೆಂಕಟೇಶ ಸಭೆ ೧೯೧೮ ರಲ್ಲಿ ದೇಶಿಕರ ತತ್ವ ಪ್ರಚಾರಕ್ಕಾಗಿ ಆರಂಬಿಸಲ್ಪಟ್ಟಿತು. ಇದೀಗ ೧೦೦ ವರ್ಷ ತುಂಬಿದ ಸಂದರ್ಭದಲ್ಲಿ ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕರೆಂದೇ ಪ್ರಸಿದ್ಧರಾದ ವೇದಾಂತದೇಶಿಕರ ೭೫೦ನೇ ವರ್ಷ ವರ್ಧಂತಿಯನ್ನು ವೈಭವದಿಂದ ಆಚರಿಸಲು ತೀರ್ಮಾನಿಸಿ ಮೈಸೂರಿನ ವೆಂಕಟೇಶ ಸಭೆಯ ಆಶ್ರಯದಲ್ಲಿ ಸಮಿತಿಯನ್ನು ರಚಿಸಲಾಯಿತು. ಸಭೆಯ ಅಭಿಮಾನಿಗಳು ಹೆಚ್ಚಿರುವ ಬೆಂಗಳೂರಿನಲ್ಲಿ ಕೂಡ ವರ್ಷವರ್ಧಂತಿಯನ್ನು ಆಚರಿಸಲು ಡಿಸೆಂಬರ್ ೨೦೧೭ ರಲ್ಲಿ ಸಮನ್ವಯ ಸಮಿತಿಯನ್ನುಶ್ರೀ ಶ್ರೀನಿವಾಸ ಪ್ರಸಾದ್ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ಬೆಂಗಲ್ಲೂರಿನ ನರಸಿಂಹನ್ ಕೆ.ಎಸ್ ಕಾರ್ಯದರ್ಶಿಯಾಗಿಯೂ ಇತರ ಸದಸ್ಯರಾಗಿ ಕೀರ್ತಿನಾರಾಯಣ ಕೆ.ಆರ್ , ರಮೇಶ್ ಟಿ ಜಿ ಮತ್ತು ಕನಕವಲ್ಲಿ ಕೆ ವಿ ಮತ್ತು ರೂಪರೇಖಾ ಕೆ ಎಸ ಆರಿಸಲಾಯಿತು ಸಭೆಯ ತೀರ್ಮಾನದಂತೆ ಮುಂದಿನ ಅಕ್ಟೋಬರ್ ೨೦೧೮ ರವರೆಗೆ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲು ತೀರ್ಮಾನಿಸಲಾಯಿತು. ಇದಕ್ಕಾಗಿ ಬೆಂಗಳೂರಿನ ಪರಕಾಲ ಮಠದ ಕಾರ್ಯಕಾರಿ ಅಧ್ಯಕ್ಶರಾದ ಶ್ರೀ ಕೃಷ್ಣ ಪ್ರಸಾದ್ ರವರನ್ನು ಸಂಪರ್ಕಿಸಿದಾಗ ಅವರು ತುಂಬು ಹೃದಯದಿಂದ ಪರಕಾಲ ಮಠದ ಆವರಣವನ್ನು ಕೊಡಲು ಸಮ್ಮತಿಸಿದರು.
ವೆಂಕಟೇಶ ಸಭೆ ೧೯೧೮ ರಲ್ಲಿ ದೇಶಿಕರ ತತ್ವ ಪ್ರಚಾರಕ್ಕಾಗಿ ಆರಂಬಿಸಲ್ಪಟ್ಟಿತು. ಇದೀಗ ೧೦೦ ವರ್ಷ ತುಂಬಿದ ಸಂದರ್ಭದಲ್ಲಿ ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕರೆಂದೇ ಪ್ರಸಿದ್ಧರಾದ ವೇದಾಂತದೇಶಿಕರ ೭೫೦ನೇ ವರ್ಷ ವರ್ಧಂತಿಯನ್ನು ವೈಭವದಿಂದ ಆಚರಿಸಲು ತೀರ್ಮಾನಿಸಿ ಮೈಸೂರಿನ ವೆಂಕಟೇಶ ಸಭೆಯ ಆಶ್ರಯದಲ್ಲಿ ಸಮಿತಿಯನ್ನು ರಚಿಸಲಾಯಿತು. ಸಭೆಯ ಅಭಿಮಾನಿಗಳು ಹೆಚ್ಚಿರುವ ಬೆಂಗಳೂರಿನಲ್ಲಿ ಕೂಡ ವರ್ಷವರ್ಧಂತಿಯನ್ನು ಆಚರಿಸಲು ಡಿಸೆಂಬರ್ ೨೦೧೭ ರಲ್ಲಿ ಸಮನ್ವಯ ಸಮಿತಿಯನ್ನುಶ್ರೀ ಶ್ರೀನಿವಾಸ ಪ್ರಸಾದ್ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ಬೆಂಗಲ್ಲೂರಿನ ನರಸಿಂಹನ್ ಕೆ.ಎಸ್ ಕಾರ್ಯದರ್ಶಿಯಾಗಿಯೂ ಇತರ ಸದಸ್ಯರಾಗಿ ಕೀರ್ತಿನಾರಾಯಣ ಕೆ.ಆರ್ , ರಮೇಶ್ ಟಿ ಜಿ ಮತ್ತು ಕನಕವಲ್ಲಿ ಕೆ ವಿ ಮತ್ತು ರೂಪರೇಖಾ ಕೆ ಎಸ ಆರಿಸಲಾಯಿತು ಸಭೆಯ ತೀರ್ಮಾನದಂತೆ ಮುಂದಿನ ಅಕ್ಟೋಬರ್ ೨೦೧೮ ರವರೆಗೆ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲು ತೀರ್ಮಾನಿಸಲಾಯಿತು. ಇದಕ್ಕಾಗಿ ಬೆಂಗಳೂರಿನ ಪರಕಾಲ ಮಠದ ಕಾರ್ಯಕಾರಿ ಅಧ್ಯಕ್ಶರಾದ ಶ್ರೀ ಕೃಷ್ಣ ಪ್ರಸಾದ್ ರವರನ್ನು ಸಂಪರ್ಕಿಸಿದಾಗ ಅವರು ತುಂಬು ಹೃದಯದಿಂದ ಪರಕಾಲ ಮಠದ ಆವರಣವನ್ನು ಕೊಡಲು ಸಮ್ಮತಿಸಿದರು.
ಮೊದಲ ಉಪನ್ಯಾಸ ಕಾರ್ಯಕ್ರಮವನ್ನುಬೆಂಗಲ್ಲೂರಿನ ಪ್ರಸಿದ್ಧ ವಿದುಷಿಯರಾದ ಶ್ರೀಮತಿ ಯಮುನಾ ರಾಮಪ್ರಿಯನ್ ರವರು ಜನವರಿ ೨೭ ರ ಭಾನುವಾರದಂದು ನಡೆಸಿಕೊಡಲು ಒಪ್ಪಿದರು. ವಿಷಯ ದೇಶಿಕರ ಪ್ರಸಿದ್ಶ ಕೃತಿಯಾದ ಅಭಯ ಪ್ರಧಾನ ಸಾರ . ಇದು ದೇಶಿಕರ ಮೇರು ಕೃತಿ. ಶ್ರೀಮದ್ರಾಮಾಯಣವು ವೇದಕ್ಕೆ ಸಮಾನ. ಇದರಲ್ಲಿ ವಿಭೀಷಣ ಶರಣಾಗತಿ ಎಂಬ ಘಟ್ಟವು ಉಪನಿಷತ್ತೆಂದು ಪ್ರಸಿದ್ಧವಾಗಿದೆ . ಈ ಭಾಗಲ್ಲಿರುವ ಶರಣಾಗತಿಯ ಮಹತ್ವವನ್ನು ಮೆಚ್ಚಿದ ದೇಶಿಕರು ಈ ತತ್ವವನ್ನು ಬಹಳ ಸುಂದರವಾಗಿ ಅಭಯಪ್ರದಾನಸಾರದಲ್ಲಿ ವಿವರಿಸಿದ್ದಾರೆ . ಆರಂಭದಲ್ಲಿ ಶ್ರೀ ರಾಮನಿಗೆ ಮಂಗಳಾಶಾಸನ ಮಾಡಿ ನಂತರ ರಂಗನಾಥನಿಗೆ ಮಂಗಳಾಶಾಸನ ಮಾಡಿದ್ದಾರೆ. ಭಗವಂತನಲ್ಲಿ ಶರಣಾಗುವುದರಿಂದ ಅಭಯ ದೊರಕುವುದೆಂದೂ ನಂತರ ಮೋಕ್ಷ ಪ್ರಾಪ್ತಿಯಾಗುವುದೆಂದು ಸುಂದರವಾಗಿ ವರ್ಣಿಸಿದ್ದಾರೆ . ಇದಕ್ಕೆ ಉದಾಹರಣೆಯಾಗಿ ಅಹಲ್ಯಾ ಶಾಪ ವಿಮೋಚನೆ ಕಾಕಾಸುರ ನಿಗ್ರಹ ಮುಂತಾದ ಉದಾಹರಣೆಗಳನ್ನು ತಿಳಿಸಿದ್ದಾರೆ. ಹತ್ತು ಅಧಿಕಾರಗಳನ್ನು ಹೊಂದಿರುವ ಈ ಕೃತಿಯು ತಮಿಳಿನಲ್ಲಿದೆ . ರಾಮಾಯಣದ ವಿಭೀಷಣ ಶರಣಾಗತಿಯ ಕಥಾ ಸಂಧರ್ಭವನ್ನು ಆರಿಸಿಕೊಂಡು ಅಭಯ ಪ್ರದಾನಸಾರ ವೆಂಬ ಮಣಿಪ್ರವಾಳ ರಹಸ್ಯ ಗ್ರಂಥವನ್ನು ರಚಿಸಿದ್ದಾರೆ . ಈ ಗ್ರಂಥದಲ್ಲಿ ಶರಣಾಗತಿಯ ವಿದ್ಯೆಯ ಮಹಿಮೆಯನ್ನು , ಪ್ರಪತ್ತಿ ಧರ್ಮದ ರೂಪುರೇಖೆಗಳನ್ನು, ಅಗತ್ಯವನ್ನು ಅನೇಕ ಪ್ರಮಾಣಗಳಿಂದ ಸಮರ್ಥಿಸಿ ಬಹು ಅದ್ಭುತ ರೀತಿಯಲ್ಲಿ ಆಚಾರ್ಯರು ವಿಶದೀಕರಿಸಿದ್ದಾರೆ . ಆದ್ದರಿಂದ ಅಭಯಪ್ರದಾನಸಾರವು ಸರ್ವಾದರಣೀಯ ಗ್ರಂಥವಾಗಿದೆ ಎಂದು ಸವಿವರವಾಗಿ ಶ್ರೀಮತಿ ಯಮು ನ ರಾಮಪ್ರಿಯಂ ರವರು ವರ್ಣಿಸಿದರು.
ಎರಡನೆಯ ಉಪನ್ಯಾಸ ಕಾರ್ಯಕ್ರಮ ೨೪ ಫೆಬ್ರವರಿ ಶನಿವಾರ ನಡೆಯಿತು . ಪ್ರಸಿದ್ಧ ವಿದ್ವಾಂಸರಾದ ಡಾಕ್ಟರ್ ಅನಂತರಂಗಾಚಾರ್ ರವರ ಪುತ್ರರಾದ ನರಸಿಂಹನ್ ಕೆ ಎಸ ರವರು ದೇಶಿಕರ ಮತ್ತೊಂದು ಮೇರು ಕೃತಿಯಾದ ತತ್ವ ಮುಕ್ತಾ ಕಲಾಪದ ಬಗ್ಗೆ ಕುರಿತು ಕಿಕ್ಕಿರಿದು ತುಂಬಿದ್ದ ದೇಶಿಕರ ಅಭಿಮಾನಿಗಳನ್ನು ಉಪನ್ಯಾಸ ನೀಡಿದರು .ತತ್ವ ಮುಕ್ತಾ ಕಲಾಪ ಒಂದು ಪ್ರಕರಣ ಗ್ರಂಥ .ಇದರಲ್ಲಿ ೫೦೦ಶ್ಲೋಕಗಳಿವೆ. ಪ್ರಮುಖ ತತ್ವಗಳಾದ ದೃವ್ಯ, ಜೀವ ಈಶ್ವರ ಬುದ್ಧಿ ಮತ್ತು ಅದೃವ್ಯ ಗಾಲ ಬಗ್ಗೆ ವಿವರಣೆ ನೀಡಲಾಗಿದೆ. ಈ ತತ್ವಗಳು ಹೇಗೆ ವಿಶಿಷ್ಟಾದ್ವೈತ ತತ್ವಕ್ಕೆ ಆಧಾರವೆಂಬುದನ್ನು ಶ್ರೀ ನರಸಿಂಹನ್ ರವರು ಸವಿಸ್ತಾರವಾಗಿ ವಿವರಿಸಿದರು. ಆದರೆ ಕಾಲಾವಕಾಶ ಕಮ್ಮಿ ಇದ್ದದ್ದರಿಂದ ಎಲ್ಲ ತತ್ವಗಳನ್ನು ವಿವರಿಸಲಾಗಲಿಲ್ಲ. ಅಭಿಮಾನಿಗಳ ಒತ್ತಡದ ಮೇರೆಗೆ ಇದೆ ವಿಷಯವಾಗಿ ಮುಂದಿನ ಉಪನ್ಯಾಸ ವನ್ನು ಏರ್ಪಡಿಸಲಾಯಿತು. ಮಾರ್ಚ್ ೨೫ ಭಾನುವಾರ ಮತ್ತೆ ಶ್ರೀ ನರಸಿಂಹನ್ ರವರು ತತ್ವ ಮುಕ್ತಾ ಕಲಾಪದ ಬಗ್ಗೆ ಮುಂದುವರೆದು ಉಪನ್ಯಾಸ ನೀಡಿದರು.
೪ ನೆಯ ಉಪನ್ಯಾಸ ಮಾಲಿಕೆ ೨೮ ಏಪ್ರಿಲ್ ಶನಿವಾರ ಡಾಕ್ಟರ್ ಪದ್ಮಾವತಿ ಯವರಿಂದ ಅರ್ಥ ಪಂಚಾಧಿಕಾರದ ಬಗ್ಗೆ ಏರ್ಪಡಿಸಲಾಗಿತ್ತು
ಶ್ರೀ ನಿಗಮಾಂತ ದೇಶಿಕರು ತಮ್ಮ ಚರಮ ದಶೆ ಯಲ್ಲಿ ನಮ್ಮೇಲ್ಲರಿಗೂ ಅನುಗ್ರಹಿಸಿ ನೀಡಿರುವ ಅಮೂಲ್ಯವಾದ ಶ್ರೀಮತ್ ರಹಸ್ಯತ್ರಯ ಸಾರವೆಂಬ ಗ್ರಂಥದಿಂದ ಈ ಅಧಿಕಾರವನ್ನು ಉಪನ್ಯಾಸ ಮಾಲಿಕೆಗೆ ಆರಿಸಲಾಗಿದತ್ತು . ಅರ್ಥ ಎಂದರೆ ಮೋಕ್ಷ . ಪಂಚಕ ಎಂದರೆ ಐದು ವಿಷಯಗಳು .
೧. ಪರಮಾತ್ಮ ೨. ಜೀವಾತ್ಮ ೩. ಉಪಾಯ ೪. ಫಲ . ೫ವಿರೋಧಿ ಎಂಬುದೇ ಐದು ವಿಷಯಗಳು .
ಚೇತನಾಚೇತನಗಳನ್ನು ಒಳಗೊಂಡ ಈ ವಿಶ್ವವು ಪರಮಾತ್ಮ ನಿಗೆ ಶರೀರವಾಗಿ, ಆತನೇ ಎಲ್ಲದಕ್ಕೂ ಆತ್ಮಎಂಬುದು ವಿಷದವೇ ಸರಿ , ಆ ಸಂಬಂಧವೇ ಮುಮುಕ್ಷುವಿಗೆ (ಮೋಕ್ಷ ಅಪೇಕ್ಷಿಸುವವನಿಗೆ )ಪ್ರಧಾನವಾದ ಪ್ರತಿ ತಂತ್ರ . ಇದರಿಂದ ದೊರಕಿದ ಐದು ಅರ್ಥಗಳನ್ನು ಈ ಅಧಿಕಾರವು ಭೋದಿಸುತ್ತದೆ . ಇದಕ್ಕೆ ಅರ್ಥ ಪಂಚಕ ಎಂದು ಹೆಸರು .ವಿದ್ಯೆಯನ್ನು ಪರಾ ಮತ್ತು ಅಪರಾ ಎಂಬುದಾಗಿ ಎರಡು ಬಗೆಯಿಂದ ಗುರುತಿಸಲಾಗಿದೆ . ಪರಾ ವಿದ್ಯೆಯಿಂದ ವೇದ ವೇದಾಂಗಗಳ ಶಾಸ್ತ್ರಜನ್ಯವಾದ ಜ್ಞಾನವು ಉಂಟಾಗುತ್ತದೆ ಈ ವಿದ್ಯೆಯು ಮೋಕ್ಷಸಾಧನ ವಿದ್ಯೆ ಎನಿಸುತ್ತದೆ . ಪರಾ ವಿದ್ಯೆಗೆ ಮೇಲೆ ಹೇಳಿದ ಐದು ಅರ್ಥಗಳನ್ನು ಅವಶ್ಯವಾಗಿ ತಿಳಿಯಬೇಕು ಅರ್ಥಪಂಚಕ ವನ್ನು ತಿಳಿದವನನ್ನು ಸರ್ವಜ್ಞ ಎನ್ನುತ್ತಾರೆ .
ಅರ್ಥಪಂಚಕ ಜ್ಞಾನವು ಶರೀರಾತ್ಮಭಾವ ಸಂಬಂಧ ದಿಂದ ಸಿದ್ಧಿಸುತ್ತದೆ ನಮ್ಮ ವಿಶಿಷ್ಟಾದ್ವೈತ ಸಿದ್ಧಾಂತಕ್ಕೆ ಶರೀರಾತ್ಮಭಾವ ಸಂಬಂಧ ಪ್ರಧಾನವಾದದ್ದು. ಇದರಿಂದ ಶೇಷಶೇಷಿ ಭಾವ ಜ್ಞಾನ ಉಂಟಾಗುತ್ತದೆ ಮೋಕ್ಷಾರ್ಥಿಗೆ ಶೇಷಶೇಷಿ ಭಾವ ಹೇಗೆ ಪ್ರಧಾನವೋ ಹಾಗೆಯೇ ಅರ್ಥ ಪಂಚಕದ ಜ್ಞಾನವೂ ಅತಿ ಮುಖ್ಯವಾದದ್ದು . ಶೇಷಿಯಾದ ಸರ್ವೇಶ್ವರನು ಪ್ರಾಪ್ಯನೆಂದೂ, ಶೇಷಭೂತನಾದ ಜೀವನು ಪ್ರಾಪ್ತನೆಂದೂ ,ಶೇಷಭೂತನಾದ ಜೀವನಿಗೆ ಶೇಷಿ ಪ್ರಾಪ್ತಿಯೇ ಪುರುಷಾರ್ಥವೆಂದೂತಿಳಿಯಲಾಗಿದೆ . ಮೋಕ್ಷಕ್ಕೆ ನಿರಹಂಕಾರವೇ ಆಧಾರ. ಭಗವಂತನಲ್ಲಿ ಶರಣಾದಾಗ ಮಾತ್ರ ಮೋಕ್ಷ ಸಾಧ್ಯ ಎಂಬುದನ್ನು ಗ್ರಂಥದಲ್ಲಿ ವಿಶದವಾಗಿ ತಿಳಿಸಲಾಗಿದೆ ಎಂದು ಶ್ರೀಮತಿ ಪದ್ಮಾವತಿ ಯವರು ಬಹಳ ಸುಂದರವಾಗಿ ವರ್ಣಿಸಿದರು .
೫ ನೆಯ ಉಪನ್ಯಾಸವು ೨೬. ಮೇ ತಿಂಗಳಂದು ಶನಿವಾರ ಡಾಕ್ಟರ್ ರಾಮಶೇಷನ್ ರವರಿಂದ ದೇಶಿಕರ ಮತ್ತೊಂದು ಮೇರು ಕೃತಿಯಾದ ರಘುವೀರ ಗದ್ಯದ ಬಗ್ಗೆ ಏರ್ಪಡಿಸಲಾಗಿತ್ತು. ದೇಶಿಕರು ತಿರುವಹೀಂದ್ರಪುರದಲ್ಲಿದ್ದಾಗ ರಚಿಸಲ್ಪಟ್ಟ ಗದ್ಯ ಕಾವ್ಯ . ಶ್ರೀ ರಾಮನ ಪರಾಕ್ರಮದ ಪ್ರಶಂಸೆಯೇ ಕಾವ್ಯದ ಉದ್ದೇಶ .ರಾಮಶೇಷನ್ ರವರು ತಮ್ಮದೇ ಧಾಟಿಯಲ್ಲಿ ಇದನ್ನು ಸುಂದರವಾಗಿ ವರ್ಣಿಸಿದರು. ಅವರು ಪ್ರಸಿದ್ಧ ಗಮಕ ವಿದ್ವಾಂಸರೂ ಆಗಿದ್ದು ಗಮಕ ಶೈಲಿಯಲ್ಲಿ ವಿವರಿಸಿದ್ದು ಪ್ರಶಂಸೆಗೆ ಪಾತ್ರವಾಗಿತ್ತು.
೬ ನೆಯ ಉಪನ್ಯಾಸವು ಜೂನ್ ತಿಂಗಳ ೩೦ ಶನಿವಾರದಂದು ಶರಣಾಗತಿ ಕುರಿತಾಗಿ ವಿದ್ವಾಂಸರಾದ ಶ್ರೀ ಶ್ರೀನಿವಾಸ ರಂಗನ್ ರವರಿಂದ ನಡೆಯಿತು. ಮೋಕ್ಷಕ್ಕೆ ಭಗವಂತನಲ್ಲಿ ಶರಣಾಗತಿಯೇ ಮುಖ್ಯ ಎಂಬುದನ್ನು ದೇಶಿಕಾರಿ ತಮ್ಮ ಶರಣಾಗತಿ ದೀಪಿಕಾ ಗ್ರಂಥದಲ್ಲಿ ಸುಂದರವಾಗಿ ವರ್ಣಿಸಿರುವುದನ್ನು ಶ್ರೀ ರಂಗನ್ ರವರು ಬಹಳ ಸುಂದರವಾಗಿ ವರ್ಣಿಸಿದರು. ಪ್ರಪತ್ತಿ ಆಚಾರ್ಯರಲ್ಲಿ ಹೊಂದುವುದು ಆವಶ್ಯಕ ಎಂಬುದನ್ನು ವಿವರಿಸಿದರು. ಕೊನೆಯಲ್ಲಿ ಅನೇಕ ಅಭಿಮಾನಿಗಳು ಪ್ರಶ್ನೆಗಳನ್ನು ಕೇಳಿದರು. ಶ್ರೀ ರಂಗನ್ ರವರು ಅವುಗಳನ್ನು ಉತ್ತರಿಸಿದರು .
೭ ನೆಯ ಉಪನ್ಯಾಸವು ೨೯ ಜುಲೈ ಶನಿವಾರದಂದು ಶ್ರೀಯುತರಾದ ಶ್ರೀಧರ್ ಹೆಚ್ ಆರ್ ರವರಿಂದ ದಿವ್ಯ ಪ್ರಬಂಧಗಳ ಬಗ್ಗೆ ನಡೆಯಿತು.
ದೇಶಿಕ ಪ್ರಬಂಧ ದೇಶಿಕರ ೧೮ ತಮಿಳು ಗ್ರಂಥಗಳ ಸಂಕಲನ ದಿವ್ಯ ಪ್ರಬಂಧವನ್ನು ಸಂಸ್ಕೃತದ ವೇದಗಳ ಸಾರ ಎಂದು ಬಣ್ಣಿಸಿ ಅದರ ಪಠಣಕ್ಕೆ ದೇವಾಲಯಗಳಲ್ಲಿ ಆದ್ಯತೆ ಕಲ್ಪಿಸಿದರು. ಇಂದಿಗೂ ಆಸೇತು ಹಿಮಾಚಲ ದಿವ್ಯ ಪ್ರಬಂಧವನ್ನು ದೇವಾಲಯಗಳಲ್ಲಿ ಪಠಿಸಲಾಗುತ್ತದೆ ಎಂಬುದನ್ನು ಶ್ರೀ ಶ್ರೀಧರ್ ರವರು ಸುಂದರವಾಗಿ ವರ್ಣಿಸಿದರು .
ಈ ಎಲ್ಲ ಉಪನ್ಯಾಸಗಳ ಆರಂಭದಲ್ಲಿಯೂ ಒಂದುಗಂಟೆಗಳ ಕಾಲ ದೇಶಿಕರ ಕೃತಿಗಳ ಪಠಣ ಕಾರ್ಯಕ್ರಮ ಏರ್ಪಡಿಸಲಾಗಿದ್ದುದು ವಿಶೇಷವಾಗಿತ್ತು. ಪರಕಾಲ ಮಠದ ವತಿಯಿಂದ ಉಪನ್ಯಾಸದ ನಂತರ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಎಲ್ಲ ಉಪನ್ಯಾಸಗಳ ಕಾಲದಲ್ಲಿ ಸಹಕರಿಸಿದ ಎಲ್ಲರಿಗೂ ಅನಂತ ವಂದನೆಗಳು.
No comments:
Post a Comment