Thursday, January 7, 2016


Poem compoed by me on the eve of my Grand daughters first birthday.













ನೀನು ಜನಿಸಿದಾಗ ನಲಿನಲಿ ದಾಡಿದೆ
ಪುನಃ ಹೇಮಾ ಹುಟ್ಟಿದಳೋ ಎಂದು
ಆ ಬಾಲ್ಯದ ಮುಗ್ಧ ನಗುವನು ಕಂಡು
ಕಂಡೆ ಮತ್ತೊಮ್ಮೆ ನನ್ನ ಪ್ರೀತಿ ಮಗಳ😊😊

ನಿನ್ನ ಆ ಮುಗ್ಧ ಖಿಲ ಖಿಲ ಕೇಕೆ ನಗು
ಹೊಸ ಬಟ್ಟೆ ಕಂಡಾಗ ಬಿರಿದ ನಗು ಮೊಗ
ಬಯಸಿತು ಮನ ತೊಡಿಸಲು ವಾರವಾರ
ಬಗೆ ಬಗೆ ಬಣ್ಣದ ವಿನ್ಯಾಸದ ಹೊಸ ಬಟ್ಟೆ 😉😉

ಕಳೆದವು ಐದು ತಿಂಗಳು ಅರಿಯದೆಯೇ
ನಿನ್ನ ನಗು ಆಳುಗಳ ಶಬ್ಧದ ನಡುವೆಯೇ
ನಿನ್ನ ತಾಯಿಮನೆಗೆ ಹೊರಡಲನುವಾದಾಗ
ಅರಿಯದೆಯೆ ಮೂಡಿದವು ಕಂಬನಿ ಹನಿ 😑😑

ನಿನ್ನ ಆಟಗಳ ಬಗ್ಗೆ ದೂರವಾಣಿಯಲಿ ಕೇಳೇ
ತವಕಿಸಿತು ಮನ ನಿನ್ನ ಆಟಗಳ ನೋಡಲೆಂದು
ನೀ ಅಂಬೆಗಾಲನಿಟ್ಟಾಗ ತವಕಿಸಿತು ನನ್ನ ಮನ
ನಿನ್ನೊಡನೆ ನಾನೂ ಕೂಡಿ ಅಂಬೆಗಾಲನ್ನಿಡಲು 😊😊

ಇಂದು ಪುಟ್ಟ ಹೆಜ್ಜೆ ಇಡಲು ತವಕಿಸುತ್ತಿರುವೆ
ಮುಂದೆ ಇದು ನಾಡ ನಡೆಸುವ ಹೆಜ್ಜೆಯಾಗಲಿ
ಇಂದಿನ ಒಂದು ವರುಷ ನೂರು ವರುಷವಾಗಲಿ
ನೀನಾಗು ಹೆಮ್ಮೆಯ ಕುವರಿ ಎಂದು ಹರಸುವೆ 
--ಶ್ರೀನಿವಾಸ ಪ್ರಸಾದ್ ,ನಿನ್ನ ಪ್ರೀತಿಯ ತಾತ

No comments:

Post a Comment