ತಿರುಪತಿ ಪ್ರವಾಸ
ನೋಡಲು ಎರಡು ಕಣ್ಣು ಸಾಲದು ಆಪಾದ ತಲ ಮಸ್ತಕ ನೋಡಿದೆವು ಜನ್ಮ ಸಾರ್ಥಕವಾಯಿತು ಎನಿಸಿತು. ತೀರ್ಥ ಶಠಆರಿ ಪಡೆದು ಪ್ರಸಾದ ಸ್ವೀಕರಿಸಿ ಹೊರಬಂದೆವು ಅಂದವನ್ ಆಶ್ರಮದಲ್ಲಿ ಊಟ ಮಾಡಿ ಮರು ದಿನಕ್ಕೆ ಮಂಗಳಾಶಾಸನಕ್ಕೆ ಅನುಮತಿ ಪತ್ರ ಪಡೆದು ಕೊಠಡಿಗೆ ಬಂದೆವು ಹೊರಗೆ ಸುರಿಯುತ್ತಿದ್ದ ಮಳೆ ಎಲ್ಲೂ ಹೋಗಲು ಮನಸ್ಸು ಬರಲಿಲ್ಲ. ದಿನವೆಲ್ಲ ರೂಮಿನಲ್ಲೇ ಕಳೆದೆನು ಸಂಜೆ ಊಟದನಂತರ ಮಲಗಿದೆನು.
ಮೂರನೆಯ ದಿನ
ಭಾನುವಾರ ಬೆಳಿಗ್ಗೆ ೮-೩೦ ಘಂಟೆಗೆ ಬೆಂಗಳೂರಿನಿಂದ ೧೨ ಮಂದಿ ವ್ಯಾನ್ ನಲ್ಲಿ ತಿರುಪತಿಯತ್ತ ಹೊರಟೆವು,ದಾರಿಯಲ್ಲಿ ಮುಳಬಾಗಿಳಲ್ಲಿ ಆಂಜನೇಯನನ್ನು ಸಂದರ್ಶಿಸಿ ಹೊರಟೆವು .ದಾರಿಯಲ್ಲಿ ಬೆಳಗಿನ ಉಪಹಾರ ಮಾಡಿದೆವು .ತಿರುಪತಿ ತಲಪಿದಾಗ ೩ ಘಂಟೆಯಾಗಿತ್ತು . ದಾರಿಯುದ್ದಕ್ಕೂ ಕೋಡುಬಳೆ ನಿಪ್ಪಿಟ್ಟು ತಿನ್ನುತ ಸಾಗಿದೆವು . ತಿರುಪತಿ ತಲಪಿದಾಗ ೩ ಘಂಟೆ ಆಗಿತ್ತು .ಕಲ್ಯಾನ ವೆಂಕಟೇಶ್ವರ ದೇವಾಲಯಕ್ಕೆ ಹೋದೆವು ದೇವರ ದರ್ಶನ ತುಂಬಾ ಚೆನ್ನಾಗಿ ಆಯಿತು ಅಲ್ಲೇ ಊಟ ಮುಗಿಸಿದೆವು ಪುಳಿಯೋಗರೆ ಮೊಸರನ್ನ ಲಡ್ಡು ಇತ್ಯಾದಿ ತಿಂದೆವು . ಅಲ್ಲಿಂದ ಪದ್ಮವಥೆ ದೇವಸ್ಥಾನಕ್ಕೆ ಹೋದೆವು ಅಲ್ಲಿ ಅಮ್ಮನವರ ಸೇವೆ ತುಂಬಾ ಚೆನ್ನಾಗಿ ಆಯಿತು . ಕುಂಕುಮಾರ್ಚನೆ ಮಾಡಿಸಿದ್ದರಿಂದ ಅತಿ ಸನಿಹ ದಿಂದ ಅಮ್ಮನವರ ದರ್ಶನ ಆಯಿತು ಽಲ್ಲಿನ್ದ ಗೋವಿಂದರಾಜ ಸ್ವಾಮಿ ದೇವಾಲಯಕ್ಕೆ ಹೋದೆವು ದೇವರ ದರ್ಶನ ತುಂಬಾ ಚೆನ್ನಾಗಿ ಆಯಿತು ನಂತರ ಸುರಿಯುತಿದ್ದ ಮಳೆಯ ನಡುವೆ ತಿರುಮಲೆಯತ್ತ ಹೊರಟೆವು ತಲಪಿದಾಗ ೮ ಘಂಟೆಯೇ ಆಗಿತ್ತು ಮೊದಲು ಕೊಠಡಿ ಮಾಡಬೇಕಿತ್ತು ಪರಕಾಲ ಮಠದಲ್ಲಿ ಕೊಠಡಿ ದೊರಕಿತು ಅಂದವನ್ ಆಶ್ರಮದಲ್ಲಿ ಊಟಮಾಡಿ ಮಲಗಿದೆವು ಇದು ಮೊದಲ ದಿನವಾಗಿತ್ತು
ಎರಡನೆಯ ದಿನ
ಬೆಳಿಗ್ಗೆ ೩ ಘಂಟೆಗೆ ಎದ್ದು ಸ್ನಾನ ಮಾಡಿ ಶಾತ್ತುಮುರೈ ಸೇವೆಗೆ ಹೊರಟೆವು ದೇವರ ಸೇವೆ ಅತಿ ಸನಿಹದಿಂದ ಆಯಿತು ಎಂತಹ ಸುಂದರ ಮೂರ್ತಿ . ಮೂರನೆಯ ದಿನ
ಬೆಳಿಗ್ಗೆ ೨-೩೦ ಘಂಟೆಗೆ ಎದ್ದು ಸ್ನಾನ ಮಾಡಿ ೫ ಘಂಟೆಗೆ ಸತ್ಪಥ ದ್ವಾರದ ಬಳಿ ನಡೆದೆವು ೬ ಘಂಟೆಗೆ ಪ್ರವೇಶ ದೊರೆಯಿತು. ಅಂದವನ್ ಸ್ವಾಮಿಜಿ ಯವರ ಜೊತೆಯಲಿ ಶ್ರೀನಿವಾಸನ ದರ್ಶನ ಪಡೆದೆವು ಸ್ಮರಣೀಯ ದಿನ ವೆಂಕಟೇಶನ ದರ್ಶನ ಅತಿ ಸನಿಹದಿಂದ ಮಾಡಿದೆವು ಮನಸ್ಸು ಸ್ವಾಮೀಜಿಯವರಿಗೆ ಮನ ತುಂಬಿದ ಕೃತಘ್ನತೆ ಸಲ್ಲಿಸಿತು. ನಂತರ ಪ್ರಸಾದ ಪಡೆದು ಹೊರಬಂದೆವು ಮಳೆ ಸುರಿಯುತ್ತಲೇ ಇತ್ತು ಕೊಠಡಿಗೆ ಬಂದು ಉಪ್ಪಿಟ್ಟು ಸೇವಿಸಿ ಮುಂದಿನ ಪ್ರಯಾಣಕ್ಕೆ ಸಿದ್ದರಾದೆವು ಬೆಟ್ಟದಿಂದ ಕೆಳೆಗಿಳಿದು ಕಪಿಲ ತೀರ್ಥಕ್ಕೆ ಹೋದೆವು ಸುಂದರ ದೃಶ್ಯ ಭೋರ್ಗರೆಯುವ ಜಲಪಾತ ಕೊಡೆ ಹಿಡಿದು ದೃಶ್ಯ ಮನದಲ್ಲಿ ಸೆರೆಹಿಡಿದೆವು ನಂತರ ಪ್ರಯಾಣ ಮುಂದುವರಿಸಿದೆವು ತಿರುಪತಿಯಿಂದ ಬರುವಾಗ ಕುಪ್ಪಂ ಬಳಿ ಲಕ್ಷ್ಮಿಪುರ ನೋಡಲು ತೆರಳಿದೆವು ವರದರಾಜ ಸ್ವಾಮಿಯ ದಿವ್ಯದರ್ಶನ ಪಡೆದೆವು ನಂತರ
ರಾತ್ರಿ ೧೨ ಘಂಟೆಗೆ ಬೆಂಗಳೂರಿಗೆ ಹಿಂದುರಿಗಿದೆವು ಹೀಗೆ ಮುಗಿಯಿತು ನಮ್ಮ ತಿರುಪತಿ ಪ್ರವಾಸ
ರಾತ್ರಿ ೧೨ ಘಂಟೆಗೆ ಬೆಂಗಳೂರಿಗೆ ಹಿಂದುರಿಗಿದೆವು ಹೀಗೆ ಮುಗಿಯಿತು ನಮ್ಮ ತಿರುಪತಿ ಪ್ರವಾಸ