ಬರುತಿಹರು ಭಾರತಕೆ ......
ಬರುತಿಹರು ಭಾರತಕೆ ಬರಾಕ್ ಒಬಾಮ
ಭಾಗಿಯಾಗಲು ಗಣರಾಜ್ಯ ದಿನದಂದು
ಮಾಡಿಹರು ಮೋದಿ ಆಗಮಿಸಲು ಮೋಡಿ
ಒಪ್ಪಿಹರು ವೀಕ್ಷಿಸಲು ಉತ್ಸವವ ದೀರ್ಘದಲಿ
........................... ಬರುತಿಹರು ಭಾರತಕೆ
ಹರಿಯುತಿಹುದು ಹಣದ ಹೊಳೆ ಭಾರತಕೆ
ಆದರದು ಸಿಗಬಾರದು ಕಾಗೆ ಹದ್ದುಗಳ ಕೈಯಲಿ
ಆಗದು ಅಭಿವೃದ್ದಿ ಮೋದಿಯ ಕನಸಿನಂತೆ
ಸಿಕ್ಕಿದರೆ ಹಣ ದುರಾಶೆಯ ವ್ಯಕ್ತಿಗಳ ಹಸ್ತದಲಿ
...................ಬರುತಿಹರು ಭಾರತಕೆ
ಬೆಸೆಯಲಿದೆ ಬಲವಾಗಿ ಭಾರತದ ಬಾಂದವ್ಯ
ರಕ್ಷಣೆ ಕೈಗಾರಿಕೆ ಪ್ರವಾಸದಾದಿ ಕ್ಷೇತ್ರದಲಿ
ನಲಿದಿಹರು ಭಾರತೀಯರು ವಿಶ್ವದೆಲ್ಲೆಡೆ ಕಂಡು
ಕಾಣರಿಯದ ಮೋದಿ ಒಬಾಮ ನಡುವಣ ಸ್ನೇಹವ
........... ಬರುತಿಹರು ಭಾರತಕೆ
ಸಫಲವಾಗಲಿ ಮೋದಿ ಕಂಡ ವಿದೇಶಿ ನೀತಿ
ಫಲಿಸಲಿ ಅವರ ವಿದೇಶಗಳೊಡನೆಯ ಸ್ನೇಹ
ಕಾಣಲಿ ಅಭಿವೃದ್ದಿ ಭಾರತ ಪ್ರದಾನಿ ಕಂಡಂತೆ
ಆಗಲಿ ಬಲಶಾಲಿ ವಿಶ್ವಾದ್ಯಂತ ಎಲ್ಲ ಕ್ಷೇತ್ರದಲಿ
........... ಬರುತಿಹರು ಭಾರತಕೆ
ರಚನೆ: ಕೆ ವಿ ಶ್ರೀನಿವಾಸ ಪ್ರಸಾದ್
No comments:
Post a Comment