Monday, June 2, 2014

ಸ್ವಾಗತವು ಸೊಸೆಗೆ :

ಸ್ವಾಗತವು ನನ್ನ ನೆಚ್ಚಿನ ಸೊಸೆಗೆ 
ಸ್ವಾಗತವು ನನ್ನ ಸುತನ ಮಡದಿಗೆ 
ಸ್ವಾಗತವು ವಂಶದ ಕುಡಿಯೊಡತಿಗೆ 
ಸ್ವಾಗತವು ರಾಜಶ್ರೀಗೆ ವಿಜಯಶ್ರೀಗೆ 

ಇಂದಿನಿಂದ ಈ ಮನೆಯೇ ನಿನ್ನ ಮನೆ 
ಬಿಡುವುದು ತಾಯಿ ತಂದೆಯ ಕಷ್ಟವು 
೨೪ ಸಂವತ್ಸರ ಸಾಕಿ ಸಲಹಿದವರನು 
ಅನಿವಾರ್ಯ ಪರಿವರ್ತನೆ ದೀರ್ಘ ಬಂದನದಿ 

ನೀ ಇಡುವ ಹೆಜ್ಜೆ ಸಿರಿಸಂಪದ ತರಲಿ 
ಬೆಳೆಯಲಿ ಪರಿವಾರ ಅಮಿತ ಪ್ರೀತಿಯಲಿ 
ಬೆಸೆಯಲಿ ಸಂಬಂಧ ಅನುರಾಗದಲಿ 
ಇರಲಿ ಶಾಶ್ವತ ಪ್ರೀತಿ ಪ್ರೇಮ ಗೌರವಗಳು 

ಸಹಜವದು ಕಷ್ಟವು ಸ್ವಭಾವ ಸೇರುವುದು 
ಆದರಿರಲಿ ಪ್ರೀತಿ ಪ್ರೇಮ ಎಲ್ಲಕ್ಕಿಂತ ಮಿಗಿಲಾಗಿ 
ಹೊಂದಾಣಿಕೆಯೇ ಅಗತ್ಯ ಅನುರಾಗದಲಿ 
ನಿಮ್ಮದಾಗಲಿ ಮಾದರಿಯ ಸುಂದರ ಕುಟುಂಬ 

ಹರಸಲಿ ರಮಾಕಾಂತ ನಿಮ್ಮ ಜೀವನದಿ 
ಅನವರತ ಸುಖ ಸಂಪದ ಸೌಭಾಗ್ಯ ಸಂತಾನ 
ಅರಳಲಿ ಅಪಾರ ಕೀರ್ತಿ ತರುವ ಕುಡಿಗಳು 
ತುಂಬಲಿ ಮನೆ ನಗುವಿನಲೆಯಲಿ ಚಿರಕಾಲ

-ರಚನೆ:ಕೆ.ವಿ. ಶ್ರೀನಿವಾಸ ಪ್ರಸಾದ್

No comments:

Post a Comment