Sunday, May 12, 2019


ಮೊಮ್ಮಗನೇ ನೀನಾಗು ಯುಗಪುರುಷ



ನೀ ಜನಿಸಿದೆ ನ್ರಿಸಿಂಹ ಜಯಂತಿಯಂದು
ನನಗಾಯಿತು ಅಮಿತಾನಂದ ಅಳು ಕೇಳಿ
ಮಗನೇ  ಜನಿಸಿದನೋ ಎಂದಹಾಗಾಯಿತು
ನಿನ್ನ ಮುಗ್ಧ ನಗುಮುಖ  ಮೊದಲು ಕಂಡು

ನೀನಾದೆ ನನ್ನ  ವಂಶದ   ಪ್ರೇಮದ ಕುಡಿ
ನಿನ್ನ ಆಟ ನಲಿದಾಟಗಳು ಕರೆದವು ಮತ್ತೆ ಮತ್ತೆ
ಓಡೋಡಿ ಬಂದೆ ಭಾನುವಾರಗಳು ಕಾಣಲು
ದೂರಗಳ ಲೆಕ್ಕಿಸದೆ  ಶ್ರಮವ ಯೋಚಿಸದೆ

ನೀ ಎಂದು ಬರುವೆಯೆಂದು ಹಾತೊರೆದೆ
ಕಳೆದೆವು ಆರು ತಿಂಗಳು ತಿಳಿಯದೆಯೇ ವೇಗದಿ
ನೀ ಬಂದ  ದಿನ  ಕುಣಿದಾಡಿದೆ ಅತಿ ಸಂತಸದಿ 
ನಿನ್ನ ಕುಡಿನೋಟ   ಕಲಕಿತು ಎನ್ನ ಮನವ

ನಿನ್ನ ತುಂಟಾಟ ನಗೆ ನೋಟಗಳು ನೆನಪಿಸಿತು
ನಾ ಓದಿದ ಭಾರತದ ಯುಗ ಪುರುಷ ಶ್ರೀ ಕೃಷ್ಣನನ್ನು
ಕಂಡೆ ದೇವಕಿ ಸುತ ವಾಸುದೇವನ ಚೇಷ್ಟೆಗಳನು
ನಿನ್ನ ಆ ನಗುವಿನಲಿ  ನೋಟದಲಿ ಆಟಗಳಲಿ

ನಿನಗಿರಲಿ ಶ್ರೀನಿವಾಸನ ಕರುಣೆ ಕಟಾಕ್ಷಗಳು
ನೀನಾಗು ಕಲಿಯುಗದ ಯುಗಪುರುಷ
ಪ್ರದೀಪಸಲಿ ನಿನ್ನ ರಂಜನೀಯ ಲೀಲೆಗಳು
ನೀ ಬಾಳು ನೂರು ವಸಂತಗಳು ಸುಖವಾಗಿ


ರಚನೆ: ಶ್ರೀನಿವಾಸ ಪ್ರಸಾದ್ ಕೆ.ವಿ
ನಿನ್ನ ಮೆಚ್ಚಿನ ತಾತ