ಕಳಲೆ ವಾರ್ತಾ ಸಂಚಿಕೆ ...... ಆಗಸ್ಟ್ ೨೦೧೭
Varalakshmi Vrata is a festival to propitiate the goddess Lakshmi, the consort of Vishnu, one of the Hindu Trinity. Varalakshmi is one who grants boons (Varam). It is an important pooja performed by many women in the states of Andhra Pradesh, Telangana, Karnataka and Tamil Nadu. The Hindu festival going by the name 'Vara Lakshmi Vrata' is celebrated on the Second Friday
Varalakshmi Vrata is performed by married woman for the well being of all the family members, especially husband, to get progeny etc. It is believed that worshiping Goddess Varalakshmi on this day is equivalent to worshiping Ashtalaksmi .
ವರಮಹಾಲಕ್ಷ್ಮಿ ವ್ರತವನ್ನು ಶ್ರಾವಣ ಮಾಸದ ಎರಡನೆಯ ಶುಕ್ರವಾರದಂದು ಅಂದರೆ ಈ ವರ್ಷ ಆಗಸ್ಟ್ ೪ ರಂದು ಕರ್ನಾಟಕದಲ್ಲಿ ವೈಭವದಿಂದ ಆಚರಿಸಲಾಗುತ್ತದೆ . ಈ ವ್ರತವನ್ನು ವಿವಾಹಿತ ಮಹಿಳೆಯರು ಉಪವಾಸವಿದ್ದು ತಮ್ಮ ಕುಟುಂಬದ ಸದಸ್ಯರ ಒಳಿತಿಗಾಗಿ , ಮಕ್ಕಳಾಗದಿದ್ದವರು ಮಕ್ಕಳಾಗಲೆಂದು ,ಸಂಪತ್ತಿನ ಅಭಿವೃದ್ಧಿಗಾಗಿ ಹೀಗೆ ಬಗೆಬಗೆಯ ಕಾರಣಗಳಿಗಾಗಿ ಬಹಳ ಶ್ರದ್ದೆಯಿಂದ ಭಕ್ತಿಯಿಂದ ಆಚರಿಸುತ್ತಾರೆ . ಈ ದಿನ ಲಕ್ಷ್ಮಿಯನ್ನು ಆರಾಧಿಸಿದರೆ ಅಷ್ಟಲಕ್ಷ್ಮಿಯನ್ನು ಆರಾಧಿಸಿದಂತೆ . ಕಳಲೆಯಲ್ಲಿಯೂ ಈ ಹಬ್ಬವನ್ನು ಬಹಳ ಶ್ರದ್ದೆಯಿಂದ ಆಚರಿಸಲಾಗುತ್ತದೆ . ಅರವಿಂದನಾಯಕಿ ಅಮ್ಮನವರ ಮೂಲ ಮೂರ್ತಿಗೆ ಅಭಿಷೇಕ ನೆರವೇರಿಸಲಾಗುತ್ತದೆ . ಲಕ್ಷ್ಮೀಕಾಂತ ಉತ್ಸವ ಮೂರ್ತಿಯನ್ನು ಉಭಯ ದೇವಿಯರೊಂದಿಗೆ ಅಮ್ಮನವರ ಸನ್ನಿಧಿಗೆ ಕರೆತಂದು ಮಂಟಪೋತ್ಸವ ನೆರವೇರಿಸಲಾಗುತ್ತದೆ . ವೇದ ಪ್ರಬಂಧ ಪಾರಾಯಣದೊಂದಿಗೆ ಶಾತ್ತುಮೊರೈಯನ್ನು ನಡೆಸಲಾಗುತ್ತದೆ . ಅಂದು ಮಾಡುವ ವಿಶೇಷ ಅಲಂಕಾರ ಅದ್ಭುತ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಪ್ರಾರ್ಥನೆ .