ಗೌರಿ ಸ್ತುತಿ
ನಮಸ್ತೇ ಪಾರ್ವತೀ ಶಕ್ತಿ
ನಮಸ್ತೇ ಶಿವಸತಿ ಕಾಳೀ
ನಮಸ್ತೇ ಹಿಮವತೀ ಭದ್ರೆ
ನಮಿಸುವೆ ಉಮೇ ನಾರಾಯಣೀ
ನಾರಾಯಣನ ಪ್ರೀತಿಯ ಸಹೋದರಿ
ಹಿಮವಂತನ ಅಕ್ಕರೆಯ ಸುತೆ
ಪರಶಿವನ ಮೆಚ್ಹಿದ ಮಡದಿ
ಸ್ವಾಗತವು ನಿನಗೆ ಭೂಲೋಕಕೆ
ಹರಸು ನಿನ್ನ ಮಕ್ಕಳನು ಮನತುಂಬಿ
ನೀಡುತಲಿ ಇಷ್ಟಾರ್ಥ ಫಲಗಳ
ಸವಿಯುತ ಅವರ ತಿಂಡಿ ತಿನಸುಗಳ
ಸ್ರಿಜಿಸಿದೆ ನಿನ್ನ ಸ್ವೇದದಲಿ ಕುವರನ
ಎಲ್ಲರ ಮೆಚ್ಹಿನ ಗಣಪ ವಿನಾಯಕನ
ತಾಯಿಯಾಣತಿಯಂತೆ ನಡೆದ ಧೀರನ
ತಡೆದ ವಿರೂಪಾಕ್ಷನ ಆಗಮನವ
ಎಲ್ಲರೂ ಆಚರಿಸುವರು ಸಂಭ್ರಮವ
ಗೌರಿ-ಗಣೇಶ ಚತುರ್ಥಿಯ ಇಂದು
ಪೂಜಿಸುತ ಗಜಮುಖನ ನಾಳೆಯಂದು
ಹರಸು ಜನತೆಯ ನೀಡಿ ಸಮೃದ್ಧಿಯ
ರಚನೆ : ಕೆ.ವಿ.ಶ್ರೀನಿವಾಸ ಪ್ರಸಾದ್